ತಿಂದು ಹೋಗುವರೆಲ್ಲ ಹೊರತು ತಂದು ಕೊಡುವರಿಲ್ಲ ಪ
ಕಷ್ಟಪಡುವೆವು ಅ.ಪ
ಊರಿನ ಜನವಷ್ಟು | ಒಳ್ಳೆಯ
ಶೀರೆ ಕುಪ್ಪಸ ತೊಟ್ಟು
ನೀರಿಗೆ ಪೋಗುವ ದಾರಿಯಲಿ ಬಹರು
ವಾರಿಗೆಯವರಂತಿಹುದಾನೆಂದಿಗೂ 1
ಹಿತವಾದಡಿಗೆಯ ಮಾಡಿಡಬೇಕು
ಗತಿಗೆಟ್ಟ ರೋಗಿಗಳಿಗೆ ಅಕಟಾ 2
ಗಂಡನ ಕಡೆಯವರ | ಸೇವಿಸಿ
ಬೆಂಡಾಯ್ತು ಶರೀರ
ಯಾವ್ಯಾವ ಊರಿಗೊ ರೋಕಲಾರೆ ಹಾ 3
ನೀರು ಸೇದಲಾರೆ | ವುಂಡು
ದೂರುವರು ಬೇರೆ
ಸೋರುವುದು ಮನೆಯು ಸುಖವು ಕಾಣೆ
ತೌರುಮನೆಯಾಸೆ ತಪ್ಪೆ ಹೋಯಿತು 4
ಅಕ್ಕಿಬೇಳೆಯಿಲ್ಲ | ಮುಗಿದಿತು
ರೊಕ್ಕಮೂಲವೆಲ್ಲ
ಇಕ್ಕಿ ಇಕ್ಕಿ ಕೈಬರಿದಾಯಿತು ಪೊಂ-
ಬಕ್ಕಿದೇರ ಗುರುರಾಮ ವಿಠಲ 5