ಕಾಯೊ ಎನ್ನನು ದೇವ ಕಡೆ ಹಾಯಿಸೊ ಕಡಲೊಡೆಯ ಪ ಕಾಯಯ್ಯ ನೀ ಎನ್ನ ಕಮಲದಳಾಕ್ಷ ಅ ಒಂದು ಕಾಯಲಿ ನಾನು ಒಲಿದು ದಂಡಿಗೆಯಾದೆಎರಡು ಕಾಯಲಿ ನಾನು ವೀಣೆಯಾದೆಮೂರು ಕಾಯಲಿ ನಾನು ಮುದ್ದು ಕಿನ್ನರಿಯಾದೆನೀಟಾದ ಕಾಯಲಿ ನಾನು ನಾಗಸ್ವರವಾದೆ 1 ದಪ್ಪ ದಪ್ಪ ಕಾಯಲಿ ದರವೇಶಿಗಳಿಗಾದೆಮಿಕ್ಕ ಕಾಯಲಿ ನಾನು ಸನ್ನೇಸಿಗಳಿಗಾದೆಕೈತಪ್ಪಿ ಬಿದ್ದರೆ ಕದಿರಿಗೆ ಬಿಲ್ಲಾದೆಮತ್ತೆ ದೇವರ ಗುಡಿಗೆ ದೀಪವೇ ನಾನಾದೆ 2 ಚಿಕ್ಕಂದು ಮೊದಲು ನಾ ಸಾಸೂವೆ ಕಾಯಾದೆಚಿಕ್ಕ ಚಿನ್ಮಯಗೆ ಬುರುಡೆಯಾದೆಉಕ್ಕುವಾ ಹೊಳೆಯಲ್ಲಿ ತೆಪ್ಪವೇ ನಾನಾದೆಚೊಕ್ಕ ಕನಕಪ್ಪನ ಹಿಂದೆ ನಾ ತಿರುಪತಿಗೆ ಬಂದೆ3
ಕಾರಣನೇ ಇವನು ಎಲ್ಲಕ್ಕೂ ಕಾರಣನೇ ಇವನು ಪ ಕಾರಣನಿವನು ಸಾಧಾರಣನಲ್ಲನು ಮಾರಮಣನು ಕರುಣಾರಸಮಯನು ಅ.ಪ ಇಚ್ಛೆಯಿಂದಲಿ ತಾನು ಅಖಿಲ ಜಗ ತ್ಸøಷ್ಟಿಯ ಮಾಡುವನು ಸ್ವಚ್ಛನಾದರು ತನ್ನ ಮೆಚ್ಚಿಗೆಯಿಂದಲಿ ತುಚ್ಛನೆಂಬೊ ಶಬ್ದ ವಾಚ್ಯನಾಗಿರುವನು 1 ಎಲ್ಲವ ಬಲ್ಲವನು ಈಶನು ಇಲ್ಲದ ಸ್ಥಳವಿಲ್ಲ ಚಿಲ್ಲರೆ ದೈವಗಳೆಲ್ಲರು ಈತನ ಚೆಲ್ಲಾಟಗಳಿಗೆ ಉಲ್ಲಾಸಿಸುವರು 2 ಭಿನ್ನರೂಪಗಳಿಂದ ಜಗದೊಳು ತನ್ನ ಲೀಲೆಯ ತೋರ್ಪ ಸನ್ನುತ ಭಕುತಗೆ ಮನ್ನಣೆಯಿಂದ ಪ್ರ ಸನ್ನನಾಗಿ ಉನ್ನತ ಪದವೀಯಲು 3
ಕಾಲ ವ್ಯರ್ಥ ಹರಿಯನೇಕ ಗುಣಗಳ ಪೊಗಳಿ ಪುರುಷಾರ್ಥ ಪ ಸತಿಸುತರ ನೆಚ್ಚಿ ಕೆಡಬ್ಯಾಡಾ ನಿನ್ನ ಸಂ- ಗತಿಲೇ ಬಾಹರು ಇದನು ತಿಳಿಯೋ ಕ್ಷಿತಿಪತಿಯ ನೆನೆಯದಿರಬ್ಯಾಡಾ ಲಕ್ಷ್ಮೀ ಪತಿಯೊಬ್ಬನೇ ಗತಿ ಎಂದು ತಿಳಿ ಗಾಢಾ 1 ಇಂದೆ ಇದ್ದವ ನಾಳೆಗಿಲ್ಲಾ ಅದ ರಿಂದ ಜಗದೀಶನನು ಹಿಂದೆ ಕಳೆದ ಆಯು ಬರೋದಿಲ್ಲಾ ಇನ್ನು ಮುಂದೆ ನರಜನ್ಮ ಬರುವುದು ಭರವಸಲ್ಲಾ 2 ಸತ್ತ ನಂತರ ಬಳಗ ನಿನ್ನ ತೀವ್ರ ಹೊತ್ತು ಹೊರಗ್ಹಾಕಿರೆನ್ನುವರೋ ತಿಳಿಯನ್ನಾ ಮಿಥ್ಯ ಸುಖಕೊಳಗಾಗದಿನ್ನಾ ಏಕ ಚಿತ್ತದಿಂ ಭಜಿಸೋ ಹನುಮೇಶ ವಿಠಲನಾ 3