ಒಟ್ಟು 21 ಕಡೆಗಳಲ್ಲಿ , 13 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂದ್ರಗಾವಿಯನುಟ್ಟು ದುಂಡು ಮುತ್ತನೆಕಟ್ಟಿ|ಪೆಂಡೆಯರುಳಿಯನಿಟ್ಟು ||ಕೆಂದಾವಿನ ಹಾಲ ಹರವಿಯ ಹೊತ್ತುಕೊಂಡು |ಬಂದಾಳು ಬೀದಿಗಾಕೆ ಪಹಾಲು ಮಾರುವ ಧ್ವನಿ ಲಾಲಿಸಿ ರಂಗಯ್ಯ |ಮೇಲಿನ ಕೇರಿಯಲಿ ||ನಾಳೆ ನಮ್ಮನೆಯಲಿ ವೀಳೆ-ಪ್ರಸ್ತಗಳುಂಟು |ಹಾಲು ನಿಲ್ಲಿಸೆಂದನು 1ಕೊಂಡವನು ನೀನಲ್ಲ ಡಂಭಕರ ಮಾತೇಕೊ |ಗಂಡನುಳ್ಳವಳ ಕೂಡ ||ಮಂಡಲವಾಳುವ ಅರಸಿನ ಮುಂದೆ ಹೇಳಿ |ದಂಡವ ತೆರಸುವೆನೊ 2ಅಡವಿಹಂಬುಗಳಿಗೆ ಹೆಡಿಗೆ ಸುಂಕವು ಇಲ್ಲ |ತಡೆದವ ನೀನಾರೊ? ||ನಡೆ ಊರ ಮುಂದಕೆ ತಳವಾರರೈದಾರೆ |ಗಡನೆ ಪೇಳುವೆನೆಂದಳು 3ಬಲ್ಲೆ ಬಲ್ಲೆನೆ ನಿನ್ನ ಬಗೆಯ ಮಾತುಗಳೆಲ್ಲ |ಎಲ್ಲಿಹ ತಳವಾರನೆ ||ಅಲ್ಲದಿದ್ದರೆ ಬಂದು ವೀಳ್ಯವ ತಕ್ಕೊಂಡು |ಅಲ್ಲಲ್ಲಿ ದೊರದಿರೆ 4ಕೋಲು ಕೈಯಲಿ ಪಣೆಯಲಿ ಸಿರಿನಾಮವು |ಆಲದ ಮರದಡಿಯೆ ||ಕಾಲಮೊದಲು ಹಾಲ ಮಾರಿದ ಸುಂಕರೆ |ನಿಲ್ಲೆಂದು ಸೆರಗ ಪಿಡಿದ 5ಅಪ್ಪ ಸೆರಗ ಬಿಡೊ, ಅಣ್ಣ ಸೆರಗ ಬಿಡೊ |ಅಪ್ಪಯ್ಯ ಸೆರಗ ಬಿಡೊ ||ಅಪ್ಪನು ನಾನಲ್ಲ, ಅಣ್ನನು ಅಲ್ಲ ನಿ-|ಮ್ಮಪ್ಪನ ಅಳಿಯ ಕಾಣೆ 6ಮಾವ ಸೆರಗ ಬಿಡೊ,ಭಾವಸೆರಗ ಬಿಡೊ |ಭಾವಯ್ಯ ಸೆರಗ ಬಿಡೊ ||ಮಾವನು ನಾನಲ್ಲ, ಭಾವನು ನಾನಲ್ಲ |ಮಾವನ ಮಗನು ಕಾಣೆ 7ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ |ಅಣ್ಣಯ್ಯ ಸೆರಗ ಬಿಡೊ ||ಅಣ್ಣಯ್ಯ ನಾನಲ್ಲ, ತಮ್ಮನು ಅಲ್ಲ ನಿ-|ಮ್ಮಣ್ಣನಭಾವಕಾಣೆ8ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ |ಕಂದಯ್ಯ ಸೆರಗ ಬಿಡೊ ||ಕಂದನು ನಾನಲ್ಲ, ತಂದೆಯು ನಾನಲ್ಲ |ಕಂದನ ತಂದೆ ಕಾಣೆ 9ನೆತ್ತಿಮೇಲಿನ ಕೊಡ ಎತ್ತಿ ಈಡಾಡುತ |ಎತ್ತಿಕೊಂಡಳು ಕೃಷ್ಣನ ||ಭಕ್ತರ ಸಲಹುವ ಪುರಂದರವಿಠಲ |ವತ್ಸವೆಂಕಟರಾಯನ10
