ಶ್ರೀ ವೇಣುಗೋಪಾಲ ಶುಕಮುನಿಯ ಬಿಂಬ ಪ
ಧ್ಯಾನ ಪಾಲಿಸು ನಿನ್ನದೀನಭವದಿ ನೆಲಸಿ ಅ.ಪ.
ಜ್ಞಾನ ಮನ ದಶ ಕರಣ ಪ್ರಾಣ ಪಂಚಕರಲ್ಲಿ
ಭಾನುತೇಜನೆ ನೆಲಿಸಿ ತಿಳಿಸದಲೆ
ನಾನಾ ಬಗೆಯಲಿ ದಣಿಸಿ ನೀನಾಟ ಆಡುತಿಹೆ
ಮರವೆ ಬಿಡಿಸಿ ಪೊರೆಯೊ 1
ಕೋಟಿ ಸೂಂiÀರ್iರ ಕಾಂತಿ ಧಿಕ್ಕರಿಪ ಚಿನ್ಮಯನೆ
ಮಾಟ ಮಾಡದೆ ನಿನ್ನ ಲೀಲೆ ತೋರೊ
ನಾಸಿಕ ಶ್ರವಣ ತನುಮನದಿ ಸಾಯುಜ್ಯ
ಬೇಟೆಯಲಿ ಇದ್ದೆನ್ನ ಕಣ್ಣು ಕಟ್ಟುವುದ್ಯಾಕೆ 2
ಶತಕೋಟಿ ಬ್ರಹ್ಮಾಂಡ ಗತ ಜೀವಗಣಕಮೃತ
ಸತತ ಪಾಲಿಪ ಕರುಣ ನಿನದಲ್ಲವೇನೊ
ಹಿತಮಾಡು ಜಯೇಶವಿಠಲನೆ ಮದ್ಭಿಂಬ
ಪ್ರತಿಬಿಂಬ ಭಾವದಲಿ ಬೆಳೆಸೆನ್ನ ಉದ್ಧರಿಸೊ 3