ಒಟ್ಟು 1859 ಕಡೆಗಳಲ್ಲಿ , 108 ದಾಸರು , 1428 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣದೆ ಸುಳ್ಳೆ ಬಡಿದಾಡ್ವಿರ್ಯಾಕಣ್ಣ ನಾನ್ಹೋಗತನ ನಿಮಗೆ ಮುಕ್ತಿಯಿಲ್ಲಣ್ಣ ಪ ಪ್ರಾಚೀನ ಹಿರಿಯರ ಸಾಕ್ಷಿಕೊಡುವೆ ನಿಮಗೆ ಜ್ಞಾನದಿಂ ಕೇಳಿ ತಿಳೀಬಹುದಣ್ಣ ಅ.ಪ ಘನವಂತ ಸತ್ಯವ್ರತ ಭೃಗು ಗಾರ್ಗೆಯರು ಇನಿಸುತಿಳಿಯದೆ ವಿಶ್ವಾಮಿತ್ರನು ಘನಶ್ರಮಬಟ್ಟರು ಮುನಿ ವರದನಾರದರು ದಿನದಿನ ತ್ರಿಣಿಯರು ದರ್ಶನಿದ್ದವರು ಜನಕ ರಾಜರ್ಷಿಯು ಮುನಿ ಅತ್ರಿಮಹಿಮರು ನಾನ್ಹೋಗತನ ಮುಕ್ತಿ ಸಿಗದೆ ಬಳಲಿದರು 1 ಸನಕಾದಿ ಸಾನಂದ ಮಹರ್ಷಿಗಳು ಮುನಿಶ್ರೇಷ್ಠ ಬಲ್ಲಿದ ವಾಲ್ಮೀಕಾದಿಗಳು ಶೌನಕಶುಕಭರದ್ವಾಜಮುನಿಗಳು ಗಣನೆಯಿಲ್ಲದ ಮಿಕ್ಕ ಪತಿತಮೋಕ್ಷಿಗಳು ಪುರಂದರ ಜ್ಞಾನಿಗಳಿವರ್ಗೆಲ್ಲ ನಾನ್ಹೋಗತನ ಮುಕ್ತಿ ಆಗಿಲ್ಲ ಕೇಳೋ 2 ನಾನ್ಹೋಗದದಕಜ ಕಳಕೊಂಡ ಶಿರವ ನಾನು ಹೋಗಿದ್ದರೆ ಅಳಿತಿದ್ದಿಲ್ಲೆಲವೋ ಖೂನವಿಲ್ಲದೆ ಕೂಗಿ ಕೆಡಬೇಡಿ ನೀವು ಭವ ಹೊಂದಿರಿ ಗೆಲವು ನಾನ್ಹೋದಮೇಲೆ ಜಾನಕಿ ಶ್ರೀರಾಮ ಮಾಣದೆ ಕೊಡುವನು ಮುಕ್ತಿ ಸಂಪದವ 3
--------------
ರಾಮದಾಸರು
ಕಾಯೊ ಕಪಿವರ | ಕಾಯಜವೈರಿ ವಿನಮಿತ ಪ ಅನಿಲಜ ಮಹಾಚಾರುಚರಿತ | ಅನಘುನೆ ಕರುಣನಮಿಪೆ ಸದಾ 1 ರಘುಜನ ದಿವ್ಯಪಾದ ಭಜಕಾ | ಅಗಣಿಕ ಸುಗಣ ಸ್ಮರಿಪೆ ಸದಾ 2 ಶಾಮಸುಂದರಗೆ ಧಾಮಾ ನೆಂದೆನಿಪ ಭೀಮವೃಕೋದರ ಸುಖತೀರಥನೆ 3
--------------
ಶಾಮಸುಂದರ ವಿಠಲ
