ಒಟ್ಟು 54621 ಕಡೆಗಳಲ್ಲಿ , 139 ದಾಸರು , 12331 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗಾಧರ ಸ್ಮರತ್ರಿಪುರಹರ ದೇವಪ ಅಂಗಜಹರ ಭಸಿತಾಂಗ ಮಹಾಲಿಂಗ ತುಂಗಮಹಿಮ ಮೃಗಾಂಶಮೌಳಿ ಶಿವ ಅ.ಪ ಭೂತೇಶ ಸದ್ಯೋಜಾತ ಪ್ರದ್ಯುಮ್ನಸುತೆಯಸುತ ಮತಿಯ ಪ್ರದಾತ ಸದಮಲಮೂರುತಿ ಹೃದಯಸದನದೊಳು ವಿಧಿಪಿತನಂಘ್ರಿಯ ಸ್ಮರಣೆಯ ಕರುಣಿಸು 1 ಪ್ರಮಥಶ್ರೇಷ್ಠರ ಸಂಸೇವಿತ ಸುಮನಸರ ಪ್ರೀತ ಹೈಮವತಿಯ ಪ್ರೀತಾ ರಮಾರಮಣಗೆ ಅತಿಭಕುತಾ ನೀ ಮನೋಭಿಮಾನಿಯೆ ಖ್ಯಾತಾ ತಾಮಸರೊಳು ತಮಸಾಧನ ಮಾಡಿಸಿ ನೀ ಮೋಹಿಪ ದೇವ ಶೂಲಿ ಕಪಾಲಿ 2 ಶುಕದೂರ್ವಾಸಸ್ವರೂಪ ಜೈಗೀಷರೂಪ ವೈಕಾರಿಕಾದಿ ತ್ರೈರೂಪ ಲೋಕನಾಥÀ ಶ್ರೀವೆಂಕಟೇಶನ ಹೃತ್ಕಮಲದಿ ನಲಿಸುವ ಫಾಲನೇತ್ರ ಶಿವ 3
--------------
ಉರಗಾದ್ರಿವಾಸವಿಠಲದಾಸರು
ಗಂಗಾನದಿ ಬಾರೆ ಬಾರಮ್ಮ ಜಾನ್ಹವೀದೇವಿಹರಿಭಕುತರ ಕಾಯಿ ಪ ಬಾರೆ ಬಾರೆ ಪುರವೈರಿ ಸಿರಸ್ಥಿತೆಮೂರು ಲೋಕಗಳ ವಾರಣ ಮಾಡುವಿ ಅ.ಪ. ನೀರಜ ಶುಭವಸ್ತ್ರೆಸಾರಸಾಯತ ಸುಂದರ ನೇತ್ರೇಚಾರು ಸುರಗಿ ಮುತ್ತಿನ್ಹಾರ ಕುಂಡಲನೊಸ-ಲ್ಹೀರ ಮಸ್ತಕವಿದು ಸಾರಸಭೂಷೆ 1 ಹರಿಯಾ ಸ್ನಾನೋದಕದಲಿ ನೀನಿರುವಿವರ ವೀಳ್ಯದಲಿರುವಿಹರಿಯಾ ತರುಣಿಯನೆ ನೀ ಪಡೆದಿರುವಿ2
--------------
ಇಂದಿರೇಶರು
ಗಂಗಾನದಿ ಮಂಗಳಂ ಜಯತು ಭಾಗೀರಥಿಗೆ ಜಯ ಮಂಗಳಂ ಯಮುನೆ ಸರಸ್ವತಿಗೆ ಪ ವಾಮನರೂಪಿಲಿ ದಾನವ ಬೇಡಿ ಪ್ರೇಮದಿಂ ಪಾದವ ಮೇಲಕ್ಕೆ ನೀಡಲು ನೇಮದಿಂ ತಡೆದು ಬ್ರಹ್ಮಾಂಡದಿಂದ ಸುಮ್ಮಾನದಿಂ ಪೊರಟು ಬಂದ ದೇವಿಗೆ 1 ಹರಿಯ ಪಾದದಲಿ ಉದ್ಭವಿಸಿದ ಗಂಗೆಗೆ ಹರನ ಶಿರದಲ್ಲಿ ವಾಸವಾದವಳಿಗೆ ಧರಿಣಿಗೆ ಇಳಿದು ಬಂದ ದೇವಿಗೆ 2 ಭಾಗೀರಥಿ ಎಂಬೊ ಪೆಸರು ಪೊತ್ತು ಅವನ ಭಾಗಿಗಳಿಗೆ ಮೋಕ್ಷವನಿತ್ತು ಹರುಷದಿ ಯೋಗಿಗಳು ಸ್ತುತಿಪ ಗಂಗಾದೇವಿಗೆ 3 ಜಾಹ್ನವಿ ಎನಿಸಿದೆ ಜಗದೊಳಗೆ ಜನರಿಗೆ ಜನನ ಮರಣ ಕೊಡದೆ ಬಿಡಿಸಿ ಜಾಣತನದಿ ಮುಕ್ತಿ ಕೊಡುವವಳಿಗೆ 4 [ದೃಡದಿ ] ಬಲಭಾಗದಿ ಭಗೀರಥಿ ಬರುತಿರೆ ಯೆಡದ ಭಾಗದಲಿಯಮುನೆ ಬರುತಿರಲು ನಡುವೆ ಸರಸ್ವತಿ ತ್ರಿವೇಣಿಯೆಂದೆನಿಸಿ ಪೊಡವಿಗಧಿಕವಾಗಿ ಮೆರೆಯುವ ದೇವಿಗೆ 5 ಬಂದು ಭಾಗೀರಥಿಗೆ ವಂದನೆಗಳ ಮಾಡಿ ತಂದು ಪುಷ್ಪವ ತುಳಸಿ ಕ್ಷೀರವನು ಚಂದದಿಂ ಪೂಜೆಮಾಡಿ ವೇಣಿಮಾಧವಗೆ ಅಂದು ವಂದಿಸಿದವರಿಗೆ 6 ಸೃಷ್ಟಿಯ ಮೇಲುಳ್ಳ ಜನರೆಲ್ಲರು ಬಂದು ಇಷ್ಟಾರ್ಥಗಳನು ಕೊಡುವೆನೆಂದೆನುತಲೆ ಪಾದ ತೋರಿಸುವಳು 7
--------------
ಯದುಗಿರಿಯಮ್ಮ
ಗಂಗೆ ಗೆಲಿಸಮ್ಮ ನಮ್ಮ ಪಂಥವ ಶ್ರೀರಂಗನ ರಾಣಿಯರ ಸೋಲಿಸುವೆ ಪ. ಭಾರ ವಹಿಸಿದ 1 ಸಗರನ ಮಕ್ಕಳ ಅಘದೂರವಾಗಲೆಂದುಭಗೀರಥ ಭಾಳ ತಪಮಾಡಿಭಗೀರಥ ಭಾಳ ತಪಮಾಡಲು ವ್ಯಾಜ್ಯದಿಜಗವ ನುದ್ಧರಿಸಿದ ಜಾಹ್ನವಿ2 ನಾಗಶಯನನ ಮಗಳು ಸಾಗರನ ನಿಜರಾಣಿಈಗ ನೀ ನಮ್ಮ ಗೆಲಿಸೆಂದುಈಗ ನೀ ನಮ್ಮ ಗೆಲಿಸೆಂದು ಸುಭದ್ರೆಬೇಗನೆ ಕೈಯ ಮುಗಿದಳು3 ಪ್ರಯಾಗ ರಾಜನ ಮುಂದೆ ವೇಗದಿ ಹರಿದಳುಹೋಗಿ ಸರಸ್ವತಿಯ ನೆರೆದಳುಹೋಗಿ ಸರಸ್ವತಿಯ ನೆರೆದು ಯಮುನೆಯ ಸೇರಿಸಾಗಿಹಳು ಕಾಶಿಪುರಕಾಗ 4 ಕಂಚಿ ಕಾಶಿ ಮುಂದೆ ಪಂಚಗಂಗೆಯೆನಿಸಿಅಂಚು ಅಂಚಿಗೆ ಮೆರೆಯೋಳುಅಂಚು ಅಂಚಿಗೆ ಮೆರೆಯುವರಾಮೇಶನ ಪಂಚಪ್ರಾಣಳ ಬಲಗೊಂಬೆ 5
--------------
ಗಲಗಲಿಅವ್ವನವರು
