ಸುಖ ಪೂರ್ಣ ವಿಠಲನೆ | ಸಲಹ ಬೇಕಿವಳಾ ಪ
ವಿಖನ ಸಾಂಡವ ಬಾಹ್ಯ | ಒಳಗೆಲ್ಲಾ ವ್ಯಾಪ್ತ ಅ.ಪ.
ನಾರಿಮಣಿ ಪತಿಸೇವೆ | ಸಾರತರದಲಿಗೈದುಭೂರಿಭಕ್ತಿಯಲಿಂದ | ಸಂತಾನಕಾಗೀಶ್ರೀ ರಮಣ ತವಪಾದ | ದಾರಾಧನೆಯಗೈದುಭೋರಿಟ್ಟು ಪ್ರಾರ್ಥಿಪಳು ಕಾರುಣ್ಯ ಮೂರ್ತೇ 1
ಭಕುತರ್ಗಭೀಷ್ಟಗಳ | ನೀ ಕೊಡುವಿ ಎಂತೆಂಬಉಕುತಿಯನೆ ನಾ ಕೇಳಿ | ಅರಿಕೆಯನೆ ಮಾಳ್ವೇಈಕೆಯ ಮನೋರಥವ | ನೀ ಕೊಟ್ಟು ಸಾಧನವವೈಖರಿಯಲಿಂದೆಸಗೊ | ರುಕುಮಿಣೀ ಪತಿಯೇ 2
ಉಚ್ಛನೀಚಾದಿಗಳು | ಸ್ವಚ್ಛ ತಿಳಿಸಿವಳೀಗೆಅಚ್ಛ ಕನ್ನಿಕೆ ರಮಣ | ಅಚ್ಯುತಾನಂತಾಮುಚ್ಚು ಕಾಣಿಕೆಗೊಂಡು | ಇಚ್ಛೆ ಪೂರೈಸುವುದುಸಚ್ಚದಾನಂದಾತ್ಮ | ಚಿತ್ಸುಖಪ್ರದನೇ3
ಹರಿಗುರು ಸದ್ಭಕ್ತಿ | ದುರ್ವಿಷಯ ವೀರಕ್ತಿಹರಿಯ ವಿಷಯಕ ಜ್ಞಾನ | ಕರೋಣಿಸೋ ದೇವಾನಿರುತನಾಮ ಸ್ಮರಣೆ | ಇರಲಿವಳ ಮುಖದಲ್ಲಿಮರುತಾಂತರಾತ್ಮಕನೆ | ಶಿರಿ ರಮಣ ಹರಿಯೇ 4
ಶ್ರೀವತ್ಸಲಾಂಚನನೇ | ಭಾವುಕರ ಪರಿಪಾಲಗೋವತ್ಸದನಿ ನಾವು | ತೀವ್ರ ಬರುವಂತೇಶ್ರೀವರ ಶ್ರೀಗುರೂ | ಗೋವಿಂದ ವಿಠಲನೆನೀವೊಲಿಯ ಬೇಕೆಂದು ಬೇಡ್ವೆ ಗೋಪಾಲ 5