--------------
ಪುರಂದರದಾಸರು
ಜಯಜಯ ಶ್ರೀ ರಾಮ ನಮೋ |ಜಯ ಜಯ ಶ್ರೀ ಕೃಷ್ಣ ನಮೋ ಪ.ಸಿರಿಯರಸನು ಶೃಂಗಾರವ ಮಾಡಿ |ಸಿರಿಗಂಧವನೆ ಹಣೆಗಿಟ್ಟು ||ತರುಣ ತುಳಸಿ ವನಮಾಲೆಯ ಧರಿಸಿ |ಹರಿತುರುಕಾಯಲು ಹೊರಗೆ ಹೊರಟನು1ಹೊತ್ತು ಹೋಯಿತುತುರು ಬಿಡಿಯೆನ್ನುತ |ಸಾತ್ತ್ವತ ನುಡಿದನು ಗೋಪಿಯೊಡನೆ ||ತುತ್ತುರು ತುತ್ತುರು ತುರುತುರುಯೆನ್ನುತ |ಒತ್ತಿ ಸ್ವರಗಳನು ಪೊಂಗೊಳಲೂದುತ 2ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |ಒನಕೆಯಿಂದಓಗರ ಹದನೋಡಿ ||ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |ವನಕೆ ಹೋಗಲೆಂದು ಹೊರಗೆ ಹೊರಟಳು 3ಹರಿಸ್ವರವೆನ್ನುತ ಒಬ್ಬಳುಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||ಒರಳು ಕೊಡುವಿರಾ ಅರಸಿನ ಅರೆದು |ಮರಳಿ ಬೇಗ ತಂದೀವೆನೆನುತಲಿ 4ಹಸುವಿಗೆ ಇಟ್ಟಲು ಹಾಲುಓಗರ |ಬಿಸಿಮಡ್ಡಿಯ ಗಂಡಗೆ ಚಾಚಿ ||ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು 5ಗಿಳಿಗೆ ಹಾಸಿದಳು ಹಾಸು ಮಂಚವನು |ಅಳಿಯನ ಪಂಜರದೊಳಗಿರಿಸಿ ||ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ - |ಲೊಳಗೆ ಎಡೆಯನು ಮಾಡಿದಳೊಬ್ಬಳು 6ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||ಕಟ್ಟಬಾಯಿಗೆ ಕಾಡಿಗೆಹಚ್ಚಿ |ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು 7ಅಂಗನೆ ಚೌರಿಯು ಕಾಲಿಗೆ ತಗುಲಿಸಿ |ಮುಂಗೈಯಲಿ ತಾಳಿಯ ಬಿಗಿದು ||ಸಿಂಗರ ಸರವನು ನಡುವಿಗೆಕಟ್ಟಿ |ರಂಗನ ಸ್ಮರಿಸುತ ಹೊರಟಳೊಬ್ಬಳು 8ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |ಗಟ್ಟಿ ಕಂಕಣವ ಕಿವಿಗಿಟ್ಟು ||ತೊಟ್ಟಿಲೊಳಗೆ ಶಿಶು ಅಳುವುದ ಕಂಡು |ಕಟ್ಟಿದ ನೆಲುವನು ತೂಗಿದಳೊಬ್ಬಳು 9ತರುಣಿಯೊಬ್ಬ ಸಂನ್ಯಾಸಿಯ ಕಂಡು |ನೆರೆಮನೆ ಕೂಸೆಂದೆತ್ತ ಬರಲು ||ಅರಿದಾವ ಗಾಳಿ ಸೋಕಿತೆನುತಲಿ |ಪುರಂದರವಿಠಲನು ನಗುತಿದ್ದನು ಸಖಿ 10
