ಕಡೆಗೋಲ ತಾರೆನ್ನ ಚಿನ್ನವೆ ಮೊಸ
ರೊಡೆದರೆ ಬೆಣ್ಣೆ ಬಾರದೊ ಮುದ್ದು ಕೃಷ್ಣಯ್ಯ ಪ.
ಅಣ್ಣ ಬಲರಾಮನು ಚಿಣ್ಣರ ಸಹಿತಾಗಿ
ಬೆಣ್ಣೆ ಹಣ್ಣನು ಮೆಲುವಿಯಂತೆ
ಯನ್ನಣ್ಣನೆ ಸಣ್ಣವನಾಗಿ ಎನ್ನೊಡನಾಟವೆ
ಕಣ್ಣಿಗೆ ಕಾಡಿಗೆ ಇಡುವೆ ಬಾ ರಂಗಯ್ಯ 1
ಹಸುರಂಗಿ ಕೊಡಿಸುವೆ ಹಸುಳೆ ಬಾ ಕಂದನೆ
ಹೊಸಪರಿಯಾಭರಣಗಳನಿಡುವೆ
ಹಸನಾದ ಹಸುವಿನ ತುಪ್ಪದ ದೋಸೆಯ
ಹಸುಳೆ ನಿನಗಾರೋಗಣೆಗೆ ಹೊತ್ತಾಯಿತೊ 2
ಪಡೆದ ಜನನಿಯಲ್ಲೆ ಎನ್ನೊಡೆಯ ಶ್ರೀ ಶ್ರೀನಿವಾಸ ನಿನ್ನ
ಕಡೆಹಾಯಿಸೊ ಕಡೆಗೋಲನಿತ್ತು ಎನ್ನ
ಗೋಪಿ ಕಡುಮುದ್ದು ರಂಗನ
ಬಿಡದೆತ್ತಿ ಮುದ್ದಿಸಿ ಸಡಗರದಿಂದಲಿ 3