ಒಟ್ಟು 23 ಕಡೆಗಳಲ್ಲಿ , 13 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆಲೊ ರಂಗ ನಿನಗಿಂತು ನಟನೆಯ ಮಾತು ಪ ಮಾಕಾಂತ ಕರೆಸಿದರೆ ಬಾರದಿಹ ಪೊಗರುಅ ತಸ್ಕರ ಬುದ್ಧಿ ಕಡೆಗೆ ಇರಿಸಿಬಾಲಕನ ವಂದರಿಸಿ ಬಹುಭಾಗ್ಯವಂತನೆನಿಸಿಎಲ್ಲರೊಳು ಸಲಿಗೆ ನಿಲಿಸಿದಳೊ ನಿಮ್ಮರಸಿ 1 ಕೆಸರ ಚೊಗೆಯಂ ಬಿಡಿಸಿ ಗುಂಜ ಸರವಂ ತೆಗೆಸಿಬಿಸರುಹ ಮಣಿಮಾಲೆ ಕಡೆಗೆ ಇಡಿಸಿಪೊಸ ಪೀತಾಂಬರ ಉಡಿಸಿ ನವರತ್ನವಂ ತೊಡಿಸಿವಸುಧೆಯೊಳು ಮಿಗಿಲಾಗಿ ನಿಲಿಸಿದಳೊ ನಮಿಸಿ 2 ಎನ್ನ ಮಾತನು ಕೇಳು ಮುನಿಸು ಕೃತ್ಯವ ಸೀಳುಇನ್ಯಾಕೆ ಯೋಚನೆ ಫಲವ ಪೇಳುಬಿನ್ನಹವನು ಕೇಳು ನೆರೆಗೂಡಿ ಸುಖಬಾಳುಚೆನ್ನ ಬಾಡದಾದಿಕೇಶವ ದಯಾಳು 3
--------------
ಕನಕದಾಸ
ರಜತಪೀಠವೆ ಭೂ ವೈಕುಂಠ ಇಲ್ಲಿ ಮಧ್ವ ಪುಷ್ಕರಿಣಿಯೆ ವಿರಜೆ ಅಲ್ಲಿ ರಾಜಿಪರಷ್ಟಮಹಿಷಿಯರು ಇಲ್ಲಿ ರಾಜಿಪರಷ್ಟಯತಿಗಳು ಪ ಅಲ್ಲಿ ಎಲ್ಲರೊಳಿರುವದು ಭಕ್ತಿ ಇಲ್ಲಿ ಎಲ್ಲಿ ನೋಡಲು ವಿರಕ್ತಿ ಅಲ್ಲಿಪ್ಪ ಜನರಿಗೆ ಮುಕ್ತಿ ಭುಕ್ತಿ 1 ಅಲ್ಲಿ ಮತ್ತಿಲ್ಲ ಜನರಿಗೆ ಪುಣ್ಯ ಇಲ್ಲಿ ಲಭಿಸುವುದೆಲ್ಲವೂ ಪುಣ್ಯ ಅಲ್ಲಿ ಹೋದವರಿಗಿಲ್ಲಾಗಮನವು ಇಲ್ಲಿ ಬಂದವರಿಗಿಲ್ಲ ಮರು ಜನನ 2 ಪೂಜೆಯ ವೈಕುಂಠದೊಳಗೆ ಸರ್ವಜನರು ಮಾಡಬೇಕೆಂದಿಹರು ರಾಜೇಶ ಹಯಮುಖಕೃಷ್ಣ ಮಧ್ವಾಚಾರ್ಯರೊಬ್ಬರ ಪೂಜೆಗೊಂಬ 3
--------------
ವಿಶ್ವೇಂದ್ರತೀರ್ಥ
ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ ಶೋಭಾನವೆನ್ನಿ ಶುಭವೆನ್ನಿ ಪ ಶೃಂಗಾರದ ಗುಣನಿಧಿಯೆ ಬಾ | ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ || ಭವಭವ ಭಂಗಾ ಬಾ | ದೇವೋತ್ತುಂಗಾ ಬಾ | ಜಗದಂತರಂಗಾ ಬಾ ಹಸೆಯ ಜಗುಲಿಗೆ1 ಪಂಕಜ ಸಂಭವನಯ್ಯ ಬಾ | ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ || ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ | ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ 2 ಸಾಮಜರಾಜಾ ವರದಾ ಬಾ | ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ || ರಣರಂಗಭೀಮಾ ಬಾ ಹಸೆಯಾ ಜಗುಲಿಗೆ 3 ಅಚ್ಯುತ ಉನ್ನತ ಮಹಿಮನೆ ಯಾದವ ಬಾ | ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ | ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ 4 ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ | ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ || ನಿತ್ಯ ಸಲ್ಲಾಪಾ ಬಾ ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ 5 ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ | ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ || ಗೋಪಿಕಂದಾ ಬಾ | ಬಹುಬಲ ವೃಂದಾ ಬಾ | ಅತಿಜವದಿಂದಾ ಬಾ ಹಸೆಯಾ ಜಗುಲಿಗೆ 6 ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ | ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ || ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ | ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ7 ತ್ರಿದಶಗುಣನುತ ವಿಲಾಸಾ ಬಾ | ಮಾಧವ ಶ್ರೀಧರನೆ ಸುನಾಸಾ ಬಾ || ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ | ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ8 ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ | ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ || ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ | ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ 9 ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ | ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ || ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ | ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ10
--------------
ವಿಜಯದಾಸ
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ಧ್ರುವ ಎಲ್ಲದೋರ್ವದು ಮರೆದು ಎಲ್ಲರೊಳಗೆಹದರಿದು ಎಲ್ಲರೊಳಗೆಲ್ಲ ತಾನಾಗಬೇಕು ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ ಬೆಲ್ಲ ಸವಿದ ಮೂಕನಂತಾಗಬೇಕು 1 ಬಲ್ಲವತವನು ನೀಡಿ ಬಲ್ಲನೆತಾನಾಗಿ ಬಲ್ಲರಿಯೆನೆಂಬುದನು ಈಡ್ಯಾಡಬೇಕು ಬಲ್ಲರಿಯದೊಳಗಿದ್ದನೆಲ್ಲ ತಿಳಿಕೊಳ್ಳಬೇಕು ಸೊಲ್ಲಿಲ್ಹೇಳುವ ಸೊಬಗ ಬೀರದಿರಬೇಕು 2 ಸೋಹ್ಯ ಸೂತ್ರವ ತಿಳಿದು ಬಾಹ್ಯ ರಂಜನಿ ಮರೆದು ದೇಹ ವಿದೇಹದಲ್ಲಿ ಬಾಳಬೇಕು ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರುನಾದಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯಾ ಪೂಜೆಯಾ ಮಾಡಿ ಗತಿಗಳ ಬೇಡಿ ಹರುಷದಿ ಕೂಡಿ ನಲಿ ನಲಿದಾಡಿ ಪ ಎಲ್ಲರೊಳು ಬಾಗಿ ನಡಿಬೇಕು ಸಾಗಿ ಖುಳ್ಳತನ ಹೋಗಿ ಏಕೋ ನಿಷ್ಟಾಗಿ ನಿಲ್ಲದೇ ವದಗಿ ಸಮದೃಷ್ಟಿ ತೂಗಿ 1 ನಿತ್ಯ ತಿಳಿದು ವಿಚಾರ ಬಲಿದು ಕುತ್ತಾಪಗಳದು ಸತ್ಯಗದಲ್ಲಿದ್ದು ಸತ್ಯಜ್ಞಾನ ಪಡೆದು ಸದ್ಬಾವ ಜಡಿದು ಚಿತ್ತ ಚಂದಲ ಜರಿದು ಮದ ಮತ್ಸರ ಜರೆದು 2 ತನ್ನದಿದಲ್ಲಾ ಸಿರಸೌಖ್ಯವೆಲ್ಲಾ ಇನ್ನು ತಿಳಿಲಿಲ್ಲಾ ಈ ಮರಹು ಸಲ್ಲಾ ಸನ್ನು ತನೆಬಲ್ಲಾ ಈ ಸಾಕಾಯ ವೆಲ್ಲಾ ಮನ್ನಿಸಿ ನೀವೆಲ್ಲಾ ಮಹಿಪತಿ ಜನಸೊಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಗದುದ್ಧಾರಕ ತನ್ನ ಮಗನೆಂದು ಬಗೆದು |ನಿಗಮಗೋಚರನ ಆಡಿಸಿದಳು ಯಶೋದೆ ಪವಟದೆಲೆಯ ಮೇಲು ಸಂಪುಟದ ಮೇಲೊರಗಿ ಉಂ-ಗುಟವ ಪೀರುವನ-ಆಡಿಸಿದಳು 1ವಿಶ್ವತಶ್ಚಕ್ಷುವ ವಿಶ್ವತೋಮುಖನ |ವಿಶ್ವವ್ಯಾಪಕನ-ಆಡಿಸಿದಳು 2ಅಣೋರಣಿಯನ ಮಹತೋಮಹೀಯನ |ಗಣನೆಯಿಲ್ಲದವನ-ಆಡಿಸಿದಳು 3ನಿಗಮಕೆ ಸಿಲುಕದಅಗಣಿತಮಹಿಮನ |ಮಗುಗಳ ಮಾಣಿಕ್ಯನ-ಆಡಿಸಿದಳು 4ಎಲ್ಲರೊಳು ಭರಿತನಾಗಿ ಇಪ್ಪ ಲಕುಮಿಯ |ವಲ್ಲಭಪುರಂದರವಿಠಲನ-ಆಡಿಸಿದಳು5
--------------
ಪುರಂದರದಾಸರು