ಒಟ್ಟು 26 ಕಡೆಗಳಲ್ಲಿ , 18 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವ ಕರುಣಿಸಯ್ಯ ಚಂದ್ರಶೇಖರ ನೀನೆನ್ನೊಳೊಲಿದು ಪ ತಾಪ ಹರಣ ಮಾಡು ನಿನ್ನ ದಿವ್ಯಚರಣಗಳಿಗೆ ನಮಿಪೆನುರಗಾಭರಣ ಶರಣು ಶರಣು ಶರಣು ಅ.ಪ. ಕಾಳಭೈರವ ಶಂಭು ಶಂಕರ ಗಿರಿಜೆಯಾಣ್ಮಕೇಳು ಕೇಳು ನಿನ್ನ ಕಿಂಕರಹೂಳಿ ಷಡ್ರಿಪುಗಳನು ಮನದಲಿಊಳಿ ನಿಜಜ್ಞಾನವನು ಸಜ್ಜನರೋಳಿಯಲಿ ನಿಲಿಸುತ್ತ ನಿತ್ಯದಿಬಾಳಿ ತಾಳಿ ಎನುವಂತೆ 1 ನಂಟನಯ್ಯ ಭಕ್ತ ಜನಕೆ ಇನ್ನು ಮಿತಿಯುಂಟೆ ನಿನ್ನಯ ಕರುಣಲಹರಿಂಗೆಎಂಟು ದಿಕ್ಕನು ಸುಡುವ ವಿಷವನುಕಂಠದಲಿ ಧರಿಸಿ ಜಗತ್ತಿನಕಂಟಕವನು ಪರಿಹರಿಸಿದಂಥಬಂಟ ನೀನೈ ಮಹಾದೇವಾ 2 ಮೂರು ಊರುಗಳನು ಸಂಹಾರಾಮಾಡಿ ಉಳಿಸಿದಿಘೋರ ಸಂಕಟದಿಂದ ಜಗಪೂರಸೂರಿ ಬೊಮ್ಮನ ಮತ್ತೆ ಗದುಗಿನವೀರನಾರಾಯಣನ ಕೂಡಿನಾರಿ ಸತಿಯನಸೂಯಳನ್ನುದ್ಧಾರ ಮಾಡಿದ ರೀತಿಯಲ್ಲಿ 3
--------------
ವೀರನಾರಾಯಣ
ಶ್ರೀ ಅಷ್ಟಾಕ್ಷರ ವಾಮನಮಂತ್ರ ಅಮಲ ಗುಣಪರಿಪೂರ್ಣ ಅಮೃತಸಖ ಚಿನ್ಮಯನೆ ವಾಮನ ಸುಮಂಗಳನೆ ನಮೋ ನಮೋ ನಮಸ್ತೆ ಪ ಅಮಿತ ಸುಂದರರೂಪ ಕಮಲಾದಿ ಸ್ತ್ರೀಯರಿಗು ಬ್ರಹ್ಮಾದಿ ಭಕ್ತರಿಗು ಸ್ವಾಮಿ ಸರ್ವಾಶ್ರಯನೆ ಅ ಪ ಸರ್ವದಾ ಸರ್ವತ್ರ ಸರ್ವ ಸ್ವಾಮಿಯು ನೀನು ಕೇವಲ ಸುನಿಷ್ಕಳನು ಸರ್ವ ಉತ್ಕøಷ್ಟ ಸರ್ವ ವೇದಾದಿಗಳಿಂ ಸರ್ವಜ್ಞ ನೀ ಜÉ್ಞೀಯ ಸರ್ವವಂದ್ಯನೆ ನಮೋ ಪ್ರಣವ ಪ್ರತಿಪಾದ್ಯ 1 ಉದಿತಭಾಸ್ಕರನಿಭ ಸ್ವಕಾಂತಿಯಲಿ ಜ್ವಲಿಸುವೆ ಸುದರ್ಶನವು ಶಂಖವು ಗದಾ ಜ್ಞಾನಮುದ್ರೆ ಪದುಮೆ ಸಹ ಸರ್ವ ಜಗದಂತರ್ಬಹಿವ್ರ್ಯಾಪ್ತ ಅಜ ಮಂತವ್ಯ ವಿಷ್ಣು 2 ಔದಾರ್ಯದಲಿ ಬಲಿಯ ಬೇಡಿ ಇಳಿಸಿ ಉಳಿಸಿ ಪಾದದಿಂದಲಿ ವಿಯದ್ಗಂಗೆಯನು ಪಡೆದೆ ಒದಗಿಸಿದೆ ಇಂದ್ರನಿಗೆ ಸ್ವರ್ಗಾಧಿಪತ್ಯವನು ಪದುಮಜನ ಪಿತ ನಮೋ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀವಾಯು ದೇವರು ಅನುದಿನ ಸ್ತುತಿಸುವೆ ದೀನಮನುಜನ ಜನುಮಗಳಳಿಸೋ ಪ ವಾಣಿವಂದಿತ ಪಾದಪದ್ಮನೆ ಕಾಯೋ ಈಗಲೇ ಅ.ಪ. ಜಾನಕೀರಮಣನ ಪ್ರಿಯ ದಾನವಾಂತಕ ಕಾಯ ಮಣಿಮಂತಾದಿಗಳ ಶೂಲ ಘನ ಪರಾಕ್ರಮ ಭೀಮ ಜ್ಞಾನದಾಯಕ ವಪುಷ ಆನಂದ ತೀರ್ಥಪ್ರಖ್ಯಾತ ಮೌನಿಮಾನಸ ಚಂದ್ರ ಅನಿಮಿಶೇಷಗಳಾದಿಗೊಡೆಯ ಭಾನುಕುಲತಿಲಕ ದೂತನೆ ಭಾನುಕೋಟಿತೇಜರೂಪನೆ ಗಣಿಸಲಾಗದ ಸತ್ವಮಂದಿರ ಮೌನಿಗಳ ಕಲಶ ಪ್ರಾಯನೆ ಕನಕವರ್ಣದಶುಭಗಾತ್ರನೆ ಧ್ಯಾನಗೋಚರ ವಿಶ್ವರೂಪನೆ ಮಾನದಿಂದಲಿ ಪಾಲಿಸಯ್ಯ 1 ವಾರಿಧಿ ದಾಟಿದಶೂರ ಭಾರಿವನವ ಕಿತ್ತವೀರ ಜರಾಸಂಧನ ಕೊಂದ ಧೀರ ವೈರಿತಿಮಿರಕೆ ಸೂರ್ಯ ಹರಿಯ ಹರಡಿದ ರಾಯ ಪರಾಶರಾತ್ಮಜಪ್ರಿಯ ಕರಿರಾಜವರದನೆ ಪ್ರಥಮಾಂಗ ಭಾರತಿ ರಮಣಮುಖ್ಯಪ್ರಾಣ ಹರಿಯು ಆಗಿ ಹರಿಯ ಒಲಿಸಿದೆ ವೀರಮಾರುತಿ ದೇವ ದೇವನೆ ಬಗೆದು ಧರಿಸಿ ಮೆರೆದೇ ಎಂದು ಸಾರಿದೆ ತೋರಿಸಿ ಕಾಯೊ ಸೂತ್ರನೆ 2 ಅಕ್ಷಯನ ಕೊಂದು ಮೆರೆದ ಲಕ್ಷ್ಮಣನ ಪ್ರಾಣವನುಳಿದ ರುಕ್ಮಿಣೀ ಪತಿಯ ಕಿಂಕರನಾದ ಲಕ್ಷ್ಯವಿಲ್ಲದೆ ಸೈನ್ಯಗಳಳಿದಾ ಪಕ್ಷವಾಹನನೆ ದೈವವೆಂದ ಮೋಕ್ಷಸಾಧನಗಳ ತೋರಿನಿಂದ ವೈರಿ ಅನಿಲ ರಕ್ಷಿಸು ರಕ್ಷಿಸು ತತ್ವೇಶರೊಡೆಯ ಲಕ್ಷ್ಮಿಮಾತೆಯಕಂಡುವಂದಿಸಿ ಲಂಕೆ ಸುಟ್ಟು ಸೊಕ್ಕೂ ಮುರಿದೆ ಅಕ್ಷನಾಟವ ಸೋತುನಟಿಸಿ ಕಾಂತೆಗಭಯವ ನೀಡಿ ಪೊರೆದೆ ಅಕ್ಷರೇಡ್ಯನ ಕರುಣದಿಂದಲಿ ಸೂತ್ರಭಾಷ್ಯವ ರಚಿಸಿ ಮೆರೆದೇ ಇಕ್ಷುಚಾಪನ ಪಿತನ ತೋರಿಸೋ ದಕ್ಷಿಣಾಕ್ಷಿಗವತ್ಸರೂಪಿಯೆ 3 ವಿಷಉಂಡುಪೊರೆದ ರೋಮರೋಮಕೆ ಕೋಟಿ ಲಿಂಗಗಳುದುರಿಸಿ ಬಂದ ಧಾಮಸಕಲ ಗುಣಕೆಂದೆನಿಕೊಂಡ ಅನಾದಿ ಅಪರೋಕ್ಷದೇವ ರಾಮಭಕ್ತಾಗ್ರೇಸರನೆನಿಸಿದ ತಾಮಸಾಂತಕ ವಿಜಯರಥಧ್ವಜ ಭಾಮೆಯರೂಪವ ತಾಳಿಮೆರೆದ ಭೀಮವಿಕ್ರಮ ಸಪ್ತಶಿವಧರ ಸಾಮಗಾಯನ ಲೋಲ ಕೃಷ್ಣನ ಪ್ರಿಯದಾಸ ಮೋದಮುನಿಯೆ ಎನಿಸಿಮೆರೆಯುವೆ 4 ವಾನರರೂಪಿಲಿ ಬಂದ ಜಾನಕಿ ಗುಂಗುರಕೊಟ್ಟು ನಿಂದ ರಾಜಸೂಯವ ಮಾಡಿನಿಂದ ಹರಿಯು ಎಂದ ವನಜನಾಭನಮುಖ್ಯ ಪ್ರತಿಬಿಂಬ ಕ್ಷಣದಿ ಸಂಜೀವನವ ತಂದೆ ವಾನರರ ಪ್ರಾಣ ಉಳಿಸಿದೆ ದ್ರೋಣಸುತನ ಅಸ್ತ್ರನಿಲಿಸಿದೆ ಸಾಮ ದೂರ ಖ್ಯಾತನಾಮನೆ ವಾಯು ಅಂತರ ವಿಶ್ವ ಚರಣ ನಂಬಿದೇ 5
--------------
ಕೃಷ್ಣವಿಠಲದಾಸರು
ಸಾರಿರೈಯ್ಯಾ ಜನರು ಗಂಭೀರ ಗುಣನಿಧಿ ಮುಖ್ಯ ಪ್ರಾಣನ ಪ ರೋಷದಿಲಂಕೆಯವಳಿಸಿ ವಿಭೀಷಣ ನಾಮವೇ ಉಳಿಸಿ || ಔಷಧಗಿರಿ ತಂದಿಳಿಸಿ ಕಾಯದಾ ಸೌಮಿತ್ರಿಯ ಪ್ರಾಣವೆನುಳಿಸಿ1 ಅರಗಿನ ಮನೆಯಿಂದಾ ಐವರನು ಹೊರಡಿಸಿ ತಂದಾ | ಪುರ ಬೋಧನಕ ಬಂದಾ | ಸುರರಾ ಕಾಯದಾ ಕರುಣ ದಿಂದಾ 2 ಹರಿಪರಂ ದೈವೆಂದರಸೀ | ದುರುಳರ ಮತವನು ಪರಿಹರಿಸಿ | ಹೊರೆದನು ಜಗ ಉದ್ಧರಿಸೀ ಎಂ | ದೆರಗಿದ ಮಹಿಪತಿ ನಂದನುದ್ಧರಿಸೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೆ ಪೊರೆಯೊ ಪರತರ ಮರೆಯ ಹೊಕ್ಕೆ ಕರುಣಾಕರ ಶ್ರೀಕರ ಪ ಸರುವತಾಪದಿಂದ ಗೆಲಿಸಿ ಸರುವವಿಷಯದಿದ ಉಳಿಸಿ ಪರಮ ನಿಮ್ಮ ಕರುಣ ಬರೆಸಿ ಕರವ ಪಿಡಿದು 1 ಘೋರ ಭವಕಡಲವ ಘೋರ ಬಟ್ಟು ಈಸಿಸಭವ ಸೈರಿಸದೆ ನಿಮ್ಮ ಪಾದವ ಸೇರಿದೆ ಸಲಹು ಪರಮಕರುಣ ಸಿರಿಯರಮಣ2 ಮಾಯಮೋಹಗಳ ಬಿಡಿಸಿ ಕಾಯಕರ್ಮಗಳನು ಕೆಡಿಸಿ ತೋಯಜಾಕ್ಷೆನ್ನಯ್ಯ ರಾಮ ಸಿಂಧು 3
--------------
ರಾಮದಾಸರು
ಕದ್ದು ಕಳ್ಳಿಯ್ಹಾಂಗ ಮುಯ್ಯಮಧ್ಯರಾತ್ರಿಲೆ ತಂದ ಮ್ಯಾಲೆ ಬುದ್ಧಿವಂತಳೆಸುಭದ್ರಾ ಬುದ್ದಿವಂತಳ ಪ.ಮೂರುಸಂಜಿಯಲಿ ತರುವ ಮುಯ್ಯಘೋರರಾತ್ರಿಯಲೆ ತಂದಮ್ಯಾಲೆಚೋರಳೆಂದು ನಿನಗೆ ನಮ್ಮಊರ ಜನರು ನಗತಾರಲ್ಲ 1ಒಳ್ಳೆ ಮಾನವಂತಿ ಆದ ನೀನುಕಳ್ಳರ ಕಾಲದಿ ಬಾಹೋರೇನತಳ್ಳಿಕೋರಳೆಂದು ನಮ್ಮಪಳ್ಳಿ ಜನರು ನಗತಾರಲ್ಲ 2ಬಹಳೆ ಜಾಣಳು ಆದರೆ ನೀನುಕಾಳರಾತ್ರಿಲಿ ಬಾಹೋರೇನತಾಳ ತಾಳನಿನ್ನ ಕುಶಲಹೇಳಲಿನ್ನ ಹುರುಳು ಇಲ್ಲ 3ಕತ್ತಲಲಿ ಒಬ್ಬ ದೈತ್ಯಎತ್ತಿ ಒಯ್ದರೇನು ಮಾಡುವಿಪಾರ್ಥ ರಾಯನ ಧರ್ಮದಿಂದಮಿತ್ರಿಮಾನವಉಳಿಸಿಕೊಂಡಿ4ಗಾಢ ರಾತ್ರಿಲೆ ಒಬ್ಬ ದೈತ್ಯ ಓಡಿಸಿಒಯ್ದರೇನು ಮಾಡುವಿಮಾಡೋರೇನ ಮೂರ್ಖತನವಮೂಢಳೆಂದು ಜನರು ನಗರೆ 5ಸಂಧ್ಯಾಕಾಲದಿ ಮುಯ್ಯತಂದುನಿಂತೇವ ನಿನ್ನ ದ್ವಾರದಲ್ಲಿಬಂದುನಮ್ಮನ ಕರೆಯಲಿಲ್ಲಸಂದಿ ಹೋಗಿ ಸೇರುªರೇನ 6ನೀಲವರ್ಣನ ತಂಗಿಯರಿಗೆಚಾಲವರಿದು ಕರೆದೆವಲ್ಲಮೇಲುದಯದಿ ಬಂದರೆ ನೀನುಮೂಲೆಗ್ಹೋಗಿ ಸೇರೋರೇನ 7ಭಾಮೆ ರುಕ್ಮಿಣಿ ದೇವಿಯರಿಗೆಕಾಲಿಗೆರಗಿ ಕಲೆಯೋರೆಲ್ಲಆಲಯಕೆ ಬಂದರೆ ನೀನುವ್ಯಾಲನಂತೆ ಅಡಗೋರೇನ 8ಕೃಷ್ಣರಾಯನ ತಂಗಿಯರೆಂಬೋದೆಷ್ಟಗರುವಬಿಡಿಸಲುಬಂದೆವುಪಟ್ಟು ಮಾಡಿ ಬಿಡತೇವೀಗಧಿಟ್ಟ ರಾಮೇಶ ನೋಡುವಿಯಂತೆ 9