ಗಂಗೆ ನಿನಗೋಸ್ಕರ ನಾನು ನಮೋ ಎಂಬೆತುಂಗೆ ಎನ್ನ ಪಂಥವ ಕೇಳಿ ಗೆಲಿಸೆಂಬೆ ಪ. ಅಚ್ಯುತನ ನಖತಾಕಿ ಬಿಚ್ಚಿ ಬ್ರಹ್ಮಾಂಡವುಸ್ವಚ್ಚಜಲವಾಗಸುರಿದಾವುಸ್ವಚ್ಚ ಜಲವಾಗ ಸುರಿದಾವುಅಜನೋಡಿ ಉತ್ಸಾಹದಿ ನುತಿಸಿದ1 ತಂದೆಯ ನಖದಿಂದ ಬಂದ ಜಲಕಂಡು ಮಂದಜಾಸನು ಸ್ತುತಿಸಿದಮಂದಜಾಸನು ಸ್ತುತಿಸಿದ ಸರಸ್ವತಿಬಂದು ಆರುತಿಯ ಬೆಳಗೋಳು 2 ತುಂಬಿ ಭೂಮಂಡಲ ಪತಿಯ ಚರಣವಭೂಮಂಡಲ ಪತಿಯ ಚರಣವ ತೊಳೆಯಲುಕೊಂಡಾಡಿ ಹರನು ಧರಿಸಿದ 3 ರೇಣು ರೇಣು ಹರಿದಿಲ್ಲಿ ಬಂತೆಂದುಸುರರು ಸಂತೋಷಪಡುತಲಿ4 ವಿಷ್ಣುಪದಿಯೆಂದು ಇಟ್ಟರು ನಾಮವಧಿಟ್ಟ ರಾಮೇಶನ ಮಗಳಿಗೆ ಧಿಟ್ಟ ರಾಮೇಶನ ಮಗಳಿಗೆ ಧೃವರಾಯಎಷ್ಟು ಭಕ್ತಿಂದ ಸ್ತುತಿಸಿದ 5
--------------
ಗಲಗಲಿಅವ್ವನವರು
ಗಂಗೆ ಮಂಗಲ ತರಂಗೆ ಪಾಹಿ ಪಾಪಭಂಗೆ ಹರಿಪಾದಸಂಗೆ ಪ ನಿತ್ಯ ನೆಲಸಿದೆ ಮತ್ತೆ ಸ್ಮರಿಪರ ಚಿತ್ತದೊಳ್ ವಾಸಿಸಿದೆ 1 ಸಗರಪುತ್ರರ ಪವಿತ್ರಿಸಿದೆ ಜಗವರಿಯೆ ಜಹ್ನುತನಯೆಯಾದೆ 2 ರಾಜೇಶ ಹಯಮುಖ ತನಯೆ ರಾಜಧರ್ಮನು ನಿನ್ನ ತಟದಲ್ಲಿ ಮೂಜಗವು ತಾ ಪೊಗಳುವಂದದಿ ವಾಜಿಮೇಧನ ಗೈದನಾದರದಿ 3
--------------
ವಿಶ್ವೇಂದ್ರತೀರ್ಥ
ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ ತುಂಗೆ ಕಾರುಣ್ಯ ಪಾಂಗೆ ಅಸಿತಾಂಗೆ ತಿಂಗಳಾನನೆ ಪ ಪರಮೇಷ್ಟಿ ಪಾತ್ರಜಾತೆ ವರುಣನ್ನ ನಿಜದೈಯಿತೆ ಸುರ ಮುನಿಗಣವಿನುತೆ ವರದಾತೆ ಸರ್ವಖ್ಯಾತೆ ತರಣಿಸುತನ ಉದ್ಧರಿಸಿದೆ ಕರುಣದಿ ಧರೆಯೊಳು ನಿನಗೆ ಎ ದುರುಗಾಣೆ ಶರಣಾ 1 ಭಯ ಪಾಪ ತಾಪದೊರೆ ಜಯ ಜಯ ಗುಣಸಾರೇ ತ್ರಯಭುವನ ಉದ್ಧಾರೆ ಆಯುತಾರ್ಕವರ್ನ ನೀರೆ ನಯವ ಭಕುತಿ ಹೃ ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ 2 ಘನ್ನ ವಾರಣಾಸಿ ಕಾಸಿವನ ಆನಂದ ನಿವಾಸಿ ಪ್ರಣತ ಜನರಘನಾಶ ಮಣಿಭೂಷೆ ಸೌಖ್ಯರಾಸಿ ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೇ 3
--------------
ವಿಜಯದಾಸ
ಗಂಗೆ-ಕಾವೇರಿ ವಾತ ಸಂಗದಿ ಆವ ದೇಶವು ಧನ್ಯವೊ ಪ ಪಾವನಾತ್ಮಕ ಪ್ರಥಮ ಝಾವದಲಿ ಮಜ್ಜನವ ಗೈವ ಸುಜನರೇ ಧನ್ಯರೋಅ.ಪ ಆದಿ ಮಧ್ಯಾಂತರಂಗರ ಸೇವೆಯನು ಮಾಡಿ ಸಾಧಿಸಿದೆ ಮಾಂಗಲ್ಯವ ಹೋದ ದೇಶದಿ ಹೊನ್ನು ಮಳೆಗರೆವ ನಿನ್ನ ಪರ ಮಾದರದಿ ಸೇವಿಸುವರು 1 ಚೋಳ ಮಂಡಲಭಾಗ್ಯ ಪೇಳಸಾಧ್ಯವೆ ನಿನ್ನ ಲಾಲನೆಯ ಪಡೆಯುತಿರಲು ಕೇಳುವನು ನಿನ್ನಯ ಕೃಪಾಲವದಿ ತನು ಮನವ ಕೀಳು ವಿಷಯಕೆ ಬಿಡದಿರು 2 ಪುಣ್ಯನದಿಗಳಲಿ ಬಲು ಗಣ್ಯಸ್ಥಾನವ ಪಡೆದು ಮಾನ್ಯಳಾಗಿರುವೆ ಮಾತೆ ನಿನ್ನ ತೀರದಲಿ ನೆಲಸಿಹ ಜನಕೆ ಪರಗತಿ ಪ್ರ ಸನ್ನ ಮುಖಿ ನಿಶ್ಚಯವಿದು 3
--------------
ವಿದ್ಯಾಪ್ರಸನ್ನತೀರ್ಥರು
ಗಂಗೆಗೆ ಸ್ವರ್ಗ ತರಂಗಿಗೆ ರನ್ನದ ಕೋಲ ಕೋಲೆನ್ನಿರಿವಿಮಲ ತರಂಗಿಣಿ ಹರಿಪಾದ ಸಂಗಿಗೆ ಕೋಲ ಕೋಲೆನ್ನಿರೆ ಪ. ಗೋದಾ ನಿನ್ನಯ ಪಾದಾ ಆದರದಿ ಬಲಗೊಂಬೆಸಾಧು ಸಜ್ಜನರ ಸಲಹುವಿಸಾಧು ಸಜ್ಜನರ ಸಲಹುವಿ ನಮಗಿನ್ನುಮೋದದಿ ಮುಯ್ಯವ ಗೆಲಿಸೆಂಬೆ1 ಕೃಷ್ಣ ನಿನ್ನಯ ಪಾದಮುಟ್ಟಿ ಭಜಿಸುವೆನುಇಷ್ಟವ ಕೊಟ್ಟು ಕಾಲಕಾಲಕ್ಕೆಇಷ್ಟವ ಕೊಟ್ಟು ಕಾಲಕಾಲಕ್ಕೆ ಸಲಹುವಿಶ್ರೀ ಕೃಷ್ಣನ ಮಗಳ ಬಲಗೊಂಬೆ 2 ಚಾರು ಚರಣವ ಬಲಗೊಂಬೆ 3
--------------
ಗಲಗಲಿಅವ್ವನವರು