--------------
ಪುರಂದರದಾಸರು
ವರವ ಕೊಡೆ ತಾಯೆ ವರವ ಕೊಡೆ ಪ.ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆನೆರೆನಂಬಿದೆನು ನಿನ್ನ ಚರಣಕಮಲವನುಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ 1ಹೊಳೆವಂಥ ಅರಸಿನ ಹೊಳೆವ ಕರಿಯಮಣಿಸ್ಥಿರವಾಗಿ ಕಟ್ಟುವಂಥ ವರವ ಕೊಡೆತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆಯಾವಾಗಲಿರುವಂಥ ವರವ ಕೊಡೆ 2ಬಾಗಿಲ ತೋರಣ ಮದುವೆ ಮುಂಜಿ ನಾಮಕರಣಯಾವಾಗಲಾಗುವಂಥ ವರವ ಕೊಡೆಬಂಧುಬಳಗ ಹೆಚ್ಚಿ ಹೆಸರುಳ್ಳಮನೆಕಟ್ಟಿಉಂಡಿಟ್ಟಿಡುವಂಥ ವರವ ಕೊಡೆ 3ಹಾಲ ಕರೆಯುವ ಮೇಲಾದ ಸರಳೆಮ್ಮೆಸಾಲಾಗಿ ಕಟ್ಟುವಂಥ ವರವ ಕೊಡೆಕಂಡಕಂಡವರಿಗೆ ಕರೆದು ಮೃಷ್ಟಾನ್ನವತಿಳಿ ನೀರು ಕೊಡುವಂಥ ವರವ ಕೊಡೆ 4ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿಅಷ್ಟೈಶ್ವರ್ಯವು ಪುತ್ರಸಂತಾನವಕೊಟ್ಟು ರಕ್ಷಿಸುವವಮ್ಮ ವರವ ಕೊಡೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ವ್ಯಾಸರಾಜ ನರ್ತನ ಗೋಪಾಲಕೃಷ್ಣ ಸ್ತೋತ್ರ26ರಾಜಗರು ಶ್ರೀವ್ಯಾಸರಾಜರ ಭಾಗ್ಯಕ್ಕೆಈ ಜಗದಿ ಎಣೆಯುಂಟೆ ಅರಸಿನೋಡೆ ||ರಾಜೀವೇಕ್ಷಣ ಜ್ಞಾನಾನಂದ ಬಲಪೂರ್ಣ |ರಾಜ ಗೋಪಾಲ ಶ್ರೀ ಕೃಷ್ಣನು ಕುಣಿದ ಪಏನು ಯತ್ನಿಸಿದರೂ ತೆರೆಯಲಿಕ್ಕಾಗದ |ಸ್ವರ್ಣಮಂಜೂಷದೊಳು ಮೂರ್ತಿಗಳ್ ||ಮುನಿವರ ವ್ಯಾಸರು ಸ್ಪರ್ಶಿಸೆ ತೆರೆಯಿತು |ಕೃಷ್ಣಜ್ವಲಿಸಿದ ಭೈಷ್ಮೀ ಸತ್ಯಾ ಸಮೇತ 1ಭಕ್ತ ವಾತ್ಸಲ್ಯದಿ ಸರಿಮಿಗಿಲು ಇಲ್ಲವು |ಭಕ್ತವತ್ಸಲ ಶ್ರೀಯಃ ಪತಿಗೆ ಎಲ್ಲೂ ||ಭಕ್ತಾಗ್ರೇಸರುತರಳಪ್ರಹ್ಲಾದನಿಗೆ |ಎದುರಾರು ಉಳ್ಳರೈಧರೆಯ ಮ್ಯಾಲೆ 