ಒಟ್ಟು 291 ಕಡೆಗಳಲ್ಲಿ , 59 ದಾಸರು , 264 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶರಣೂ ಪ.ಮಹಾದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನುಸಾಧುಮಾತೆಯ ಶಾಪವನ್ನು ಕೈಗೊಂಡುಆದಿಪೂಜೆಗೆ ಅಭಿಮಾನಿದೇವತೆಯಾದಿಮಾಧವನಮ್ಮ ಹಯವದನನ್ನ ಪ್ರಿಯ1ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದುಕಮಲಸಂಭವಸುತನ ಒಲಿಸಬೇಕೆಂದುರಮಣಿ ರಾಮಮಂತ್ರ್ರ ದಿನಸಹಸ್ರವು ಜಪಿಸೆಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ 2ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿಕಡುಘೋರ ತಪಗೈಯೆ ಮನ್ಮಥನು ಬರಲುಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿಕಡಲೊಡೆಯ ನಮ್ಮ ಹಯವದನನ್ನ ಪ್ರಿಯ 3ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲುತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲುಚಿತ್ತದೊಲ್ಲಭಗ್ಹೇಳಿ ಕೊಚ್ಚಿಸಿದಿ ಅವನ ಶಿರಅಚ್ಯುತನಮ್ಮ ಹಯವದನನ್ನ ಪ್ರಿಯೆ4ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನುತ್ರೇತೆಯಲಿ ರಾಮರ ಸೇವೆಯನು ಮಾಡಿಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀಶ್ರೀಪತಿ ಹಯವದನ ದೂತ ಪ್ರಖ್ಯಾತ 5ಈರೇಳು ಲೋಕದ ಜನರ ನಾಲಗೆಯಲ್ಲಿಬೀಜವನು ಬಿತ್ತಿ ಅನ್ನವ ಕೊಡುವ ತಾಯೆವಾರಿಜಸಂಭವನ ಹಿರಿಯ ಪಟ್ಟದ ರಾಣಿನೀರಜಾಕ್ಷನಮ್ಮ ಹಯವದನನ್ನ ಪ್ರಿಯೆ6ಜನನಿಹುಟ್ಟಿದ ನಾಳದಲ್ಲಿ ಜನಿಸಿದಿ ನೀನುಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದುಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲುವನಜಾಕ್ಷ ನಮ್ಮ ಹಯವದನನ್ನ ಪ್ರಿಯ 7ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದುಪದ್ಮಾಕ್ಷನ ರಥಕ್ಕೆ ಕೈ ನೀಡಿ ಬಂದೆಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳುಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ 8ಅನಂತ ನಾಟಕಾನಂತ ಸೂತ್ರಧಾರಿಅನಂತ ಚರಿತ ನಿತ್ಯಾನಂದಭರಿತಅನಂತಾಸನ ಶ್ವೇತದ್ವೀಪ ವೈಕುಂಠಅನಂತಗುಣಭರಿತ ಹಯವದನ ಚರಿತ 9ಶರಣುಮತ್ಸ್ಯಕೂರ್ಮವರಾಹನಾರಸಿಂಹಶರಣು ವಾಮನಭಾರ್ಗವರಾಮಚಂದ್ರಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆಶರಣು ಹಯವದನನ್ನ ಚರಣಗಳ ನುತಿಪೆ 10
--------------
ವಾದಿರಾಜ
ಶ್ರೀರಾಮ ಜಯರಾಮ ಜಯತುಜಯತು ಸೀತಾರಾಮ ರಾಮ ಚರ-ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ-ಣಾರಿ ನೀನಲ್ಲದೆ ಯಾರಿಲ್ಲಗತಿಜಯ ರಾಮ ರಾಮ1ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ-ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ-ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ 2ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ-ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ-ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ 3ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ-ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ-ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ 4ಮುಖ್ಯ ಸಚಿವ ಮಹಾ ಮುಖ್ಯಪ್ರಾಣನುಸೀತಾರಾಮ ರಾಮ ದುಷ್ಟ-ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ-ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ 5ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ-ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮವಾಸವಮುಖ್ಯ ವಿಬುಧಾಸುರನುತಸೀತಾರಾಮ ರಾಮ ಸಾಧು-ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ 6ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ-ಜ್ಞಾನ ಭಕ್ತಿಭಾಗ್ಯ ನೀನಿತ್ತುಪೊರೆಜಯ ರಾಮ ರಾಮಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ-ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ 7ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮಬತ್ತಿಹೋಗಲಿ ಮೋಹದುತ್ತುಂಗಾರ್ಣವಸೀತಾರಾಮ ರಾಮ ಪರ-ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ 8ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ-ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ 9ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ-ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ 10ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ-ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ-ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ 11ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ-ಸನ್ನ ನಿನ್ನ ಸ್ಮರಣೆಯನಿತ್ತುಪೊರೆಜಯ ರಾಮ ರಾಮಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣುಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ 12ನಿತ್ಯನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ-ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ-ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ 13ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು-ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ-ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ 14ಅಕುಟಿಲಗುಣಗಳ ಪ್ರಕಟಿಸೆನ್ನೊಳುಸೀತಾರಾಮ ರಾಮ ವಾಯು-ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮಲಕ್ಷುಮಿನಾರಾಯಣ ತ್ರಿಕಣಕುದ್ಧಾಮನೆಸೀತಾರಾಮ ರಾಮ ಬ್ರಹ್ಮಾ-ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ 15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀರಾಮಮಂತ್ರ22ಶ್ರೀರಾಮ ಸೀತಾರಮಣ ಮಾಂಪಾಹಿಪಉರು ಜ್ಞಾನ ಸುಖರೂಪ ನಮೋವಾಸುದೇವಅ.ಪಶ್ಯಾಮ ರಮಣೀಯ ಉರು ಆಮ್ನಾಯಕೂ ಅಮಿತರಮೆ ಸೀತಾಯುತ ನಮೋ ಹನುಮಾದಿಸೇವ್ಯವಾಮಹಸ್ತದಿಚಾಪಚಿನ್ಮುದ್ರೆ ಶರಬಲದಿಅಮಿತಾರ್ಕಸೋಮ ಸ್ವಕಾಂತಿ ಶ್ರೀರಾಮ 1ಪರಮೇಶ ಏಕಾತ್ಮಅರದೂರಪರಿಪೂರ್ಣಉರು ಸುಗುಣವಾರಿನಿಧಿ ನೀನೇ ಸ್ವತಂತ್ರಅರವಿಂದಜಾಂಡಾದಿ ಜಗತ್ಸರ್ವ ಕರ್ತಜಸುರರ ಮೊರೆಕೇಳಿದಶರಥನ ಸುತನಾದೆ2ಚತುರ್ವದನ ಸಂಸೇವ್ಯ ಹಯವದನ ಷಡ್ರೂಪಚತುರ್ವಿಂಶಾಕ್ಷರ ಸುಮಂತ್ರ ಪ್ರತಿಪಾದ್ಯತ್ರಾತಪ್ರೇರಕಸ್ವಾಮಿ ರಾಮನೇ ಎಂದರಿತುಸಂಧ್ಯಾಸುಮಂತ್ರ ಋಷಿ ಬಂದು ಪ್ರಾರ್ಥಿಸಿದ 3ಸುದುಪಾಸ್ಯ ನಿನ್ನ ಋಷಿ ಆಶ್ರಮಕೆ ಕರದೊಯ್ಯೆಶ್ರೋತವ್ಯ ಮಂತವ್ಯ ನಿಧಿ ಧ್ಯಾಸಿತವ್ಯಪ್ರತ್ಯಕ್ಷ ಅವತಾರರೂಪ ನೀನೆಂದರಿತುಸಿದ್ಧರು ಭಕ್ತಿಯಿಂದಲಿ ವಂದಿಸಿದರು 4ತತ್ರ ತತ್ರ ಸ್ಥಿತೋ ವಿಷ್ಣುಃ ತತ್ತಚ್ಛಕ್ತಿ ಬೋಧಯನ್ಅಸ್ತ್ರದೇವತೆಗಳೀ ತತ್ವವನು ಅರಿತುಸತ್ತಾದಿದಾತನೇ ಶಾಸ್ತ್ರಸ್ವಾಮಿ ವಿಷ್ಣೋಪ್ರತ್ಯಗಾತ್ಮನೆ ರಾಮ ನಿನಗೆ ನಮಿಸಿದರು 5ಯಜÕಗೆ ಯಜÕಗೆ ವಿಶ್ವಾಮಿತ್ರಗೆ ನಮೋಯಜÕಭುಕ್ ಯಜಮಾನ ಯಜÕ ಯಜೆÕೀಶಇಜ್ಯ ಪೂಜ್ಯಗೆ ಸ್ವಾಮಿ ಮನ್ಮನೋವಾಕ್ಸಂಸ್ಥಯಜÕಸ್ಥಯಜÕ ಮಾಂಪಾಹಿನಮೋ ನಮಸ್ತೆ6ವೇದವತಿತ್ವದಧೀನೆ ಸರ್ವಜಗದಾಧಾರೆಭೂದೇವಿ ಸುಖಪೂರ್ಣೆ ಅಜೆ ನಿತ್ಯಮುಕ್ತೆವೈದೇಹಿ ಜಾನಕಿ ಸೀತಾನಾಮದಿ ತಾನೆಈ ಧರೆಯೊಳ್ ತೋರಿಹಳು ನಿನ್ನನನುಸರಿಸಿ 7ಸುರಾಜಗಜಇಕ್ಷುಜಲ್ಲೆಯನು ಮುರಿವಂತೆಪರಫಲಿಬಲಿನೀನು ಶಿವಚಾಪ ಮುರಿಯೆಸುರರುನರವರ್ಯರು ಹರುಷದಿಂದಲಿ ನೋಡೆಸಿರಿಸೀತೆ ವರಮಾಲೆ ನಿನಗೆ ಹಾಕಿದಳು8ಶರಭಂಗಶಬರಿ ಜಟಾಯು ಮೊದಲಾದವರವರಭಕ್ತಿಗೆ ಮೆಚ್ಚಿ ಯೋಗ್ಯ ಗತಿಯಿತ್ತೆಮಾರುತಿಗೆ ಪ್ರಿಯರೆಂದು ರವಿಜಗೆ ವಿಭೀಷಣಗೆಕರುಣಿಸಿದೆ ನಿರಪೇಕ್ಷ ನೀ ಪೂರ್ಣಕಾಮ 9ಕ್ರೂರ ಪೌಲಸ್ತ್ಯಾದಿ ರಕ್ಕಸರ ತರಿದು ನೀಧರೆಯಲಿ ಸುಕ್ಷೇಮ ಧರ್ಮ ಸ್ಥಾಪಿಸಿದೆಸರಸಿಜಾಸನ ಲೋಕದಂತಾಯಿತೀ ಲೋಕವರವಿಷ್ಣುಭಕ್ತಿಯು ಸೌಖ್ಯ ಎಲ್ಲೆಲ್ಲೂ 10ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸನೆಸರಿ ಮಿಗಿಲು ನಿನಗಿಲ್ಲ ಯಾರು ಎಂದೆಲ್ಲೂಸಿರಿಸೀತಾಯುತರಾಮ ಎಂದೂನು ಎಲ್ಲೆಲ್ಲೂಮಾರುತಿ ಸೌಮಿತ್ರಿ ಭರತಾದಿಸೇವ್ಯ11
--------------