ಕಾಯೊ ಕರುಣಾಳು ಅಂಬುದಛಾಯ ಬಿನ್ನಹ ಕೇಳು ತಾಯೊಳು ಶಿಶು ಗುಡಪಾಯಸಗೋಸುಗ ಬಾಯತೋರ್ಪುದು ನ್ಯಾಯವೇ ಪೇಳು ಪ. ಭೂತಿದೇವಿಯ ರಮಣಾ ನೃಪ ಸಂಪ್ರೀತಿ ಪೂರ್ತಿ ಕರಣಾ ಚಾತೂರ್ಯ ಕರಣಾ ದಿವಿಜಾರಾತಿ ಶಿರೋಹರಣಾ ಮಾತು ಮಾತಿಗೆ ವಿಖ್ಯಾತಿಗೊಳಿಪ ತೆರ ನೀ ತಿಳಿಯೇಯ ಖಗಕೇತನ ಶುಭದಾ 1 ಮಧುಮಯ ಮೃದುಭಾಷಾ ಮಧುಹರ ಮಧುಕರ ಮುಖಭೂಷಾ ಅಧರೀಕೃತ ತೋಷಾ ದಾನವ ಮದಜಲನಿಧಿಶೋಷಾ ಮಧುರಾ ಪಟ್ಟಣ- ಕಧಿಪನೆಂದೆಸೆವ ಬುಧರಿಪು ಕಂಸನ ಸದೆದ ಪರೇಶಾ 2 ಶ್ರೀಪತಿ ಸರ್ವೇಶಾ ದುರಿತಮಹಾಪದ್ಗಣನಾಶಾ ತಾಪೋನ್ಮಥನೇಶಾ ಪಾಲಿಸು ಭೂಪ ಶೇಷಗಿರೀಶಾ ನೂಪುರ ಕಿಂಕಿಣಿಕ್ವಣಿತ ಚರಣ ಲ- ಕ್ಷ್ಮೀ ಪರಿರಂಭಿತ ಪರಮಾನಂದದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯೋ ಪ್ರಾಣೇಶ ಕೀಶಕುಲೇಶ ವಾಯುಸುತನೆಂದು ಮೆರೆವ ಜೀವೇಶ ಪ ಅಂಜನಾದೇವಿಯೊಳ್ ಜನಿಸಿಕೊಂಡಿರುವಿ ಅಂಜದೆ ಲಂಕೆಗೆ ಬೆಂಕಿ ಹಚ್ಚಿರುವಿ ಸಂಜೀವನವ ತಂದು ಕಪಿಗಳನುಳಿಸಿದಿ ಕಂಜಾಕ್ಷಿ ಸೀತೆಗುಂಗುರವ ತಂದಿತ್ತೆ 1 ಕುಂತಿದೇವಿಯ ಗರ್ಭದೊಳಗುದ್ಭವಿಸಿದಿ ಪಾರ್ಥರೊಳ್ನೀನಗ್ರಗಣ್ಯನೆಂದೆನಿಸಿ ಪಂಥದಿ ಮಗದಾಧಿಪತಿಯ ಸಂಹರಿಸಿ ಕಾಂತೆಯ ತಲೆಯ ಕೂದಲನೆ ಕಟ್ಟಿಸಿದಿ2 ಪಾಜಕ ಕ್ಷೇತ್ರದೊಳ್ ನೀನವತರಿಸಿ ರಾಜತಾಸನದಿ ಶ್ರೀಕೃಷ್ಣನನಿರಿಸಿ ರಾಜೇಶ ಹಯಮುಖ ಕಿಂಕರನೆನಿಸೀ ಮೂಜಗದಲಿ ಶ್ರೇಷ್ಠಗುರು ನೀನೆಂದೆನಿಸಿ 3
--------------
ವಿಶ್ವೇಂದ್ರತೀರ್ಥ
ಕಾರುಣ್ಯ ಮೂರುತಿ ಕರುಣಾಸಾಗರ ಪ ಘೋರದುರಿತ ಸಂಹಾರ ಜಗತ್ಕರ್ತ ಮಾರ ಜನಕ ಶ್ರೀ ಮನೋಹರನ ವಾರಿಜಾಂಬಕ ಕೃಷ್ಣ ವಾರಧಿ ಶಯನನ ಪಾರಿಮಾರ್ಥಿಕ ನರಿತು ಪರಮ ಹರುಷದಿಂದ 1 ಕುಂಭಿನೀ ಪತಿರಾಮ ಕೋದಂಡಧರ ಗುಣ ಗಂಭೀರ ಪುರುಷ ಶ್ರೀ ಘನ ಮಹಿಮನ ಶಂಬರಾರಿಯ ಕೊಂದ ಶಿವನ ರಕ್ಷಿಸಿದಂಥ ಕಂಬು ಕಂಧರ ಕನಕಾಂಬರ ಭೂಷಣನಾ 2 ಅಗಣಿತ ಚರಿತ ಅನಂತ ಅವತಾರನ ನಿಗಮಗೋಚರ ವಿಷ್ಣು ನಿಜ ನಾಮವು ಬಗೆ ಬಗೆಯಲಿ ಅತಿ ಭಕುತಿಯಿಂದಲಿ ಜಯ ಜಗದೊಡೆಯ ಹೆನ್ನ ವಿಠ್ಠಲನ ಜಿವ್ಹದಿ 3
--------------
ಹೆನ್ನೆರಂಗದಾಸರು
ಕಾರ್ತಿಕೇಯ ಮಹಾಸೇನ ನಿಜ ಭೃತ್ಯರೊಳಾಗು ಪ್ರಸನ್ನ ಪ. ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ- ನಿತ್ತು ಕಾಯೊ ಷಡ್ವದನ ಅ.ಪ. ತಂದೆ ತಾಯಿ ಕುಲಸ್ವಾಮಿ ಹರಿ- ಯೆಂದು ಭಜಿಸುವೆನು ಪ್ರೇಮಿ ಸ್ಕಂದನಾಮಕ ನೀನಂತರ್ಯಾಮಿ ಸುಂದರ ಮಯೂರಗಾಮಿ 1 ಪಾರ್ವತಿ ಶಿವಸಂಜಾತ ಪರಿ- ಪಾಲಿತ ಸುಜನವ್ರಾತ ಸರ್ವಗೀರ್ವಾಣ ಸೇನಾಧ್ಯಕ್ಷ ಸರ್ವೋತ್ತಮ ಹರಿಪಕ್ಷ2 ತಾರಕದ್ಯೆತ್ಯಸಂಹಾರ ಸುವಿ- ಚಾರೈಕಪರಾಧಾರ ಪ್ರಾರಂಭಗೈದ ಕಾರ್ಯ ಸಫಲಿಪುದು ಭಾರ ನಿನ್ನದು ರಣಧೀರ 3 ಪಾವಂಜಪುರನಿವಾಸ ನಃ ಪಾತು ಶಿವಗಣಾಧೀಶ ದೇವ ಲಕ್ಷ್ಮೀನಾರಾಯಣದಾಸ ಪಾವನಚರಿತ ವಿಲಾಸ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಾರ್ತಿಕೇಯ ಮಹಾಸೇನ ನಿಜ ಭೃತ್ಯರೊಳಾಗು ಪ್ರಸನ್ನಪ. ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ- ನಿತ್ತು ಕಾಯೊ ಷಡ್ವದನಅ.