ಏಳು ಬೆಳಗಾಯಿತು ಯದುಕುಲೋತ್ತಮ |
ಪರಮೇಷ್ಠಿ ಹರ ಸುರಪಾಲಕರು ಪ
ಆಳುಸಹಿತದಲಿ ರಂಗಾಅ.ಪ.
ವೇದವನು ತಮ ಕದ್ದು ಒಯ್ದನು |
ಆಧಾರಾಗದೆ ಅದ್ರಿ ಮುಣಗಿತು ||
ಮೇದಿನಿಯ ಬಳಕೊಂಡು ಹೋದನು |
ಅದಿತಿಯ ಸುತನು ಭಾದಿಗಾಗದಲೆ ಬಂದು ಸಕಲರು ||
ಆದರಣೆಯಿಂದ ಕೈಯ ಮುಗಿದು ನೀ |
ದಯಾನಿಧಿ ಎಂದು ಹೊರಗೆ ಕಾದು ಐದಾರೆ ರಂಗ 1
ಅಟ್ಟುಳಿ ಹೆಚ್ಚಿತು ವೆ
ಗ್ಗಳಿಸಿದರು ಛತ್ರಿಯರು ಈರೈದು ತಲೆಯವನು ||
ಬಲವಂತನಾದನು ಆರಿಗೊಶವಿಲ್ಲ |
ಇಳೆಗೆ ಭಾರವು ತೂಕವಾಯಿತು ಕಳ-|
ವಳಗೊಳಲಾರೆವೆನುತಲಿ ಅಳುಕಿ ಭಯದಲಿ |
ನಿಮ್ಮ ಬಾಗಿಲ ಬಳಿಯ ಸಾರಿದರೊ ರಂಗಾ2
ಮೂರು ಪುರದವರೀಗ ನಮ್ಮನ್ನ ಮೀರಿದರು |
ಕಲಿಪುರುಷ ಸುಜನರ ಮೇರೆದಪ್ಪಿಸಿ ನಡೆಸಿ ||
ಬಲು ವಿಕಾರ ಮಾಡಿದನು ಈ ರೀತಿ ಶ್ರಮವೆಂದು |
ಸಿರಿ ವಿಜಯ- ||
ವಿಠ್ಠಲ ಕಾರಣಾರ್ಧವ ಕಳೆದು |
ಮುಂದೆ ಉದ್ಧಾರ ಮಾಡಿದನು 3