ಒಟ್ಟು 21 ಕಡೆಗಳಲ್ಲಿ , 11 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು
ಸೂರ್ಯ | ತತ್ವವಾದಿ ವದನ ಕುಮುದ ಚಂದ್ರಾ ಪ ಧೃತ - ಬಾದರಾಯಣ ವೇದ ಸೂತ್ರವ | ಮೋದದಲಿ ಪ್ರಕಾಶ ಗೊಳಿಸುತಸಾಧುಜನ ಸಂತೋಷ ಕಾರಣ | ಸಾಧು ಟೀಕಾಚಾರ್ಯ ನಮಿಸುವೆ ಅ.ಪ. ವಾಸರ ತಾನು ನೀರಡಿಸೀ ||ಆಶುಗತಿ ಅಶ್ವವನು ಏರಿರ | ಲಾಸರಿತು ಕಾಗಿನಿಯ ಜಲವನು ಲೇಸು ಪಶುವಂದದಲಿ ಕುಡಿದು ಪಿ | ಪಾಸೆ ಕಳೆದ ಸುಯೋಧ ಕಾಯೋ 1 ಈಕ್ಷಿಸುತೀ ಚರ್ಯದವನಾ | ಮುನಿ | ಅಕ್ಷೋಭ್ಯ ತೀರ್ಥ ಶ್ರೀಚರಣಾಪಕ್ಷಿವಾಹನನಾ ತೈಜಸನಾ | ಮಾತ | ಲಕ್ಷಿಸಿ ತಾನೋರ್ವ ಶಿಷ್ಯನಾತಕ್ಷಣದಿ ಕಳಿಸ್ಯವನನಲ್ಲಿಗೆ | ಪ್ರೇಕ್ಷಿಸಲು ಬರ ಬಂದು ಇಲ್ಲಿಗೆದೀಕ್ಷೆಯನು ಕೈಕೊಂಡು ದಶಮತಿ | ಪಕ್ಷ ಸಾಧಿಸಿ ಗತಿಯ ತೋರ್ದರೆ 2 ಸಾರಥಿ ಕೃಷ್ಣನೊಲಿಸೀ | ಜಯ | ತೀರ್ಥ ಕಾಗಿನಿ ತಟದಿ ನೆಲಿಸೀ|ಕಾರ್ತ ಸ್ವರವದು ಲೋಷ್ಠಸಮವೆನು | ತಾರ್ತ ಸಜ್ಜನ ಕ್ವೊರೆದು ಪ್ರೀತಿಲಿಮೂರ್ತಿ ಗುರುಗೋವಿಂದ ವಿಠಲನ | ವಾರ್ತೆ ಸಚ್ಛರಿತೆ ಯನು ಪೇಳಿದ 3
--------------
ಗುರುಗೋವಿಂದವಿಠಲರು
ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆಉತ್ತಮ ಅಶ್ವವ ಕತ್ತೆ ಹೋಲುವುದುಂಟೆ ಪ ವಿತ್ತವುಳ್ಳವನ ಕುಲ ಎಣಿಸುವುದುಂಟೆಸ್ವಾರ್ಥಕೆ ನ್ಯಾಯ ಎಂದಾದರೂ ಉಂಟೆ 1 ಅತ್ತೆಮನೆ ಸೇರುವಗೆ ಅಭಿಮಾನವುಂಟೆಬತ್ತಲೆ ತಿರುಗುವಗೆ ಭಯವು ಇನ್ನುಂಟೆ2 ಪೃಥ್ವಿಯೊಳಗೆ ಕಾಗಿನೆಲೆಯಾದಿಕೇಶವಗೆಮತ್ರ್ಯದೊಳನ್ಯ ದೇವರು ಸರಿಯುಂಟೆ 3
--------------
ಕನಕದಾಸ
ಕೇಳಲೊಲ್ಲನೆ ಎನ್ನ ಮಾತನು-ರಂಗ -|ಕಾಳಿಮರ್ದನನಿಗೆ ಪೇಳೇ ಗೋಪಮ್ಮ ಬುದ್ಧಿ ಪಬಿಟ್ಟ ಕಂಗಳ ಮುಚ್ಚಲೊಲ್ಲನೆ-ಬೇಗ- |ಬೆಟ್ಟಕೆ ಬೆನ್ನೊಡ್ಡಿ ನಿಂತನೆ ||ಸಿಟ್ಟಿಂದೆ ಕೋರೆಯ ತೋರ್ಪನೆ-ಬೇಗ-|ಗಟ್ಟಿ ಉಕ್ಕಿನ ಕಂಬ ಒಡೆದು ಬಂದನೆ ರಂಗ 1ಮೂರಡಿ ಭೂಮಿಯ ಬೇಡಿದನೆ-ನೃಪರ-|ಬೇರ ಕಡಿಯಲು ಕೊಡಲಿ ತಂದನೆ |ನಾರಸೀರೆಯನುಟ್ಟುಕೊಂಡನೆ-ಬೇಗ-|ಚೋರತನದಿ ಹರವಿ ಹಾಲ ಕುಡಿದನಮ್ಮ 2ಬತ್ತಲೆ ನಾರಿಯರನಪ್ಪಿದ-ಬೇಗ-|ಉತ್ತಮ ಅಶ್ವವ ಹತ್ತಿದ ||ಹತ್ತವತಾರವನೆತ್ತಿದ-ನಮ್ಮ-|ಸತ್ಯಮೂರುತಿ ಪುರಂದರವಿಠಲರಾಯನು 3
--------------
ಪುರಂದರದಾಸರು
ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವೆಂಕಟರಮಣಗಾರತಿಯತ್ತಿರೆ ಪ.ಮತ್ಸ್ಯಾವತಾರಗೆ ಮಂದರೋದ್ಧಾರಗೆಉತ್ಸಾಹದಿ ಭೂಮಿ ತಂದವಗೆ ||ವತ್ಸಗಾಗಿ ಕಂಬದಿಂದಲಿ ಬಂದಉತ್ಸವ ನರಸಿಂಹಗಾರತಿಯೆತ್ತಿರೆ 1ವಾಮನ ರೂಪದಿ ದಾನ ಬೇಡಿದವಗೆನೇಮದಿ ಕೊಡಲಿಯ ಪಿಡಿದವಗೆ ||ರಾಮನಾಗಿ ದಶಶಿರನನು ಕೊಂದಸ್ವಾಮಿ ಶ್ರೀ ಕೃಷ್ಣಗಾರತಿಯೆತ್ತಿರೆ 2ಬತ್ತಲೆ ನಿಂತಗೆ ಬೌದ್ಧಾವತಾರಗೆಉತ್ತಮ ಅಶ್ವವನೇರಿದಗೆ ||ಭಕ್ತರ ಸಲಹುವ ಪುರಂದರವಿಠಲಗೆಮುತ್ತೈದೆಯರಾರತಿಯೆತ್ತಿರೆ 3
--------------
ಪುರಂದರದಾಸರು