ಒಟ್ಟು 24 ಕಡೆಗಳಲ್ಲಿ , 11 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ ಸಾಕುವಾಕೆಯೆ ನೀನು ಲೋಕಕ್ಕೆ ನೀ ತಾಯಿ ಪ ಬೇಸರಿಸಿ ಧರಿಸಿದಳು ಜನನಿ ಎನ್ನನÀು ದಶ- ಮಾಸ ಗರ್ಭದೊಳಿದ್ದು ಬಹಳ ಬಳಲಿದೆನು ಹೇಸಿಕೆಯ ವಿಣ್ಮೂತ್ರ ರಾಶಿಯೊಳುಗುದಿಸಿದರೆ ಆಸುರದಿ ಕೈಯೆತ್ತಿ ಪಿಡಿದು ರಕ್ಷಿಸಿದೆ1 ಮಲ ಮೂತ್ರ ಮೈಲಿಗೆಯ ಮೈಯೊಳಗೆ ಧರಿಸಿದರು ತಿಲ ಮಾತ್ರ ಹೇಸಿದೆಯ ಎನ್ನೊಳಗೆ ನೀನು ಜಲಜಮುಖಿ ಎನ್ ತಾಯಿ ಎಲೆಯ ಓಗರವಿಟ್ಟು ತೊಳೆದ ಹಸ್ತದಿ ಎನಗೆ ಕೊಳೆಯನಿಕ್ಕಿದಳು 2 ಮಗುವೆಂದು ಯೋಚಿಸದೆ ಉಗುಳುತ್ತ ಎಂಜಲನು ಒಗೆದು ಬೀಸಾಡಿದಳು ಎಡದ ಹಸ್ತದಲಿ ಜಗಳವಾಡಲು ಪಿತನು ಮಗನ ಮೋಹದ ಮೇಲೆ ತೆಗೆಯಬಾರದೆ ಮಲವನೆಂದು ಜರೆÀದಪಳು3 ಪಡೆದ ತಾಯ್ತಂದೆಗಳು ಅಡಗಿ ಹೋದರು ಎನ್ನ ಬಿಡದೆ ಸಲಹಿದೆ ನೀನು ಪೊಡವಿ ದೇವತೆಯೆ ಕಡೆಗಾಲದೊಳು ಕೈಯ ಪಿಡಿದು ರಕ್ಷಿಸದೆನ್ನ ಒಡಲ ದುಃಖವ ನೋಡಿ ನುಡಿಯದಿರಬಹುದೆ 4 ಬಲವಾಗಿ ಕೈವಿಡಿದೆ ವರಾಹತಿಮ್ಮಪ್ಪನಿಗೆ ಗೆಲವಿಂದ ಭೂರಮಣನೆನಿಸಿ ಮೆರೆವ ಜಲಜನಾಭನೆ ಎನ್ನ ಪಿತನು ಮಾತೆಯು ನೀನು ಸುಲಭದೊಳು ಮೈದೋರು ಫಲಿತವಹ ಪದವ 5
--------------
ವರಹತಿಮ್ಮಪ್ಪ
ಸುಲಭದ ಮಾತಿದು ತಿಳಿದು ಪೇಳಿ ಹೊಲಬುದಪ್ಪಲು ಬೇಡ ಸುಲಿಗೆಯಾಹುದು ಮುಂದೆ ಪ ಅಂತರಿಕ್ಷದಲೊಂದು ನಿಂತಿಹ ವೃಕ್ಷವಾ- ನಂತಾನಂತವಾದೆಲೆಗಳುಂಟು ನಿಂತಿಹ ಎಲೆಗಳು ಬೀಳುವುದನು ನೋಡಿ ಮಂತ್ರಿಯೊಬ್ಬನು ಕುಳಿತು ಎಣಿಸುವನಯ್ಯ 1 ಭೂಮಿಯ ಮೇಲೊಂದು ಭೂಮಿಯು ಜನಿಸಲು ತಾ ಮನಸೋತನು ದೊರೆಯೊಬ್ಬನು ಪ್ರೇಮದಿ ರಾಜ್ಯವನಾಳುವ ಸಮಯಕ್ಕೆ ಸೀಮೆಯ ಮೇಲೆಲ್ಲ ಗುಡಿಗಟ್ಟಿತಯ್ಯ 2 ಕಡಗೋಲು ಮಿಡುಕಿತು ಒಡೆಯಿತು ಪಾತ್ರವು ಪಿಡಿದ ಬೆಣ್ಣೆಯೊಳೊಂದು ಗಿಡ ಹುಟ್ಟಿತು ಅಡವಿಯ ಮಧ್ಯದಿ ಹುಟ್ಟಿದ ಗಿಡವಿನ ಎಡೆಯೊಳು ಗಿಣಿ ಬಂದು ಮರಿಯಿಕ್ಕಿತಯ್ಯ 3 ಬಿಲ್ಲುಗಾರನು ಬಂದು ಬಲ್ಲಿದ ಪಕ್ಷಿಯ ಮೆಲ್ಲನೆ ಕೆಡೆಯಲು ಬೇಕೆನುತ ನೆಲ್ಲಿಯ ಎಲೆಯನ್ನು ಎಣಿಸಿ ಬೀಸಾಡುವ ನಲ್ಲನೊಬ್ಬನು ಕಂಡು ಹೊರಗಿಟ್ಟನಯ್ಯ 4 ಗುಡಿಯ ಬಾಗಿಲ ಮುಂದೆ ವೃಕ್ಷದ ಗಿಣಿಯನ್ನು ಮಡದಿಯೋರ್ವಳು ಕಂಡು ಒಳಗಿಟ್ಟಳು ಗಿಡುಗನ ಹಾವಸೆ ಒಡೆಯನು ಕಾಣುತ್ತ ಒಡಲಾಳು ಸುರಭಿಯ ಕಟ್ಟಿದನಯ್ಯ 5 ಮೂಗನು ಕಾಣುತ್ತ ಕೂಗ್ಯಾಡಿ ಕರೆಯಲು ಆಗಲೇ ಕಿವುಡನು ಧ್ವನಿಯ ಕೇಳಿ ಬೇಗದಿ ಕುರುಡನು ಬಂದು ಹಾಲೆರೆಯಲು ಆಗಲೆ ಪಕ್ಷಿಯು ಉಂಡು ಹಾರಿತಯ್ಯ6 ಬುದ್ದಿಹೀನನು ಕಂಡು ಶುದ್ಧ ಸ್ವಾಮಿಯೊಳು ತಿದ್ದಿದ ಗುಡಿಗಳು ಬಿದ್ದಮೇಲೆ ಎದ್ದು ಪಕ್ಷಿಯು ಹೋಗಿ ವರಾಹತಿಮ್ಮಪ್ಪನು ಇದ್ದಲ್ಲಿಗಾಗಿಯೆ ಹಾರಿಹೋಯಿತಯ್ಯ 7
--------------
ವರಹತಿಮ್ಮಪ್ಪ
ತೂಗಿರೆ ರಂಗನ್ನ ತೂಗಿರೆ ಕೃಷ್ಣನತೂಗಿರೆ ಅಚ್ಯುತಾನಂತನ ಪ.ತೂಗಿರೆ ವರಗಿರಿ ಅಪ್ಪ ತಿಮ್ಮಪ್ಪನತೂಗಿರೆ ಕಾವೇರಿ ರಂಗಯ್ಯನ ಅಪಇಂದ್ರಲೋಕದೊಳುಪೇಂದ್ರ ಮಲಗಿಹನೆಬಂದೊಮ್ಮೆ ತೊಟ್ಟಿಲ ತೂಗಿರೆಮಂದಗಮನೆಯರು ಚೆಂದದಿ ಪಾಡುತನಂದನ ಕಂದನ ತೂಗಿರೆ 1ನಾಗಲೋಕದಲ್ಲಿ ನಾರಾಯಣ ಮಲಗಿಹನೆಹೋಗಿ ನೀವ್ ತೊಟ್ಟಿಲ ತೂಗಿರೆನಾಗವೇಣಿಯರು ನಾಲ್ಕು ನೇಣನು ಪಿಡಿದುಭಾಗ್ಯವಂತನೆಂದು ತೂಗಿರೆ 2ಜಲಧಿಯೊಳಾಲದ ಎಲೆಯಲ್ಲಿ ಮಲಗಿದಚೆಲುವನ ತೊಟ್ಟಿಲ ತೊಗಿರೆಸುಲಭ ದೇವರ ದೇವ ಬಲಿಬಂಧಮೋಚಕಎಳೆಯನ ತೊಟ್ಟಿಲ ತೂಗಿರೆ 3ಸೂಸುವ ಮಡುವಿನೊಳ್ ಕಾಳಿಯನ ತುಳಿದಿಟ್ಟದೋಷವಿದೂರನ ತೂಗಿರೆಸಾಸಿರ ನಾಮದ ಸರ್ವೋತ್ತಮನೆಂದುಲೇಸಾಗಿ ತೊಟ್ಟಿಲ ತೂಗಿರೆ 4ಅರಳೆಲೆ ಮಾಗಾಯಿ ಕೊರಳ ಪದಕ ಸರತರಳನ ತೊಟ್ಟಿಲ ತೂಗಿರೆಉರಗಾದ್ರಿವಾಸ ಶ್ರೀ ಪುರಂದರವಿಠಲನಹರುಷದಿ ಪಾಡುತ ತೂಗಿರೆ 5
