ಹರಿಯೇ ಪೊರೆಯದಿಹುದು ಸರಿಯೆ | ಎನ್ನ
ಮರೆತೆ ಯಾತಕೊ ನಾನರಿಯೆ ಪ
ಸೂಕರ ಯೋನಿಯಲಿ ಬಂದು | ನಾನು
ಮನುಜನಾಗಿ ನಿಂದಿಹೆನಿಂದು
ನಿನ ಬೇಡಿಕೊಂಬೆ ದಯಸಿಂಧು | ಎನ್ನ
ಪುನಹ ಪುಟ್ಟಿಸಬೇಡವೆಂದು 1
ಮನಸು ವಚನ ಕಾಯಗಳಿಂದ | ನಿನ್ನ
ಅನುಚರನಾಗಿಹೆ ಮುದದಿಂದ
ದನುಜಾರಿ ಬಿಡಿಸೆನ್ನ ಬಂಧ | ಭವ-
ಜನಿತವಾಗಿಹ ಜಾಲದಿಂದ 2
ಹಲವು ಮಾತೇಕೊ ಮಾಲೋಲ | ಮೌನಿ
ಅಲವ ಬೋಧಾರ್ಚಿತ ಗೋಪಾಲ
ಕಲುಷ ರಾಸಿಗಳನೆಲ್ಲ ಕಳೆದು
ಸಲಹೈಯ್ಯಾ ರಂಗೇಶವಿಠಲ 3