ಪ. ತಂದೆ ತಾಯಿ ಕುಲಸ್ವಾಮಿ ಹರಿ- ಯೆಂದು ಭಜಿಸುವೆನು ಪ್ರೇಮಿ ಸ್ಕಂದನಾಮಕ ನೀನಂತರ್ಯಾಮಿ ಸುಂದರ ಮಯೂರಗಾಮಿ 1 ಪಾರ್ವತಿ ಶಿವಸಂಜಾತ ಪರಿ- ಪಾಲಿತ ಸುಜನವ್ರಾತ ಸರ್ವಗೀರ್ವಾಣ ಸೇನಾಧ್ಯಕ್ಷ ಸರ್ವೋತ್ತಮ ಹರಿಪಕ್ಷ 2 ತಾರಕದ್ಯೆತ್ಯಸಂಹಾರ ಸುವಿ- ಚಾರೈಕಪರಾಧಾರ ಪ್ರಾರಂಭಗೈದ ಕಾರ್ಯ ಸಫಲಿಪುದು ಭಾರ ನಿನ್ನದು ರಣಧೀರ 3 ಪಾವಂಜಪುರನಿವಾಸ ನಃ ಪಾತು ಶಿವಗಣಾಧೀಶ ದೇವ ಲಕ್ಷ್ಮೀನಾರಾಯಣದಾಸ ಪಾವನಚರಿತ ವಿಲಾಸ 4
--------------
ತುಪಾಕಿ ವೆಂಕಟರಮಣಾಚಾರ್ಯ
ಕಾರ್ತಿಕೇಯನ ಮಾಡೋ ನೀ ಧ್ಯಾನ ಪ ನೀರಜ ನಯನನ ತಾರಕ ಮಂತ್ರನ ಮಾಡೋ ನೀ ಧ್ಯಾನ 1 ನಿಗಮಗಳಿಗೆಟಕದ | ಜಗದೇಕ ದೇವನ ಅಗಣಿತಮಹಿಮನ | ಮಾಡೋ ನೀ ಧ್ಯಾನ 2 ನಿತ್ಯಾನಂದನ | ಭೃತ್ಯರ ಪೊರೆವನ ಸತ್ಯ ಸ್ವರೂಪನ | ಮಾಡೋ ನೀ ಧ್ಯಾನ 3 ದುಷ್ಟ ಖಳರ ಎದೆ | ಮೆಟ್ಟಿ ಶಿಕ್ಷಿಸುವನ ಕುಷ್ಠ ವಿನಾಶನ | ಮಾಡೋ ನೀ ಧ್ಯಾನ 4 ದಾಸರ ಕಾವ ಪಾವಂ | ಜೇಶನ ಸ್ಕಂದನ ಭೂಸುರ ಪ್ರೀಯನ | ಮಾಡೋ ನೀ ಧ್ಯಾನ 5
--------------
ಬೆಳ್ಳೆ ದಾಸಪ್ಪಯ್ಯ
ಕಾಲ ಬಂದಿತೋ ಬಂದ ಭವದೊಳು ಚಿಂತೆಯೊಳಗೆ ದಿನ ಸಂದಿತು ಪ ತುಪ್ಪ ಪಣಕೆ ಸೇರು ಉಪ್ಪೆಂಟು ಸಿದ್ದೆಯು ಮುಪ್ಪಾಗ ಕೊಂದೆ ಕೊಳಗಬತ್ತ ಸೊಪ್ಪ ಪಣಕೆ ಮಾರುವುದು ಅಚ್ಚೇರು 1 ವ್ಯಾಪಾರ ಸಾಪಾರ ತುಟ್ಟಿಸಿದರು ಕೊಳ್ಳ ಲಾಪರೆ ಫಣವೊಂದೆ ಕಟ್ಟಿಲ್ಲ ರೂಪಾಯಿ ಕೊಡೆ ಪುಲಿಚರಮ ಪಾಪವು ಸುಲತಾಗಿ ಪಣವ ಕೊಡೆಂಬರು 2 ದುಡ್ಡು ಕೊಡಲು ಬೇಡ ಬೈಯುತ ಆನೆ ಗೂಡಿನ (ಆನೆಗೊಂದಿ) ದುಡ್ಡತಾರೆಂಬರು ದೊಡ್ಡ ಮೊಳೆ ಪಣವಿದು ಸಣ್ಣ ಮೊಳೆಯಿಂಗಿ ? ಹೆಡ್ಡ ಹೋಗೆಂದದ್ದ ಬಿಸುಟರು