ಕನಕದಾಸನ ಮೇಲೆ ದಯ ಮಾಡಲು ವ್ಯಾಸಮುನಿ ಮಠಿಕರೆಲ್ಲರು ದೂರುತಿಹರೊ ಪ.
ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲುದೂರ್ತರಾಗಿದ್ದ ವಿದ್ವಾಂಸರೆಲ್ಲಸಾರ್ಥಕವಾಯ್ತು ಇವರ ಸನ್ಯಾಸಿತನವೆಲ್ಲಪೂತ್ರ್ಯಾಗಲೆಂದು ಯತಿ ನಗುತಲಿಹನು 1
ಕದಳಿ ಫಲವನೆ ಕೊಟ್ಟುಯಾರಿರದ ಸ್ಥಳದಲ್ಲಿ ಮೆದ್ದು ಬನ್ನಿರಿ ಎನಲು2
ಕದಳಿ ಫಲವ ತಂದು ಮುಂದಿಟ್ಟ 3
ಡಿಂಬದೊಳು ಶಬ್ದ ವಾಗಾದಿ ಶ್ರೋತೃಗಳಲ್ಲಿಇಂಬಾಗಿ ತತ್ತ್ವೇಶರೆಲ್ಲ ತುಂಬಿಹರುತಿಂಬುವುದು ಹ್ಯಾಂಗೆನುತ ವ್ಯಾಸರಾಯರ ಕೇಳೆಕಂಬದಂತಾದರವರೆಲ್ಲ ಕುಳಿತವರು 4
ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆಕೋಣನಿದಿರಿಗೆ ಕಿನ್ನರಿಯ ಮೀಟಿದಂತೆವೇಣುಧ್ವನಿ ಬಧಿರನ ಬಳಿ ಹೊರಡಿಸಿದಂತೆ ಕಣ್‍ಕಾಣದವನಿಗೆ ಕನ್ನಡಿಯ ತೋರಿದಂತೆ 5
ನೋಡಿದಿರ ಈ ಕನಕನಾಡುವ ಮಾತುಗಳಮೂಢ ಜನರರಿಯಬಲ್ಲರೆ ಮಹಿಮೆಯನಾಡಾಡಿಯಂತೆಯೆ ಮಾಡಿಬಿಟ್ಟರು ಇವಗೆ ನಾಡೆಲ್ಲ ಹುಡುಕಿದರು ಈಡಾರ ಕಾಣೆ6
ಪುರಂದರ ವಿಠಲನೆಂದ 7
* ಈ ಕೀರ್ತನೆ ಕನಕದಾಸರದೆಂದೂ, ‘ಪುರಂದರ ವಿಠಲ’ ಎಂಬ ಅಂಕಿತ ಪ್ರಕ್ಷಿಪ್ತವೆಂದೂ ಪ್ರತೀತಿ.