ಒಟ್ಟು 385 ಕಡೆಗಳಲ್ಲಿ , 76 ದಾಸರು , 337 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಪಾಲಿಸು ಪರಮಕಾಯ ರಘುರನ್ನ ರಾಮನ ಪ್ರಿಯ ಗುರುಮಧ್ವರಾಯ ಪ.ಅಂಜನಿ ಆತ್ಮದಲಿ ಬಂದು ರಾಮನಪಾದಕಂಜವಿಡಿದೆ ಕಡಲ ಲಂಘಿಸಿದೆ ಗೋಷ್ಪದದಿಪಂಜು ಬೆಳಗಿದೆ ನಿಶಾಚರನ ಪಟ್ಟಣವಳಿದೆಕಂಜಾಕ್ಷಿಯಳ ತುಷ್ಟಿಗೈದೆ ಗಡಾಸಂಜೀವ ತಂದು ಕಪಿಬಲವ ರಕ್ಷಿಸಿದೆ 1ಕುರುಕುಲಾಧಮನು ಬಲುಸೊಕ್ಕಿ ಸಂಗರಭಟರನೆರಹಿ ಪಾರ್ಥರ ಬಲವ ಗೆಲುವೆನೆಂದವನ ಭರಮುರಿದೆ ಮಹರಥಿಕರೆದೆ ಹರಿದೆ ಅಸಹಾಯ ಶೂರಸರಿಯಾರು ನಿನಗಸಮಧೀರ ಭಾಪುಕರುಣಾಸಾಗರ ಉದಾರ ಅಜಪದದಧಿಕಾರ 2ಏಕವಿಂಶತಿಮಾಯಿ ರಚಿತ ಭಾಷ್ಯವ ಜರಿದೆಶ್ರೀಕಾಂತನ ನಾಮಾಮೃತವ ಭಕ್ತರಿಗೆರೆದೆಭೂಕನಕ ವಧು ವಿಷಯಕಾಂಕ್ಷೆಗಳ ಮೇಲೊದೆದೆಲೋಕಕೊಬ್ಬನೆ ಗುರುವೆ ಮೆರೆದೆ ವಿಶ್ವೇಶ ಪ್ರಸನ್ನವೆಂಕಟೇಶನಂಘ್ರಿವಿಡಿದೆ 3
--------------
ಪ್ರಸನ್ನವೆಂಕಟದಾಸರು
ಏನು ಮರುಳಾದೆಯೇ ಎಲೆ ರುಕ್ಮಿಣಿ |ಹೀನಕುಲ ಗೊಲ್ಲ ಶ್ರೀ ಗೋಪಾಲಗೆ ಪಹಾಸಿಕಿಲ್ಲದೆ ಪೋಗಿ ಹಾವಿನೊಳು ಪವಡಿಸಿದ |ಹೇಸಿಕಿಲ್ಲದೆ ಕರಡಿಯನುಕೂಡಿದ||ಗ್ರಾಸಕಿಲ್ಲದೆ ಪೋಗಿ ದಾಸನ ಮನೆಯಲುಂಡ |ದೋಷಕಂಜದೆಮಾನವಶಿರವ ತರಿದವಗೆ1ಕುಂಡಗೋಳಕರ ಮನೆ ಕುಲದೈವವೆನಿಸಿದನು |ಮಂಡೆಬೋಳಾದವರ ಮನೆದೈವವು ||ಹಿಂಡುಗೋವಳರೊಳಗೆ ಹಿರಿಯ ಗೋವಳನೀತ |ಭಂಡಾಟಗಾರನಿವ ಭುವನದೊಳಗೆಲ್ಲ 2ಒಬ್ಬರಲಿ ಪುಟ್ಟಿದನು ಒಬ್ಬರಲಿ ಬೆಳೆದನು |ಒಬ್ಬರಿಗೆ ಮಗನಲ್ಲ ಭುವನದೊಳಗೆ ||ಅಬ್ಬರದ ದೈವಸಿರಿ ಪುರಂದರವಿಠಲನ |ಉಬ್ಬುಬ್ಬಿ ಮರುಳಾದೆ ಉತ್ಸಾಹದಿಂದ 3
--------------
ಪುರಂದರದಾಸರು
ಏನೆಂದಳಯ್ಯ ಸೀತೆ |ನಿನಗೇನ ಮಾಡಿದಳೊ ಪ್ರೀತೆ ಪದಾನವನ ಪುರದೊಳಗೆ ದಾರಿಯನು ನೋಡುತಲೆ |ಧ್ಯಾನವನು ಮಾಡುತಿಹಳೊ ಹನುಮಾ ಅ.ಪಎಲ್ಲಿಂದ ಬಂದೆ ಹನುಮಾ - ನೀಯೆನ್ನ -ಕೇಳುಸೊಲ್ಲೆನ್ನ ಪ್ರೇಮ ||ವಲ್ಲಭನ ನೆನೆದರೆ ನಿಮಿಷ ಯುಗವಾಗುತಿದೆನಿಲ್ಲಲಾರೆನು ಎಂದಳೊ ಹನುಮಾ 1ದೇವರಾಯನ ಪಾದವ - ಎಲೆ ಕಪಿಯೆ -ದಾವಪರಿಯಲಿ ಕಾಂಬೆನೊ ||ರಾವಣನ ಶಿರವರಿದು ಲಂಕಪಟ್ಟಣವನೆಲ್ಲ |ಹವನವಮಾಡಿಸು ಎಂದಳೊ ಹನುಮಾ || 2ಅಂಜನಾತನಯ ಕೇಳೊ - ನೀ ಹೋಗಿ -ಕಂಜನಾಭನಿಗೆ ಪೇಳೊ ||ಕುಂಜರವಕಾಯ್ದು ಶ್ರೀಪುರಂದರವಿಠಲನ |ಪಂಜರದ ಗಿಣಿಯೆಂದಳೊ ಹನುಮಾ 3
--------------
ಪುರಂದರದಾಸರು
ಕಣ್ಣ ಮುಂದಿರೊ-ರಂಗ-ಕಣ್ಣ ಮುಂದಿರೊ ಪಪೂತನಿಯ ಮೊಲೆಯನುಂಡು |ವಾತಶಕಟಾದಿ ದೈತ್ಯರ ||ಫಾತಿಸಿದ ರಂಗ ನಿನ್ನ |ಪೋತತನಕಂಜುವೆನು 1ಕಡಹದ ಮರವನೇರಿ |ಮಡುವ ಧುಮುಕಿ ನೋಡಿ ||ಹೆಡೆಯ ತುಳಿದ ನಿನ್ನ |ದುಡುಕಿಗಂಜುವೆನು 2ಬಾಲೆಯರ ಮನೆಗೆ ಪೋಗಿ |ಹಾಲು-ಮೊಸರು ಕದ್ದು |||ಲೀಲೆ ಮಾಡದಿರಯ್ಯ |ಲೋಲಪುರಂದರವಿಠಲ3
--------------
ಪುರಂದರದಾಸರು
ಕರುಣಿಸಬಾರದೆ ಕಂಜನಾಭನೆ ಕೈಯ ಮುಗಿವೆನಯ್ಯಾ ಪ.ವರಫಣಿಗಿರಿ ಸುಸ್ಥಿರಮಂದಿರ ಶ್ರೀಗುರುಜನಾರ್ದನಾಮರಗಣ ಪಾಲಕಅ.ಪ.ಅಪರಾಧಗಳಾಲೋಚಿಸುವರೆ ಸರೀ-ಸೃಪರಾಜನಿಗಳವೆಕೃಪೆಯಿಂದಲಿ ಸಂರಕ್ಷಿಸದಿದ್ದರೀ-ಯಪಕೀರ್ತಿಯು ಶ್ರೀಹರಿ ನಿನಗಲ್ಲವೆ 1ಕನಕಪುರಂದರಮುಖ್ಯ ದಾಸರಂತೆಗುಣವೆನಗಿನಿತಿಲ್ಲಜನರ ವಿಡಂಬನಕೆ ದಾಸನಾದರೂಘನಕೃಪಾರ್ಣವನೆ ಕನಕಾಂಬರಧರ2ಲಕ್ಷ ಮಾತ್ಯಾತಕೆ ಲಕ್ಷ್ಮೀನಾರಾಯಣರಕ್ಷಾಮಣಿ ನೀನೆಪಕ್ಷೀಂದ್ರವಾಹನ ಪಾಪವಿಮೋಚನತ್ರ್ಯಕ್ಷಮಿತ್ರನೆನ್ನಕ್ಷಿಗೋಚರನಾಗಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಲ್ಲು ಬೀಳಲಿ ಮೇಲ್ಮುಗಿಲ್ಲು ಬೀಳಲಿಫುಲ್ಲನಾಭನಿನ್ನ ಪಾದಪಲ್ಲವ ಛಾಯೆಯ ಬಿಡೆಪ.