ಒಟ್ಟು 23 ಕಡೆಗಳಲ್ಲಿ , 7 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿ ಪಾಂಡುರಂಗನಾ ಪಾಡಿದೆನೊ ಜಗದಂತರಂಗನ ಖಗ ತುರಂಗನ ಬೇಡಿದೆನೊ ಗುಣಾಂತರಂಗನಾ ಪ ಕಪಿಲ ವಿಭುಹರಿ ಸಾರ್ವಭೌಮ ಸು ತಪನಂದನ ಕೃಷ್ಣ ಕೃಷ್ಣ ಗೀರ್ವಾಣ ತಪಯಜ್ಞ ಜಿತದತ್ತ ಧನ್ವಂತ್ರಿ ವಿನುತ ವೃಷಭ ಹಯ ಲಪನ ವೈಕುಂಠ ಹಂಸ ತಪನಾ ಕುಪಿತ ಜಿತ ಮುನಿ ನರನಾರಯಣ ಅಪರಿಮಿತ ರೂಪ ಧರಿಸಿದಾನಂದ ಗುಪಿತ ಮಹಿಮನ 1 ಮುನಿವನ ಜಿತ ಚಿತ್ತ ಶುದ್ಧದಿ ಜನನಿ ಜನಕನ ಚರಣ ಸೇವೆಯ ಅನುದಿನದಿ ಘನವಾಗಿ ಮಾಡುತ ಗುಣಗಳಿಂದಲಿಯಿರಲು ಇತ್ತಲು ಮುನಿ ನಾರದನು ಗಾಯನವ ಗೈಯುತ ಇನಿತು ಸೋಜಿಗ ನೋಡಿ ತನ್ನಯ ಜನಕಗರುಹಲು ನಗುತಲಾ ಮನದಿ ಕೈಕೊಂಡ ಮೂಲ ಮೂರ್ತಿಯ 2 ಪೊಡವಿಯೊಳು ನೀನವತರಿಸಿ ಆ ದೃಢü ಬಕುತನಿಗೆ ದರುಶನವೆ ಇ ತ್ತಡಿಗಡಿಗೆ ಸುಖಬಡಿಸಿ ಅಲ್ಲಲ್ಲಿ ಬಿಡದೆ ನಿಲ್ಲುವೆ ನಿಮ್ಮ ಸಹಿತಲಿ ವಿನುತ ಕಳುಹಿದ ಒಡನೆ ಸಲ್ಲಿಪೆನೆಂದ ಯಮುನಾ ತಡಿಯ ಜನಿಸಿದ ಜಗನ್ಮೋಹನಾ 3 ನಿಧಿಯ ನೋಡುವೆನೆನುತ ಗೋವುಗಳ ಮುದದಿ ಮೇಯಿಸಿಕೊಳುತ ಕಾವುತ ಒದಗಿ ಗೋವಳರೊಡನೆ ಬಂದನು ವಿಧಿ ಸಂಭವಾದ್ಯ ಭಕ್ತನ ಎದುರಲಿ ನೋಡಿದನು ಹೋ ಹೋ ಇದೇ ಸಮಯವೆಂದು ನಿಂದಾ ಹಿಂಭಾ ಗದಲಿ ಭಕ್ತಿಗೆ ಮೆಚ್ಚಿ ಬಲು ವೇಗಾ4 ತಿರುಗಿ ನೋಡದಲಿರಲು ಭಕುತನ ಮರಳೆ ಮಾತಾಡಿಸಲು ಇಟ್ಟಿಗೆ ಭರದಿ ಹಿಂದಕೆ ಒಗಿಯೆ ವಿಠ್ಠಲ ಹರುಷದಲಿ ವಶವಾಗಿ ನಿಲ್ಲಲು ಕರುಣರಸ ಸಂಪೂರ್ಣ ದೇವನ ನಿರೀಕ್ಷಿಸಿದ ಜಯವೆಂದು ಪೊಗಳಿ ವರವ ಬೇಡಿದ ಪುಂಡರೀಕನು ಗಿರಿಯನೆತ್ತಿದ ಗೋಕುಲೇಶನ 5 ಭಕುತ ಮನೋರಥ ಎನ್ನ ಪೆಸರಿಲಿ ಸಕಲ ಲೋಕದೊಳಗೆ ನೀನೆ ಮುಕುತಿ ಕೊಡುತಲಿ ಇಲ್ಲೆ ನಿಲುವದು ಅಖಿಳ ಬಗೆಯಿಂದ ಭಜನೆಗೊಳುತ ನೀ ರುಕ್ಮಿಣಿಪತಿ ಒಲಿದು ಪಾಲಿಸಿ ವ್ಯಕುತವಾದನು ಪೂರ್ವಮುಖನಾಗಿ ಸುಖವಯೋನಿಧಿ ಮೆರೆಯುತಲಿ ಇಂದೂ 6 ಕ್ರೋಶ ಯೋಜನ ಯೋಜನತ್ರಯ ದೇಶ ಪರಿಮಿತ ಕ್ಷೇತ್ರವಿಪ್ಪುದು ವಾಸ ಒಂದಿನಮಲ ಮನುಜರನ ಲೇಸು ಪುಣ್ಯಗಳೆಣಿಸಿ ಸರಸಿ ಜಾಸನನು ಬೆರಗಾಗಿ ನಿಲ್ಲುವ ದೋಷ ವರ್ಜಿತ ಹರಿಯ ನೆನೆಸುತ ಆ ಸೇತು ಮಧ್ಯದಲಿ ವಿಶೇಷವಾಗಿದ್ದ ಈ ಕ್ಷೇತ್ರ ಮೂರ್ತಿಯಾ 7 ನಂದಾ ಮಂದಾಕಿನಿ ಮಧ್ಯಾಹ್ನಕೆ ನಿಂದಿರದೆ ಬರುತಿಪ್ಪ ಪ್ರತಿದಿನ ಚಂದ್ರಭಾಗಾ ಪ್ರಸೂನುವತಿ ಅರ ಕುಂಡಲ ಚತುರ ದಿಕ್ಕಿನಲಿ ಪೊಂದಿಪ್ಪವು ಓರ್ವನಾದರು ಮಿಂದು ತೀರ್ಥದಲಿ ಆ ನಂದ ಸತ್ಕರ್ಮ ಚರಿಸಲಾಕ್ಷಣ ಇಂದಿರೇಶನು ಒಲಿವ ನಿಶ್ಚಯಾ 8 ದ್ವಾರಸ್ಥ ಜಯ ವಿಜಯ ನಾರದ ಭಾರತಿ ಪಂಚ ಕೋಟಿ ದೇವರು ಶ್ರೀರಮಣಿ ಮಿಕ್ಕಾದ ಜನರೆಲ್ಲ ಈರೆರಡು ದಿಕ್ಕಿನಲಿಯಿಹರು ಸುತ್ತಲಿ ಪಾಡುತ್ತ ಕುಣಿಯುತ್ತ ಹಾರುತಲಿ ಹಾರೈಸಿ ನಾನಾ ವಿ ಹಾರದಲಿ ಪುರಿ ಪ್ರದಕ್ಷಣಿ ವಿ ಸ್ತಾರ ಮಾಡುತಲಿಪ್ಪ ಸೊಬಗನಾ 9 ಎರಡು ವಿಂಶತಿ ಗುದ್ದು ಮೊಳವೆ ಕರಿಸಿ ಕೊಂಬೊದೊಂದೆ ನಿಷ್ಕವು ಇರದೆ ಇವು ನಾನೂರುಯಾದಡೆ ವರಧನಸ್ಸು ಪ್ರಮಾಣವೆನಿಸೊದು ಗುರುತು ತಿಳಿವದು ಇಂಥ ಧನಸ್ಸು ಅರವತ್ತು ಪರಿಮಿತಾ ಈ ಭೀಮಾ ಸರಿತೆಗಳು ಪರಿಪರಿ ತೀರ್ಥಗಳಕ್ಕು ನಿರೀಕ್ಷಿಸಿ ವಂದನೆಯ ಮಾಡುತಾ 10 ಜ್ಞಾತಿ ಗೋತುರ ಹತ್ತದೊಂದೆ ಮಾತು ಮನ್ನಿಸಿ ಕೇಳಿ ಸುಜನರು ವಾತದೇವನ ಕರುಣತನವನು ನೀತಿಯಲಿ ಪಡಕೊಂಡು ಸತ್ವದಿ ಜ್ಞಾತ ಅನುಷ್ಠಾನದಲಿ ನಡೆದು ಪು ಮಾನವ ಬಂದರಾದಡೆ ಆತುಮದೊಳು ಹರಿ ಪೊಳೆದು ಬಲು ಕೌತುಕವ ತೋರಿಸುವ ರಂಗನಾ 11 ಶಯ್ಯಾ ಹರಿ ದಿನದಲಿ ಮಾನವ ಕಾಯ ನಿರ್ಮಳನಾಗಿ ಫಂಡರಿ ರಾಯ ರಾಜೀವನೇತ್ರ ತ್ರಿಭುವನ ನಾಯಕನ ಕ್ಷೇತ್ರಕ್ಕೆ ಮನಮುಟ್ಟಿ ಗಾಯನವ ಮಾಡುತಲಿ ಬಂದ ನಿ ರ್ಮಾಯದಲಿ ಕೊಂಡಾಡಿ ದಮ್ಮಯ್ಯ ಕೈಯ ಪಿಡಿಯನೆ ಕರುಣದಿಂದ ಸಾ ಹಾಯವಾಗುವ ವಾಣಿ ಜನಕನಾ 12 ಮಕುಟ ಕುಂಚಿ ಕುಲಾಯ ಕುಂತಳ ಕುಂಡಲ ಮಣಿ ಕಿರಣ ಸ ನ್ನುಖ ಮುಕರ ಸೋಲಿಸುವ ಕಾಂತಿ ಚಂ ನಾಸಿಕ ಮುಖ ಮೃಗನಾಭಿ ಸಣ್ಣ ತಿ ಲಕ ಕೌಸ್ತುಭಗಳ ತುಲಸಿ ಮಾಲಿಕಾ ನಖ ಪದಕ ಕಟೆಕಂಬು ಕರದ್ವಯ ನಖ ಪಾದ ಭೂಷಣ ಮಾ ಣಿಕ ಇಟ್ಟಿಗೆ ಮೇಲೆ ನಿಂದ ವಿಠ್ಠಲನ 12 ಸಂಗಮ ಸುರ ಮಥನ ಕಾಳಿಂಗ ಭಂಗ ಭಾವುಕ ಭಕ್ತಜನಲೋಲ ಶೃಂಗಾರಾಂಬುಧಿ ರೋಮ ಕೋಟಿ ಕೋಟಿ ಲಿಂಗಧರ ಗೌರೀಶ ಸುರಪ ನಂಗ ಮಿಗಿಲಾದ ಮುನಿವಂದಿತಾ ಮಾ ತುಂಗ ವರದ ಗೋವಿಂದ ವರದೇಶ ಸಂಗ ನಿಃಸಂಗ ಸುಪ್ರಸನ್ನ ನೀ ಅನುದಿನ 14 ಪೇಳಲೊಶವೇ ಲೋಹದಂಡಿ ಹಿ ಯ್ಯಾಳಿ ಕ್ಷೇತ್ರದ ಮಹಿಮೆ ಸಾವಿರ ನಾಲಿಗಿಂದಲಿ ಪೊಗಳಿ ಸುಮ್ಮನೆ ವ್ಯಾಳಪತಿ ಬೆರೆಗಾಗಿ ನಿಲ್ಲುವ ಸಲಿಗೆ ನಾ ಮಾಳ್ಪರು ವಿಲಿಂಗರು ಮೇಲು ಮೇಲೀ ಭುವನದೊಳಗಿದ್ದು ಹೇಳಿ ಕೇಳಿದ ಜನರಿಗಾನಂದಾ ಬಾಲಾ ವಿಜಯವಿಠ್ಠಲರೇಯನಾ 15
--------------
ವಿಜಯದಾಸ