--------------
ಪುರಂದರದಾಸರು
ಶ್ರೀ ನಾಮಗಿರಿ ಅಮ್ಮ63ಶ್ರೀ ನಾಮಗಿರಿ ಅಮ್ಮ ನಿನ್ನ ನಾ ನಂಬಿದೆ ಸಲಹೆನ್ನಶ್ರೀ ನರಸಿಂಹನ ನಿಜಸತಿ ಶುಭಕರಿವನರುಹಜಾಂಡದಜನನಿಭೂಅಂಭ್ರಣಿಅ.ಪಬೊಮ್ಮನ ಪ್ರಳಯದಲಿ ಕಮಲಜ ಆಲದ ಎಲೆಯಾಗಿಸ್ವಾಮಿ ಸ್ವಾಪ್ಯನ ಬಹುನಂದದಿ ಸ್ತುತಿಸಿಸಮಸ್ತಜಗತ್ ಸತ್ಸøಷ್ಟಿಯ ಗೈಸಿದೆ 1ಕ್ಷೀರಾಂಬುಧಿಯಿಂದ ತೋರಿ ನೀ ಸರ್ವಜನರ ಮುಂದೆನಾರಅಜಿತ ಸರ್ವೋತ್ತಮ ಹರಿಗೆ ನೀನಿರಂತರ ನಿಜಸತಿಯೆಂದು ಪ್ರಕಟಿಸಿದೆ 2ಘನಬಾಲಭಕ್ತನಿಗೆ ಒಲಿದ ವೃತಿತಿಜಾಸನ ಪಿತನುಹನುಮವಂದಿತ ಶ್ರೀ ಪ್ರಸನ್ನ ಶ್ರೀನಿವಾಸನರಸಿಂಹನ ಸಹ ಭಕ್ತಜನರ ಪೊರೆವೆ 3
--------------
ಪ್ರಸನ್ನ ಶ್ರೀನಿವಾಸದಾಸರು
ಹರಿಯೆ, ಕುಣಿಯೆನುತ -ನರ -ಹರಿಯೆ, ಕುಣಿಯೆಂದು ಕುಣಿಸಿದರಯ್ಯ ಪಲೋಕವ ತಾಳ್ದನ ಮನೆಯಲಿ ಪುಟ್ಟಿ |ತೂಕದ ನುಡಿಗಳ ಕದ್ದವನ ||ನಾಕರಿಸಲು ನಿಜ ಗೋಪರೂಪದಿಂದ |ಆಕರಿಸಿದನಾ ಕುಣಿಸಿದರಯ್ಯ 1ಎಡೆಯಿಲ್ಲದೆ ನಡೆವನ ಕೂಡಿರುವವನ |ಹಿಡಿಲೆಂಬನ ಒಡಹುಟ್ಟಿದನ ||ಒಡೆಯನ ಕಂದನ ವೈರಿಯ ಬಂಡಿಯ |ಹೊಡೆದ ಮಹಾತ್ಮನ ಕುಣಿಸಿದರಯ್ಯ 2ಒಣಗಿದ ಮರ ಎಲೆಯಿಲ್ಲದ ಬಳ್ಳಿ |ಬಣತಿಗೆ ಪುಟ್ಟಿದ ವನದಲ್ಲಿ ||ಕ್ಷಣ ಮುನ್ನರಿಯದೆ ಅದರ ಆಹಾರಕೆ |ಫಣಿಯ ಮೆಟ್ಟಿದನ ಕುಣಿಸಿದರಯ್ಯ 3ಮಾವನೊಡನೆ ಮನೆಮಾಡಿ ಗೋಕರ್ಣದಿ |ಆ ವುರಗನ ಮೇಲ್ಮಲಗಿದನ ||ಮೂವರ ಮೊಲೆಯುಂಡ ಮೂಲೋಕವರಿಯದ |ಮೂವರಣ್ಣನೆಂದು ಕುಣಿಸಿದರಯ್ಯ 4ಗೋಕುಲದೊಳಗಿನ ಗೋಪಿಯರೆಲ್ಲ |ಏಕಾಂತದಿ ತಮ್ಮೊಳು ತಾವು ||ಶ್ರೀಕಾಂತನ ನಮ್ಮ ಪುರಂದರವಿಠಲನ |ಏಕ ಮೂರುತಿಯೆಂದು ಕುಣಿಸಿದರಯ್ಯ 5
--------------
ಪುರಂದರದಾಸರು