ಶೂಲಕೋಟಿಗಂಜೆಕರವಾಳಘಾತಿಗಂಜೆವಿಶ್ವಪಾಲಕ ನಿನ್ನ ದಿವ್ಯನಾಮಮಾಲಿಕೆ ವಜ್ರಾಯುಧುಂಟು 1ಪೋಕಜನಕಂಜೆ ದುರಿತಾನೀಕ ಬರಲಂಜೆ ಜಗದೇಕ ನಿನ್ನ ಶ್ರೀಪದಾರಾಧಕರ ಬಲ ಉಂಟೆನಗೆ 2ಅಂದು ಅಪಮೃತ್ಯು ಬಂದೆನ್ನಂದಗೆಡಿಸಲು ಎನ್ನತಂದೆ ಪ್ರಸನ್ವೆಂಕಟೇಶ ಬಂದು ಕಾಯಿದ ಹವಣು ಬಲ್ಲೆ 3
--------------
ಪ್ರಸನ್ನವೆಂಕಟದಾಸರು
ಕಾಂತೆ ಸೈರಿಸಲಾರೆ ಕಂಜಾಕ್ಷನಗಲೀರೆಕಂತುಶರದ ಬಲ ಕಡುವೇಗವಾಯಿತಲೆಕಾಂತ ಮೂರುತಿಯ ಕರೆತಾರೆ ತಾಯೆ ಪ.ಸೀತಕರನ ಪ್ರಭೆಯು ಶುಕದುಂಬಿಗಳ ರವವುಸೋತಬಾಲೆಯ ಮುಂದೆ ಸರಸವೆ ಸೊಗಸೋದೆನೀತವೇನೆಲೆ ತಂಗಿ ನೀರಜನಾಭಗೆ 1ನೀರೊಳು ಕರೆದೆನ್ನನೀಲಜೀಮೂತವರ್ಣನೀರಜದ್ವಕ್ತ್ತ್ರವ ನಖದಿಘಾಸಿಮಾಡುವನಾರಾಯಣನೆನ್ನ ಸುಳಿದರಿನ್ನೇನೆ 2ಅಧರದೊಳಿಟ್ಟುಕೊಳಲು ಅತಿಮೋಹಿಸುವ ನಲ್ಲಯದುಕುಲದರಸ ಮೆಚ್ಚೆ ಎನ್ನೊಳು ಘನ್ನಮಧುಪಕುಂತಳ್ಯಾವಳೊ ಮನೆಗೊಯ್ದಳೊ 3ಆವಗವನಕೇಳಿಆಡುವವನ ಸಾಲಿದಾವಸುಕೃತದಿಂದ ದೊರೆತನೊ ಶ್ರೀಮುಕುಂದಆವ ದುಷ್ಕøತ ಬಂದು ಅಗಲಿಸಿತಿಂದು 4ಚಂಪಕದಲರ್ಮಾಲೆ ಚಂದನದ ಲೇಪ ಒಲ್ಲೆಕಂಪಿನೊಳಗೆನಿಂದುತಕ್ರ್ಕೈಸುವಾನಂದಸಂಪನ್ನ ತಾ ಬಂದು ಸಲಹುವನೆಂದೆ 5ಪರಿಯಂಕದಲಿ ಕುಳಿತು ಪರಿಪರಿಯ ಸುಖವಿತ್ತುಕರದಿ ಕಂಕಣವಿಟ್ಟು ಕಡÉಯ ಪೆಂಡ್ಯಾ ಕೊಟ್ಟುಕರುಣಿಜರಿದುತರವೆ ತನಗಿದು6ಇಂದಿರೆರಮಣ ಎನ್ನ ಇಚÉ್ಭಯಸುರಧೇನುಸುಂದರ ರನ್ನ ಪ್ರಸನ್ನ ವೆಂಕಟೇಶನಸಂದೇಹವಿಲ್ಲದೆ ಶರಣು ಹೊಂದಿದೆನೊ 7
--------------
ಪ್ರಸನ್ನವೆಂಕಟದಾಸರು
ಕಾಯೆ ನಿನ್ನ ಪದ ತೋಯಜಕೆರಗುವೆ |ಮಾಯದೇವಿಹರಿಕಾಯನಿವಾಸೇ ||ಕಾಯೇ | ಕಾಯೇ ಪಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನಸತಿ||ಕರ್ದಮಜಾಲಯ | ಭದ್ರ ಶರೀರೆ 1ಇಂಗಡಲಾತ್ಮಜೆ| ಅಂಗನಾಕುಲಮಣಿ||ರಂಗನ ಪದಕಂಜ | ಭೃಂಗೆ ಕರುಣದಿ 2ಪ್ರಾಣೇಶ ವಿಠಲನ | ಮಾನಿನೀ ಯನ್ನಯ ||ಹೀನತೆಯೆಣಿಸದೆ | ಪೋಣಿಸಿ ಮತಿಯ 3
--------------
ಪ್ರಾಣೇಶದಾಸರು
ಕೇಳಿಮರೆವುದು ಮನ ಕುಶಶಯನನಆಳು ಕಂಡಂತೆಚಂದ್ರಮೌಳಿಹೇಳಿದಂತೆಪ.ಮುಂಜಾವದಿ ಗುರುಮಧ್ವಮತ ಮಹಿಮಾಹರಪಾದಕಂಜಗಳ ಬಲಗೊಂಡು ಕಲಿಯಾನಕೆಂದು ಲಕುಂಜರವರದನ ನಾಮ ಕೀರ್ತನೆ ಮಾಡೆಂದುಮಂಜುಳ ಶಾಸ್ತ್ರಶ್ರವಣ ಮಹಿಮೆ ಪುರಾಣ 2ಪ್ರಸನ್ವೆಂಕಟೇಶನಪಾದಪಿಡಿದವರಿಗಾಹ್ಲಾದನಿಶಿದಿನ ಸಂಸಾರ ನಿಸ್ಸಾರಘೋರ3
--------------
ಪ್ರಸನ್ನವೆಂಕಟದಾಸರು
ಕೇಳು ಕೋಪಿಸಬೇಡ ಹೇಳಲಿಕಂಜುವೆಬಾಳು ಬಡತನವ ನಾನು ಪ.ತಲೆಗೊಯ್ಕ ಹಿರಿಯ ಮಗ ಇಳೆಗೆ ಪೂಜಿತನಲ್ಲಬಲು ಭಂಡ ನಿನ್ನಯ ಕಿರಿಯ ಮಗ ||ಲಲನೆಯು ಸೇರಿದಳು ಬಲು ಲೋಭಿಗಳ ಮನೆಯಹೊಲಕುಲವರಿಯಳು ನಿನ್ನ ಸೊಸೆಯು ರಂಗ 1ಮಗಳ ಮಾರ್ಗವುಡೊಂಕು | ಮೈದುನ ಗುರುದ್ರೋಹಿಮಗನ ಮಗನು ಚಾಡಿಗಾರಹಗರಣಕೆ ನೀಚರ ಹಣ್ಣು ಮೆದ್ದೆಂಜಲಜಗದೊಡೆಯನೆನಿಸಿಕೊಂಡೆ - ನೀನುಂಡೆ 2ಲಕ್ಷ್ಮೀಪತಿಯು ಎನಿಸಿಭಿಕ್ಷೆ ಬೇಡಲು ಪೋದೆಪಕ್ಷಿಯ ಪೆಗಲೇರಿ ರಾಜನೆನಿಸಿದೆ ||ಸಾಕ್ಷಾತು ಪುರಂದರವಿಠಲನೆ ನಿನ್ನಗುಣಲಕ್ಷಣ ಪೇಳಲಳವೆ - ಕಳೆವೆ 3
--------------
ಪುರಂದರದಾಸರು
ಗಂಗಾಧರ ದೇವ ಜಯಗೀಷ ವ್ಯಾನಂಗಾರಿ ಗಿರಿಜಾಧವ |ಮಂಗಳ ಪ್ರದನೆ ಅಮಂಗಳ ಶೀಲ | ಭುಜಂಗ ರೂಪದಿ ಪಾಂಡು |ರಂಗ ಘಾಸಿಗೆಯಾದ ಪವೈಕಾರಿಕಾಹಂಕಾರ ತತ್ವದೊಡೆಯ, ನಾಕುಮೊಗನ ಕುಮಾರ |ಶ್ರೀಕಂಠ, ಸ್ಥಾಣು, ವಿಶ್ಖೋಜನಕ, ಚಂದ್ರಶೇಖರ, ಈಶಪಿನಾಕಿಭಕ್ತವತ್ಸಲ |ಶೋಕನಾಶಕ ಶಂಭು, ಪಶುಪತಿ, ಹೇ ಕರುಣಿ, ಸದ್ಗುಣ ಸುಖಾರ್ಣವ |ಪಾಕಶಾಸನ ಪ್ರಮುಖ ವಂದ್ಯ, ವಿಶೋಕ, ಎನ್ನಭಿಲಾಷೆ ಪೂರ್ತಿಸು1ಪ್ರಾಣನಂದನ ತೈಜಸಾಹಂಕಾರಾಭಿಮಾನಿ ಶ್ರೀಶುಕದೂರ್ವಾಸ|ಕ್ಷೋಣಿಸಂಧೃತ ಧನ್ವಿ, ದಾನವಾಂತಕ, ಶೂಲಪಾಣಿ, ಪ್ರಮಥಾಧಿಪ ಬಾಣವರದಯನ್ನ |ಮಾನನಿನ್ನದು ಚಕ್ರಿ ಪದಕಂಜರೇಣುತೋರಿಸು ತವಕದಿಂದಲಿ |ದ್ರೌಣಿ, ಶಿವ, ಪ್ರಣತ ಜನ ಸುಮನಸಧೇನು, ತವ ಪದ ಸಾರ್ವೆ ಸತತ 2ತಾಮಸಾಹಂಕಾರೇಶ ಸಂಕರ್ಷಣನಾ ಮಗನೇ ಕೊಡು ಲೇಸ ರಾಮನಾಮ ಮಂತ್ರ |ಪ್ರೇಮದಿ ಜಪಿಸುವ ಸ್ವಾಮಿ, ಅನಲ,ವಹ್ನಿಸೋಮಲೋಚನ ಹರ |ವಾಮದೇವ, ಕಪರ್ದಿ,ಭವಭಯ ಭೀಮ ಶ್ರೀ ಪ್ರಾಣೇಶ ವಿಠಲನ |ಪ್ರೇಮ ಪುಟ್ಟಿಸೋ ರೌಪ್ಯ ಪರ್ವತಧಾಮ ಶ್ರೀ ವಿರೂಪಾಕ್ಷ ಗುರುವೇ 3
--------------
ಪ್ರಾಣೇಶದಾಸರು
ಗೆದ್ದೆಯೊ ಹನುಮಂತಾ-ಅಸುರರಒದ್ದೆಯೊ ಬಲವಂತಾ ಪಬದ್ಧಾಂಜಲಿಯಿಂದ ರಘುಪತಿ ಪಾದವಹೃದ್ಯದಿ ಭಜನೆ ಮಾಡುವ ಬುದ್ಧಿವಂತ ಅ.ಪಅಂಜನಿಸುತನೀತ-ಲಂಕಾಪುರದಿ-ಅಕ್ಷಯನ ಕೊಂದಾತ ||ಕಂಜಾಕ್ಷಿ ಸೀತೆಯ ಕಂಡು ಮುದ್ರಿಕೆಯಿತ್ತು |ಮಂಜುಳವಾರೆಯ ತಂದ ರಾಮನ ದೂತ 1ಈರೇಳು ಜಗದೊಳಗೆ-ಇನ್ನು ಮತ್ತೆ ಯಾರು ಸರಿಯೊ ನಿನಗೆವೀರ ಮಹಾಬಲ ಶೂರ ಪರಾಕ್ರಮ |ಧೀರಸಮೀರಉದಾರ ಗಂಭೀರ2ವಾಂಛಿತಫಲವೀವ-ನಾದ ಮುಖ್ಯ- ಪ್ರಾಣ ಮಹಾನುಭಾವ ||ಕಿಂಚಿತ್ತು ಕಷ್ಟವ ಪಡಲೀಸ ಭಕ್ತರ್ಗೆ |ಪಾಂಚಜನ್ಯಪುರಂದರವಿಠಲದಾಸ3
--------------
ಪುರಂದರದಾಸರು
ಜೋ ಜೋ ಜಾನಕಿ ಜೊ ಚಂದಿರ ಮುಖಿಮಾಂಗಲ್ಯದಾಯಕಿ ಮಾಡೇ ನಿದ್ರೆ ಜೋ ಜೋ 1ಆದಿಮಾಯಳೆ ವೇದವೇದ್ಯಳೆಆದಿತೇಯನುತೆ ಭೂಮಿಜಾತೆ 2ಮೃಗಮದಗಂಧಿನಿ ಮಾಧುರ್ಯಭಾಷಿಣಿಮಗಳೆ ಜಾನಕಿಯೆ ಕಂಬುಕಂಧರಿಯೇ 3ಕಂಜಲೋಚನಿ ಕಂಜಭವಜನನಿಕುಂಜರಗಮನಿ ಸಂಜೀವನಿ 4ವಾರಿಜನೇತ್ರೆ ವಾಸುವಸ್ತೋತ್ರೆಮಾರಜನನಿ ಲಕ್ಷ್ಮೀನಾರಾಯಣಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದೇವಿ ಅಂಬುಜವಲ್ಲಿ ರಮಣನೆ ಭೂವರಾಹ ದಯಾನಿಧೆಪವಮಾನನ ದಿವ್ಯ ಕರದಲಿ ಸೇವೆ ಸಂತತಗೊಳ್ಳುವಿಅವನಿಯೊಳು ಶ್ರೀಮುಷ್ಣಕ್ಷೇತ್ರದಿ ನೀ ವಿಹಾರವ ಮಾಡುವಿಅತ್ಯಗಾಧ ಸುಶೀಲಜಾಹ್ನವಿಸುತ್ತು ಷೋಡಶತೀರ್ಥದಿಮತ್ತು ವರ್ಣಿಪೆ ತೀರ್ಥ ತಟದಲಿ ಉತ್ತಮಾಗ್ನೇಯಭಾಗದಿಕರಗಳೆರಡು ಕಟಿಯಲಿಟ್ಟು ಕೋರೆಹಲ್ಲನೆ ತೋರುತಘನ್ನಶ್ವೇತವರಾಹಮೂರುತಿ ಎನ್ನ ಪೂರ್ವದ ಪುಣ್ಯದಿಸುಂದರಾನನ ಕಂಜಮಧುಪನಇಂದುನೋಡಿದ ಕಾರಣಮಲ್ಲಮರ್ದನವೈಕುಂಠದಿಂದ ಮೆಲ್ಲಮೆಲ್ಲನೆ ಬಂದೆಯಸೂಕರಾಸ್ಯನೆ ನಿನ್ನ ಪಾದಕನೇಕ ವಂದನೆ ಮಾಡುವೆ
--------------
ಗೋಪಾಲದಾಸರು
ನಂಬಿ ಚೊಕ್ಕಟಿಂಬು ಪಡೆಯಿರೈ ಪ.ಇಂಬುಪಡೆದು ಹರಿಯಚರಣಅಂಬುಜಬಂಡುಂಡು ಮಿಕ್ಕಹಂಬಲವ ಉಳಿದುಭೂರಿಸಂಭ್ರ್ರಮಿಸುವವರಕೇಳಿಅ.ಪ.ಹರಿವ ಮನವಕಟ್ಟಿವಿೂರಿಬರುವ ದುರಿತಕಂಜದೆ ಸುತ್ತಿರುವ ಮಾಯಾಪಾಶ ಹರಿವ ಹರುವನಾಲಿಸಿಗುರುವಿನಾಜ್ಞಾದಂತೆ ಪುಣ್ಯದುರುಹು ಬಲ್ಲ ಪ್ರೇಕ್ಷಕಲ್ಪತರುವ ಪಿಡಿದು ನಷ್ಟ ಕಳೇವರವು ತನ್ನದಲ್ಲವೆಂದು 1ಆವಾಗೆ ಸಚ್ಛಾಸ್ತ್ರ ಶ್ರವಣಭಾವಗುಟ್ಟುಕೇಳಿಭಕುತಿಠಾವುಗಂಡು ಹಸಿವು ತೃಷೆಯಕಾವಘಸಣೆಯಸಾವಿಗ್ಹೊಂದದಂತೆ ಸಾಧುಸೇವ್ಯಗರುಡಗಮನನಂಘ್ರಿಸೇವೆಗಧ್ಯಕ್ಷಿತರಾಗಿ ನೀವೀಗ ವೈರಾಗ್ಯ ಬಲಿದು 2ಕ್ಷುದ್ರಭೋಗಬಯಸದೆ ದಾರಿದ್ರ ಭೀತನಾಗದೆ ಸಮುದ್ರಭವನನೆಂದು ಶ್ರೀಮುದ್ರಾಭರಣದಭದ್ರ ಭಾಗವತನು ಆಭದ್ರ ಬುದ್ಧಿಯಲ್ಲಿ ಕೂಡಿಚಿದ್ರೂಪ ಪ್ರಸನ್ನವೆಂಕಟಾದ್ರಿ ಭೋಗಶಯನನೆಂದು 3
--------------
ಪ್ರಸನ್ನವೆಂಕಟದಾಸರು