ಫಣವ 3 ತಪ್ಪಿ ಹೇಳುವೆನೆ ನಮ್ಮಪ್ಪ ದುರ್ಭಿಕ್ಷವು ಎಪ್ಪತ್ತು ವರುಷ ಕೊದಗಿ ಬಂತು ಇಪ್ಪತ್ತು ವರುಷಕೀಕಾಲ ಬಂದಿದ್ದರೆ ಕನಿಷ್ಟಕ್ಕೆ ಗಣಿಸಿ ಸುಕ್ಷಾಮವ ಮರೆವೆನು 4 ಧಾರಣೆ ಪಾರಣೆ ಶಿವರಾತ್ರಿ ಹರಿದಿನ ಓರಂತೆ ಬಡವಗೆ ನೆಲೆಯಾಯಿತು ಕ್ಷೀರಾಬ್ದಿ ಶಯನ ಲಕ್ಷ್ಮೀನಾರಾಯಣನು ತನ್ನ ಸೇರಿದ ಜನರ ಕಣ್ಣಲಿ ನೋಡುತೊಲಿದ 5
--------------
ಕವಿ ಪರಮದೇವದಾಸರು
ಕಾಲ ವ್ಯರ್ಥ ಪ ಘನ್ನ ನಿರಯಕೆ ವೈವೋ ಸಾಧನವೋ ಗೋಪಾಲ ಅ.ಪ ಸುರರು ಬಲ್ಲರೈ ಚದುರ ತತ್ವೇಶಗಣ ಬಲ್ಲರಯ್ಯಾ ವಿಧಿಪಿತನೆ ನಿನ್ನ ಬಿಟ್ಟನ್ಯತ್ರ ಮನವಿರಲು ನಿಧನ ನೋವಿಗೆ ಮಿಗಿಲು ಪದುಮ ಮುಕ್ತರು ಸಾಕ್ಷಿ1 ಬಂಧಿಸಲು ನೀ ನಮ್ಮ ಬಿಡಿಸಿಕೊಂಬುವರುಂಟೆ ಅಂಧತಮಸಿನ ಭೋಗದಿಂದಾಹುದೊ ಸಿಂಧು ಚಿನ್ಮಯ ಕಾಯ ತಂದೆ ನಿನ್ನಯ ಕರುಣ ಉಂಬುವನೆ ಬಹುಧನ್ಯ 2 ಗೋ ಗೊಲ್ಲರಲಿ ಕರುಣ ಸುರಿದ ದೀನ ಬಂಧು ಭಾಗ್ಯಪಾಲಿಸು ಭಕ್ತಿಯೋಗವಿತ್ತು ರೋಗದಲಿ ಬಲು ನೊಂದೆ ಭಯವನ್ನು ಹೀರುವುದು ನಾಗತಲ್ಪ ಜಯೇಶವಿಠಲನೆ ಉದ್ಧರಿಸು 3
--------------
ಜಯೇಶವಿಠಲ
ಕಾಲ ಚಕ್ರವನೇರಿ ಭಾಸಿಪ ಬಾಲ ಸೂರ್ಯನ ವಂದಿಪೆ ಪ ಕಾಲ ರೂಪನೆ ಬಾಲ ಚಂದ್ರನೆ ಪೂಜಿಪೆ ಅ.ಪ. ಸೃಷ್ಟಿ ರೂಪನೆ ವೃಷ್ಟಿದಾಯಕ ಶ್ರೇಷ್ಠ ಭೂಮಿಯ ಪುತ್ರನೆ ಕಷ್ಟಹರ ಸುಜ್ಞಾನ ಮೂರುತಿ ಇಷ್ಟದಾಯಕ ಸೌಮ್ಯನೆ 1 ದೇವಗಣಗುರು ಕ್ಷೇಮದಾಯಕ ಜೀವವರ ಗುರು ಪಾಲಿಸೈ ದೇವಶುಕ್ರನೆ ಕಾವ್ಯರೂಪನೆ ಕಾವ್ಯ ಸೇವನೆ ಪೋಷಿಸೈ 2 ಪುಂಗವರ ಮಹಿಮಾಂಗ ಶನಿ ಸನ್ಮಂಗಳಾತ್ಮಕ ದೇವನೆ ಮಂಗಳವನೆಸಗೆಂದು ವಂದಿಪೆ ರಾಹುವೆ ವರಕೇತುವೆ 3 ಶ್ರೀನಿವಾಸನೆ ಪಾಲಿಸುವುದೆಂದೀ ನವಗ್ರಹ ಭಕ್ತಿಯಿಂಧೇನುನಗರ ಜನೇಶನೇವರ ವೇಂಕಟೇಶನೆ ಪೋಷಿಸೈ 4