--------------
ಗಲಗಲಿಅವ್ವನವರು
ಕಳವು ಕಲಿಸಿದೆಯಮ್ಮಗೋಪಿಕಮಲನಾಭಗೆ |ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವಹಚ್ಚಿಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |ದೂರುಬಡಕರೆಂದುಗೋಪಿಬಯ್ವೆ ನಮ್ಮನು ||ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |ವಾರಿಜನಾಭನ ಕರೆದು ಬುದ್ಧಿಯ ಹೇಳೆ 4ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |ಇಟ್ಟುಕೊಂಡೀರೇಳುಭುವನಉದರದಲ್ಲಿಯೆ ||ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ 5
--------------
ಪುರಂದರದಾಸರು
ನೀರಾಜನವನೆತ್ತಿರೊ ತಿಮ್ಮಯ್ಯಗೆವಾರಿಜೋದ್ಭವಕಾಮರಯ್ಯಗೆಪ.ಆನಕದುಂದುಭಿಕೂಡೆ ಬಂದಧೇನುಕಾವರ ಪಳ್ಳಿಲಿ ನಿಂದನಾನಾ ಕೃತ್ರಿಮಗೈದಾಳರಿಗೆಪಾನಕೆ ಗೋರಸ ಅಪಹಾರಿಗೆ 1ಆವುಕಾವದಾವಾಗ್ನಿಯ ನುಂಗಿಗೋವಕ್ಕಳ ಸಖರ ಸುಸಂಗಿಪಾವನು ಕಾಲಿನಿಂದ ತುಳಿದಗೆಭಾವಕಿಯರ ಭಾವಕೊಲಿದಗೆ 2ಕೋಪವಿಲ್ಲದನ ಕೂಡಿ ಹೋಗಿಪಾಪವೆಲ್ಲಳಿದು ಮಾವನನೀಗಿತಾಪವಾರಿಸಿದ ತಂದೆ ತಾಯಿಗೆಭೂಪ ಉಗ್ರಸೇನಾಶ್ರಯಗೆ 3ಶ್ರೀರುಕ್ಮಿಣಿ ಸತ್ಯೆಯರಾಳಿನರಕಾಸುರನ ತಲೆಹೋಳಿಭೂರಿಕನ್ನೇರ ಕೈವಿಡಿದಗೆದ್ವಾರಕ ನಗರದರಸಗೆ 4ಕುಂತಿ ಪುತ್ರರ ಸುಖ ಬೆಳೆಸಿಕಾಂತೆ ಪಾಂಚಾಲಿ ಲಜ್ಜಾ ಉಳಿಸಿಭ್ರಾಂತ ಪಾಪಿ ಕೌರವನಾಶಗೆಕಾಂತ ಪ್ರಸನ್ವೆಂಕಟಾದ್ರೀಶಗೆ 5