ಹಿಂಡು ಕರ್ಮಗಳ್ಯಾಕೆ | ಬಂಡಿ ದೈವಗಳ್ಯಾಕೆಪಂಡರಿ ದೊರೆಯು ಇರಲು ಪ ಪುಂಡರೀಕಾಕ್ಷ ಪದಬಂಡುಣಿಯವೋಲ್ ತುತಿಸಲಿಲ್ಲಾ | ಬಲ್ಲಾ 1 ಕಂಬು ಸಾರಥಿ ಕೃಷ್ಣಚರಿತೆಗಳ ಪೊಗಳುತಿರಲೋ | ಕೇಳೋ 2 ಇಂದು ಭಾಗದಿ ಭಕ್ತಸಂದಣೀಯಲಿ ಸೇರುತಾ |ತಂದೆ ತಾಯಿಯ ಸೇವೆ | ಮುಂದು ಮಾಡಿದಗೊಲಿದುನಿಂದು ಇಟ್ಟಿಗೆ ಮೆಟ್ಟಿಹಾ |ನಂದ ನಂದನ ಗುರೂ ಗೋ | ವಿಂದ ವಿಠಲನವಂದಿಸೆಲೊ ಮುದದಿ ಸತತಾ | ವಿತತಾ 3
--------------
ಗುರುಗೋವಿಂದವಿಠಲರು
ಆರತಿಯ ಬೆಳಗಿರೆ ಪಅರಸಿ ರುಕ್ಮಿಣಿ ಕೂಡ ಅರಸು ವಿಠಲಗೆಬಿರುದಿನ ಶಂಖವ ಪಿಡಿದ ವಿಠಲಗೆ ||ಸರಸಿಜ ಸಂಭವಸನ್ನುತ ವಿಠಲಗೆನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ 1ದಶರಥರಾಯನ ಉದರದಿ ವಿಠಲಶಿಶುವಾಗಿ ಜನಿಸಿದ ಶ್ರೀರಾಮ ವಿಠಲಪಶುಪತಿ ಗೋಪಿಯ ಕಂದನೆ ವಿಠಲಅಸುರೆ ಪೂತನಿಯ ಕೊಂದ ವಿಠಲಗೆ 2ಕಂಡಿರ ಬೊಬ್ಬುರ ವೆÉಂಕಟವಿಠಲನಅಂಡಜವಾಹನ ಅಹುದೋ ನೀ ವಿಠಲ ||ಪಾಂಡುರಂಗ ಕ್ಷೇತ್ರ ಪಾವನ ವಿಠಲಪುಂಡರೀಕಾಕ್ಷ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಏನೆಂತೊಲಿದೆ ಇಂತವರಂತೆ ಕೆಡುಬುದ್ಧಿ - ಎನ್ನೊಳಿಲ್ಲಗುಣ |ಹೀನರಲ್ಲದ ದೀನ ಜನರ ಪಾಲಿಪ ಬುದ್ಧಿ ನಿನ್ನೊಳಿಲ್ಲ ಪತರಳ ಪ್ರಹ್ಲಾದನಂದದಿ ನಿನ್ನಯರೂಪ ಕೆಡಿಸಲಿಲ್ಲನರನಂತೆ ತನ್ನ ಬಂಡಿಯ ಬೋವನ ಮಾಡಿ ಹೊಡಿಸಲಿಲ್ಲ ||ಸುರನದೀಸುತನಂತೆ ಪಣೆಯೊಳು ಬಾಣವ ಸಿಡಿಸಲಿಲ್ಲದೊರೆ ಅಂಬರೀಷನಂದದಿ ಈರೈದು ಜನ್ಮವ ಪಡಿಸಲಿಲ್ಲ 1ನಾರದನಂತೆ ಕಂಡವರ ಕೊಂಡೆಯವ ನಾ ಪೇಳಲಿಲ್ಲ |ಪರಾಶರನಂತೆ ನದಿಯೊಳಂಬಿಗ ಹೆಣ್ಣ ಕೊಡಲಿಲ್ಲ ||ಆ ರುಕುಮಾಂಗದನಂತೆ ಸುತನ ಕೊಲ್ಲಲು ಧೃಢಮಾಡಲಿಲ್ಲಮಾರುತನಂತೆ ನೀನುಣುತಿದ್ದ ಎಡೆಯ ಕೊಂಡೋಡಲಿಲ್ಲ 2ವಿದುರನಂತೆ ನನ್ನ ಸದನವ ಮುರಿದು ನಾ ಕುಣಿಯಲಿಲ್ಲಮದಕರಿಯಂತೆ ಮಕರಿಯ ಬಾಯೊಳು ಸಿಕ್ಕಿ ಒದರಲಿಲ್ಲ ||ಹೆದರದೆ ಬಲಿಯಂತೆ ಭೂಮಿಯ ಧಾರೆಯನೆರೆಯಲಿಲ್ಲಸದರ ಮಾತುಗಳಾಡಿ ಶಿಶುಪಾಲನಂತೆ ನಾ ಜರೆಯಲಿಲ್ಲ3ಸನಕಾದಿ ಮುನಿಯಂತೆಅನುದಿನ ಮನದೊಳು ಸ್ಮರಿಸಲಿಲ್ಲಇನಸುತ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲ ||ಬಿನುಗು ಬೇಡತಿಯಂತೆ ಸವಿದುಂಡ ಹಣ್ಣ ನಾ ತಿನಿಸಲಿಲ್ಲಘನ ಅಜಾಮಿಳನಂತೆ ಸುತನ ನಾರಗನೆಂದು ಕರೆಯಲಿಲ್ಲ4ವರ ಶೌನಕನಂತೆನಿತ್ಯ ಸೂತನ ಕಥೆ ಕೇಳಲಿಲ್ಲಪಿರಿದು ತುಂಬುರುನಂತೆ ನಾಟ್ಯ - ಸಂಗೀತವ ಪೇಳಲಿಲ್ಲ ||ಉರಗಾಧಿಪತಿಯಂತೆ ಉದರದೊಳಿಟ್ಟು ನಾ ತೂಗಲಿಲ್ಲಪಿರಿದು ಕುಚೇಲನ ತೆರನಂತೆ ಅವಲಕ್ಕಿ ಈಯಲಿಲ್ಲ 5ಭೃಗುಮುನಿಯಂತೆ ಗರ್ವದಿ ನಿನ್ನ ಎದೆಯನು ಒದೆಯಲಿಲ್ಲಅಗಣಿತ ಮಹಿಮ ನೀನಹುದೆಂದು ಧ್ರುವನಂತೆ ಪೊಗಳಲಿಲ್ಲ ||ಖಗರಾಜನಂತೆ ನಿನ್ನನು ಪೊತ್ತು ಗಗನದಿ ತಿರುಗಲಿಲ್ಲಅಗಜೆಯರಸನಂತೆ ಮಸಣದಿ ರಾಮನ ಸ್ಮರಿಸಲಿಲ್ಲ 6ಅವಹಿತದಲಿ ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲಯುವತಿ ದ್ರೌಪದಿಯಂತೆ ಪತ್ರಶಾಕವನುಣಬಡಿಸಲಿಲ್ಲ ||ತವೆ ಪುಂಡಲೀಕನಂದದಿ ಇಟ್ಟಿಗೆಯ ಮೇಲೆ ನಿಲಿಸಲಿಲ್ಲ ದೇವಇವರಂತೆಪುರಂದರ ವಿಠಲ ನಿನ್ನಯ ಕೃಪೆಯೆನ್ನೊಳಿಲ್ಲ7ಅಂಕಿತದಲ್ಲೂ ಇವೆ.)