--------------
ಬೇಟೆರಾಯ ದೀಕ್ಷಿತರು
ಕಾವ ಜನಕ ನೀನಿರುತಿರಲೆನಗಿ ನ್ನಾವ ಬಂಧುವು ಬೇಕೊ ಮಾಂಗಿರಿಯ ರಂಗ ಪ ದೇವ ನೀನಲ್ಲದೆ ಲಕ್ಷಜೀವಿಗಳಿದ್ದು ಈವ ಸೌಖ್ಯವು ಬೇಡ ಮಾಂಗಿರಿಯ ರಂಗ ಅ.ಪ ನಾರಿಯ ಮಾನಾಪಹಾರವ ಗೈದಾಗ ವೀರರೈವರು ತಮ್ಮ ಮೋರೆಯ ತೋರ್ದರೆ ನೂರುಮಂದಿ ವೇದಪಾರಂಗತರಿದ್ದು ಕ್ರೂರ ಕಾರ್ಯಂಗಳ ನಿಲಿಸಿದರೆ ರಂಗ 1 ಮೂವತ್ತುಮೂರುಕೋಟಿ ನಿರ್ಜರರಿದ್ದು ರಾವಣನೊಬ್ಬನ ಜೈಸಿದರೆ ಪಾವಕ ಹಸ್ತವನಿತ್ತ ಗಿರೀಶನ ದೇವಗಣೇಶ್ವರರುಳಿಸಿದರೇ 2 ಅರಕ್ಷಿತವಾದುದ ಸುರಕ್ಷಿತ ಗೈವೆ ಸುರಕ್ಷಿತವಾದುದಕ್ಷಯ ಗೈವೆ ನಿರಕ್ಷರಕುಕ್ಷಿಗೆ ಮೋಕ್ಷವ ನೀನೀವೆ ದುರಿತಕ್ಷಯ ಗೈದು ಪಾಲಿಸುವೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಸನಿತ್ತಿರಿ ಭರದಲಿ ಹಾಗದ ಕಾಸನಿತ್ತಿರಿ ಭರದಲಿ ಪ. ವಾಸುದೇವನ ದಯೆಯೆ ಸಾಕು ಕಾಸುಬೇಡಿದವರಲ್ಲ ನಾವ್ ಕೃಪಣರ ಕಾಸಮುಟ್ಟುವರಲ್ಲ ನಾವ್ ಅ.ಪ ಘನತೆಯೊಂದಿಹ ಧನಿಕರೆಂದು ಗಣಿಸಿಸಾರಿದೆವಿಲ್ಲಿಗೆ ಘನತೆಗೊಪ್ಪುವ ಬಗೆಯ ತೋರದೆ ಧನದ ಮೋಹದಿ ಮೆರೆದಿರೆ ನೀವ್ ಅಣುಗಿಯರೋಳ್ ಮುಳಿದಿರೇ 1 ಮಂದಿಯಿದಿರೋಳ್ ಮೌನದಿಂ ನೀ ವಿಂದು ಲೋಭದ ಮಂತ್ರದಿಂ ತಂದೆ ನಿಮ್ಮೀ ಒಂದು ಹಣವನು ಕೈಗೊಂಡು ನೀವೇ ನಲಿಯಿರಿ ಬಂಧು ಮಿತ್ರರನೊಲಿಸಿರಿ 2 ಭಳಿರೆ ನೀವೌದಾರ್ಯಗುಣದೊಳು ಬಲಿದರೆನ್ನಿಸಿ ಮೆರೆದಿರೆ ಜಲಜಲೋಚನ ಶೇಷಶೈಲನಿವಾಸನೊಲವಿಂ ಸಂತತಂ ನಲಿದು ಸುಖಿಸಿರಿ ಸಂತತಂ 3
