ಒಟ್ಟು 18 ಕಡೆಗಳಲ್ಲಿ , 14 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಕರಗ್ರಹ ಎನ್ನ ಸಾಕಲಾರದÉ ಹೀಗೆ ನೂಕಿ ಬಿಡುವುದು ನ್ಯಾಯವೆ ಪ. ಬೇಕೆಂದು ನಿನ್ನ ಪದ ನಾ ಕಾಣ ಬಂದರೆ ಈ ಕಪಟತನವು ಸರಿಯೆ ಹರಿಯೆ ಅ.ಪ. ಎಲ್ಲರನು ಸಲಹಿದಂತೆನ್ನ ನೀ ಸಲಹೆನ ನಿಲ್ಲದೆ ನೀರ ಪೊಗುವೆ ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಪೆನೊ ಬಾರೆನಲು ಕಲ್ಲಡೀ ಅವಿತುಕೊಳುವೆ ಖುಲ್ಲನಲ್ಲವೊ ನಾನು ತಲ್ಲಣಿಪೆ ಪೊರೆ ಎನಲು ಹಲ್ಲು ಕೋರೆಯ ತೋರುವೆ ಎಲ್ಲಿ ಹೋಗಲೊ ನಾನು ಇಲ್ಲವೊ ಇನ್ನೊಬ್ಬ ಸೊಲ್ಲು ಕೇಳುವರನರಿಯೆ | ದೊರೆಯೆ 1 ತಡಬಡಿಸುತಿಹೆನೆನ್ನ ಪಿಡಿದು ಕೈ ಸಲಹೆನಲು ಘುಡು ಘುಡಿಸಿಕೊಂಡು ಬರುವೆ ಬಡವನೋ ನಾನು ನಿನ್ನಡಿಯನೇ ನೀಡೆನಲು ಹುಡುಗತನದಲಿ ಬೇಡುವೆ ತಡೆಯಲಾರೆನೊ ಭವದ ದಡವ ಸೇರಿಸು ಎನಲು ಕೊಡಲಿಯ ಪಿಡಿದು ಬರುವೆ ಕಡು ಬವಣೆ ಬಿಡಿಸೆಂದು ಅಡಿಗಡಿಗೆ ಎರಗಲು ಅಡವಿ ಅಡವಿಯ ತಿರುಗುವೆ | ಥರವೇ 2 ಹತ್ತು ನಾಲ್ಕು ಲೋಕಕೆ ತೆತ್ತಿಗನೊ ನೀನೆನಲು ಮುತ್ತ್ಯದೊರೆ ಎಂದೆನ್ನುವೆ ಸುತ್ತಿರುವ ಆವರಣ ಮತ್ತೆ ನೀ ಛೇದಿಸೆನೆ ಬತ್ತಲೆ ನೀ ನಿಲ್ಲುವೆ ಭೃತ್ಯ ನಾ ನಿನಗೆನಲು ಹತ್ತಿ ಕುದುರೆಯ ಓಡುವೆ ನಿತ್ಯ ಮೂರುತಿ ನಿನ್ನ ಕೃತ್ಯವೇ ಹೀಗಿರಲು ಮತ್ತಿನ್ನ ಹ್ಯಾಗೆ ಪೊರೆವೆ | ಕರೆವೆ 3 ದÉೂರೆಯು ನೀ ಜಗಕೆಂದು ಸುರರೆಲ್ಲ ನುಡಿಯುವರೊ ಅರಿಯೆ ನಾನದರ ಮಹಿಮೆ ಸಿರಿಗೊಡೆಯನಾದರೆ ಪೊರೆಯದೆಲೆ ಎನ್ನನು ಕರೆಕರೆಗೊಳಿಸುವರೆ ತಿರಿಯ ಬರಲಿಲ್ಲ ನಾ ಸಿರಿಯ ನೀಡೆಂದೆನುತ ಉರುತರದ ಭಯವೇತಕೆ ಚರಣ ಧ್ಯಾನವನಿತ್ತು ಪರಮ ಭಕ್ತರೊಳಿಡಿಸಿ ದೊರೆಯೆ ನೀ ಸಲಹ ಬೇಕೋ | ಸಾಕೋ4 ಆಪಾರ ಮಹಿಮನೆ ಆರ್ತಜನ ರಕ್ಷಕ ಪಾಪಿ ನಾನಿಹೆನೋ ಈಗ ನೀ ಪಿಡಿದು ಪೊರೆಯದಿರೆ ಕಾಪಾಡುವವರ್ಯಾರೊ ಶ್ರೀ ಪತಿಯೆ ನೀನೆ ತೋರೊ ತಾಪಪಡಲಾರೆ ಭವಕೂಪದೊಳು ಬಿದ್ದಿಹೆನು ನೀ ಕೃಪಾದಿಂದೀಕ್ಷಿಸೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಕಾಪಾಡುವವರನರಿಯೆ ದೊರೆಯೆ 5
--------------
ಅಂಬಾಬಾಯಿ
ಶ್ರೀ ಪ್ರಾಣೇಶದಾಸರ ಸಂಪ್ರದಾಯದ ಹಾಡುಗಳು240ಶ್ರೀದೇವರ ವಿವಾಹ ಮಹೋತ್ಸವದ ಪದಗಳುಏನು ನೋಡಿತ್ತ ನೀ ವರಕೆ ಮಗಳಾ |ಹೀನವಳಿತೆನ್ನದಲೆ ತ್ವರದಿ ಜಲನಿಧಿಯೂ ಪಕಪ್ಪು ರೂಪವು ಇವನ ನೆಲಿ ಒಬ್ಬರರಿಯರೂ |ಸರ್ಪಶಯನನು ತಿರಿದುಕೊಂಡು ತಿಂಬಾ ||ಮುಪ್ಪಿನವ ಇವ ಹುಟ್ಟಿದುದನಾರು ಬಲ್ಲವರು |ತಪ್ಪಿ ಕೊಟ್ಟನೆ ಎಲ್ಲರನುಜರಿದುಹೀಂಗೇ 1ಕದ್ದು ಪೊಟ್ಟೆಯ ಪೊರೆವ ಎಂಜಲೆನ್ನದೆ ತಿಂಬ |ಹದ್ದನೇರುವ ಅಡವಿಯೊಳು ಚರಿಸುವಾ ||ಬುದ್ಧಿಹೀನರ ತೆರದಿ ಹಡದವಳ ಶಿರ ಕಡಿದ |ಸದ್ಯ ವಸನವ ಕಳದು ಬತ್ತಲಿರುವವಗೇ 2ಹೇಸಿಕಿಲ್ಲದೆ ಕರಳ ಮಾಲಿಕಿಯ ಹಾಕಿಹನು |ದೋಷಕಂಜನು ಜಾರತನವ ಮಾಳ್ಪಾ ||ದಾಸನಂದದಿ ಬಲಿಯ ಮನಿಯ ಬಾಗಿಲ ಕಾಯ್ದ |ಆ ಸವ್ಯಸಾಚಿ ತೇರಿಗೆ ಸೂತನಾದವಗೆ 3ಹೆಣ್ಣುಗಳ ಅಂಬರವ ಕೊಂಡು ಮರನೇರುವನು |ತನ್ನ ಮಕ್ಕಳ ತಾನೆ ಹತಗೈಸುವಾ ||ಮಣ್ಣನೂ ಬೆಂಕಿಯನು ತಿಂಬ ವಾವಿಯನರಿಯ |ತನ್ನ ಪುತ್ರರಿಗೆ ತನ್ನಯ ಮಕ್ಕಳಿತ್ತವಗೆ 4ಪ್ರಾಣೇಶ ವಿಠಲನಲ್ಲಿಹವಿಂಥ ಸುಗುಣಗಳು |ತಾನೊಂದು ಪೂರ್ತಿ ತಿಳಿಯನು ಸಮುದ್ರಾ ||ಶ್ರೀ ನಾರಿಯನು ಕೊಟ್ಟ ಅವನ ಬುದ್ಧಿಯೊ ಅಥವ |ಏನು ವ್ರತ ಸೇವಿಸಿದ್ದಳೊಕಮಲಮಂದಿರಿಯು 5
--------------
ಪ್ರಾಣೇಶದಾಸರು