ಗಂಗೇ ಜನನೀ ಮಂಗಳರೂಪಿಣಿ ತುಂಗ ಮಹಿಮನ ಪಾದಾಂಗುಳಿಜಾತೆ ಪ ಸಂಗತಿಯರುಹಲು ಬಂದಿರುವೆವು ಕೃಪಾ ಪಾಂಗವ ತೋರೆಲೆ ಇಂಗಿತವರಿತು ಅ.ಪ ನಾಲ್ಕು ಮೊಗನು ಹರಿ ಕಾಲಿಗೆ ಕೆಡುಹಲು ಶೂಲಧರನ ಶಿರ ಆಲಯ ಮಾಡಿದೆ ಶೈಲದಂತಿಹ ಪಾಪ ಜಾಲಿಸಿ ಕಳೆಯುವೆ ಪೇಳಲಳವೆ ನಿನ್ನ ಶೀಲವ ಸುಲಭದಿ 1 ಚಾರು ನದಿಗಳು ಹೇರಳವಿದ್ದರು ಭಾರತ ದೇಶದಿ ಭಾಗ್ಯದೇವತೆ ನೀ ದೂರ ದೂರ ದೇಶಗಳಲಿ ನೆಲೆಸಿಹ ಧೀರರು ನಿನ್ನಯ ಕೋರುತಲಿರುವರು 2 ಅಂಗಳದಲಿ ಬಿದ್ದು ಹರಿವ ಜಲವು ನಿನ್ನ ಸಂಗದಿ ಪರಮಮಂಗಲ್ಯವ ಪಡೆವುದು ಶೃಂಗಾರದ ನಿಧಿ ರಂಗನ ಸೇವೆಗೆ ಗಂಗೇ ಎನ್ನಂತರಂಗವ ಶೋಧಿಸೆ 3 ಭೂಮಿಯ ಭೇದಿಸಿ ಸುಂದರ ರೂಪದಿ ಸ್ವಾಮಿ ಶ್ರೀಮಧ್ವರ ಚರಣಕೆ ನಮಿಸಿ ಆ ಮಹಾತ್ಮರ ದರುಶನದಿ ಪ್ರಸನ್ನಳೇ ಕಾಮಿತ ಕರುಣಿಸೇ ತ್ರಿಕರಣ ಶುದ್ಧಿಯ 4
--------------
ವಿದ್ಯಾಪ್ರಸನ್ನತೀರ್ಥರು
ಗಜಚರ್ಮಾಂಬರ ಗಂಗಾಧರನೇಗಜಮುಖಜನಕ ಗೌರಿಯ ರಮಣ ಓ ತ್ರಿಜಗದೊಂದಿತನೆ ಸಾಂಬಶಿವ ಮಹಾದೇವ ಪಫಾಲನೇತ್ರನೆ ರುಂಡಮಾಲಾಧರನೆನೀಲಕಂಠನೇ ನಿತ್ಯಾನಂದ ಓಕಾಲಾಂತಕನೆ ಸಾಂಬಶಿವ ಮಹಾದೇವ 1ಮದನ ಹರನೆ ಶಿವ ಕಂಬುಕಂಧರನೆಪದ್ಮಾಕ್ಷನಯನ ಪಾರ್ವತಿ ರಮಣ ಓಬುಧಜನಪ್ರಿಯನೆ ಸಾಂಬಶಿವ ಮಹಾದೇವ 2ಭೂತಿಭೂಷಣನೆ ಸರ್ವ ಭೂತಾತ್ಮಕಪಾತಕಹರ ಪಾರ್ವತಿ ರಮಣ ಓಅನಾಥ ರಕ್ಷನೆ ಸಾಂಬಶಿವ ಮಹಾದೇವ 3ಇಂದ್ರವಂದಿತ ಭುಜಗೇಂದ್ರ ಭೂಷಣನೆತಂದೆ ಏಳುಗಿರಿ ವೆಂಕಟಸಖನೇ ಓಚಂದ್ರಶೇಖರ ಸಾಂಬಶಿವ ಮಹಾದೇವ 4
--------------
ತಿಮ್ಮಪ್ಪದಾಸರು
