ಒಟ್ಟು 523 ಕಡೆಗಳಲ್ಲಿ , 83 ದಾಸರು , 462 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆನ್ನ ಎದುರಲಿ ನಿಲ್ಲುವುದಿಲ್ಲೋ ಯಾಕೆನ್ನಯ ಕರೆ ಕೇಳುವುದಿಲ್ಲೋ ಪ ಯಾಕೆನ್ನ ಅರ್ಚನೆಗೊಲಿಯುವುದಿಲ್ಲೋ ಯಾಕೆನ್ನೊಳು ದಯಮಾಡುವುದಿಲ್ಲೋ ಅ.ಪ ತರಳ ಧೃವನ ಮೊರೆ ಕೇಳಿಸಿತಲ್ಲ ಕರಿ ಎತ್ತಿದ ಸುಮ ಕಾಣಿಸಿತಲ್ಲ ಅರಿ ಅನುಜನ ಸೇವೆ ಹಿರಿದಾಯ್ತಲ್ಲಾ ಕರುಣ ಎನ್ನೊಳಗೇಕೆ ಬರದೋ ಕೃಷ್ಣಯ್ಯ 1 ಅಗಣಿತ ಗೋಪಿಯರೆಡೆಯಲಿ ನಲಿದೆ ನಗಧರನಾಗಿ ಗೋಪಾಲರ ಪೊರೆದೆ ಖಗನಿದ್ದೆಡೆಗೇ ಭರದಲಿ ನಡೆದೆ ನಗುಮೊಗದರಸ ಮಾಂಗಿರಿಯ ರಂಗಯ್ಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾಕೆಲೊ ರಂಗ ನಿನಗಿಂತು ನಟನೆಯ ಮಾತು ಪ ಮಾಕಾಂತ ಕರೆಸಿದರೆ ಬಾರದಿಹ ಪೊಗರುಅ ತಸ್ಕರ ಬುದ್ಧಿ ಕಡೆಗೆ ಇರಿಸಿಬಾಲಕನ ವಂದರಿಸಿ ಬಹುಭಾಗ್ಯವಂತನೆನಿಸಿಎಲ್ಲರೊಳು ಸಲಿಗೆ ನಿಲಿಸಿದಳೊ ನಿಮ್ಮರಸಿ 1 ಕೆಸರ ಚೊಗೆಯಂ ಬಿಡಿಸಿ ಗುಂಜ ಸರವಂ ತೆಗೆಸಿಬಿಸರುಹ ಮಣಿಮಾಲೆ ಕಡೆಗೆ ಇಡಿಸಿಪೊಸ ಪೀತಾಂಬರ ಉಡಿಸಿ ನವರತ್ನವಂ ತೊಡಿಸಿವಸುಧೆಯೊಳು ಮಿಗಿಲಾಗಿ ನಿಲಿಸಿದಳೊ ನಮಿಸಿ 2 ಎನ್ನ ಮಾತನು ಕೇಳು ಮುನಿಸು ಕೃತ್ಯವ ಸೀಳುಇನ್ಯಾಕೆ ಯೋಚನೆ ಫಲವ ಪೇಳುಬಿನ್ನಹವನು ಕೇಳು ನೆರೆಗೂಡಿ ಸುಖಬಾಳುಚೆನ್ನ ಬಾಡದಾದಿಕೇಶವ ದಯಾಳು 3
--------------
ಕನಕದಾಸ
ಯಾಕೊಲ್ಲ ಯಾಕೊಲ್ಲ ನಲ್ಲೆ ಸಂಪದ ಇವ ಯಾಕೊಲ್ಲ ಯಾಕೊಲ್ಲ ಪ ಅಲ್ಲಬೆಲ್ಲವನೊಲ್ಲ ನಲ್ಲೆಯಾದರವೊಲ್ಲ ಒಲ್ಲನ್ಯಾಕವ್ವ ನಲ್ಲ ಇಲ್ಲದದಕೆ ಒಲ್ಲ ಅ.ಪ ಮೇಲು ಮಾಲು ಒಲ್ಲ ನೀಲದುಪ್ಪರಿಗೊಲ್ಲ ಶಾಲು ಸಕಲಾತೊಲ್ಲ ಶೀಲಮಂಚವನೊಲ್ಲ ಅಮೃತ ಉಂಡು ವೀಳ್ಯ ಮೆಲ್ಲಲು ಒಲ್ಲ ಬಾಲೆ ಯಾಕೊಲ್ಲ ಕೈಯೊಳಿಲ್ಲದದಕೆ ಒಲ್ಲ 1 ರತ್ನದುಂಗುರ ಒಲ್ಲ ಮುತ್ತಿನ್ಹಾರ ಒಲ್ಲ ಪುತ್ಥಳೀ ಚಿನ್ನ ಒಲ್ಲ ