ಶೇಷಾದ್ರಿ ವಾಸಾ ಪಾಲಿಸೋ | ನಿನ್ನ ಶ್ರೀಪಾದದಾಸ ಜನರೊಳಗಾಡಿಸೊ ಪ
ಭವ | ಪಾಶಗಳಳಿಯುತವಾಸಿಸೊ ಮನದಾ | ಕಾಶದೊಳಗೆ ಶ್ರೀಶಾವೃಷ್ಣೀಶ ಸರ್ವೇಶ - ಕೃತ ಖಳಕುಲ ಬಹುನಾಶ ಅ.ಪ.
ಮದನ ಕೋಟಿ ಲಾವಣ್ಯಾ | ಶ್ರೀ ಭೂ ವರೇಣ್ಯಾಪದುಮೆ ಮನಮೋಹನಾ |ಮುದ ಮನದಲಿ ಮನದವಕಾಶದಿ ಪೊಳೆಸುರಭೂಜ | ರವಿತೇಜ | ಮಹ ಓಜ ವೈರಾಜಾ 1
ತರುಜಾತಿ ಫಲ ಸುಮನಾ | ಸುರರೀ ಭವನಾಧರಿಸಿ ಮೆರೆವ ಸುಜನಾ |ಗಿರಿಯೊಳು ನೆಲೆಸುತ - ಸುರರ ಸೇವೆ ವಿಸ್ತಾರಗಂಭೀರ ಮನೋಹಾರ - ಕೃತಕ್ರತು ಸಮ ಅಪಾರ 2
ಭಾರತೀಶ ಪ್ರಾಣಾಂತರ್ಗತ | ಕಾಮಿತದಾತಾಸಾರ ಸದ್ಗುಣ ಭರಿತಾ ||ನೀರಜಾಕ್ಷ ಗುರು | ಗೋವಿಂದ ವಿಠಲನೆಮೈದೋರೊ | ಮುದಬೀರೊ | ನಿನಗೆಲ್ಲು ಸರಿಯಾರೋ 3