ಒಟ್ಟು 20 ಕಡೆಗಳಲ್ಲಿ , 14 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಮಾನುತ ಪಾದಪಲ್ಲವ ಶ್ರೀಕರ ಚರಣ ಸೇವಕರ ಸಂಗದೊಳಿರಿಸು ವಿಜಯರಾಯ ಪ ನಿಮ್ಹೊರತು ಪೊರೆವರನ್ಯರನು ನಾಕಾಣೆ ನಿಮ್ಮ ಚರಣವ ನಂಬಿದೆ ಕರುಣದಿ ಕಾಯೊ ಅ.ಪ ಪಂಡಿತ ಪಾಮರರನು ಉದ್ಧಾರ ಮಾಡೆ ಕರುಣದಿಂದ ಸಕಲ ವೇದಗಳ ಕ್ರೋಡೀಕೃತವಾದ ನಿರ್ಣಯ ಭಾಷ್ಯಗಳರ್ಥವ ಮಾಡಿದಿ ಪದಗಳ ಸಕಲರೂ ತಿಳಿವಂದದಿ 1 ನಿನ್ನವರಾದ ರಂಗ ಒಲಿದ ರಾಯರ ನೋಡು ನಿನ್ನ ಉಕ್ತಿಯ ನಂಬಿದ ವೆಂಕಟರಾಯರ ನೋಡು ನಿನ್ನವನೆಂದೆನ್ನನು ಅವರಂತೆ ನೋಡದೆ ಎನ್ನ ಕೈ ಸಡಿಲ ಬಿಡುವದೇನೋ 2 ಎಂದಿಗಾದರು ನಿನ್ನ ದಾಸರ ಕರುಣದಿಂದ ಪಾದದ್ವಂದ್ವ ಹೊಂದದೆ ಹೋಗುವೆನೆ ದಾಸರಪ್ರಿಯನೆ ತಂದೆ ವಿಜಯ ರಾಮಚಂದ್ರವಿಠಲರಾಯನ ಹೊಂದುವ ಮಾರ್ಗವ ಬಂದು ತೋರಿಸಬೇಕೊ 3
--------------
ವಿಜಯ ರಾಮಚಂದ್ರವಿಠಲ
ವ್ಯಾಪಾರ ಉದ್ಯೋಗವನು ಮಾಡುವೆ | ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಪ ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ | ಅರವಿಂದನಾಭವೆಂಬೊ ಅಂಗಿಯ ತೊಟ್ಟು || ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ | ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ 1 ಕಮಲನಾಭವೆಂಬೊ ಕಮಲದಾನಿ ಪಿಡಿದು | ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ || ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ 2 ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು | ಭಾಗವತರು ಕರೆದು ಇಂಬನಿತ್ತು || ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ | ಈಗಳೆ ಕುಳಿತ ಅಚ್ಯುತನ ತೋರಿದರು 3 ಕಂಡು ಕರವನು ಮುಗಿಯೆ ಕರುಣಾಸಾಗರನೆಂಬೊ | ಮಂಡಲಾಧಿಪನು ಕರೆದು ಮನ್ನಿಸಿ || ಗಂಡುಗಲಿಯಾಗೆಂದು ಸಂಚುಗಾರಿಕೆ ತುಲಸಿ | ದಂಡೆ ಕೊರಳಿಗೆ ಹಾಕಿ ದಾಸರೊಳಗಿರಿಸಿದನು 4 ಘನವಾದ ಉದ್ಯೋಗ ದೊರಕಿತು ನನಗಿನ್ನು | ಅನುಮಾನವಿಲ್ಲವು ಎಂದೆಂದಿಗೂ || ದಿನದಿನಕೆ ಹರಿನಾಮವೆಂಬೊ ಲೆಖ್ಖ-| ವನು