ಪ್ರಸನ್ನ ಶ್ರೀನಿವಾಸದಾಸರು
ಸಕಲವೆಲ್ಲವು ಹರಿಸೇವೆಯೆನ್ನಿರುಕುಮಿಣಿಯ ರಮನ ವಿಠಲನಲ್ಲದಿಲ್ಲವೆನ್ನಿ ಪ.ನುಡಿಗಳೆಲ್ಲವು ನಾರಾಯಣನ ಕೀರ್ತನೆಯೆನ್ನಿನಡೆವುದೆಲ್ಲವು ಹರಿಯಾತ್ರೆಯೆನ್ನಿ ||ಕೊಡುವುದೆಲ್ಲವು ಕಾಮಜನಕಗರ್ಪಿತವೆನ್ನಿಎಡೆಯ ಅನ್ನವು ಶ್ರೀ ಹರಿಯ ಪ್ರಸಾದವೆನ್ನಿ 1ಹೊಸವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿಕುಸುಮ ಪರಿಮಳವು ಕಂಜನಾಭಗೆನ್ನಿ ||ಎಸೆವಾಭರಣವು ಯಶೋಧೆನಂದನಗೆನ್ನಿಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ 2ಆಟಪಾಟಗಳೆಲ್ಲ ಅಂತರ್ಯಾಮಿಗೆಯೆನ್ನಿನೋಟ ಬೇಟಗಳೆಲ್ಲ ನಾಟಕಧಾರಿಗೆನ್ನಿ ||ನೀಟಾದ ವಸ್ತುಗಳೆಲ್ಲ ಕೈಟಭ ಮರ್ದನಗೆನ್ನಿಕೋಟಲೆ ಸಂಸಾರ ಕಪಟನಾಟಕಗೆನ್ನಿ 3ನಿದ್ರೆ ಜಾಗರವು ಸಮುದ್ರಶಯನಗೆನ್ನಿಭದ್ರಗಜನಿಧಿ ವರದಗೆನ್ನಿರೌದ್ರದಾರಿದ್ರವು ರಾಘವನ ಮಾಯೆಯೆನ್ನಿ ಶ್ರೀಮುದ್ರೆ ಧರಿಸಿದವ ಹರಿದಾಸನೆನ್ನಿ 4ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿಎಣಿಸಬಾರದನಂತ ಮಹಿಮನೆನ್ನಿಸೆಣಸುವ ರಕ್ಕಸರ ಶಿರವ ಚಂಡಾಡುವಪ್ರಣವಗೋಚರ ಪುರಂದರವಿಠಲರಾಯನೆನ್ನಿ 5
--------------
ಪುರಂದರದಾಸರು
ಸಂದಿತಯ್ಯ ಪ್ರಾಯವು |ಸಂದಿತಯ್ಯ ಪ್ರಾಯವು ಪಮೂರು ತಿಂಗಳುಸಂದುಹೋಯಿತು ತಿಳಿಯದೆ ||ಬಂದೆ ತಾಯಿಯ ಜಠರದಲಿ ಮ-|ತ್ತೊಂದು ಬುದ್ಧಿಯನರಿಯದೆ ||ಬೆಂದೆ ನವಮಾಸದಲಿ ಗರ್ಭದಿ |ಒಂದು ದಿವಸವು ತಡೆಯದೆ ||ಕುಂದದೀಪರಿಯೊಂದು ವರುಷವು |ಇಂದಿರೇಶನೆ ಕೇಳು ದುಃಖವ 1ಕತ್ತಲೆಯೊಳಿರಲಾರೆನೆನುತಲಿ |ಹೊತ್ತೆ ಹರಕೆಯ ನಿನ್ನನು ||ಮತ್ತೆ ಜನಿಸಲು ಭೂಮಿಯೊಳು ನಾ |ಅತ್ತುನಿನ್ನನು ಮರೆತೆನು ||ಮತ್ತೆ ಮಲ-ಮೂತ್ರದೊಳು ಬಾಲ್ಯದಿ |ಹೊತ್ತು ದಿನಗಳ ಕಳೆದೆನು ||ಮತ್ತೆ ನರಕದೊಳುರುಳುತುರುಳುತ |ಉತ್ತಮೋತ್ತಮ ನಿನ್ನ ನೆನೆಯದೆ 2ಚಿಕ್ಕತನವನು ಮಕ್ಕಳಾಟದಿ |ಅಕ್ಕರಿಂದಲಿ ಕಳೆದೆನು ||ಸೊಕ್ಕಿ ಹದಿನಾರಲಿ ನಾನತಿ |ಮಿಕ್ಕಿ ನಡೆದೆನು ನಿನ್ನನು ||ಸಿಕ್ಕಿ ಬಹು ಸಂಸಾರ ಮಾಯೆಯ |ಕಕ್ಕುಲಿತೆಯೊಳು ಬಿದ್ದೆನು ||ಹೊಕ್ಕುದಿಲ್ಲವು ನಿನ್ನ ಪಾದವ |ರಕ್ಕಸಾರಿಯೆ ಕೇಳು ದುಃಖವ 3ಸುಳಿದೆ ಮನೆಮನೆ ಕಳೆದೆ ಕಾಲವ |ಉಳಿದ ಯೋಚನೆ ಮಾಡದೆ ||ಬೆಳೆದೆ ತಾಳೆಯ ಮರದ ತೆರದಲಿ ||ಉಳಿವ ಬಗೆಯನು ನೋಡದೆ ||ಎಳೆಯ ಮನದೊಳೆ ಇಳೆಯ ಜನರೊಳು |ಬಳಕೆ ಮಾತುಗಳಾಡಿದೆ ||ಕಳೆದೆ ಈ ಪರಿಯಿಂದ ಕಾಲವ |ನಳಿನನಾಭನೆ ನಿನ್ನ ನೆನೆಯದೆ 4ಎಡೆಬಿಡದೆಅನುದಿನದಿ ಪಾಪದ |ಕಡಲೊಳಗೆ ನಾನಾಳ್ದೆನು ||ದರವ ಕಾಣೆದೆ ಮಧ್ಯದಲಿ ಎ-|ನ್ನೊಡಲೊಳಗೆ ನಾನೊಂದನು ||ದೃಢದಿ ನಿನ್ನಯ ಧ್ಯಾನವೆಂಬಾ |ಹಡಗವೇರಿಸು ಎನ್ನನು ||ಒಡೆಯ ಪುರಂದರವಿಠಲ ಎನ್ನನು |ಬಿಡದೆ ಕಾಯೈ ಬೇಗ ಶ್ರೀಹರಿ5
--------------
ಪುರಂದರದಾಸರು
ಸುಲಭವಲ್ಲವೊ ಮಹಾನಂದ ತ -ನ್ನೊಳಗೆ ತಿಳಿಯಬೇಕುಗುರುದಯದಿಂದಪ.ಬೆಕ್ಕನು ಇಲಿ ನುಂಗುವನಕ - ಕಡು -ರಕ್ಕಸಿಯನು ಕಂಡು ಗಿಣಿ ನುಂಗುವನಕ ||ಮಕ್ಕಳ ಭಕ್ಷಿಸುವನಕ - ಮದ -ಸೊಕ್ಕಿದ ಗಜವನು ನರಿ ನುಂಗುವನಕ 1ಇಬ್ಬರೊಡನೆ ಕೊಡುವನಕ - ಮೂರು -ಹಬ್ಬಿದ ಬೆಟ್ಟವ ನೊಣ ನುಂಗುವನಕ ||ಒಬ್ಬರೊಡನೆ ಸೇರುವನಕ - ಕೆಟ್ಟ -ಗುಬ್ಬಿಯ ರಾಜಹಂಸವು ನುಂಗುವನಕ 2ಒಳ ಹೊರಗೊಂದಾಗುವನಕ - ತಾನು -ತಿಳಿದೆನೆಂಬಭಾವ ಬಯಲಾಗುವನಕ ||ಬೆಳಕಿನೊಳಗೆ ಕಾಣುವನಕ ನಮ್ಮ -ಚೆಲುವ ಪುರಂದರವಿಠಲನ ದಯವಾಗುವನಕ 3
--------------
ಪುರಂದರದಾಸರು
ಹರಿಪದಾಚ್ಛಿನ್ನ ಭಕ್ತ ಹರಿಕಾರ್ಯಕ್ಕಾಸಕ್ತಮರುತಾಂಶನು ನಮ್ಮ ಗುರುರಾಯನು ಪ.ಇಂದುಮುಖಿ ಸೀತೆಯಾಕೃತಿಯ ರಕ್ಕಸನೊಯ್ಯೆಸಿಂಧುಲಂಘಿಸಿ ಅವನ ವನವ ಕಿತ್ತುಬಂದ ಅಕ್ಷನನು ಮಡುಹಿಟ್ಟು ಬೇಗದಿಬಂದು ರಾಮನ ಪದಕೆರಗಿದ ಹನುಮ 1ಮಣಿಮಂತಕೀಚಕ ಬಕ ಬಲ್ಲಿದಸುರರತತಿಗಳ ಶಿರಗಳ ಸವರಿವನಜಾಕ್ಷಿ ಸತಿಯಳ ಸಭೆಯೊಳು ಎಳೆಯೆ ದುಶ್ಯಾಸನನ ಕರುಳು ಕೆಡಹಿ ಸೀಳಿದ ಭೀಮಸೇನ 2ಆತ್ಮನಾರಾಯಣ ಭೇದವಿರೆ ಒಂದೆಂದು ಮಾಯಿಗಳೊದರೆಜಿಹ್ವೆಬಿಗಿಸಿಆತ್ಮ ವೈಷ್ಣವರಿಗೆ ಭೇದ ಬಂಧಿಸಿದ ಸರ್ವೋತ್ತಮ ಪ್ರಸನ್ವೆಂಕಟಪತಿಪ್ರಿಯನು 3
--------------
ಪ್ರಸನ್ನವೆಂಕಟದಾಸರು
ಹರಿಯ ನಂಬದ ನರನು ಗೂಡರಿತು ಇರದ ವಾನರನು ಶ್ರೀಹರಿಯ ಹೊಗಳದ ಕವಿಯು ಭೂಸುರರುಣ್ಣಿಸದ ಹವಿಯು ಪ.ಕರುಣವಿಲ್ಲದ ಅರಸ ಕಾಳೋರಗನಾಡುವ ಸರಸಮಾನಕಿಲ್ಲದ ಮಂತ್ರಿ ತಾ ಗರಹೊಡಕ ಕುಮಂತ್ರಿ 1ಮೆಚ್ಚು ನುಂಗುವ ದೊರೆಯು ಮೀವ ಬಚ್ಚಲಿನ ದೊಡ್ಡಹರಿಯು ಕೈಮುಚ್ಚಿ ನೀಡದ ದಾನ ಹುಸಿರಚನೆ ನಿಧಾನ 2ಧರುಮಕೆ ಕೂಡದ ಸತಿಯು ಯಮಪುರದಾರಿ ಸಂಗತಿಯು ಬಲುಚರಿಗ ಮತ್ಸರಿತನಯಅವ ಅರಗದ ಅಗ್ಗಣಿಯ3ಮೂರ್ಖನ ಗೆಳೆತನ ಜರ್ಜರಿತ ತಂತುವಿತಾನ ಒಣಕರಕರಿ ಕಲಹದ ನೆರೆಯು ಸಾಸಿರ ತೇಳಗಗಚ್ಚಿದ ಸರಿಯು 4ವಂಚಿತವಾದಿ ಬಂಧು ಪ್ರಾಣ ಮುಂಚಿಸುವ ವಿಷಬಿಂದು ಬಹುಕಾಂಚನದಾಸೆ ಬಳಗ ಪ್ರಪಂಚದಳತೆಕೊಳಗ5ಕೊಡದಿಟ್ಟ ಕೊಡಹಣವು ಸುಡುವ ಅಡವಿಲಿ ಬಿದ್ದ ಹೆಣವು ಬಾಯಿಬಡಕನ ಒಡಂಬಡಿಕೆ ಛಿದ್ರಿಡಿದ ಮಣ್ಣಿನ ಮಡಿಕೆ 6ಬ್ರಾಹ್ಮರಿಗುಣಿಸದಸದನದುರ್ಬೊಮ್ಮ ರಕ್ಕಸನ್ವದನಮದ್ಹಮ್ಮಿನಣ್ಣಗಳ ವಿದ್ಯಾ ಮಾಯಮ್ಮನ ಮಹನೈವೇದ್ಯ 7ಓದಿ ಮಲತ ಗುರುಶಿಷ್ಯ ಸದ್ಭೋಧಾಮೃತಪರಿಹೇಯ ಆಪ್ತಾಧಾರಿಲ್ಲದ ಅರಸೆ ಗ್ರಾಮಾದರಿಸುವ ಆಳರಸೆ 8ವೇತ್ತøವಿವರ್ಜಿತ ಸಭೆಯು ಲೋಕತ್ರಯದಲ್ಲಿ ಅಶುಭವು ಕಂಠತ್ರಾಣಿಲ್ಲದ ಗಾನ ಮುದಿ ಎತ್ತೆಳೆದಾಡುವಗಾಣ9ಹುಸಿನುಡಿವ ದೈವಜÕ ತಾ ಹಡದ ಮಗನಿಂದ ಅವಜÕ ದುರ್ವಸುಕಾಂಕ್ಷೆಯ ಭೇಷಜನು ಮಾನಿಸರ ಉಂಬ ಮಾಯಿ ದನುಜನು10ಶ್ರವಣ ಮನನ ಧ್ಯಾನವನು ಬಿಟ್ಟವನೆ ಜೀವಚ್ಛವನುಮಾಧವಪ್ರಸನ್ವೆಂಕಟಮೂರ್ತಿತನ್ನವರಿಗೆ ಕೊಡುವನುಅರ್ಥಿ11
--------------
ಪ್ರಸನ್ನವೆಂಕಟದಾಸರು
ಹರಿಯೆ ಗತಿಯೆನ್ನಿರೈ ಶ್ರೀನರಹರಿಯೆ ಶರಣೆನ್ನಿರೈ ಪ.ಹರಿಪಾದಕಮಲವ ನಂಬದ ಮೂಢನು ಮನುಜನಲ್ಲದನುಜಶ್ರೀಹರಿಚರಿತಾಮೃತ ಕೇಳದೆ ಗರ್ವಿಪ ನರನು ಪಾಮರನÀು 1ಹರಿಯ ಬಂಟರ ಅನುಸರಣೆಗಳ ಪರಿತ್ಯಾಗಿ ವೃದ್ಧಗೂಗಿಹರಿಮಹಿಮೆಯ ಹೊಗಳಾಡದ ಮಾತಿನ ಮುಖನು ಮಂಡೂಕನು 2ಕೃಷ್ಣಗೆ ಪ್ರಿಯವ್ರತ ದಾನಕೆ ವಿಮುಖಾದ ಧನಪನವ ಕುಣಪಕೃಷ್ಣಾಕೃತಿಯ ಬಹಿರಂತದಿ ನೋಡದ ಜಾಣನವ ಕೋಣ 3ಕೃಷ್ಣಗೆ ನಮಿಸದೆಸತಿಸುತರೊಳು ಭೂರಿತುಷ್ಟ ಹಿತನಷ್ಟ ಶ್ರೀಕೃಷ್ಣನವರ ಕಂಡೆರಗದ ವಿಷಯದಭೋಗಿಭವರೋಗಿ4ಗೋವಿಂದ ಸರ್ವೋತ್ತಮನಿರೆ ಬೇರೆಂಬಜ್ಞಾನಿ ಮದ್ಯಪಾನಿಗೋವಿಂದನೊಳು ವಿಶ್ವಾಸಿಲ್ಲದ ಭಕ್ತಿಯ ಧೀರ ಶುದ್ಧಜಾರ5ಗೋವಿಂದ ತೀರ್ಥ ಪ್ರಸಾದÀವ ನರಿಯದ ಬಲ್ಲನೆ ಕಳ್ಳನುಗೋವಿಂದನೊಪ್ಪದ ಮತವಿಡಿದವ ಮಹಿಗೆಕಕ್ಕಸರಕ್ಕಸ6ಪ್ರಸನ್ನ ಮೂರುತಿ ವಿಧಿಭವವಂದ್ಯನ ಅರ್ಚಕ ಧನ್ಯರೆ ಮಾನ್ಯರುಪ್ರಸನ್ನವೆಂಕಟಪತಿ ಕಂಡುಂಡಾ ಭಕ್ತಿಯಾಸಕ್ತರೆ ಮುಕ್ತರು 7
--------------
ಪ್ರಸನ್ನವೆಂಕಟದಾಸರು