ಒಟ್ಟು 352 ಕಡೆಗಳಲ್ಲಿ , 49 ದಾಸರು , 333 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೀಣೆ ಧರಿಸಿದ ಕಾರಣೇನೊ ಹನುಮಾ ಜಾಣತನವಿದು ಏನು ಪೇಳೊ ಬಲಭೀಮ ಪ. ತ್ರೇತೆಯಲಿ ಶ್ರೀ ರಾಮದಾಸತ್ವ ಚರಿಸಿದುದು ಖ್ಯಾತಿ ಬರಲಿಲ್ಲೆಂದು ಮನದಿ ತಿಳಿದೂ ಪ್ರೀತಿಯಿಂದಲಿ ಕೃಷ್ಣನಂಘ್ರಿ ಗುಪ್ತದಿ ಭಜಿಸಿ ನೀ ತಪೋನಿಧಿ ಎನಿಸಿ ಮುನಿಯಾದ ಮಹಿಮಾ 1 ಮೂರು ಅವತಾರದಲಿ ತೋರದಂತ್ಹರಿ ದಾಸ್ಯ ಆರಾಧಿಸುತ ಮೀಸಲಾಗಿ ಚಲಿಸೇ ಧೀರಭಕ್ತರು ಬಯಲಿಗೆಳೆದು ಖ್ಯಾತಿಯ ಪಡೆಯೆ ತೋರದಂತಾಗೆ ಬೇಗನೆ ದಾಸ್ಯ ವಹಿಸೀ 2 ದಾಸರನುಭವಿಪ ಆನಂದ ನೋಡುತ ಭಾರ ತೀಶ ನೀ ಮೊದಲು ದಾಸನು ಎನಿಸಲು ವಾಸುಕೀಶಯನ ಗೋಪಾಲಕೃಷ್ಣವಿಠ್ಠಲಗೆ ದಾಸನಾಗುತ ವೀಣೆ ಪುಸ್ತಕವ ಪಿಡಿದಿಯಾ 3
--------------
ಅಂಬಾಬಾಯಿ
ವೇಣುನಾದ ಪ್ರಿಯ ಗೋಪಾಲಕೃಷ್ಣ ಪ. ವೇಣುನಾದ ವಿನೋದ ಮುಕುಂದಗಾನವಿನೋದ ಶೃಂಗಾರ ಗೋಪಾಲ ಅ.ಪ. ವಂದಿತಚರಣ ವಸುಧೆಯಾಭರಣಇಂದಿರಾರಮಣ ಇನಕೋಟಿತೇಜಮಂದರಧರ ಗೋವಿಂದ ಮುಕುಂದಸಿಂಧುಶಯನ ಹರಿ ಕಂದರ್ಪಜನಕ 1 ನವನೀತಚೋರ ನಂದಕುಮಾರಭುವನೈಕವೀರ ಬುದ್ಧಿವಿಸ್ತಾರರವಿಕೋಟಿತೇಜ ರಘುವಂಶರಾಜದಿವಿಜವಂದಿತ ದನುಜಾರಿ ಗೋಪಾಲ2 ಪರಮದಯಾಳು ಪಾವನಮೂರ್ತಿವರ ಕೀರ್ತಿಹಾರ ಶೃಂಗಾರಲೋಲಉರಗೇಂದ್ರಶಯನ ವರ ಹಯವದನಶರಣರಕ್ಷಕ ಪಾಹಿ ಕೋದಂಡರಾಮ 3
--------------
ವಾದಿರಾಜ
ವ್ಯಾಸರಾಯರು ಗೋಪಾಲಕೃಷ್ಣನ ಭಕ್ತಿಯಿಂದಲಿ ಭಜಿಸುವ ನಮ್ಮ ಗುರು ವ್ಯಾಸಮುನಿರಾಯ ಪ. ಹೇಸಿ ವಿಷಯಗಳಿಗೆ ಮೋಸ ಹೋದೆನು ನಾನು ಭಿಲಾಷೆಗಳ ಪೂರೈಸೊ ಅ.ಪ. ಹಿಂದೇಳ ಜನ್ಮಗಳು ಬಂದು ಪೋದವಯ್ಯಾ ಇಂದು ವಸುಧಿಯೊಳಗೆ ಬಂದೆನಯ್ಯಾ ಭವದೊಳಗೆ ನೊಂದೆನಯ್ಯಾ ಬಹಳ ಬೆಂದೆನಯ್ಯ ಅಘಕೂಪದೊಳು ಬಿದ್ದೆನಯ್ಯ ಉದ್ಧರಿಸು ಜೀಯ್ಯಾ 1 ವಂದಿಸುವೆನು ನಿಮಗೆ ನವವೃಂದ ವನದಲಿ ಇರುವೋರು ಇಂದಿರೇಶನ ನೋಡುವೋರು ಆನಂದಪಡುವೋರು ಸಿಂಧುಶಯನ ತಂದು ತೋರಿಸೋ ಇಂದು ನಿಮ್ಮಯ ಪಾದವೊಂದೆ ಭಜಿಪೆ ತಂದೆ ಮಾಡೆಲೊ ಸತ್ಕøಪೆ 2 ಯೆಷ್ಟು ಜನುಮದ ಪುಣ್ಯ ಫಲಿಸಿತು ಎನಗೆ ವೈಷ್ಣವಾ ಜನ್ಮ ದೊರಕಿತು ಕೊನೆಗೆ ದುಷ್ಟ ಸಂಗವಾ ದೂರದಿ ಮಾಡಯ್ಯ ಶಿಷ್ಟ ಜನ ಸಂಗದೊಳಗೆನ್ನಿಡಯ್ಯಾ ಅಭೀಷ್ಟಗಳ ನೀಡಯ್ಯ ಕಾಳಿಮರ್ಧನ ಕೃಷ್ಣನ ತೋರಿಸಯಾ ಪಾಲಿಸಯ್ಯಾ 3
--------------
ಕಳಸದ ಸುಂದರಮ್ಮ
ಶರಣರ ಪರಿಪಾಲಾ ಶ್ರೀಲೋಲಾ ಪರಮ ಸುಂದರ ಬಾಲಾ ಪ. ರುಕ್ಮಿಣಿ ರಮಣಾ ರಕ್ಕಸ ಹರಣಾ ಶಕ್ರಾದಿನುತ ಚರಣಾಭರಣಾ 1 ಮಧ್ವ ಮುನೀಶಾ ಶುದ್ಧ ಪ್ರಕಾಶಾ ಪದ್ಮನಾಭ ಮನಶುದ್ಧಿಯ ನೀಡೋ 2 ಕಾಮಿತ ಫಲದಾ ಕೋಮಲ ಪಾದಾ ಶ್ರೀ ಮನೋಹರ ಸುರ ಕಾಮ್ಯ ಪ್ರದಾತಾ 3 ಮೃಡ ಸುರ ಪ್ರೀಯಾ ಧೃಡಮನ ಕೊಡು ನಿನ್ನಡಿಯಲಿ ಜೀಯಾ 4 ಗೋಪಿಯ ತನಯಾ ನೀ ಪಿಡಿ ಕೈಯ್ಯಾ ಗೋಪಾಲಕೃಷ್ಣವಿಠ್ಠಲ ಹೇ ಜೀಯ್ಯಾ 5
--------------
ಅಂಬಾಬಾಯಿ
