ಒಟ್ಟು 17 ಕಡೆಗಳಲ್ಲಿ , 8 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶ್ರೀ ನಂದನೇಶ್ವರ | ಪಾಲಿಸು ಜಗದೀಶ್ವರ | ಶರಣು ಶ್ರೀ ನಂದನೇಶ್ವರ ಪ ಶರಣು ಶ್ರೀ ಗುರುವರ ಗಂಗಾಧರ | ಕರ ಕಪಾಲಧರ ಹರ ಮೃತ್ಯುಂಜಯ ಅ.ಪ. ತಂದೆ ನಿನ್ನಯ ಪಾದವ | ಮರೆತಿಹುದರಿಂದ | ನಿಂದ ಹಲವಂಗದಲಿ ಭವಭವದಿ || ನೊಂದು ಬಂದೆ ನಾನಿಂದೀ ಭವದೊಳು | ಹೊಂದಿ ತವಾಂಘ್ರಿಯನಂದದಿ ಭಜಿಸುವೆ 1 ಭೇದ ಬುದ್ಧಿಯ ಮಾನವರು | ವೇದ ಶಾಸ್ತ್ರದ| ಹಾದಿಯರಿಯದ ಮತ್ಸರರು || ಸಾಧುಗಳೊಡನೆ ವಿರೋಧವನೆಣಿಸುವ | ಬಾಧಕರಾದರು ಹೇ ದಯಾನಿಧಿಯೇ 2 ತೊಡಕುಗಳನ್ನೆ ಬಿಡಿಸಿ | ಬಾಧೆಗಳ ವಾರಿಸಿ | ಕಡು ದುಷ್ಟಾತ್ಮರ ಶಿಕ್ಷಿಸಿ | ಎಡೆಬಿಡದೆನ್ನ ಮನೋರಥ ಸಲಿಸುತ | ದೃಢತರ ಭಕುತಿಯ ಕೊಡು ಕೃಪೆಯಿಂದಲಿ 3 ಪಾದ | ಮುಕುತಿ ಸಂಪದ ಪಾಲಿಸೊ || ಶಕುತಿಯೊಳಗೆ ನೀ ಯುಕುತಿಯಿಂದ ನಿಜ | ಸುಖದ ಪದವಿಯೊಳು ಪ್ರಕಟದಿ ಪೊರೆಯೈ4 ಯೋಗಿಗಳರಸ ನೀನೆಂಬ | ಬಿರುದುಗಳ ತೋರಿಸು- | ತೀಗೆನ್ನಪರಾಧವ ಕ್ಷಮಿಸೆಂಬ || ರಾಗದ ನುಡಿಯೊಳೆನ್ನಾಗಮನವೊಪ್ಪಿಸು- | ತೀಗ ಸದಾನಂದ ಯೋಗಾಂತರ್ಗತ 5
--------------
ಸದಾನಂದರು
ಸಂದಿತಯ್ಯ ಪ್ರಾಯವು |ಸಂದಿತಯ್ಯ ಪ್ರಾಯವು ಪಮೂರು ತಿಂಗಳುಸಂದುಹೋಯಿತು ತಿಳಿಯದೆ ||ಬಂದೆ ತಾಯಿಯ ಜಠರದಲಿ ಮ-|ತ್ತೊಂದು ಬುದ್ಧಿಯನರಿಯದೆ ||ಬೆಂದೆ ನವಮಾಸದಲಿ ಗರ್ಭದಿ |ಒಂದು ದಿವಸವು ತಡೆಯದೆ ||ಕುಂದದೀಪರಿಯೊಂದು ವರುಷವು |ಇಂದಿರೇಶನೆ ಕೇಳು ದುಃಖವ 1ಕತ್ತಲೆಯೊಳಿರಲಾರೆನೆನುತಲಿ |ಹೊತ್ತೆ ಹರಕೆಯ ನಿನ್ನನು ||ಮತ್ತೆ ಜನಿಸಲು ಭೂಮಿಯೊಳು ನಾ |ಅತ್ತುನಿನ್ನನು ಮರೆತೆನು ||ಮತ್ತೆ ಮಲ-ಮೂತ್ರದೊಳು ಬಾಲ್ಯದಿ |ಹೊತ್ತು ದಿನಗಳ ಕಳೆದೆನು ||ಮತ್ತೆ ನರಕದೊಳುರುಳುತುರುಳುತ |ಉತ್ತಮೋತ್ತಮ ನಿನ್ನ ನೆನೆಯದೆ 2ಚಿಕ್ಕತನವನು ಮಕ್ಕಳಾಟದಿ |ಅಕ್ಕರಿಂದಲಿ ಕಳೆದೆನು ||ಸೊಕ್ಕಿ ಹದಿನಾರಲಿ ನಾನತಿ |ಮಿಕ್ಕಿ ನಡೆದೆನು ನಿನ್ನನು ||ಸಿಕ್ಕಿ ಬಹು ಸಂಸಾರ ಮಾಯೆಯ |ಕಕ್ಕುಲಿತೆಯೊಳು ಬಿದ್ದೆನು ||ಹೊಕ್ಕುದಿಲ್ಲವು ನಿನ್ನ ಪಾದವ |ರಕ್ಕಸಾರಿಯೆ ಕೇಳು ದುಃಖವ 3ಸುಳಿದೆ ಮನೆಮನೆ ಕಳೆದೆ ಕಾಲವ |ಉಳಿದ ಯೋಚನೆ ಮಾಡದೆ ||ಬೆಳೆದೆ ತಾಳೆಯ ಮರದ ತೆರದಲಿ ||ಉಳಿವ ಬಗೆಯನು ನೋಡದೆ ||ಎಳೆಯ ಮನದೊಳೆ ಇಳೆಯ ಜನರೊಳು |ಬಳಕೆ ಮಾತುಗಳಾಡಿದೆ ||ಕಳೆದೆ ಈ ಪರಿಯಿಂದ ಕಾಲವ |ನಳಿನನಾಭನೆ ನಿನ್ನ ನೆನೆಯದೆ 4ಎಡೆಬಿಡದೆಅನುದಿನದಿ ಪಾಪದ |ಕಡಲೊಳಗೆ ನಾನಾಳ್ದೆನು ||ದರವ ಕಾಣೆದೆ ಮಧ್ಯದಲಿ ಎ-|ನ್ನೊಡಲೊಳಗೆ ನಾನೊಂದನು ||ದೃಢದಿ ನಿನ್ನಯ ಧ್ಯಾನವೆಂಬಾ |ಹಡಗವೇರಿಸು ಎನ್ನನು ||ಒಡೆಯ ಪುರಂದರವಿಠಲ ಎನ್ನನು |ಬಿಡದೆ ಕಾಯೈ ಬೇಗ ಶ್ರೀಹರಿ5
--------------
ಪುರಂದರದಾಸರು