ಗಜಮುಖ ಗಣನಾಥಾ | ಬೇಡುವೆಸುಜನರ ಪೊರೆ ಎಂದೂ ಪ ಅಜನಯ್ಯನು ಶ್ರೀರಾಮನು ನಿನ್ನನುಪೂಜಿಸಿ ಪ್ರಥಮದಿ ಜಗಕೆ ತೋರಿದನುಅ.ಪ. ದಶಮುಖ ರಾವಣನು ನಿನ್ನಹಸನಾಗಿ ಪೂಜಿಸದೇ |ವಶನಾದ ಮರಣಕೆ ರಣರಂಗದೊಳುಬಿಸಜ ಸಂಭವವರ ಬಹುವಾಗಿದ್ದರೂ 1 ಯಮಸುತ ಮೊದಲಾಗಿ ನಿನ್ನನಮಿಸಲು ಅಧ್ವರದೀ |ಅಮಮ ಪಾಪಾತ್ಮಕರ ಮಿತರಸವರುತಸ್ವಾಮಿ ಎನಿಸಿದನು ಅಪಾರ ರಾಜ್ಯಕೆ 2 ಗುರುಗೋವಿಂದ ವಿಠಲನಾ | ಕರುಣಭರಣವಮಿತ ಪಡೆದಾ |ವರದಾಯಕ ವಿಘ್ನವ ಕಳೆಯುತಅರವಿದೂರ ಪದರಜವನೆ ಕಾಣಿಸೋ 3
--------------
ಗುರುಗೋವಿಂದವಿಠಲರು
ಗಜಮುಖನೇ ನಿನ್ನ ಭಜಿಸುವೆ ನಾ ಮುನ್ನ ತ್ರಿಜಗ ವಂದಿತನೆ ಸುಜನರ ಪೊರೆವಾ ಪ. ಆಖುವಾಹನನೆ ಲೋಕÀ ಸುಪೂಜಿತ ನೀ ಕರುಣಿಸಿ ಕೊಡು ಏಕಚಿತ್ತ ಹರಿಯೊಳು 1 ಮಗುವೆಂದು ಭಾವಿಸಿ ನಗುತ ಬಂದೂ ಎನ್ನ ಅಘವ ಕಳೆದು ನಿನ್ನಾಗಮನ ವರವ ಕೊಡೆನ್ನಾ 2 ಎನ್ನಪರಾಧವ ಮನ್ನಿಸಿ ಗಣಪಾ ಚನ್ನಿಗ ಶ್ರೀ ಶ್ರೀನಿವಾಸನ್ನ ತೋರೋ ಬೇಗಾ3
--------------
ಸರಸ್ವತಿ ಬಾಯಿ
ಗಜವÀದನ ಪಾಲಿಸೊಗಜವÀದನ ಪಾಲಿಸೊ ಪತ್ರಿಜಗದೊಡೆಯ ಶ್ರೀ ಭುಜಗಭೂಷಣಗಜವÀದನ ಪಾಲಿಸೊ ಅ ಪಭಕ್ತಿಯೊಳು ಭಜಿಪೆನು ರಕ್ತಾಂಬರಧರಮುಕ್ತಿಪಥವ ತೋರೊ ಶಕ್ತಿ ಸ್ವರೂಪನೇ 1 ವಾಸವ ಪೊಗಳುವೆಲೇಸಪಾಲಿಸೊ ನಿತ್ಯವಾಸವನುತ2 ಪೊಡವಿಯೊಳಗೆ ನಿನ್ನ ಬಿಡುವರ್ಯಾರೊ ಎನ್ನಕಡುಹರುಷದಿ ಕಾಯೋ ವಿಜಯ ವಿಠ್ಠಲದಾಸ 3
--------------
ವಿಜಯದಾಸ
ಗಜವದನಾ ಬೇಡುವೆ ತ್ರಿಜಗದೊಳ್ ನಿನಗ್ಯಾರು ಸರಿ ಪ. ಕಾಣಿ ಪುಸಿಯಲ್ಲೆನ್ನಾಣೆ ಅ.ಪ. ವಾಹನ ನಮೋ ಶೇಷಶಯನನ ತಂದು ತೋರಿಸುವೊ ನವೋ 1 ಚಾರದೇಷ್ಠನೆಂಬೊ ನಾಮದಿಂದ ರುಕ್ಮಿಣಿ ಉದರದಲ್ಲಿ ಜನಿಸಿದಾತಗೆ ನಮೋ 2 ಎಷ್ಟು ವರ್ಣಿಪೆ ನಿನ್ನ ಮಹಿಮೆಗೆ ನಮೋ ದಿಟ್ಟ ಮೂರುತಿ ನಮ್ಮ ಕಾಳೀಮರ್ಧನಕೃಷ್ಣ ದಾಸಗೆ ನಮೋ 3
--------------
ಕಳಸದ ಸುಂದರಮ್ಮ