--------------
ಪುರಂದರದಾಸರು
ತಾಳು ತಾಳೆಲೊ ರಂಗಯ್ಯ- ನೀ |ತಾಳು ತಾಳೆಲೊ ಕೃಷ್ಣಯ್ಯ ಪನಾಳೆ ನೀನು ನಮ್ಮ ಮನೆಗೆ ಬಂದರೆ |ಕಾಲಕಂಬಕೆಕಟ್ಟಿಪೇಳುವೆ ಗೋಪಿಗೆಅ.ಪದೊರೆಗಳ ಮಗನೆಂಬುದಕೇನೊ-ಬಹು |ಧುರದಿ ಮನೆಯ ಪೊಕ್ಕ ಪರಿಯೇನೊ ||ದುರುಳತನದ ಬುದ್ಧಿ ಸರಿಯೇನೊ-ನೀನು |ತಿರಿದು ಬೇಡುಂಡದ್ದು ಮರೆತೆಯೇನೊ 1ಚಿಕ್ಕಮಕ್ಕಳು ಇಲ್ಲವಂತೇನೊ-ನಿನಗೆ |ಕಕ್ಕೂಲಾತಿಯಿಂದಲಿ ನಿನ್ನ ||ಸಿಕ್ಕಿದ ಶ್ರೀಲೋಲ ಹಿಡಿಹಿಡಿಯೆಂದರೆ |ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೊ 2ಕಟ್ಟಿದ ತುರುಗಳ ಮೊಲೆಯುಂಡು-ಕರು |ಬಿಟ್ಟ ಕಾರಣವೇನು ಹೇಳೊ ||ಸೃಷ್ಟೀಶ ಪುರಂದರವಿಠಲರಾಯನೆ |ಇಟ್ಟಿಗೆಯ ಮೇಲೆ ಬಂದು ನಿಂತ ಕಾರಣವೇನೊ? 3
--------------
ಪುರಂದರದಾಸರು
ಶರಣು ಶರಣು ನಿನಗೆಂಬೆನೊ ವಿಠಲಎರವುಮಾಡದೆಯೆನ್ನ ಕಾಯೊ ವಿಠಲಪಅರಸಿ ರುಕ್ಮಿಣಿಗೆ ನೀನೇನೆಂದೆಯೊ ವಿಠಲಸರಸಿಜಸಂಭವಸನ್ನುತವಿಠಲ ||ಬಿರುದಿನ ಶಂಖವ ಪಿಡಿದೆಯೊ ವಿಠಲಅರಿತು ಇಟ್ಟಿಗೆಯ ಮೇಲೆ ನಿಂತೆಯೊ ವಿಠಲ 1ಶಶಿಮುಖಿಗೋಪಿಯರ ರಾಜನೆ ವಿಠಲಕುಶಲದಿ ಗಜುಗವನಾಡಿದೆ ವಿಠಲ ||ದಶರಥನಂದನ ರಾಮನೆ ವಿಠಲಕುಸುಮಬಾಣನಯ್ಯ ಕಾಯೊ ನೀ ವಿಠಲ2ಕಂಡೆ ಗೋಪುರದ ವೆಂಕಟನೆ ವಿಠಲಅಂಡಜಾಧಿಪ ವಾಹನನೆ ವಿಠಲ ||ಪಂಡರಿಕ್ಷೇತ್ರದ ಪಾಲನೆ ವಿಠಲಪುಂಡರೀಕವರದಪುರಂದರವಿಠಲ3
--------------
ಪುರಂದರದಾಸರು