ಶರಣು ಹೋಗುವೆನಯ್ಯ ನಾನು ಪ ಸಿರಿ ಅಜಭವ ಶಕ್ರ ಸುರಸ್ತೋಮಗಳನೆಲ್ಲ ಸರಸದಿಂದ ಆಳ್ವ ಪರಮಪುರುಷ ಹರಿಗೆ ಶಿರಬಾಗಿ ನಮಿಸುತ ಅ.ಪ. ನಿರುತ ಆನಂದದಿ ಮೆರೆದು ಇರುವಂಥ ನಿರಜ ನಿತ್ಯನು ಆದ ಉರಗನ ಮೇಲ್ವರಗುತ ಪರಮ ಪರಾತ್ಪರ ಪರಮವೇದದ ಸಾರ ಪರಮ ಸದ್ಗುಣ ಪೂರ್ಣ ಪುರುಷಸೂಕ್ತ ವಂದ್ಯ ಪರಿಪರಿ ರೂಪದಿ ಸರ್ವತ್ರ ಇರುವಂಥ ನಿರ್ಗುಣ ನಿರಾಕಾರ ನಿರುಪಮ ನಿಸ್ಸೀಮ ನಿರುತ ತೃಪ್ತನು ಆದ ಸರ್ವಸಾರ ಭೋಕ್ತ ಸರ್ವರ ಬಿಂಬನು ಸರ್ವಗುಣ ಪೂರ್ಣ ಸರ್ವರ ಆಧಾರ ಸರ್ವೇಶ ಸ್ವತಂತ್ರ ಸರ್ವಶಬ್ದ ವಾಚ್ಯ ಸರ್ವರಿಂ ಭಿನ್ನನು ಸರಸಸೃಷ್ಟಿಯ ಮಾಳ್ವ ನೀರಜನಾಭಗೆ ಚರಣವ ಪಿಡಿಯುತ್ತ ಉರುಗಾಯನ ದೇವ ಸಲಹು ಸಲಹೆಂದು 1 ವಾರಿಯೊಳಾಡುವ ಭಾರವಹೊರುವ ಕೋರೆಯತೀಡುವ ಕರುಳಾನು ಬಗೆಯುವ ವರವಟು ಆಗುವ ಪರಶುವ ಪಿಡಿಯುವ ನಾರಿಯ ಹುಡುಕುವ ನಾರಿಯ ಕದಿಯುವ ಬರಿಮೈಯ್ಯ ತೋರುವ ತುರುಗವನೇರುವ ನಾರಿಯು ಆದವ ಭಾರತ ಮಾಡುವ ವರ ಸಾಂಖ್ಯ ಹೇಳುವ ಕರಿಯನು ಪೊರೆಯುವ ಪೋರಗೆ ಒಲಿದವ ವರ ಋಷಭನಾದ ಹರಿ ಯಜ್ಞ ನಾದವ ತರಿವ ರೋಗಂಗಳ ವರಹಂಸ ರೂಪನು ತುರುಗ ವೇಷಧಾರಿ ನಾರಾಯಣ ಮುನಿಯೆ ಗುರು ದತ್ತಾತ್ರೇಯನೆ ಪರಿಸರ ಪರಮಾಪ್ತ ಪೊರೆಯೊ ಮಹಿದಾಸನೆಂದು ಕರವೆತ್ತಿ ಮುಗಿಯುತ 2 ಪಾಪಿಯ ಪೊರೆದವಗೆ ತಾಪ ಇಲ್ಲದವಗೆ ಅಪವರ್ಗದಾತಗೆ ವಿಪನ ಏರಿದವಗೆ ಗೋಪತಿಯಾದವಗೆ ತಾಪವ ಮೆದ್ದವಗೆ ಚಾಪವ ಮುರಿದವಗೆ ಚಪಲ ಇಲ್ಲ ದವಗೆ ಕಪಟರ ವೈರಿಗೆ ಗುಪ್ತದಿ ಇರುವಗೆ ವಿಪ್ರನ ಸಖನಿಗೆ ಅಪ್ರಮೇಯನಿಗೆ ಗೋಪೇರ ವಿಟನಿಗೆ ತಾಪಸ ಪ್ರೀಯಗೆ ವಿಪ್ರಶಿಶು ತಂದವಗೆ ಮುಪ್ಪಿಲ್ಲ ದವಗೆ ತ್ರಿಪುರಾರಿ ಸಖಗೆ ಕೃಪಣ ವತ್ಸಲನಿಗೆ ತಪ್ಪು ಮಾಡದವಗೆ ಆಪ್ತತಮನಿಗೆ ಸಪ್ತ ಶಿವವ್ಯಕ್ತನಿಗೆ ಶ್ರೀಪತಿಯಾದವಗೆ ಕಪಟನಾಟಕ ಪ್ರಭು ಗೋಪಾಲಕೃಷ್ಣಗೆ ಒಪ್ಪಿಸಿ ಸರ್ವಸ್ವ ಅಪ್ಪನೆ ಅಪ್ಪನೆ ತಪ್ಪದೆ ಸಲಹೆಂದು 3 ಅನ್ನವು ಆದವಗೆ ಅನ್ನಾದ ನೆಂಬುವಗೆ ಅನ್ನದ ಖ್ಯಾತನಿಗೆ ಚಿನ್ಮಯ ರೂಪಗೆ ಬೆಣ್ಣೆಯ ಕಳ್ಳಗೆ ಅನಾಥನಾದವಗೆ ಕನಕಮಯನಿಗೆ ಅನಂತರೂಪನಿಗೆ ಉಣ್ಣದೆ ಇರುವವಗೆ ಉಣ್ಣುತ ಉಣಿಸುವವಗೆ ಜ್ಞಾನಿಗಮ್ಯನಿಗೆ ಜ್ಞಾನ ದಾಯಕನಿಗೆ ಗುಣತ್ರಯ ದೂರಗೆ ಭಾನುವ ತಡೆದವಗೆ ಆನತ ಬಂಧುವಿಗೆ ಅನುಪಮನಾದವಗೆ ತನುಮನ ಪ್ರೇರಿಪಗೆ ದಾನವ ವೈರಿಗೆ ತನ್ನಲ್ಲೆ ರಮಿಸುವನಿಗೆ ಮನ್ಮಥ ಪಿತನಿಗೆ ಪೆಣ್ಣಿನ ಪೊರೆದವಗೆ ಅಣುವಿಗೆ ಅಣುವಿಹಗೆ ಘನಕೆ ಘನ ತಮನಿಗೆ ಕಣ್ಣಿಲ್ಲದೆ ನೋಳ್ಪ ಉನ್ನತ ಪ್ರಭುವಿಗೆ ಬೆನ್ನು ಬೀಳುವೆ ನಾನು ಇನ್ನು ಕಾಯೋ ಎಂದು 4 ಹೇಯನಾಗದ ಶೃತಿ ಗೇಯನು ಸುಜನರ ಪ್ರೀಯನು ಸರ್ವರ ಕಾಯುವ ಸುಂದರ ಹಯಮುಖ ಸರ್ವದ ಪ್ರಾಯದಿ ಮೆರೆಯುವ ಗಾಯನ ಪ್ರಿಯನಾದ ಮಾಯಾರಮಣ ಭಾವ ಮಾಯೆ ಹರಿಸಿ ಮುಕ್ತಿ ಭಾಗ್ಯ ಭಕ್ತರಿಗೀವ ತೋಯಜಾಂಬಕ ಸುರ ನಾಯಕರಿಗೆ ಭಕ್ತಿ ತೋಯದಿ ಮುಳುಗಿಪ ಶ್ರೀಯರಸಾಭಯ ದಾಯಕ ಗುರು ಮಧ್ವ ರಾಯರ ಪ್ರಿಯನಾದ ಜೇಯ ಜಯಮುನಿ ವಾಯುವಿನ ಅಂತರದಿ ನವನೀತ ಧರಿಸಿರ್ಪ ತಾಂಡವ ಸಿರಿಕೃಷ್ಣ ವಿಠಲ ರಾಯನಿಗೆ ಕಾಯ ವಾಚಮನದಿ ಗೈಯ್ಯುವ ಸಕಲವನು ಈಯುತ ನಮಿಸುತ ಜೀಯನೆ ಜೀಯನೆ ಕಾಯಯ್ಯ ಕಾಯೆಂದು 5
