ಒಟ್ಟು 20 ಕಡೆಗಳಲ್ಲಿ , 15 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಸಾರ ಸಾಗರವನುತ್ತರಿಸುವಡೆಕಂಸಾರಿ ನಾಮವೊಂದೇ ಸಾಕು ಮರುಳೆ ಪ ಯತಿಯಾಗಬೇಡ ನೀ ವೈರಾಗ್ಯವನೆ ಪಿಡಿದುಸತತ ವ್ರತವ ಮಾಡುವೆನೆಂಬ ಹಮ್ಮು ಬೇಡಶ್ರುತಿಸ್ಮøತಿಯರಿತು ನಡೆವೆನೆಂಬ ಚೇಷ್ಟೆಯು ಬೇಡರತಿಪತಿಪಿತನ ನಾಮವೊಂದೆ ಸಾಕು ಮರುಳೆ 1 ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡಅನುದಿನವು ನೀರೊಳಗೆ ಮುಳುಗಿ ನಡುಗಲು ಬೇಡವನಜನಾಭನ ನಾಮ ನೆನೆ ಕಂಡ್ಯ ಮರುಳೆ 2 ತೀರ್ಥಯಾತ್ರೆಯ ಮಾಡಿ ಬಹುವಿಧದಲಿ ಬಳಲಿ ಕೃ-ತಾರ್ಥನಾದೆನೆಂಬುವ ಹೆಮ್ಮೆ ಬೇಡಪಾರ್ಥಸಾರಥಿ ಕಾಗಿನೆಲೆಯಾದಿಕೇಶವನಕೀರ್ತನೆಯ ಮಾಡಿ ಮುಕುತಿಯ ಹೊಂದು ಮರುಳೆ 3 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ಹನುಮ ಭೀಮ ಮಧ್ವಮುನಿಯೆ ರಕ್ಷಿಸೆನ್ನ ಅನುದಿನವು ಶ್ರೀ ಹರಿಯ ಸ್ಮರಣೆ ಮರೆಯದಂತೆ ಪ ತಂದೆ ತಾಯಿ ನೀನೆಂದು ನಂಬಿದೆನೊ ಬಂಧ ಬಿಡಿಸಿ ಕಾಯೋ ತಂದೆ ಹನುಮವೀರ 1 ದುರುಳ ದೈತ್ಯನಾದ ಜರೆಯ ಸುತನ ಸೀಳಿ ಕರುಣಿ ಕೃಷ್ಣನಂಘ್ರಿ ನಿರುತ ಭಜಿಪ ವೀರ 2 ಸದ್ವೈಷ್ಣವರನೆಲ್ಲ ಉದ್ಧರಿಸಿ ಜಗದಿಮುದ್ದು ಕಮಲನಾಭ ವಿಠ್ಠಲನಂಘ್ರಿ ಭಜಿಪ3
--------------
ನಿಡಗುರುಕಿ ಜೀವೂಬಾಯಿ
ಹರಿಯೆನ್ನ ನರಜನ್ಮ ವ್ಯರ್ಥವಾಯ್ತು ಪರಮ ಭಕ್ತಿಯೊಳಿನ್ನು ಭಜಿಸುವೆನು ಕಾಯೋ ಪ ತೊಡೆಯ ಮೇಲಾಡುತಿಹ ಶಿಶುವಿನಾನುಡಿ ಕೇಳಿ ಕಡು ಮೂರ್ಖತನದಿಂದ ಭ್ರಮೆಗೊಂಡೆನೋ ಸಡಗರದಿ ಕಿವಿಗೊಟ್ಟು ಕಿಂಕಿಣಿಯ ದ್ವನಿಗಳನು