2ಬಾಲಕಸ್ತುತಿಸಿದ್ದು ನರಹರಿ ಹರುಷದಿ |ಕೇಳಿದನು ಆನಂದದಿ ತಾನರ್ತಿಸಲು |ಅಲ್ಲ ಸಮಯ ಆಗ ಎಂದು ಈಗ ಪ್ರಹ್ಲಾದ |ಇಳೆಯಲಿ ಮುನಿವ್ಯಾಸ ಎಂದು ತಾ ನಲಿದ 3ಸುಳಿಯುವ ಯುವ ಕರ್ಮದಿಂ ಕೌರವರೊಡೆ ಇದ್ದ |ಬಾಲ್ಹಿಕರಾಯನು ಭಕ್ತಿ ಕುಂದದ ಮನದಿ ||ಮಾಲೋಲನ ಲೀಲಾ ಮೆಚ್ಚಿತಾ ಭೀಮನ್ನ ತಾ ಒಲಿಸಿಕೊಂಡುಬಾಲಯತಿವ್ಯಾಸನಾಗಿ ಬಂದಿಹನೆಂದು ಹರಿಕುಣಿದ 4ಸೂರಿಜನ ಪ್ರಾಪ್ಯಗಘೃಣಿ ಆದಿತ್ಯಸೂರ್ಯನು |ವಿರಾಜಸುವ ಸೂರ್ಯ ದೇವಾಂಶ ಬ್ರಹ್ಮಣ್ಯ ||ತೀರ್ಥರಕರಅರವಿಂದೋತ್ಪನ್ನ ಈ |ಸೂರಿವರ್ಯ ವ್ಯಾಸರಾಯರು ಎಂದು ನರ್ತಿಸಿದ 5ಶಿಂಶುಮಾರನ ಪುಚ್ಛಾಶ್ರಿತ ಸ್ಥಿರ ಸ್ಥಾನದಿಂ |ಅಂಶದಲಿ ಜನಿಸಿ ಶ್ರೀಮಧ್ವಸಚ್ಛಾಸ್ತ್ರ ||ಅಸಮ ಕೋವಿದರೆನಿಪ ಶ್ರೀಪಾದ ರಾಜರÀಲಿ |ವ್ಯಾಸಂಗ ಮಾಳ್ಪ ಸಂಧೀ ಎಂದು ಹರಿಕುಣಿದ 6ಸಾರಾತ್ಮ ಸುಖಮಯಶ್ರುತಿವೇದ್ಯ ಮಹದಾದಿ |ಚರಾಚರ ಜಗತ್ಕರ್ತಪರಮಪೂರುಷನು ||ಮೂರಡಿ ಬೇಡಿದ ಮುರಳೀಧರ ಶ್ರೀಮನ್ನ್ನಾರಾಯಣ ಸರ್ವವಂದÀ್ಯನೇ ಸ್ವಾಮಿ 7ಈ ರೀತಿ ಹೊಗಳುವ ಸರಿಗಮ ಪದನಿ |ಸ್ವರಗಳಿಂ ಕೃಷ್ಣನ್ನ ಶ್ರೀ ವ್ಯಾಸರಾಜ ||ಪರಮಭಾಗವತಮಹಾತ್ಮರು ಕೀರ್ತಿಸೆ |ಶ್ರೀ ಕೃಷ್ಣ ಧಿಕ್ತೈ ಎಂದೆÉನುತ ಕುಣಿದ 8ಈ ಪದ್ಯಗತಿಯಲ್ಲಿ ಧಿಕ್ತೈ ಧ್ವನಿಸೂಚಿಸುತೆ |ಶಿಪಿವಿಷ್ಟ ವಿಶ್ವರೂಪ ಮುರಳೀಪಾಣಿಯನ್ನ |ಶುಭತಮಗುಣಕಥನ ಶ್ರವಣದಿಂ ಲಭ್ಯವು |ಶ್ರೀಭಾಗವತಾಷ್ಟಮ ದಶಮ ಏಕಾದಶದಿ 9ಅಖಿಲೇಷ್ಟದಾತಾ ಇಂದಿರೇಶ ಚಾರ್ವಾಂಗನು |ರುಕ್ಮಿಣಿ ಸತ್ಯಾಯುಕ್ಅಭಯವರದ ||ಶಂಖಾರಿಹಸ್ತಹಿರಣ್ಮಣಿ ನಿಭ ಕೃಷ್ಣ |ಜಗದೇಕ ವಂದ್ಯನು ಮುದದಿ ತಾಕುಣಿದ 10ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸ |ನರಸಿಂಹ ಪರಂಬ್ರಹ್ಮ ನಮೋವರಾಹ||ನಾರಾಯಣವಾಸುದೇವಸಂಕರುಷಣ |ಪರಂಜ್ಯೋತಿ ಪ್ರದ್ಯುಮ್ನ ಅನಿರುದ್ಧಪಾಹಿ11
--------------
ಪ್ರಸನ್ನ ಶ್ರೀನಿವಾಸದಾಸರು