--------------
ಕೃಷ್ಣವಿಠಲದಾಸರು
ಶೇಷ-ರುದ್ರದೇವರು ಪಾದ ಭೂ- ಪಾದ ಪ. ಹರಿಗೆ ಹಾಸಿಗೆಯಾಗಿ ಹರುಷಪಡುವ ಪಾದ ಹರಿಯ ಮಂದಿರಲ್ಲಿ ಇರುವ ಪಾದ ಹರ ಪುರಂದರರಿಗೆ ಪೂಜ್ಯವಾಗಿಹ ಪಾದ ಪಾದ 1 ವಾರುಣಿ ದೇವಿಗೆ ವರನೆನಿಸಿದ ಪಾದ ಶ್ರೀ ರಾಮಗೆ ಕಿರಿಯನಾದ ಪಾದ ಘೋರ ಇಂದ್ರಾರಿಯ ಸಂಹರಿಸಿದ ಪಾದ ಪಾದ 2 ವಾಯುದೇವರು ಜೊತೆಗೆ ವಾದವಾಡಿದ ಪಾದ ನೋಯದೆ ಭೂಮಿಯನು ಪೊತ್ತಿಹ ಪಾದ ಶ್ರೀಯರಸನ ಪಾದಪದ್ಮ ಸೇವಿಪ ಪಾದ ಸುರರು ಪಾದ 3 ಸಪ್ತೆರಡು ಭುವನದಲಿ ಗುಪ್ತವಾಗಿಹ ಪಾದ ಚಿತ್ತದಭಿಮಾನಿಗೆ ಸೇವಕನಾದ ಪಾದ ಮತ್ತೆ ಮನ ಅಹಂಕಾರ ತತ್ವದೊಡೆಯನ ಪಾದ ಪಾದ 4 ಘೋರರೂಪವ ತೊರೆದು ಸೌಮ್ಯವಾಗಿಹ ಪಾದ ಸೇರಿದವರನು ಪೊರೆವ ಶ್ರೇಷ್ಠ ಪಾದ ಹಾರೈಸಿ ಗೋಪಾಲಕೃಷ್ಣವಿಠ್ಠಲನ ಪಾದ ಪಾದ 5
--------------
ಅಂಬಾಬಾಯಿ
ಶ್ರೀ ಕರಗ್ರಹ ಎನ್ನ ಸಾಕಲಾರದÉ ಹೀಗೆ ನೂಕಿ ಬಿಡುವುದು ನ್ಯಾಯವೆ ಪ. ಬೇಕೆಂದು ನಿನ್ನ ಪದ ನಾ ಕಾಣ ಬಂದರೆ ಈ ಕಪಟತನವು ಸರಿಯೆ ಹರಿಯೆ ಅ.ಪ. ಎಲ್ಲರನು ಸಲಹಿದಂತೆನ್ನ ನೀ ಸಲಹೆನ ನಿಲ್ಲದೆ ನೀರ ಪೊಗುವೆ ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಪೆನೊ ಬಾರೆನಲು ಕಲ್ಲಡೀ ಅವಿತುಕೊಳುವೆ ಖುಲ್ಲನಲ್ಲವೊ ನಾನು ತಲ್ಲಣಿಪೆ ಪೊರೆ ಎನಲು ಹಲ್ಲು ಕೋರೆಯ ತೋರುವೆ ಎಲ್ಲಿ ಹೋಗಲೊ ನಾನು ಇಲ್ಲವೊ ಇನ್ನೊಬ್ಬ ಸೊಲ್ಲು ಕೇಳುವರನರಿಯೆ | ದೊರೆಯೆ 1 ತಡಬಡಿಸುತಿಹೆನೆನ್ನ ಪಿಡಿದು ಕೈ ಸಲಹೆನಲು ಘುಡು ಘುಡಿಸಿಕೊಂಡು ಬರುವೆ ಬಡವನೋ ನಾನು ನಿನ್ನಡಿಯನೇ ನೀಡೆನಲು ಹುಡುಗತನದಲಿ ಬೇಡುವೆ ತಡೆಯಲಾರೆನೊ ಭವದ ದಡವ ಸೇರಿಸು ಎನಲು ಕೊಡಲಿಯ ಪಿಡಿದು ಬರುವೆ ಕಡು ಬವಣೆ ಬಿಡಿಸೆಂದು ಅಡಿಗಡಿಗೆ ಎರಗಲು ಅಡವಿ ಅಡವಿಯ ತಿರುಗುವೆ | ಥರವೇ 2 ಹತ್ತು ನಾಲ್ಕು ಲೋಕಕೆ ತೆತ್ತಿಗನೊ ನೀನೆನಲು ಮುತ್ತ್ಯದೊರೆ ಎಂದೆನ್ನುವೆ ಸುತ್ತಿರುವ ಆವರಣ ಮತ್ತೆ ನೀ ಛೇದಿಸೆನೆ ಬತ್ತಲೆ ನೀ ನಿಲ್ಲುವೆ ಭೃತ್ಯ ನಾ ನಿನಗೆನಲು ಹತ್ತಿ ಕುದುರೆಯ ಓಡುವೆ ನಿತ್ಯ ಮೂರುತಿ ನಿನ್ನ ಕೃತ್ಯವೇ ಹೀಗಿರಲು ಮತ್ತಿನ್ನ ಹ್ಯಾಗೆ ಪೊರೆವೆ | ಕರೆವೆ 3 ದÉೂರೆಯು ನೀ ಜಗಕೆಂದು ಸುರರೆಲ್ಲ ನುಡಿಯುವರೊ ಅರಿಯೆ ನಾನದರ ಮಹಿಮೆ ಸಿರಿಗೊಡೆಯನಾದರೆ ಪೊರೆಯದೆಲೆ ಎನ್ನನು ಕರೆಕರೆಗೊಳಿಸುವರೆ ತಿರಿಯ ಬರಲಿಲ್ಲ ನಾ ಸಿರಿಯ ನೀಡೆಂದೆನುತ ಉರುತರದ ಭಯವೇತಕೆ ಚರಣ ಧ್ಯಾನವನಿತ್ತು ಪರಮ ಭಕ್ತರೊಳಿಡಿಸಿ ದೊರೆಯೆ ನೀ ಸಲಹ ಬೇಕೋ | ಸಾಕೋ4 ಆಪಾರ ಮಹಿಮನೆ ಆರ್ತಜನ ರಕ್ಷಕ ಪಾಪಿ ನಾನಿಹೆನೋ ಈಗ ನೀ ಪಿಡಿದು ಪೊರೆಯದಿರೆ ಕಾಪಾಡುವವರ್ಯಾರೊ ಶ್ರೀ ಪತಿಯೆ ನೀನೆ ತೋರೊ ತಾಪಪಡಲಾರೆ ಭವಕೂಪದೊಳು ಬಿದ್ದಿಹೆನು ನೀ ಕೃಪಾದಿಂದೀಕ್ಷಿಸೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಕಾಪಾಡುವವರನರಿಯೆ ದೊರೆಯೆ 5