ಎಡಬಿಡದೆ ಕೇಳುತಿಹ ಹರಿಣನಂತಾದೇ 1 ತೊಡೆಗÀುಹ್ಯ ಕುಚಗಳಿಗೆ ಅನುದಿನವು ನಲಿಯುತ್ತ ಮಡದಿಯರ ಅಂಗ ಸಂಗದ ನಂಬುತಾ ಒಡಲ ಶಾಂತಿಯಗೊಳಿಸೆ ಬಡಿಗೋಲು ಕೆಡಹಿಕೊಂ ದಡಗುತಿಹ ಮೂಷಕನ ತೆರದಲ್ಲಿ ಕಳೆದೇ 2 ನಿರುತದಿಂ ಪರಸತಿಯ ಲಾವಣ್ಯವನು ನೋಡಿ ಚರಿಸಿತೆನ್ನಯ ಮನವು ಅವಳ ಕೂಟಕ್ಕೇ ಉರಿವ ದೀಪವ ಕಂಡು ಕನಕ ಮಣಿಯೇಯೆಂದ ಎರಗುತಿಹ ಹುಳದಂತೆ ಹಾಳಾದೆ ಬರಿದೇ 3 ಜರಿದು ನಿಜವೃತ್ತಿಯನು ಪರದಾಸ್ಯದಲಿ ಮುಳುಗಿ ಪೊರದೆ ಹೊಟ್ಟೆಯನಾ ಪರಾನ್ನ ಭಕ್ಷದಲೀ ಹರುಷದಿಂ ಬಲೆಯತುದಿ ಮಾಂಸಕ್ಕೆ ಮೆಚ್ಚಿದಾ ಮರುಳಾ ಮೀನಿನ ಗತಿಯು ಯನಗಾಯ್ತು ನಿಜದೀ4 ನಾರಿಯರ ಜಾಲಕ್ಕೆ ಪ್ರತಿದಿನವು ಸಿಲುಕುತ್ತ ಮಾರಿಯರ ಸಾಕಿ ನಾ ಫಲವ ತಿಂದೆ ಭ್ರಮರ ಸಂಪಿಗೆಯಸಳ ಸಾರಿ ಕೊಡಲೆ ಮೃತ್ಯುವಶವಾಗುವಂತೇ 5 ಮೂರಾರು ಶತ್ರುಗಳು ತರಿದೆನ್ನ ಮನವನ್ನು ಗಾರು ಮಾಡುತಲಿಹವು ತಿಳಿಯದಾ ಹರಿಯೇ ನರಸಿಂಹನೇ ಐದು ಇಂದ್ರಿಯವ ಗೆಲಲಾರೆ ಭೂರಿ ಭಕ್ತಿಯೊಳೆರಗಿ ಮರೆಹೊಕ್ಕೆ ಕಾಯೋ 6 ಪನ್ನಗಶಯನ ಶ್ರೀ ವೇಣುಗೋಪಾಲನೆ ಚನ್ನಿಗಕೇಶವನೇ ದೂರ್ವೇಶನೇ ನಿಂನನಾ ಬಿಡಲಾರೆ ಮಾರಮಣ ಪೊರೆಯಂನ ಯೋನಿ ಜನ್ಮಕೆ ಮುಂದೆ ಬರದಂತೆ ಮಾಡೋ 7
--------------
ಕರ್ಕಿ ಕೇಶವದಾಸ
ಹೇ ದಯಾಸಾಗರ ಸ್ವಾಮಿ ವೇದ ಮಾಧವ ಮುಕುಂದ ಮನುಮುನಿ ಪ್ರೇಮಿ ಪ ವೇದಗೋಚರ ಸಾಧುಸನ್ನುತ ನಾದಪ್ರಿಯ ಭವಬಾಧೆರಹಿತ ಭೇದಹರ ಜಗ ಪಾದ ಭಜಿಸುವೆ ಪಾಲಿಸೆನ್ನ ಅ.