ಒಟ್ಟು 5968 ಕಡೆಗಳಲ್ಲಿ , 127 ದಾಸರು , 3551 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಪ್ತರಾರೆಂಬುದನು ಆಲೋಚನೆಯ ಮಾಡೆ ಆಪ್ತರೊಬ್ಬರ ಕಾಣೆ ನೀನಲ್ಲದೆ ಪ ಆಪ್ತರನ್ಯರ ನಂಬಿ ತಪ್ತ ಜೀವನನಾದೆ ತೃಪ್ತಿಯ ಬೇಡುವೆ ನಿತ್ಯತೃಪ್ತ ನಿನ್ನನು ದೇವ ಅ.ಪ ಕೋಳಿಕೂಗದೆ ಬೆಳಕು ಬಾರದೆನ್ನುವ ನುಡಿಯ ಕೇಳಿ ತಲೆದೂಗಿದೆನು ಮೂಢತನದಿ ಪೇಳಿದುದು ಮಾಡಿದೆನು ತಾಳಿದೆನು ಮರ್ಮನುಡಿ ಪೇಳಲೇನುಪಯೋಗ ಶ್ರೀಲಲಾಮ ಸುಧಾಮ 1 ದಿಟ್ಟ ಜನರಾಪ್ತರಾಗುವರೆ ಜಗದಿ ಇಷ್ಟರಂದದಿ ಹೊರಗೆ ಕೆಟ್ಟ ಯೋಚನೆಯೊಳಗೆ ಸುಟ್ಟ ಬೆರಳಿಗೆ ಸುಣ್ಣವಿಡುವರೊಬ್ಬರ ಕಾಣೆ 2 ಕೂತ ಕೊಂಬೆಯ ಬುಡವ ತಾ ತರಿವ ಮೇಧಾವಿ ಮಾತು ಕೇಳುವ ಜನಗಳಾಪ್ತರಾಗುವರೆ ಪ್ರೀತ ನೀನಾಗೊ ಅನಿಮಿತ್ತಬಾಂಧವ ನಿನ್ನ ದೂತ ದೂತರ ದೂತನಾಗುವೆ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಆಭರಣಗಳರ್ಪಿಸುವೆನು ಶೋಭನ ಚರಿತಾ ಪ ಮಹಾಭಾಗ್ಯಪ್ರದೆ ನಿನ್ನರಸಿ ಯುಗುಣಭರಿತಾ ಅ.ಪ ಪದನೂಪುರಗಳು ಘಂಟೆ ನಿನದದುಡಿದಾರಾ ಪರಿಯಂತ ವಿಧವಿಧಕರ ಕಂಕಣ ಹತ್ತು ಬೆರಳಿಗುಂಗೂರಾ ಕೌಸ್ತುಭ ಶ್ರೀ ವತ್ಸದ ಶೃಂಗಾರಾ 1 ಕುಂಡಲ ಕರ್ಣದಲ್ಲಿ ತುಳಸಿಯ ವನಮಾಲೆ ಶೋಭಿಪುದು ಕಂಠದಲೀ ಥಳಥಳಿಪುದು ರವಿಯಂತೆ ಕಿರೀಟಶಿರದಲ್ಲಿ ಬೆಳಗುವ ತೇಜೋಮಯ ಗಾನಾವದು ಕೊಡಲಿ 2 ಸ್ಮರ ಶತ ಸುಂದರ ವಿಗ್ರಹ ಕರುಣಾಕರನೇ ಸರಸಿಜಭವ ಜನಕ ಪರಾತ್ಪರ ಮಾಧವನೆ ಶರದಿಂದುನಿಭಾನನ ಸರ್ವತ್ಪ್ರಕಾಶನೇ ಗುರುರಾಮ ವಿಠಲ ಹರಿ ಸರ್ವೋತ್ತಮನೇ 3
--------------
ಗುರುರಾಮವಿಠಲ
ಆರತಿ ಬೆಳಗಿರೆ ಶಾರದೆಗೆ | ಗುಣ ವಾರಿಧಿ ಕರುಣಾ ನೀರಧಿಗೆ ಪ ನತ ಗೀ- ಜಾಣೆಗೆ ತ್ರಿಭುವನ ತ್ರಾಣೆಗೆ ಜಪಸರ ಧಾ- ಶುಭ ರೂಪಿಣಿಗೆ 1 ಶಾರದ ಚಂದ್ರನ ಕಿರಣನ ಪೋಲುವ ಚಾರು ಶುಕ್ಲಾಂಬರದಿಂದಲಿ ಪೊಳೆವ ಹಾರ ಮಕುಟ ಪದ ನೂಪುರ ಕಂಕಣ ಅಘ ಹಾರಿಣಿಗೆ 2 ಸಕಲಾಗಮಗಳನಾಂತಿಹ ಗಣಿಗೆ ನಿಖಿಲ ಕಲೆಗಳನು ಕಾದಿಹ ಫಣಿಗೆ ಭಕುತರ ಪಾಲಿನ ಚಿಂತಾಮಣಿಗೆ ಶ್ರೀಕಾಂತನಾತ್ಮಜನರಗಿಣಿಗೆ 3
--------------
ಲಕ್ಷ್ಮೀನಾರಯಣರಾಯರು