--------------
ಅಂಬಾಬಾಯಿ
ಶ್ರೀ ಗುರುವರರಾಯ ಪ. ಏನೆಂಬೆ ನಾ ನಿಮ್ಮ ಕರುಣಕ್ಕೆ ಎಣೆಗಾಣೆ ಶ್ರೀ ಗುರುವರರಾಯ ಅ.ಪ. ಭೂಸುರ ಜನ್ಮದಲಿ ದಾಸತ್ವದಿಂದ ಮೆರೆವೊ | ಶ್ರೀ ಗುರುವರರಾಯ ಫಣಿ ಶ್ರೀ ಗುರುವರರಾಯ 1 ಶ್ರೀ ತಂದೆ ಮುದ್ದುಮೋಹನವಿಠಲದಾಸ | ಶ್ರೀ ಗುರುವರರಾಯ ಪ್ರೀತಿಯಿಂದ ಹರಿಯ ಅಂಕಿತ ಕೊಡುವಂಥ | ಶ್ರೀ ಗುರುವರರಾಯ 2 ಶ್ರೀ ಗುರುವರರಾಯ ವಿಘ್ನಗಳನೆ ತರಿದು ಪ್ರಾಜ್ಞಾ ಮೂರುತಿಯ ತೋರೈ | ಶ್ರೀ ಗುರುವರರಾಯ 3 ಮಂದಜ್ಞರಿಗೆ ಜ್ಞಾನ ತಂದಿತ್ತು ರಕ್ಷಿಪ | ಶ್ರೀ ಗುರುವರರಾಯ ಬಂದೆನು ನಿಮ್ಮ ಪಾದದ್ವಂದ್ವವೇ ಗತಿಯೆಂದು | ಶ್ರೀ ಗುರುವರರಾಯ 4 ಭವ | ಶ್ರೀ ಗುರುವರರಾಯ ತರಳನ ಕಾಯ್ದ ನರಹರಿಯ ಭಜಿಸುವಂಥ | ಶ್ರೀ ಗುರುವರರಾಯ 5 ಅಪರಾಧವೆಣಿಸದೆ ಸುಪಥಮಾರ್ಗವ ತೋರೈ | ಶ್ರೀ ಗುರುವರರಾಯ ಗುಪಿತ ಮಹಿಮ ನಿನ್ನ ಜಗದೊಳರಿವರ್ಯಾರು | ಶ್ರೀ ಗುರುವರರಾಯ 6 ಅಗಣಿತ ಮಹಿಮೆಯ | ಶ್ರೀ ಗುರುವರರಾಯ ಸುರನರರಿಂದಲಿ ವಂದನೆಗೊಂಬುವ | ಶ್ರೀ ಗುರುವರರಾಯ 7 ಅಂತರಂಗದಿ ಆನಂದವನಿತ್ತ ಮಹಿಮ | ಶ್ರೀ ಗುರುವರರಾಯ ಶಾಂತಮೂರುತಿ ನಿಮ್ಮ ಶರಣೆಂದು ಭಜಿಸುವೆ | ಶ್ರೀ ಗುರುವರರಾಯ 8 ನೀತ ಗುರುವೆ ನಿಮ್ಮ ನಂಬಿದೆ ಸಲಹಯ್ಯ | ಶ್ರೀ ಗುರುವರರಾಯ ಖ್ಯಾತ ಶ್ರೀ ಗೋಪಾಲಕೃಷ್ಣವಿಠಲ ಪ್ರಿಯ | ಶ್ರೀ ಗುರುವರರಾಯ 9
--------------
ಅಂಬಾಬಾಯಿ
ಶ್ರೀ ಗುರುವರ್ಯರಿಗೆ ಜಯಮಂಗಳ ನಿತ್ಯ ಭೋಗಿಶಯನಪ್ರಿಯಗೆ ಶುಭಮಂಗಳ ಪ. ಆನಂದರತ್ನರು ಜ್ಞಾನಪ್ರಕಾಶ ಎಂದು ನಾನಾ ವಿಧದಿ ಬಿರುದು ಪೊತ್ತವಗೆ ಶ್ರೀನಿವಾಸನನು ಧ್ಯಾನವ ಮಾಳ್ಪಂಥ ಜ್ಞಾನಪೂರ್ಣರಾದ ಗುರುಗಳಿಗೆ 1 ಪರಮಪ್ರಿಯರು ಪರಿಮಳರೆಂದೆನಿಸುತ ಪರಿ ನಾಮವ ಧರಿಸಿಹಗೆ ನರಸಿಂಹನನು ಹೃತ್ಸರಸಿಜದಲಿ ಕಂಡು ಹರುಷವ ಪಡುವಂಥ ಗುರುಗಳಿಗೆ 2 ತಂದೆ ಮುದ್ದುಮೋಹನವಿಠ್ಠಲನೆಂಬಂಕಿತ ಚಂದದಿಂದ ಗುರುಗಳಿಂ ಪಡೆದವಗೆ ಬಂದ ಭಕ್ತರಿಗೆಲ್ಲ ಅಂಕಿತಕೊಟ್ಟು ಭವ ಬಂಧನವ ಬಿಡಿಸುವ ಗುರುಗಳಿಗೆ 3 ಚಂದ್ರನ ತೆರದಿ ಪರಮಾರ್ಥ ಚಂದ್ರೋದಯವ ನಿರ್ಮಿಸುವರಿಗೆ ಚಂದದಿಂದ ಪರತತ್ವ ಪೇಳುವ ಸುಂದರ ಮೂರುತಿ ಗುರುಗಳಿಗೆ 4 ಅಪಾರ ಕರುಣಾಜಲಧಿ ಎಂದೆನಿಪರಿಗೆ ಶ್ರೀಪತಿ ಪಾದವ ತೋರ್ವಂಗೆ ಗೋಪಾಲಕೃಷ್ಣವಿಠ್ಠಲನ ಧ್ಯಾನವನಿತ್ತುಕಾಪಾಡುವಂಥ ಶ್ರೀ ಗುರುಗಳಿಗೆ 5
--------------
ಅಂಬಾಬಾಯಿ
ಶ್ರೀ ಚಂದ್ರಿಕಾಚಾರ್ಯ ಗುರುವೇ ಪ ಯಾಚಿಪೆ ನಿನ್ನ ಶ್ರೀ ಚರಣ ಸೇವೆ ಅ.ಪ ಜಲಧಿ ಚಂದ್ರ ಯತೀಂದ್ರ ಭೂಪೂರ್ವ ಪ್ರಹ್ಲಾದ ಸಜ್ಜನಾಹ್ಲಾದ ಗೋಪಾಲಕೃಷ್ಣ ಚರಣಾಂಬುರುಹ ಲೋಲ ಶ್ರೀಪಾದರಾಜಪ್ರಿಯ ಬಾಲಸುಶೀಲ 1 ಸಮೀರನ ರಾಶಿಯನು ರಚಿಸಿ ಸನ್ಮಾನ್ಯರೆನಿಸಿ ದಾಸಕೂಟಕೆ ನೆಲೆಯಿತÀ್ತು ಪುರಂದರ ದಾಸರನು ಕರುಣಿಸಿದೆ ಧೀರ ಉದಾರ 2 ಕುಹುಯೋಗ ಪರಿಹಾರಗೈದ ಮಹಾಯೋಗಿವರ ಕುಹಕ ವರ್ಜಿತ ಚಿತ್ತ ಶೋಭಿತ ಸುಖಾಂತ ಪಾದ ಧ್ಯಾನಿಪರ ಸಹವಾಸವೆನಗಿತ್ತು ಸಲಹುವುದು ಸತತ 3
--------------
ವರಾವಾಣಿರಾಮರಾಯದಾಸರು
ಶ್ರೀ ಮದಾಚಾರ್ಯ ಮುನಿ ಪ್ರೇಮದಲಿ ಸಲಹೊ ಪ. ಕಾಮಪೂರ್ಣನೆ ಎನ್ನ ಕಾಮಿತವನೀಯೊ ಅ.ಪ. ದ್ವಿತೀಯಯುಗದಲಿ ವಾಯುಸುತನಾಗಿ ಅವತರಿಸಿ ಕ್ಷಿತಿಸುತೆಗೆ ಉಂಗುರವ ಹಿತದಿಂದಲಿತ್ತೆ ತೃತಿಯುಗದಲಿ ಕುಂತಿಸುತನಾಗಿ ಕೌರವರ ಹತಗೊಳಿಸಿ ಹರಿಯಪದ ಹಿತದಿ ಧ್ಯಾನಿಸಿದೆ 1 ಕಲಿಯುಗದೊಳವತರಿಸಿ ಕಲಿಕಲ್ಮಷವ ಕಳೆದು ಒಲಿಸಿ ಹರಿಯನು ತುರಿಯ ಆಶ್ರಮದಲಿ ಸುಲಭಮಾರ್ಗವ ತೋರಿ ಸುಜನರನು ರಕ್ಷಿಸಿದೆ ಕಲಿಕಾಲ ಸಲಹೆನ್ನ ನೆಲಸಿ ಹೃದಯದಲಿ 2 ಆಚಾರ್ಯರೂಪದಲಿ ಗೋಚರಿಸಿ ಸ್ವಪ್ನದಲಿ ಸೂಚಿಸಿದೆ ದಾಸತ್ವ ಸಿದ್ಧಿಸಲಿ ಎಂದು ಯಾಚಿಸೆನೊ ಅನ್ಯರನು ನಾಚಿಕೆಯ ತೊರೆದಿನ್ನು ನೀಚತನವನೆ ಬಿಡಿಸಿ ಗೋಚರಿಸೊ ಸತತ 3 ಉಪದೇಶವನೆ ಇತ್ತೆ ಗುಪಿತದಿಂ ಸ್ವಪ್ನದಲಿ ಚಪಲತನದಲಿ ನಾನು ಅರಿಯಲಿಲ್ಲ ಅಪರಿಮಿತ ಮಹಿಮ ಶ್ರೀ ಗುರುಗಳಲಿ ನೀ ನಿಂತು ತಪ್ಪನೆಣಿಸದೆ ಎನ್ನ ನಮನ ಸ್ವೀಕರಿಸೊ 4 ವೇದವ್ಯಾಸರ ಪ್ರಿಯನೆ ಮೋದದಲಿ ಶಿಶುವಾದೆ ಶ್ರೀ ದುರ್ಗೆ ತಾ ಬಂದು ಎತ್ತಿದಳೊ ನಿನ್ನ ವಾದಿಗಳ ಗೆದ್ದ ಅನಾದಿ ಮುನಿ ನಮಿಸುವೆನೊ ಶ್ರೀದ ಗೋಪಾಲಕೃಷ್ಣವಿಠ್ಠಲನ ತೋರೊ 5
--------------
ಅಂಬಾಬಾಯಿ
ಶ್ರೀ ರಮೇಶನೆ | ಶ್ರೀ ನಾರಸಿಂಹ ಶ್ರೀ ರಮೇಶನೆ ಪ. ಶ್ರೀ ರಮೇಶ ಸುರ ಸಾರ್ವಭೌಮ ಭವ ತಾರಕಗೊಳಿಸುವ ಕಾರಣಪುರುಷ ಅ.ಪ. ಆದಿಮೂಲನೆ | ಅಪಾರ ಮಹಿಮ ಖೇದದೂರನೆ ವಾದಿಪ ಪಿತನೊಳು ಸಾಧಿಪೆ ನಿನ ಮತ ಮೋದಗೊಳಿಸಿ ಪ್ರಹ್ಲಾದನ ಪೊರೆದೆ 1 ಶೌರಿ ಭೂಧರಾ ದೊರೆ ಕಾದಿದ ದುಷ್ಟ ದೈತ್ಯಾದಿಗಳ ಕೊಂಡು ಮೋದವಿತ್ತೆ ಭೂದೇವಿಗೆದೆ ಶ್ರೀಶಾ 2 ಭೂಪರೈವರು | ಎದುರಲ್ಲಿ ಇರಲು ಪಾಪಿ ಖೂಳರು ದ್ರೌಪದಿ ವಸನವ ಕೈಪಿಡಿದೆಳೆಯಲು ಪತಿ ಸಲಹೆನೆ ತಾಪವ ಬಿಡಿಸದೆ 3 ನೀರೊಳಾಡಿದೆ | ನೀ ಕಲ್ಲು ಪೊತ್ತು ನಾರಿಯ ತಂದೆ ನಾರಸಿಂಹ ವಟು ವೀರರಾಮಚಂದ್ರ ಜಾರಚೋರ ವಸ್ತ್ರದೂರನೆ ಕಲ್ಕಿ 4 ಗೋಪಾಲಕೃಷ್ಣ | ವಿಠ್ಠಲದೇವ ಕಾಪಾಡೊ ಕೃಷ್ಣ ರೂಪ ರೂಪಾಂತರ ವ್ಯಾಪಿಸಿ ಜಗದೊಳು ಶ್ರೀಪತಿ ಹೃದಯದಿ ರೂಪವ ತೋರೊ 5
--------------
ಅಂಬಾಬಾಯಿ
ಶ್ರೀ ಲಕ್ಷ್ಮೀನಾರಾಯಣ ಪ ಕಾಲ ಕಾಲ ಗಾನವಿಲೋಲ ಜಯ ಜಯ ಅ.ಪ ವಿರಿಂಚಿ ಸ್ತೋತ್ರ ಪಡೆದ ಮಹಾತ್ಮ ಜಯ ಜಯ 1 ಗಿರಿಯು ನೀರೊಳ್ ಮುಳುಗಲಾಕ್ಷಣ | ಗೆರೆದೆಯಮೃತವ ಪೊರೆದೆ ಕರುಣದಿ2 ಶೇಷಗಿರಿಯ ವರಾಹರೂಪನೆ 3 ಭರದೊಳಿರಲೊಡೆದ್ವಜ್ರ ಕಂಭದಿ | ಶರಣನು ಪೊರೆದಾ ನೃಸಿಂಹನೆ 4 ಳೊದಗಿರುವ ತ್ರಿವಿಕ್ರಮನೆ ಜಯ ಜಯ 5 ಸಮಗೊಳಿಸಿ ಪೊರೆದಮಲ ಭಾರ್ಗವ 6 ಕುಶಲವರ ಪಿತ ರಾಮಚಂದ್ರನೆ 7 ಕುವರಿಯರಸ ಗೋಪಾಲಕೃಷ್ಣನೆ 8 ದತಿಕುಶಲ ಬುದ್ಧಾವತಾರನೆ 9 ಲಟ್ಟಹಾಸದಿ ಮೆರೆವ ಕಲ್ಕಿಯೆ 10 ಮಾಧವ ಗತಿ ಜಗದ್ಗುರು ಸಚ್ಚಿದಾನಂದ 11
--------------
ಸದಾನಂದರು