ಪ ಮದಗಜ ಮುದದಿಂದ ಪೊರೆದಿ ಪ್ರಭುವೆ ಮದಗಜಗಮನೆಯ ಮಾನದಿಂ ಕಾಯ್ದೆ ಪದುಮವದನೆಶಾಪ ಕಳೆದೆ ಕರುಣಿ ಸದಮಲಬಾಲನ ತಪಕೆ ನೀನೊಲಿದಿ ಸುದಯಹೃದಯ ಸುಸದನಪಾಲ್ಸಿದಿ ಸದಮಲಾಂಗನೆ ಪದುಮವದನ ಮುದದಿ ನಿಮ್ಮಡಿ ಪದುಮಗಳು ಎ ನ್ಹøದಯ ಮಂದಿರದಿರಿಸಿ ರಕ್ಷಿಸು 1 ಗರುಡಂಗೆ ವರಮೋಕ್ಷ ನೀಡ್ದಿ ನಿನ್ನ ಸ್ಮರಿಪರಿಗೆ ದರುಶನಕೊಡುತಲಿ ನಡೆದಿ ತರುಣಿಯ ಎಂಜಲ ಸವಿದಿ ವನ ಚರನಿಗೆ ವಶನಾಗಿ ಅಭಯ ಪಾಲಿಸಿದಿ ಭರದಿ ದಕ್ಷಿಣಶರಧಿ ಹೂಳಿಸಿ ಮೆರೆವ ಲಂಕಾಪುರವ ಮುತ್ತಿದಿ ದುರುಳರ್ಹಾವಳಿ ದೂರಮಾಡಿ ಧರೆಯ ಭಾರವ ನಿಳುಹಿದಯ್ಯ 2 ನುಡಿಸಿದರೆನ್ನಿಂದಲಾವ ವಚನ ನುಡಿಸಿದ ಬಳಿಕದನು ನಡೆಸಿಕೊಡಭವ ನುಡಿಯಂತೆ ನಡೆಯೆನಗೆ ಸ್ಥಿರವ ಕೊಟ್ಟೆ ನ್ನೊಡಲೊಳಗದಂತೆಯಿರು ಅನುದಿನವು ಪೊಡವಿ ಮೂರನು ಒಡಲೊಳಿಟ್ಟಿಡೆ ಬಿಡದೆ ಆಳುವ ಒಡೆಯ ಶ್ರೀರಾಮ ದೃಢದಿ ನಿಮ್ಮಯ ಅಡಿಯ ನಂಬಿದೆ ಬಿಡಿಸು ಎನ್ನಯ ಮಂದಜ್ಞಾನವ 3
--------------
ರಾಮದಾಸರು
ಶ್ರೀ ಕೃಷ್ಣ ತೋಡಿ25ಬ್ರಾಹ್ಮಣಸ್ತ್ರೀಯರಲಿ ಭೋಜನವನುಂಡೆಬ್ರಹ್ಮಾಂಡದೊಡೆಯ ಶ್ರೀ ಗೋಪಾಲಕೃಷ್ಣ ಪಸ್ನಾನ ಜಪ ತಪ ಹೋಮ ವ್ರತ ಅನುಷ್ಠಾನಗಳುಅನುದಿನವು ವೇದ ಪಾರಾಯಣ ಪ್ರವಚನಘನವಿಷಯ ವಾಕ್ಯಾರ್ಥ ಪೂಜೆ ಮೊದಲಾದವುನಿನ್ನ ತಿಳಿಯದೆ ಏನೂ ಫಲದವು ಅಲ್ಲ 1ನಿನ್ನ ಮಹಿಮೆ ಕೆಲವು ಬ್ರಾಹ್ಮಣರು ಅರಿಯದೆಲೆನಿನ್ನ ಪ್ರೀತಿಗೇವೆ ಯಜÕವೆಂಬುದು ಮರೆತುಅನ್ನ ಕೊಡುವುದು ಇಲ್ಲ ಈಗ ಹೋಗೆನಲಾಗವನಿತೆಯರಲಿ ಪೋದೆ ಅನ್ನ ಅನ್ನಾದ 2ಜ್ಞರ ಚೋರನಂತೆ ನಿನ್ನ ವಿಡಂಬನವನಾರೀಮಣಿಗಳುಕೇಳಿತತ್ತತ್ವವರಿತುಹರಿನಿನಗೆ ಬಿಡಿಸಿ ಬಹು ಧನ್ಯರಾದರೊ ಸ್ವಾಮಿಸರಸಿಜಾಸನತಾತಪ್ರಸನ್ನ ಶ್ರೀನಿವಾಸ3
--------------
ಪ್ರಸನ್ನ ಶ್ರೀನಿವಾಸದಾಸರು