ಶ್ರೀ ಯತಿವರ ಗುರುರಾಘವೇಂದ್ರರನ್ನಾ ಪ
ಶರಣ-ಜನ-ಸುರ-ಪಾದಪನೆ ತವ
ಚರಣಯುಗಳತೆ ಮೊರೆಯ ಪೊಕ್ಕೆನೊ
ಕರುಣಿಸೆನ್ನನು ದೂರ ನೋಡದೆ
ಕರುಣಸಾಗರನೆ ನೀ ಅ.ಪ
ಆರು ಕಾಯ್ವರೊ ಪೇಳೋ ಎನ್ನ - ನೀ
ದೂರ ನೋಡುವದೇನು ಘನ್ನ
ಸಾರಿದವರಿಗಿಷ್ಟವನ್ನ - ಬೀರುವನೆಂಬೋ
ಬಿರುದು ಪೋಗಿಹದೋ ನಿನ್ನ
ಪಾದ - ಪದುಮ
ಸೌರಭ ಸ್ವೀಕರಿಪ ಜನರೊಳು
ಸೇರಿಸೆನ್ನನು ದೂರ ನೋಡದೆ
ಭೂರಿ ಕರುಣಾಕರನೆ ನೀ 1
ದುರುಳು ಭವಾಂಬುಧಿ ಬಾಧಾ - ಎನ್ನ
ಮೀರಿ ಪೋಗಿಹÀ್ಯದು ಅಗಾಧಾ
ಮದನ - ಶರ - ಬಂಧಾ - ದಿಂದ
ದೂರಾಗಿಹದೋ ನಿನ್ನ ಸಂಭಂಧ
ಪರಮ ಪಾಮರನಾದ ಎನ್ನಯ
ಮರುಳು ಮತಿಯನು ಬಿಡಿಸಿ ನಿನ್ನ -
ವರೊಡನೆ ಸೇರಿಸೊ ಪರಮ ಕರುಣಿಯೆ
ಚಾರತರನಾದ ಎನ್ನಾ 2
ದುಷ್ಟಜನರ ಸಂಗದಿಂದ ನಿನ್ನಯ ಪಾದ
ಮುಟ್ಟ ಭಜಿಸದರಿಂದ
ಸೃಷ್ಟಿಯೊಳಗೆ ಮತಿಮಂದಾ ನಾಗೀ
ಪುಟ್ಟಿ ಬಂದೆನೊ ವೇಗದಿಂದಾ
ಕಷ್ಟಹರ ಗುರು ಜಗನ್ನಾಥ
ಪಾದ ಪದುಮಕೆ
ಘಟ್ಟದೋಪಮ ನೆನಿಸಿ ಎನ್ನಾ
ಪುಟ್ಟಿ ಬರದಂತೆ ಮಾಡೊ ನೀ 3