ಒಟ್ಟು 286 ಕಡೆಗಳಲ್ಲಿ , 68 ದಾಸರು , 257 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಳಿದವನಾರಮ್ಮಯ್ಯ ಬೆಟ್ಟದಮೇಲೆಹಳುವದೊಳಿಹ ತಿಮ್ಮಣ್ಣ ಪ.ವಾರೆದುರುಬಿಗೆ ಸಂಪಿಗೆಗೂಡಿ ವಿಹಗವನೇರಿ ಬರುವನಕ್ಕವಾರಿಜಾನನವಜ್ರಮಣಿದಂಥಾನಗೆ ಸೊಬಗೇರಿದಹರಿಕಾಣಕ್ಕ1ಅಡಿಗೊಮ್ಮೆ ಜೀಯಾ ಪರಾಕೆಂಬ ಸುರಮುನಿಗಡಣದ ವೀರನಾರಮ್ಮನುಡಿದರೆ ನುಡಿವ ನುಡಿಯದಿದ್ದರೊಲ್ಲದಬೆಡಗಿನ ಮಹಿಮ ನೀರೆ 2ಮಕರಕುಂಡಲಶಂಖ ಚಕ್ರಕೌಸ್ತುಭಶಿರಿಯುಕುತ ವಕ್ಷದವನಾವನೆಅಖಿಳಜಗವ ತನ್ನ ಬಸುರಲಿ ಬಚ್ಚಿಟ್ಟಸಖಶ್ರೀನಿವಾಸದೇವನೆ3ಸಾಮಗಾನವನಾದರಿಪ ಶಾಮಲಾಂಗದಕೋಮಲದಾರುಹೇಳೆವ್ಯೋಮಕಚಾಜಾದಿ ವಂದಿತಾನತಜನಪ್ರೇಮವಾರಿಧಿ ನೋಡೆಲೆ 4ಸಿರಿಅಂಜನಾದ್ರಿಯೊಳಾವಾಗ ಮಂಗಳಚರಿತನು ದಾರೆ ತಂಗಿಮರೆಹೊಕ್ಕವರಕಾವಪರಸನ್ನವೆಂಕಟವರದನ ನಂಬು ಬೇಗ 5
--------------
ಪ್ರಸನ್ನವೆಂಕಟದಾಸರು
ಹುಚ್ಚು ಹಿಡಿಯಿತೊ - ಎನಗೆ ಹುಚ್ಚು ಹಿಡಿಯಿತು ಪಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ ಅ.ಪವಾಸುದೇವನೆಂಬ ನಾಮ ವದನದಲಿ ಒದರುವೆ - ಮಾಯಪಾಶವೆಂಬ ಬಲೆಯ ಹರಿದು ಹರಿದು ಬಿಸುಡುವೆ ||ಕೇಶವನ ಹೂವ ಎನ್ನ ಮುಡಿಗೆ ಮುಡಿಸುವೆ - ಭವದಕ್ಲೇಶವೆಂಬ ಗೋಡೆಯನ್ನು ಕೆದರಿಕೆದರಿ ಬಿಸುಡುವಂಥ 1ಕೃಷ್ಣನಂಘ್ರಿ ಕಮಲಗಳಲಿ ನಲಿದು ನಲಿದು ಬೀಳುವೆ -ಭವಕಷ್ಟವೆಂಬ ಕುಂಭಗಳನು ಒಡೆದು ಒಡೆದು ಹಾಕುವೆ ||ನಿಷ್ಠರನ್ನು ಕಂಡವರ ಹಿಂದೆ ಹಿಂದೆ ತಿರುಗುವೆಭ್ರಷ್ಟ ಮನುಜರನ್ನು ಕಂಡು ಕಲ್ಲು ಕಲ್ಲಿಲಿಕ್ಕುವಂಥ 2ಮಂದಮತಿಗಳನು ಕಂಡರೆ ಮೂಕನಾಗುವೆನು - ಹರಿಯನಿಂದೆ ಮಡುವವರ ಮೇಲೆ ಮಣ್ಣ ಚೆಲ್ಲುವೆ ||ಮಂದರಾದ್ರಿಧರನ ದಿನದೊಳನಶನನಾಗುವೆ ಎನ್ನತಂದೆ ಪುರಂದರವಿಠಲನ ಪೊಗಳಿ ಪಾಡಿ ಆಡುವಂಥ 3
--------------
ಪುರಂದರದಾಸರು