ಬರೆದು ತ್ರಿಲೋಕದರಸನಿಗೆ ಒಪ್ಪಿಸಿದೆ || 5 ಬರೆದು ಲೆಖ್ಖವ ನೋಡಿ ದಯಾಪಯೋವಾರಿಧಿ | ಹರುಷದಿಂದಲಿ ಎನಗೆ ಸಂಬಳಕ್ಕೆ || ಬರೆಸಿ ಕೊಟ್ಟನು ಸನದು ಕೇಶವಾದಿಯಂಬೊ | ವರಹಗಳು ಎಂದಿಗಾದರು ಅಳಿವಿಲ್ಲದೆ || 6 ಈಸು ದಿನ ಉದ್ಯೋಗ ಹೀನನಾಗಿ ನೊಂದೆ | ದಾಸರಾ ದಯದಿಂದ ದೊರೆಕಿತಿಂದು || ಸಂಚಿತ ಕರ್ಮ ಓಡಿಸಿ |ಶ್ರೀಶ ವಿಜಯವಿಠ್ಠಲನಲ್ಲಿ ಬಾಳಿದೆನೊ || 7
--------------
ವಿಜಯದಾಸ
ಶ್ರೀ ರಾಘವೇಂದ್ರರು ಗುರುರಾಜರೆ ಎನ್ನ ಪರಿಪಾಲಿಸುವುದು ಬಿಟ್ಟುವರ ಮಂತ್ರಾಲಯದೊಳು ಇರುವುದುಚಿತವೇನೊ ಪ ಬಡವ ಭಕ್ತ ಕಷ್ಟಕಲೊಳಿರಿಸಿ ತುಂಗಾದಡದಿ ನಿಂತೆನ್ನ ಕೈಪಿಡಿಯದೆ ಪೋಗುವರೇನೊ 1 ಕಡು ಸೇವಕನೊಳಿಂಥ ಕಡುಕೋಪವ್ಯಾತಕೆನಡೆ ನುಡಿ ಎನ್ನ ತಪ್ಪು ಪಿಡಿದು ಪೋಗುವರೇನೊ 2 ಎಂದಿಗಾದರು ನಿನ್ನ ಪೊಂದಿದವನಲ್ಲೋಮುಂದೇನುಗತಿ ಪೇಳೊ ಇಂದಿರೇಶನ ಪ್ರಿಯ 3
--------------
ಇಂದಿರೇಶರು
ಷಟ್ಪದಿ ಕೂಟವಾಳುವ ಶ್ರೇಷ್ಠ ಶಾರದೆ | ಕೈಟ ಭಾರಿಯ ಭಕ್ತಿ ವೃಕ್ಷವ| ನಾಟಿ ಹೃದಯದಿ ಬೆಳಸೆ ಶುಭಗುಣ ಖಣಿಯೆ ಮಂಗಳೆಯೆ 1 ಪೋಲ್ವ ಮೂಢನ | ಭಾರ ನಿನ್ನದೆ ದೀನ ವತ್ಸಲೆ ಯೆ| ಶುಭಮರ್ಮ ಕಳಿಸುತ | ಶ್ರೀನಿವಾಸನ ಭಕ್ತಿ ಜ್ಞಾನವಿರಕ್ತಿ ಕೊಡಿಸಮ್ಮ 2 ವೇಣಿ ವೀಣೆಯ | ಗಾನ ನುಡಿಸುವ ಜಾಣೆ ವಿಧಿಮನ ಹಾರಿ ಕೋಮಲೆಯೆ | ಶೂನ್ಯ ಮೂರು ರೂಪಳೆ | ಸಾನುರಾಗದಿ ವಲಿದು ಹರಿಪಥ ಸಿಗಿಸಿ ಪೊರೆಯಮ್ಮ 3 ರಮ್ಯರೂಪಗಳಿಂದ ನಾ ನಾ | ರಮ್ಯಸೃಷ್ಟಿಗಳಿಗನುವಾಗುತ ಹರಿಯ ಸೇವಿಸಿದೆ | ನುಡಿಸಿ ಕರಿಸುವಿ | ಯಮ್ಮ ಜಗದಿ ಸರಸ್ವತೀಯಂತೆಂದು ವಿಪಮಾತೆ 4 ಮಾಯ್ಗಳ ಗೆಲ್ವ ಬಗೆ ತೋರು | ಮಾತೆ ಯೆನಿಸಿಹೆ ವಿಕಟ ಜಗದವತಾರ ವರ್ಜಿತೆ ಶರಣು ಶ್ರೀ ಸೊಸೆಯೆ 5 ಕೃತಿ ಸುತೆಸು | ಮಧ್ವಶಾಸ್ತ್ರದಲಿ ಮನದಕು| ಬುದ್ದಿಗಳ ಕಡಿಸಿ ಪ್ರಸಿದ್ಧಿಯ ನೀಡಿ ಸಾಕಮ್ಮ | ಪದ್ಮನಾಭನ ವೇದ ಸಮ್ಮತಿ | ಯಿಂದ ಪಾಡುತ ಭಾಗ್ಯವಾಹುದೆ | ಎಂದಿಗಾದರು ನೀನೆ ಮನದಲಿ ನಿಂತು ನುಡಿಸದಲೆ 6 ವಿನೋದ ಗೊಷ್ಠಿಯ | ಹಾದಿ ಹಿಡಿದವಿವೇಕಿ ನಾನಲೆ ಕೇಳು ವಿಪತಾಯೆ | ಮಾಧವನು ಸಿಗನಮ್ಮ | ಆದರದಿ ಸಾರಿದೆನು ಕವಿಜನಗೇಯೆ ವಿಧಿಜಾಯೆ 7 ನೀರಜ ರುದ್ರರ ಬಿಂಬೆ ಭಕ್ತರ | ಸ್ತಂಭೆ ಶಾಂಭವಿ ವಂದ್ಯೆ ನಿತ್ಯದಿ | ಉಂಬೆ ಸುಖಗಳನೂ | ಸಾರ ಕೈಗೊಡಿಸಮ್ಮ ಸಮೀರ ಗ್ಹೇಳುತಲಿ 8 ಭೃತ್ಯ ನಿತ್ಯ ಭಕ್ತಳೆ | ವಿತ್ತ ವನಿತಾ ವ್ಯಾಧಿ ಹರಿಸುತ ಚಿತ್ತ ಶುದ್ಧಿಯನು | ಸಪ್ತ ಶಿವಗಳ ಮರ್ಮ ಬೇಗನೆ ವತ್ತಿ ಮಿಥ್ಯಾಜ್ಞಾನ ತಿಮಿರವ ಭಕ್ತಿ ಭಾಸ್ಕರಳೆ 9 ಸುಖಗಳನುಂಬೆ ಭುಜಿವಿದಿ| ತಳಿಹೆ ಪತಿತೆರದ್ವಿಶತ ಕಲ್ಪಗಳಲ್ಲಿ ಸಾಧನೆಯು | ಶಾಪವ ಶ್ಯಾಮಲಾಶಚಿ | ಗಳಿಗೆ ದ್ರೌಪತಿ ಇಂದ್ರ ಸೇನಾಕಾಳಿ ಚಂದ್ರಾಖ್ಯೆ 10 ನಿಂತು ಶಶಿಯಿಲ್| ಭೂತ ಗುಪಚಯವಿತ್ತು ಸೃಷ್ಠಿಯ ಕಾರ್ಯಗನುವಾಹೆ | ಪತಿ ನಿನಗಹುದಮ್ಮ ಕೊರತೆಯು | ಯಾತರಿಂದಲು ಯಾವಕಾಲುಕು ಇಲ್ಲರಯಿ ನಿನಗೆ 11 ಕವಚ ತೊಡಿಸುತ | ಶ್ರೀನಿವಾಸನಭಕ್ತನಿಚಯಕ್ಕೆ ಕೈಮುಗಿದು ಆನತಾಮರಧೇನು ಮುಖ್ಯ | ಪ್ರಾಣಮಂದಿರನಾದಶುಭಗುಣ ಪೂರ್ಣಪೂರ್ಣಾನಂದ ತದ್ವನ ಬಾದರಾಯಣಗೆ 12 ದೈನ್ಯ ದಿಂದಸಮರ್ಪಿಸುತ ಪವಮಾನರಾಯನ ಕರುಣವೆಲ್ಲೆಡೆ ಅನ್ಯ ವಿಷಯವ ಬೇಡದಂದದಿ ಮಾಡುತಲಿಯನ್ನ | ಜ್ಞಾನ ಭಕ್ತಿ ವಿರಕ್ತಿ ಸಂಪದ | ನೀನೆ ನೀಡುತ ಸಲಹೆ ಕೃತಿಸುತೆ | ನೀನೆ ಸಾಸರಿ ನಮಿಪೆ ಬೃಹತೀಖ್ಯಾತ ಭಾರತಿಯೆ 13 ಸೇರಿ ತಾಂಡವ ಮಾಡಿ ಪಾದ ಪಂಕಜವ ಸೂರಿ ಸಮ್ಮತ ವೇದ ಗಾನದಿ | ಸಾರಿ ಸಾರಿಸೆ ಸೇರು ವದನದಿ | ನೀರ ಜಾಕ್ಷನ ಸೊಸೆಯೆ ಶುಚಿಶತಿ ನಮಿಪೆ ಭೂಯಿಷ್ಠ 14
--------------
ಕೃಷ್ಣವಿಠಲದಾಸರು
ಎಂದಿಗಾದರು ನಿನ್ನ ನಂಬಿದೆ - ಚೆಲ್ವ - |ಮಂದರಧರ ಮದನಜನಕ |ವೃಂದಾವನಪತಿ ಗೋವಿಂದ ಪತರುಣಿಯ ಮಾನವನು ಕಾಯ್ದೆ - ಅಂದು - |ದುರುಳ ತನ್ನ ಸುತನ ಕೊಲಲು ಒದಗಿ ಕಂಬದಿ ಬಂದೆ ||ಕರುಣದಿ ಶಿಲೆಯನುದ್ಧರಿಸಿದೆ ತನ್ನ - |ಮರಣಕಾಲಕೆ ನಾಗರನೆಂದರೆ ಮುದದಿಮುಂದೆ ನಿಂದೆ ಗೋವಿಂದ 1ಧ್ರುವ - ವಿಭೀಷಣ - ರುಕ್ಮಾಂಗದರು ನಿನ್ನ ವರಿಸಲು |ಆ ವ್ಯಾಸ ನಾರದಬಲಿ ಮುಖ್ಯ ಕಲಿಪಾರ್ಥನು ||ಪವನಸುತನು ಅಂಬರೀಷನು - ತ್ರೈ - |ಭುವನವರಿಯೆ ನಿನ್ನ ನೆನೆಯೆ ಪದವನಿತ್ತೆ ಗೋವಿಂದ 2ದುರಿತ ವಿನಾಶ ದೋಷದೂರನೆ - ಜಗದ್ - |ಭರಿತ ದೈತ್ಯದಳಸಂಹಾರ ಶರಣು ಚಾರುಚರಿತ್ರ ||ಕರಿವರದ ಪುರಂದರವಿಠಲ ಕಾಯೊ |ಶರಣಹೃದಯಸರಸಿಜ ಪರಮಪಾವನ ಗೋವಿಂದ3
--------------
ಪುರಂದರದಾಸರು