ಶ್ರೀ ವಿಷ್ಣು ತೀರ್ಥರು (ಮಾದನೂರು) ಶ್ರೀ ವಿಷ್ಣು ತೀರ್ಥರೆ ನಮೋ ಪ ತಾಮರಸ ಭ್ರಮರರೆಂದನಿಸೂವಲೌಕಿಕ ಸುವೈದಿಕ ಸುಶಬ್ದ ಜಾತವಸಾರ್ವಭೌಮ ಹರಿಗನ್ವಯಿಪರಂ ಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ ಅ.ಪ. ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿಅವಸಿತರು ಬಾಲ ಆಚಾರ್ಯ ಭಾಗೀರ್ಥಿ ಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂ ಸೇವಿಸಲು ಬಹು ಭಕುತಿಲಿ |ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |ಕಾಲದೊಳಗುಪನಯ ನವಂ ಮಾಡಿ ಸರ್ವ ವೇದ ವೇಂದಾಗ ಪಾರಂಗತರು ಐಜಿ ಆಚಾರ್ಯರಲಿ ಬಿಡಲು 1 ಕುಶಲತೆಯು ಮತ್ತೆ ಸೌಶೀಲ್ಯ ಗುಣನಿಧಿ ಎನಿಪಶಿಷ್ಯನಿಗೆ ಸಚ್ಛಾಸ್ತ್ರ ಪಾರಂಗತನು ಎನಿಸಿಒಸೆದು ದ್ವಿತಿಯಾಶ್ರಮಕೆ ಚೋದಿಸಿ ಕಳುಹಲವ ಗೃಹಧರ್ಮ ಸ್ವೀಕರಿಸುತ |ಎಸೆವ ಕೀರ್ತಿಲಿ ಮೆರೆದು ಶಿಷ್ಯರಿಗೆ ಶಾಸ್ತ್ರ ಬೋ-ಧಿಸುತಲಿರಲು ಸತ್ಸಂತಾನವಂತರಾಗುತಎಸೆವ ಹಂಸತೂಲಿಕ ತಲ್ಪದೊಳು ಪವಡಿಸಿರೆ ಅಪರಾಹ್ನ ರೋಗಾರ್ತರು 2 ಪತಿ ಪುರಂದರ ಸುದಾಸಾರ್ಯ ನುಡಿದುದನುಅಂತೆ ಮಂಚ ಬಾರದು ಮಡದಿ ಬಾರಳು ಎಂಬಪಿಂತಿನ್ವಚನವ ಕೇಳಿ ಚಿಂತಿಸುತ್ತಿರೆ ತಮಗೆ ಜಾತಿ ಸ್ಮøತಿ ಒದಗುತಿರಲು 3 ಘನವಾದ ಐಶ್ವರ್ಯ ಸತಿಸುತರು ಬಂಧುಗಳತೃಣಕೆ ಸಮ ತಿಳಿಯುತ್ತ ಜಯ ಗುರೂ ಹೃದ್ಗತವಅನು ಸರಿಸೆ ಅಜ್ಞಾತ ಬಗೆಯಲಿರುತಿಹನೆಂದು ವೈರಾಗ್ಯವನೆ ಪೊಂದುತ ||ಮನೆಯಿಂದ ಹೊರ ಹೊರಟು ಅನತಿ ದೂರವಸಾಗೆಘನ ಸರ್ಪ ರೂಪದಿಂ ತೋರಿ ಕೊಳೆ ಜಯತೀರ್ಥ ಮುನಿವರ್ಯ ಹೃದ್ಗತವ ತಿಳಿದು ವಸುಮತಿ ವ್ಯರ್ಥ ಸಂಚರಣೆ ಸಂತ್ಯಜಿಸುತ 4 ಶೃತಿ ಸ್ಮøತಿಗೆ ಸಮ್ಮತವು ದಶಮತಿಯ ಸಮಯವೆನುತತಿ ಹಿತದಿ ಪ್ರವಚನೆಗೆ ಪ್ರೇರಿಸಿಹ ಗುರುಮತವ ಸತ್ಕರಿಸಿ ಕಾರುಣ್ಯ ಕೊಂಡಾಡಿ ಸಾಧಿಸಲು ತೃತಿಯಾಶ್ರಮವನು ||ಹಿತದಿ ಕೈಕೊಂಡು ಮಲವ ತಾನಪಹರಿಪಸರಿತೃತಟದಲಿ ಇರುವ ಮನುವಳ್ಳಿ ಪಳ್ಳಿಯಲಿ ನೆಲಿಸುತಲಿ ವಿಹಿತ ಕರ್ಮಾಚರಿಸಿ ಸಿರಿಮತ್ಸು ಮಧ್ವ ವಿಜಯವ ಪಠಿಸುತಿಹರು 5 ಸಂಚಿತ ಸಿರಿ ವಿಷ್ಣುತೀರ್ಥರೆಂಬಂಕಿತದಿ ಮೆರೆಯುತಿಹರು 6 ಭಾಗವತ ಸಾರದುದ್ಧಾರವನುಮುಂತಾದ ಮುಕುತಿ ಸತ್ಪಂಥಗಳ ಬೋಧಿಪಗ್ರಂಥಗಳ ರಚಿಸಿ ಸುಜನೋದ್ಧಾರವನೆ ಗೈದು ಶೋಭಿಸುವರವನಿಯಲ್ಲಿ 7 ಲಕ್ಷುಮಿಯು ನರೆಯಣರನುಗ್ರಹವನೇ ಪಡೆದುದಕ್ಷಿಣದಿ ಬದರಿಕಾಶ್ರಮವೆನುತಿರೆ ಮೆರೆವತ್ರಕ್ಷ್ಯ ಮೋದೇಶ್ವರ ಪುರದಲಿ ನೆಲಿಸಿ ನೂರೆಂಟು ಸಲ ಸುಧೆ ಪ್ರವಚಿಸುತಲಿ ||ಕುಕ್ಷಿಯೊಳಗುಳ್ಳ ಸು ಕ್ಷೇತ್ರಗಳ ಸಂಚರಿಸಿ ಲಕ್ಷಿಸುತ || ಯೋಗ್ಯ ಜನಕುಪದೇಶ ಚರಿಸಲುಸ್ವಕ್ಷೇತ್ರಕೇ ಮರಳಿ ಕುಶಸರಿತು ತೀರದಲಿ ಪರ್ಣ ಶಾಲೆಯಲಿ ವಸಿಸಿ 8 ಕಾಲ ತಾ ತಿಳೀಯುತ್ತ ಶಿಷ್ಯಜನಕರಿವಿತ್ತು ಶಾಲಿವಾನ ಸಹಸ್ರ ಷಟ್ಯತೊತ್ತರವಷ್ಟಸಪ್ತತಿಯು ಮಾಘಾಸಿತ ಪಕ್ಷ ತ್ರಯೋದಶಿ ಸುಮೂಹೂರ್ತದಿ ||ಸುರರು ಭೂಸುರರೆಲ್ಲ ಜಯಘೋಷ ಗೈಯ್ಯುತಿರೆವರ ಮಹಾತ್ಮರು ಆಗ ಹೊಗಲು ವೃಂದಾವನವಪರಿಜನರು ಮುಳುಗಿದರು ದುಃಖ ಆನಂದ ಸಾಗರದಲದನೇನೆಂಬನು 9 ಅವತಾರಮಾರಭ್ಯ ಐದು ದಶ ವರ್ಷಗಳುಅವನಿಜನ ದೃಗ್ವಿಷಯರೀ ಮಹಾತ್ಮರು ತಾವುಅವಧೂತ ವೇಷದಿಂ ಭವನ ಪಾವನವೆನಿಸಿ ಪಿಂತೆ ಶುಕಮುನಿಯಂದದಿ ||ಪವನ ಮತ ಶರನಿಧಿಗೆ ಶಶಿಯು ಇಪ್ಪತ್ತೆಂಟುಪವಿತರ ಸುಲಕ್ಷಣ ಸುತನುವಿಂದುರೆ ಮೆರೆದುಅವನಿಸುರ ಶಿಕ್ಷಣ ಸದುಪದೇಶನುಷ್ಠಾನದಿಂ ಗೈದ ಕೀರ್ತಿಯುತರು 10 ಇವರ ನಾಮಸ್ಮರಣೆ ಕಲಿಮಲದ ಅಪಹರಣೆಇವರ ಸೇವೆಯ ಫಲವು ಸರ್ವಾಮಯ ಹರವುಇವರುನುಗ್ರಹವಿರಲು ವಾದಿನಿಗ್ರಹವಹುದು ಇದಕೆ ಸಂಶಯ ಸಲ್ಲದು ||ಇವರಿಹರು ಸುರತರುವಿನಂದದಲಿ ಶರಣರಿಗೆಇವರೆ ಚಿಂತಾಮಣಿಯು ಸರ್ವ ಭಯ ಹರಿಸುವರು ಇವರ ಗುಣಕೊಂಡಾಡಿ ಇವರೊಲಿಮೆ ಅರ್ಜಿಸಲು ಸರ್ವಕಾಮವು ಲಭ್ಯವು 11 ಸರ್ವಕ್ಷೇತ್ರಾಧಿಕದಿ ಭೂವರಹ ನಿಲ್ಲಿರುವಸರ್ವಭಯ ನಾಶನಕೆ ನರಹರಿಯು ಅರಿರೂಪಸರ್ವಭಕ್ತರ ಭೀಷ್ಟ ವರ್ಷಣಕೆ ಗೋಪಾಲಕೃಷ್ಣರೂಪದಿ ಇರುವನು ||ಇವರ ವೃಂದಾವನದೊಳೀ ಪರೀ ಹರಿರೂಪಪವನ ರೂಪಗಳಿಹವು ಶಿರದೊಳಗೆ ಜಯ ಮುನಿಯುಸರ್ವಋಷಿ ದೇವತೆಗಳಿಹರು ವೃಕ್ಷರೂಪದಿ ಈ ಪವಿತರ ಕ್ಷೇತ್ರದಿ 12 ಭಾಗವತ ನಿಷ್ಠಾತರೆ ||ನಮೊ ನಮೋ ಭಕ್ತಜನ ಕಾಮಧುಕ್ ಭವ್ಯಾತ್ಮನಮೋ ಶ್ರೀ ಮದಾನಂದ ಮುನಿಚರಣ ಮಧುಪರೆನಮೊ ಗುರೂ ಗೋವಿಂದ ವಿಠಲ ಪಾದಾಶ್ರಿತರೆ ನಮೊ ವಿಷ್ಣುತೀರ್ಥ ಪಾಹಿ ||
--------------
ಗುರುಗೋವಿಂದವಿಠಲರು
ಶ್ರೀ ವೆಂಕಟೇಶ ಸ್ತೋತ್ರ(2) ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ ಸಾಕಾರರೂಪ ತೋರೋ ಯಾಕಿಂತು ನಿರ್ದಯವು ಈ ಕುಮತಿ ಮೇಲಿನ್ನು ನೀ ಕರುಣಿಸೀಗ ಕಾಯೊ 1 ವಾಕು ಲಾಲಿಸುತ ನೀ ಬೇಕೆಂದು ಬೆಟ್ಟದಲ್ಲಿ ಲೋಕದ ಜನರನ್ನು ಸಾಕುತ್ತ ನಿಂತಿರುವ ಆಕಳ ಕಾಯ್ದ ದೇವಾ 2 ಕನಸು ಮನಸೀನಲ್ಲಿ ವನಜಾಕ್ಷ ನಿನ ದಿವ್ಯ ಘನರೂಪವನ್ನೆ ತೋರೊ ಅನುರಾಗದಿಂದ ಸಲಹೋ 3 ವೆಂಕಟಗಿರಿನಿಲಯ ಮಂಕುಮತಿಯ ಬಿಡಿಸಿ ಸಂಕಟಗಳನೆ ಹರಿಸೊ ಶಂಖಚಕ್ರಾಂಕಿತನೆ ಪಂಕಜಪಾದ ಮನ ಪಂಕಜದೊಳಗೆ ತೋರೊ 4 ಪದ್ಮಾಕ್ಷ ಪದ್ಮಮುಖ ಪದ್ಮಾನಾಭನೆ ನಿನ್ನ ಪದ್ಮ ಪಾದವೆ ಗತಿಯೊ ಪದ್ಮಾವತಿಪ್ರಿಯ ಪದ್ಮಹಸ್ತಾನೆ ನಿನ್ನ ಪದ್ಮಾದಿ ನಿನ್ನ ತೋರೊ 5 ಸೃಷ್ಟಿ ಸ್ಥಿತಿ ಲಯಕೆ ಕರ್ತಾನೆ ಎನ್ನ ಮನ ದಿಷ್ಟಾವ ಸಲಿಸಿ ಕಾಯೋ ಥಟ್ಟಾನೆ ಮನಕೆ ತೋರೊ 6 ತತ್ವಾಧಿಪತಿಗಳೊಳು ವ್ಯಾಪ್ತಾನಾಗಿರುತಿರ್ದು ಕರ್ಮ ಮಾಳ್ಪೆ ಎತ್ತಾ ನೋಡಿದರು ಸುರರರ್ಥಿಯಿಂ ಸ್ತುತಿಸುವರೊ ನಿತ್ಯಾಮೂರುತಿ ನೀ ಎಂದೂ 7 ನಿಗಮಾದಿ ವೇದದಿಂ ಬಗೆಬಾಗೆ ಸ್ತುತಿಸಿ ಕೊಂ ಬಗಣೀತ ಮಹಿಮ ದೇವಾ ಖಗರಾಜ ವಾಹನನೆ ನಗೆಮೊಗದ ಚೆಲುವ ಪ ನ್ನಗಶಾಯಿ ಸಲಹೊ ಎನ್ನ 8 ನಿತ್ಯಾ ತೃಪ್ತಾನೆ ಹರಿ ನಿತ್ಯಾ ಪ್ರಾಪ್ತಾನೆ ಸಿರಿ ನಿತ್ಯಾ ವಿಯೊಗಿ ದೇವಾ ನಿತ್ಯ ನಿರ್ವೀಕಾರ ನಿತ್ಯಾ ಕಲ್ಯಾಣಪೂರ್ಣ 9 ಜೀವಾಂತರಾತ್ಮಕನೆ ಜೀವಾ ನಿಯಾಮಕನೆ ಜೀವಾದಿ ಭಿನ್ನ ದೇವಾ ಜೀವೇಶ ಜೀವರಿಂ ಸೇವ್ಯಾನೆಂದೆನಿಪ್ಪೆ ಜೀವಾರ ಕರ್ಮಕರ್ತ 10 ಸತ್ವಾರಜೋತಮದಿ ನಿತ್ಯಾ ಸೃಷ್ಟೀಸುತಲಿ ವ್ಯಾಪ್ತಾನಾಗಿರುವೆ ಜಗದಿ ಸತ್ಯಾಮೂರುತಿ ಜಗತ್ಕರ್ತಾ ಕಾರಣರೂಪ ಸತ್ಯಾಧಿಪತಿಯ ವಂದ್ಯ 11 ಆದಿಯಲಿ ಅಸುರ ತಾ ವೇದ ಕದ್ದೊಯ್ಯೆ ಛೇದೀಸಿ ತಮನ ಕೊಂದೂ ನಿಗಮ ತಂದಾದರದಿ ಸುತಗಿತ್ತೆ ಶ್ರೀಧರನೆ ಮಚ್ಛರೂಪಿ 12 ಸುರರೆಲ್ಲ ಕಂಗೆಟ್ಟು ಮೊರೆ ಇಡಲು ನಿನ್ನ ಬಲು ಕರುಣೆಯಿಂದಾಲಿ ಬಂದೂ ಗಿರಿ ಎತ್ತಿ ಅಮೃತವ ಸುರರೀಗೆ ತಂದಿತ್ತ ವರ ಕೂರ್ಮರೂಪಿ ಸಲಹೊ 13 ಆದಿಹಿರಣ್ಯಾಕ್ಷ ಮೇದಿನಿಯ ಕದ್ದೊಯ್ಯೆ ಛೇದೀಸಿ ಅವನ ಕಾಯಾ ಆದರಿಸಿ ಧರಣಿಯನು ಆ ದಿವಿಜರಿಗೆ ಇತ್ತೆ ವರಾಹ ಕಾಯೊ 14 ದುಷ್ಟಾದಾನವ ಸುತನು ಅಟ್ಟೂಳಿಪಡಿಸುತಿರೆ ಸೃಷ್ಟೀಶ ಪೊರೆಯೊ ಎನಲು ಪುಟ್ಟಿ ನೀ ಸ್ಥಂಭದಲಿ ಕುಟ್ಟೀ ಅಸುರನನ್ನು ಪುಟ್ಟಾನ ಕಾಯ್ದ ನೃಹರಿ15 ಇಂದ್ರಾಲೋಕಾವನು ಬಲೀಂದ್ರಾನಾಕ್ರಮಿಸಿರಲು ಪೇಂದ್ರಾ ನೀನಾಗಿ ಬಂದೂ ಇಂದ್ರಾರಿಗೇಸುತಲ ಚಂದಾದಿತ್ತು ನೀ ನಿಂದ್ರಾಗೆ ಸ್ವರ್ಗವಿತ್ತೆ 16 ಪಿತನ ಆಜ್ಞೇಗೆ ಪತಿವ್ರತೆ ಮಾತೆ ಶಿರವಳಿದು ಮತಿವಂತನೆನಿಸಿ ಮೆರೆದೇ ಖತಿಯಿಂದ ಕ್ಷತ್ರಿಕುಲ ಹತಗೈಸಿ ಮೆರೆದ ಅ ಪ್ರತಿ ಭಾರ್ಗವಾನೆ ಕಾಯೋ 17 ಸೇತು ಬಂಧನಗೈದು ಖ್ಯಾತ ರಾವಣನೊರಸಿ ಸೀತೇಯ ತಂದ ರಾಮಾ ಮಾತೆ ವಚನಕಾಯ್ದೆ ವಾತಾತ್ಮಜನ ಪೊರೆದೆ ಪ್ರೀತಿಯಿಂದೆನ್ನ ಕಾಯೊ 18 ವನದಲ್ಲಿ ನಿಂತು ಘನಧ್ವನಿಯಿಂದ ಕೊಳಲೂದಿ ವನಜಾಕ್ಷಿಯರನೆ ಕಾಯ್ದೆ ಮುನಿವಂದ್ಯ ಶ್ರೀ ಕೃಷ್ಣ ಮುನಿನಾರದಗೊಲಿದೆ ಸನಕಾದಿ ವಂದ್ಯ ಸಲಹೋ 19 ತ್ರಿಪುರಾಲಲನೆಯಾರ ವ್ರತಭಂಗವನೆಗೈದು ನಿಪುಣಾನೆಂದೆನಿಸಿ ಮೆರೆದೆ ಬುದ್ಧ ತ್ರಿಪುರಾರಿ ವಂದ್ಯ ಹರಿ ಕೃಪೆಮಾಡಿ ಸಲಹೊ ಎನ್ನ 20 ಕಲಿಬಾಧೆ ವೆಗ್ಗಳಿಸೆ ಛಲದಿಂದ ದುಷ್ಟರನು ತಲೆಯಾ ಚೆಂಡಾಡಿ ಮೆರೆದೆ ಬಲವಂತ ಹಯವೇರಿ ಕಲಿದೈತ್ಯರನು ಕೊಂದೆ ನಳಿನಾಕ್ಷ ಕಲ್ಕಿ ಕಾಯೊ 21 ಭಕ್ತಾವತ್ಸಲನಾಗಿ ಮುಕ್ತಾಜೀವರ ಕಾಯ್ವೆ ಶಕ್ತಾವಂತನೆ ಸ್ವಾಮಿ ಮುಕ್ತೀದಾಯಕ ನೀನೆ ಮುಕ್ತಾಶ್ರಯನು ನೀನೆ ಮುಕ್ತಾರಿಗೊಡೆಯ ನೀನೆ 22 ಬಂದೇಯೊ ಭಕ್ತರನು ಚಂದಾದಿಂದಲಿ ಪೊರೆಯ ಬೇ ಕೆಂದೂ ನೀ ನಾಗಗಿರಿಗೆ ನಂದಾಕಂದಾನೆ ಹರಿ ಇಂದಿರೆಯರಸ ಬಹು ಸುಂದಾರ ಶ್ರೀನಿವಾಸ23 ಹಿಂದೇ ಮಾಡೀದ ಪುಣ್ಯ ಬಂದೂ ತಾ ಒದಗಿಗೋ ವಿಂದಾನ ಗಿರಿಯ ಯಾತ್ರೇ ಸಂದೀಸೆ ವೇಂಕಟನ ಸಂದಾರುಶನದಿಂದ ದುರಿತ 24 ಜಯ ಗುರುಗಳಂತರ್ಯ ಜಯ ನಾಗಶಯನ ಹರೆ ಜಯ ವೆಂಕಟಾದ್ರಿನಿಲಯ ಜಯ ತಂದೆ ಮುದ್ದುಮೋಹನ ದಾಸವರದ ಜಯ ಪದ್ಮನಾಭ ಜಯ ಭೋ 25 ಸ್ವಾಮೀ ಕಾಸಾರದತಿ ಪ್ರೇಮಾದಿ ನೆಲಸಿ ಸುರ ಕಾಮೀತವೀವ ಪ್ರಭುವೇ ಸ್ವಾಮಿ ಶ್ರೀ ವೇಂಕಟನೆ ನೇಮಾದಿಂದಲಿ ಭಜಿಪೆ ಕಾಮೀತವೀಯೊ ದೇವಾ 26 ಇಷ್ಟೂ ಬಿನ್ನಪವನ್ನು ಕೃಷ್ಣಾಮೂರುತಿ ಕೇಳಿ ಕಷ್ಟಾವ ಬಿಡಿಸಿ ಕಾಯೋ ದಿಟ್ಟಾ ಶ್ರೀ ಗೋಪಾಲಕೃಷ್ಣವಿಠ್ಠಾಲಾನೆ ಶ್ರೇಷ್ಠಾ ಶ್ರೀ ಗುರುವರದನೇ 27
--------------
ಅಂಬಾಬಾಯಿ