ಲಕ್ಷ್ಮೀ ವೆಂಕಟೇಶ ವಿಠಲ | ರಕ್ಷಿಸೋ ಇವಳಾ ಪ
ವಿಶ್ವ ವ್ಯಾಪಕನೇ ಅ.ಪ.
ಪುಟ್ಟಿ ಸತ್ಕುಲದಲ್ಲಿ | ತೊಟ್ಟು ಸತ್ಸಿದ್ಧಾಂತ ಇಷ್ಟ ಪಡುತಿಹಳಯ್ಯ | ಕಷ್ಟದಾಸತ್ವಾಇಷ್ಟ ಮೂರುತಿ ನೀನು | ತೈಜಸೀ ರೂಪದಲಿಸ್ಪಷ್ಟ ತೋರಿದ ಹರಿಯೆ | ಇತ್ತೆ ಉಪದೇಶಾ 1
ಮರುತ ಮತದಲಿ ದೀಕ್ಷೆ | ಹಿರಿಯರನು ಸರಣೆಯಲಿನಿರುತ ಆಸಕ್ತಿಯನು | ಕರುಣಿಸುತ ಭವದಾಶರಧಿಯನೆ ದಾಟಿಸುವ | ಮಾರ್ಗವನೆ ತೋರೊ ಹರಿಕರುಣಾಂಬುನಿಧಿಯೆಂದು | ಮೊರೆ ನಿನಗೆ ಇಡುವೇ 2
ಕಷ್ಟ ನಿಷ್ಠೂರಗಳ | ಸುಷ್ಠುಸಮತೆಲಿ ಉಂಬಶ್ರೇಷ್ಠ ಮತಿಯನೆ ಇತ್ತು | ರಕ್ಷಿಸೋ ಇವಳಾ |ಅಷ್ಟ ಸೌಭಾಗ್ಯಗಳ | ಕೊಟ್ಟು ಕಾಯಲಿ ಬೇಕೊಕೃಷ್ಣ ಮೂರುತಿ ಹರಿಯೆ | ಭಕ್ತ ವತ್ಸಲ್ಲಾ 3
ಪರಮಾರ್ಥ ಸಾಧನಕೆ | ಗುರು ಕರುಣಬೇಕೆಂಬವರಮತಿಯ ಕರುಣಿಸುತ | ಪೊರೆಯ ಬೇಕಿವಳಾಗರುಡ ಗಮನನೆ ದೇವ | ಸರ್ವಾಂತರಾತ್ಮಕನೆಕರುಣದಿಂ ಕೈ ಪಿಡಿದು | ಉದ್ಧರಿಸೋ ಇವಳಾ 4
ಪಾವಮಾನಿಯ ಪ್ರೀಯ | ಭಾವದಲಿ ಮೈದೋರಿಜೀವಿಯನು ಉದ್ಧರಿಸೋ | ದೇವ ದೇವೇಶಾಗೋವತ್ಸದನಿ ಕೇಳಿ | ಆಪು ಪೊರೆವಂತೆ ತೋರಿಗೋವಿದಾಂಪತಿ ಗುರೂ | ಗೋವಿಂದ ವಿಠಲಾ 5