ಆರತಿ ಬೆಳಗುವೆ ನಾ ಸದ್ಗುರುವಿಗೆ ಪ ಭಾವದ ಪೊಂಬ್ಹರಿವಾಣ ಭಕುತಿಯಾ ತೀವಿದ್ಯಾರತಿಜ್ಞಾನ ಜ್ಯೋತಿಯಲಿತ್ತಿ1 ಮುಖದಲಿ ನುಡಿಯುತ ನಾಮಾವಳಿಯೂ ಸಕಲರು ಪ್ರೇಮದಿ ಹಾಕಿ ಚಪ್ಪಾಳಿಯಾ2 ನಯನದಿನೋಡಿ ಶರಣವ ಮಾಡೀ ಭಯವನೀಡಾಡಿ ಸ್ತುತಿಗಳ ಪಾಡಿ3 ಇಂದಿನ ದಿನದಾನಂದವು ನಮಗ ಹಿಂದಿನ ಪುಣ್ಣ್ಯಿದಿರಿಟ್ಟಿತು ಈಗ 4 ಒಡಲ್ಹೊಕ್ಕು ಮಹಿಪತಿನಂದನೊಡಿಯನಾ ಪಡೆಯ ಬನ್ನಿರೀಬ್ಯಾಗ ಮುಕುತಿಯ ಸಾಧನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿ ಬೆಳಗುವೆ ವಾರಿಧಿಶಯನಗೆ ಮಾರನಪಿತನಿಗೆ ನಾರದಸುತಗೆ ಪ ಸಾರಸನಾಭಗೆ ನೀರಜಗಾತ್ರಗೆ ಶ್ರೀರಮೆಯರಸಗೆ ನಾರಿಯರೊಡನೆ ಅ.ಪ ಮುರಳಿಯನೂದುವ ತರಳ ಶ್ರೀಕೃಷ್ಣಗೆ ಶರಣರ ದುರಿತವ ಪರಹರಿಸುವಗೆ ಕರುಣಜಲಧಿ ಮಾಂಗಿರಿರಂಗಯ್ಯಗೆ ಸರಸತಿ ಪಾರ್ವತಿ ತರುಣಿಯರೊಡನೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆರತಿ ಬೆಳಗುವೆ ಶ್ಯಾಮಸುಂದರ ಶ್ರೀ ಮಾರಜನಕನಿಗೆ ಮುದದಿಂದ ಪ ಮೂರುತಿ ಪರಮನಿಗೆ ಅ.ಪ ಭವ ಶರಣರಿಗೊಲಿಯುವ ಶಾಂತನಿಗೆ ಮೃಗಮದತಿಲಕದ ಮುಖದವಗೇ1 ಒಲೆವ ಮುತ್ತು ರತ್ನದ ಮಾಲೆಗಳ ಒಲಿದುಧರಿಸಿಹ ವೈಜಯಂತಿಯಲಿಲ ನಲಿಯುವ ಪಂಕಜನಾಭನಿಗೆ 2 ಪರತರ ಪದ್ಮವ ಪಿಡಿದಿರುವ ಕಿರು ನಡುಗೊಡ್ಯಾಣವ ನಿಟ್ಟಿಹಗೇ 3 ಶಿರಮಣಿ ಪಚ್ಚೆಯ ಪದಗಳಿಗೆ ಜಾಜೀಶ ಕೇಶವಗೆ4
--------------
ಶಾಮಶರ್ಮರು
ಆರತಿ ಬೆಳಗುವೆನಾ :ಮಹಿಪತಿ ಗುರುವಿನಾ ದೋರುವ ಪಾದುಕಿಗೆ :ಒಪ್ಪಿಸಿ ಜೀವಪ್ರಾಣ ಪ ಜಡಜೀವತಾರಿಸಲಿ :ವಸ್ತುಗುರುರೂಪತಾಳಿ ಪೊಡವಿಲಿನ್ನು ಮಹಿಮೆದೋರಿ ನಿಂತ ವಿಶ್ವಾತ್ಮದಲ್ಲಿ 1 ಇದ್ದಲ್ಲೆ ಭಾವಿಸಲಿ ಗುರುಜ್ಞಾನದಾಕೀಲಿ ಬುದ್ಧಿಪ್ರೇರಕನಾಗಿ ಹೇಳುವನು ಮೌನದಲಿ2 ಉದ್ಧವಗಯದುರಾಯಾ ನೀಡಿದಂತೆ ನಮ್ಮಯ್ಯಾ ಮುದ್ದು ಪಾದುಕೆಯಾಕೊಟ್ಟು ಮಾಡೆಂದು ಪೂಜೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿ ಬೆಳಗುವೆನಾ | ಅಸುರವಂದ್ಯಗೆ ಕಾರುಣ್ಯ ವೇದವ್ಯಾಸ ಮುಕುಂದಗೆ ಪ ಸತ್ಯವತೀ ಸುತನಾಗ್ಯವತರಿಸಿದ | ಸತ್ಯ ಸನಾತನ ಮೂರುತಿಗೆ 1 ಅಖಿಲದೋಳಗೆ ಭಾರತ ಭಾಗವತವ ಸಕಲ ಪುರಾಣವ ರಚಿಸಿದವಗೆ 2 ತಾನಿಜಗತಿ ಪದ ದೋರಿದಗೆ 3 ಶರಣಜನರಿಷ್ಟಾರ್ಥವ ನೀಡುತ ಗುರುಮಹೀಪತಿಸುತ ಸಾರಥಿಗೆ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿ ಮಂಗಳಾರತಿ ಆರತಿ ಬೆಳಗಿದೆಆತ್ಮ ಚಿದಾನಂದಗೆ ಪ ಆರು ಸ್ಥಾನವ ತಿಳಿದುಆರನೆ ಸ್ಥಳದಿ ನಿಂತುಆರು ಭ್ರಮೆಯ ಹರಿದುಆರ್ ಮೇಲೆ ಬೆಳಗಿದೆ 1 ಮೂರು ಸ್ಥಾನವ ತಿಳಿದುಮುರನೆಯ ಸ್ಥಳದಿ ನಿಂದುಮೂರು ಗುಣವ ಹರಿದುಮೂರ್ ಮೇಲೆ ಬೆಳಗಿದೆ2 ಎರಡು ಸ್ಥಾನವ ತಿಳಿದುಎರಡನೆಯ ಸ್ಥಳದಿ ನಿಂದುಎರಡನೆ ಚಿದಾನಂದನೊಳುಎರಡಾಗದೆ ಬೆಳಗಿದೆ 3
--------------
ಚಿದಾನಂದ ಅವಧೂತರು
ಆರತಿ ಮಾಡಿರೆ ನೀರೆಯರೆಲ್ಲರು ಮಾರಮಣನಾದ ಶ್ರೀರಂಗರಾಜನಿಗೆ ಪ ಭಾರ ಬೆನ್ನಲಿ ಪೊತ್ತು ಕೋರೆಯೆ ತೋರಿದ ನಾರಸಿಂಹನಿಗೆ 1 ಪೋರ ರೂಪನಾದ ಧೀರ ಪರಶುಧರಗೆ ಶ್ರೀ ರಘುರಾಮನೆಂಬ ಚೋರ ಶಿಖಾಮಣಿಗೆ 2 ಚಾರು ಬೌದ್ಧನಿಗೆ ವೀರ ರಾಹುತಗೆ ನೀರಜನಾಭನಾದ ಶ್ರೀ ರಂಗೇಶವಿಠಲಗೆ 3
--------------
ರಂಗೇಶವಿಠಲದಾಸರು
ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ ಪಾರ್ವತಿದೇವಿಯರಿಗೆ ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ ಆರತಿಯ ಬೆಳಗಬನ್ನಿರೆ ಪ ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ 1 ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ 2 ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ 3 ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ 4 ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ5
--------------
ಹರಪನಹಳ್ಳಿಭೀಮವ್ವ
ಆರತಿಯನು ನಾನು ಬೆಳಗುವೆ ನಮ್ಮಪ್ರೇರಿಪ ಪ್ರಭುವ ಪಡೆವೆನೆಂಬ ಪವಿಷಯಂಗಳಾರತಿ ವಿಸ್ತರಿಸಲು ಬಹುವಿಷಮಮಾರ್ಗವ ಕಾಬ ವೊಡಲಿತ್ತವುವಿಷವಾುತಾ ಸುಖ ವಿವಿಧ ಭೋಗಂಗಳುಮೃಷೆಯೆಂದು ಹರಿಯನ್ನೆ ಮಚ್ಚಿಕೊಂಬ 1ಲೋಕಂಗಳೈದಲು ಲೋಪವಾದವುಯೆಲ್ಲಸಾಕಾುತವರಲ್ಲಿ ಸಂಚರಿಸಿಈ ಕುಹಕವ ನಂಬಲೆಲ್ಲವು ಬಹು ದುಃಖಶ್ರೀಕಾಂತನ ಕೂಡಿ ಸುಖವಿರುವ 2ಹದಿನಾಲ್ಕು ಕರಣದ ಹವಣಿನಾರತಿಯಲ್ಲಿಹುದುಗಿಸಿ ಜ್ಞಾನದ ಹೊಸ ದೀಪವಹೃದಯಕಮಲದಲ್ಲಿ ಹೊಂದಿಹ ತಿರುಪತಿಸದನ ವೆಂಕಟಗೆತ್ತಿ ಸುಖಿಯಾಗುವ 3ಓಂ ಶಿಶುಪಾಲ ಶಿರಶ್ಛೇತ್ರೇ ನಮಃ