--------------
ಪ್ರಸನ್ನವೆಂಕಟದಾಸರು
ಭಕ್ತವತ್ಸಲನೆಂಬ ಚಿಹ್ನೆ ನಿನಗೆಯುಕ್ತವಲ್ಲದೆ ಆರಿಗೊಪ್ಪುವುದು ಕೃಷ್ಣ ಪ.ಎಲ್ಲ ಜಗದ ತಂದೆ ನಿನ್ನ ಮಗ ಆ ನಂದನೊಲ್ಲಭೆಯ ಕಂದನಾದಚೆಲ್ಲುವೆ ಅರಸಿ ನಿನ್ನಂಗನೆ ಲಕುಮವ್ವಗೊಲ್ಲತೇರಿಗೆಂತು ಸೋತಿದ್ದೆ ಸ್ವಾಮಿ 1ಮಂದಿ ರಾಜಾಂಡಕೋಟಿಗೆ ಗುರುವರ್ಯ ನೀನುಸಾಂದೀಪನi್ಞ್ಯಳಿಗವ ಮಾಡ್ದೆಮಂದಜಾಸನಆ ವಾಯು ನಿನ್ನ ಓಲೈಸುತಿರೆಕಂದನೆನಿಸಿದೆ ಯಶೋದಾದೇವಿಗೆ ಸ್ವಾಮಿ 2ಮೂರು ಚಾವಡಿ ಪಾರುಪತ್ಯದ ಪ್ರಭುವೆ ನೀನೇರಿದೆ ನರನ ಬಂಡಿಯನುದ್ವಾರಕೆಯ ಅರಸೆ ನೀ ಚೀರಿದರೋಡಿ ಬಂದುಆ ರಮಣಿಯಮಾನಉಳಿಸಿದೆ ಸ್ವಾಮಿ3ಮುಕ್ತದ್ರುಹಿಣರಿಂದಸೇವ್ಯನೀ ಧರ್ಮನಮಖದೊಳೆಂಜಲ ಪತ್ರ ತೆಗೆದೆಪ್ರಕಟಿತನಿತ್ಯಮಹಾತೃಪ್ತ ನೀ ವಿದುರನಕಕುಲತೆಯ ಔತಣಗೊಂಡು ಮುದಿಸಿದೆ ಸ್ವಾಮಿ 4ಹಲವು ಶ್ರ್ರುತಿಗಳಿಗೆ ನೀ ನಿಲುಕದೆ ನೆನೆದವಗೆಸುಲಭದಿ ಪೊರೆವ ಉದಾರಿಬಲದ ಮ್ಯಾಲೊಲಿಯುವ ದೊರೆಯಲ್ಲ ಭಕ್ತರಛಲರಕ್ಷ ಪ್ರಸನ್ನವೆಂಕಟ ಜಗದಧ್ಯಕ್ಷ ಸ್ವಾಮಿ 5
--------------
ಪ್ರಸನ್ನವೆಂಕಟದಾಸರು
ಯಾತರ ಗರವು ಹೇಳೆ ಮಾತಿನ ಜಾಣಿಪ್ರೀತಿಲೆ ಕರೆಯದೆ ನೀತಿ ಬಿಟ್ಟೆನೀನು ಪ.ಬಾಲೆ ನಿಮ್ಮರಸರು ಭಾಳಗುಣವಂತರುಕಾಲವಿಹಿತವನು ತಿಳಿದು ಇಂದಿವÀ ರಾಕ್ಷಿಕಾಲವಿಹಿತವ ತಿಳಿದು ರಮಿಸುವಾಗಸಾಲದೆಮಾನವಕಳಕೊಂಡೆ ಇಂದಿವರಾಕ್ಷಿ1ಮಿತ್ರೆ ನಿನ್ನವಗುಣ ಮತ್ತೆ ಐವರು ನೋಡಿಪ್ರತ್ಯೇಕ ಒಬ್ಬೊಬ್ಬ ಮಡದಿಯರ ಇಂದಿವರಾಕ್ಷಿಪ್ರತ್ಯೇಕ ಒಬ್ಬೊಬ್ಬ ಮಡದಿಯರ ಮದುವ್ಯಾಗಿಅರ್ಥಿಲೆ ರಮಿಸಿ ಇರುತಾರೆ ಇಂದಿವರಾಕ್ಷಿ 2ಐವರನ ಠಕ್ಕಿಸಿ ದೈವನÀಂಥವನ ಕೂಡಮೈಮರೆದು ಓಡುವ ಸಮಯದಿ ಇಂದಿವರಾಕ್ಷಿಮೈಮರೆದು ಓಡುವ ಸಮಯದಿ ಭೀಮಸೇನಕೈ ಹಿಡಿದು ಕೆಳಗೆ ಎಳೆದಾನ ಇಂದಿವರಾಕ್ಷಿ 3ಸೂತ್ರನಾಮಕನ ಮಡದಿ ಸ್ತೋತ್ರಕೆ ಹಿಗ್ಗುವಿವ್ರಾತ್ಯನ ಕೂಡ ರಥೆವೇರಿ ಇಂದಿವರಾಕ್ಷಿವ್ರಾತ್ಯನ ಕೂಡ ರಥವೇರಿ ಹೋಗುವಾಗಯಾತರಮಾನತಿಳಕೊ ಇಂದಿವರಾಕ್ಷಿ4ಧಡ ಧಡ ರಥವನು ಹೊಡೆದು ಓಡಿಸುವಾಗಸಿಡಿಲೆರಗಿದಂತೆ ಐವರು ಇಂದಿವರಾಕ್ಷಿಸಿಡಿಲೆರಗಿದಂತೆ ಐವರು ನಿನ್ನಕೈಹಿಡಿದೆಳೆದದ್ದು ಮರೆತೆಯೇನ ಇಂದಿವರಾಕ್ಷಿ 5ವಾಚಾಭಿಮಾನಿಯೆ ಯೋಚಿಸೆ ಮನದೊಳುಆಚೆಲಿದ್ದವರಿಗೆ ಅನುಮಾನ ಇಂದಿವರಾಕ್ಷಿಆಚೆಲಿದ್ದವರಿಗೆ ಅನುಮಾನ ದ್ರೌಪತಿನಾಚಿಕೆ ಎಂದು ಬರಬೇಕ ಇಂದಿವರಾವಕ್ಷಿ 6ಪಾಂಚಾಲಿ ನಿನ್ನವಗುಣಮಿಂಚಿತ ಜಗದೊಳುಹಂಚಿಕೆÉಹಾಕಿದರೆÉ ಹರವಿಲ್ಲಹಂಚಿಕೆ ಹಾಕಿದರೆ ಹರವಿಲ್ಲ ರಮಿಅರಸುಕಿಂಚಿತ್ತುಮಾನಉಳಿಸಿದ ಇಂದಿವರಾಕ್ಷಿ7
--------------
ಗಲಗಲಿಅವ್ವನವರು
ಲಕ್ಷ್ಮೀದೇವಿನೀನನ್ನ ಹೇಳಬಾರದೇನೆ ತಾಯಿನಿನನ್ನವಾನರವಂದಿತ ಶ್ರೀನಿವಾಸಗೆ ಬುದ್ಧಿ ಪಶ್ರೀನಿಧಿಪರನೆಂದು ನಂಬಿ ಬಂದ ಬಡಪ್ರಾಣಿಯ ಪೊರೆಯಂದು ಜಾನಕಿ ದೇವಿಯೇ 1ಮೊರೆ ಹೊಕ್ಕವರಕರಪಿಡಿವನೆಂಬೊ ಘನಾಬರದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ 2ಉರಗಶಾಯಿ ಶಿರಿಗೋವಿಂದ ವಿಠಲ ತುರುಗಗ್ರೀವನರಹರಿಗೆ ತ್ವರಿತದಲ್ಲಿ 3
--------------
ಸಿರಿಗೋವಿಂದವಿಠಲ