--------------
ನಂಜನಗೂಡು ತಿರುಮಲಾಂಬಾ
ಕಿಂಕರರು ಗಣಪನ್ನ ಧ್ಯಾನಿಸಿ ಪ. ಪಾದ ಪಂಕಜವನೆ ನೆನೆಯುವುದು ಮನದೊಳು ಶಂಕರನ ಪ್ರಾಥಿಸುತ ಹರಿಯನಾತಂಕವಿಲ್ಲದೆ 1 ಪರಿ ಶಂಕೆಯಿಲ್ಲದೆ ಹರಿ ಮಹಿಮೆ ಪೊಗಳಲು 2 ಸರಸತಿಯ ಧ್ಯಾನಿಸಿ ನಿಮ್ಮ ಮಂಕಿನಜ್ಞಾನವನು ಕಳೆಯಲು ಪವಮಾನಗೆ ವಂದಿಸಿ 3 ಪಂಕಜಾಕ್ಷಿ ರಮಾದೇವಿ ಶ್ರೀ ಶ್ರೀನಿವಾಸನ ಪಾದ ಪಂಕಜವÀ ನೆನೆದು ಹರುಷದಿ 4 ಹರಿಕಿಂಕರು ಇರಿ ಎಂದರುಹಿದ ಪುರಂದರದಾಸರ ನೆನವೆನನುದಿನವೂ 5
--------------
ಸರಸ್ವತಿ ಬಾಯಿ
ಕೀರ್ತಿ ಕೊಂಡಾಡಲ್ವಶವಲ್ಲವ ಖ್ಯಾತಿ ಕಂಡು ಬೆರಗಾದೆನೆ ದೂತೆ ಪ. ಗಣನೆ ಇಲ್ಲದೆ ದ್ರವ್ಯ ಕೊಡುವೋನರಾಯಗೆ ಕ್ಷಣ ತೆರವಿಲ್ಲವೆಂಬೊ ಬಿರುದು 1 ಸಟಿ ಇಲ್ಲದೆ ದ್ರವ್ಯ ಕೊಡುವೋನು ರಾಯಗೆ ತೃಣ ತೆರವಾಗದೆಂಬೋ ಬಿರುದು 2 ಹಲವು ದಾನಗಳನ್ನ ಕೊಡುವೋನುರಾಯಗೆ ಹಲವು ಕೊಡುವೋನೆಂಬ ಬಿರುದು 3 ಲೆಕ್ಕವಿಲ್ಲದೆ ದಾನ ಕೊಡುವೋನು ಕೀರ್ತಿಸಲು ಶಕ್ಯವಿಲ್ಲ ಆತನ ಬಿರುದು4 ಮಿತಿ ಇಲ್ಲದೆ ದ್ರವ್ಯ ಕೊಡುವೋನು ಕೀರ್ತಿ ಅತಿಶಯವಮ್ಮ ಆತನ ಬಿರುದು 5 ಕರ ತೆರವಾಗದೆಂಬ ಬಿರುದು 6 ಕೃಷ್ಣಾರ್ಪಣೆಂತೆಂಬೋದು ರಾಯಗೆ ಇಷ್ಟಕರತೆರವಾಗದು7 ಅತ್ಯಂತ ಪ್ರೇಮ ಸೂಸುತ ರಾಯ ದಿವ ರಾತ್ರಿಯಲಿತತ್ವ ಕೇಳುತಲಿವ 8 ನಿದ್ರೆ ಇಲ್ಲವು ರಾಯಗೆ ಏನೇನುನಮ್ಮ ಮುದ್ದು ರಮೇಶ ನಂಫ್ರಿಯ ಧ್ಯಾನ 9
--------------
ಗಲಗಲಿಅವ್ವನವರು