--------------
ತಿಮ್ಮಪ್ಪದಾಸರು
ಆರತಿಯನೆತ್ತಿರೆಲ್ಲ ಆನಂದಗೆಆರತಿಯನೆತ್ತಿರೆಲ್ಲ ಸ್ವಾನಂದಗೆ ಪ ಸದನ ಸದನ ಬಿಟ್ಟಿಹಗೆತೋರುತಿಹ ಬ್ರಹ್ಮರಂಧ್ರ ತುರೀಯ ರೂಪಗೆ 1 ಕಣ್ಣಿನೊಳಗೆ ಕಣ್ಣು ತೆರೆದು ನಿರೀಕ್ಷಿಪಗೆಕಣ್ಣ ಬೊಂಬೆಯೊಳಗೆ ಕುಳಿತು ನೋಡುತಿಹಗೆಭಿನ್ನವಿಲ್ಲದ ಆನಂದ ಸುಖದಿ ರಮಿಸುತಿಹನಿಗೆಹೊನ್ನ ತಗಡಿನಂತೆ ಥಳಥಳಿಸುತಿಹಗೆ 2 ಉಕ್ಕುವ ತೇಜಗಳೆಲ್ಲ ತಾವೊಂದಾಗಿ ಕೂಡಿಮಿರು ಹರಿವ ಬೆಳದಿಂಗಳಂತೆಯಿಹಗೆಲೆಕ್ಕವಿಲ್ಲದಲೆಯುತಿಹ ಸುಖದ ರಾಶಿಗೆಮುಕ್ತಿ ಮೂರುತಿ ಶ್ರೀ ಚಿದಾನಂದ ಗುರುವಿಗೆ 3
--------------
ಚಿದಾನಂದ ಅವಧೂತರು
ಆರತಿಯಾಡುವೆನು ಸದ್ಗುರುವಿಗೆಆರತಿಯಾಡುವೆನು ಪ ಕಾಯವ ಜರೆಯುತ್ತಲಿಕೈಯನೆ ಮುಗಿಯುತಲಿಮಾಯವ ಹರಿಯುತಲಿಬಾಯಿ ಕೊಂಡಾಡುತಲಿ ಸದ್ಗುರುವಿಗೆ 1 ಕುಣಿ ಕುಣಿದಾಡುತಲಿಮನವನೆ ನೀಡುತಲಿಘನಮುಕ್ತಿ ಬೇಡುತಲಿಅನುಮಾನವ ಬಿಡುತಲಿ ಸದ್ಗುರುವಿಗೆ 2 ಅರಿವನೆ ಅರಿತುಗುರಿಯನೆ ಮರೆತುಪೂರವನೆ ಬೆರೆತುಗುರು ಚಿದಾನಂದನರಿತು ಸದ್ಗುರುವಿಗೆ 3
--------------
ಚಿದಾನಂದ ಅವಧೂತರು
ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ | ಸಾರು ನೀನು ಎನಗೆ ಸುಮ್ಮನ್ಯಾತÀಕೆ ಯಿದ್ದೀ ಪ ನೀರೊಳು ಮುಣಗೆ ವೇದವ ತಂದಾತನೊ | ಭಾರವನು ಪೊತ್ತು ಸುರರ ಕಾಯಿದಾತನೊ | ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ | ಕೂರ್ರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ1 ಗಗನಕೆ ಬೆಳದು ಸುರ ನದಿಯ ಪಡೆದಾತನೊ | ಹಗೆಗಳ ಕೊಂದು ಹರುಷಿತನಾದನೊ | ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ | ಮಗನಮಗನ ತಂದ ಮಹಿಮನೊ 2 ಹರಗೆ ಸಾಯಕವಾಗಿ ಪುರ ಉರಹಿದಾತನೊ | ದುರುಳರನ ಕೊಂದ ದುರ್ಲಭದೇವನೊ | ಕರಿರಾಜ ವರದ ಶ್ರೀ ವಿಜಯವಿಠ್ಠಲರೇಯ - ಶರಣರಿಗೊಲಿದು ಬಂದ ಸರ್ವೋತ್ತಮನೊ 3
--------------
ವಿಜಯದಾಸ