ಶ್ರೀ ಲಲಾಮನೆ ನಿನ್ನ ಚರಣಾಬ್ಜಗಳಿಗೆ ನಮೊ
ನೀಲಮೇಘಶ್ಯಾಮ ನಿರುಪಮ ತ್ರಿಧಾಮ ಪ
ಮೂಲಕಾರಣ ನಿನ್ನ ಹೊರತಿನ್ನು ಕಾಯುವರು
ಮೂರ್ಲೋಕದೊಳಗಿಲ್ಲ ಮುರಹರ ಮುಕುಂದ ಅ.ಪ.
ನಿತ್ಯ ಕಲ್ಯಾಣಗುಣ ಪೂರ್ಣ
ಜಲಜನಾಭನೆ ದೇವಾ ಜಲಧಿಶಯನ
ಜಲಜಜಾಂಡವ ಸೃಷ್ಟಿ ಸ್ಥಿತಿ ಪ್ರಳಯ ಕರ್ತ ನಿನ್ನ
ಅಪ್ರಮೇಯ ಸ್ವರೂಪ 1
ಕುಂಭಿಣಿಯ ಪಮಾಣುಗಳನಧಿಕ ಯತ್ನದಲಿ
ಅಂಬುಧಿಯ ಕಣಗಳನು ಎಣಿಸಬಹುದು
ಅಂಬುಜಾಕ್ಷನೇ ನಿನ್ನ ಆನಂದ ಮೊದಲಾದ
ಗಂಭೀರ ಗುಣಗಳನು ಎಣಿಸಲಾರಿಗೆ ಸಾಧ್ಯ2
ಪರಮಾತ್ಮ ಪರಂಜ್ಯೋತಿ ಪರಮ ಪಾವನರೂಪ
ಪರಿಪೂರ್ಣ ಆನಂದ ಪುರುಷೋತ್ತಮ
ಕರಿರಾಜವರದ ಶ್ರೀ ಕರಿಗಿರೀಶನೆ ನಿನ್ನಚರಣ ಸೇವಕನೆಂದು ಕರಪಿಡಿದು ಕಾಯೊ 3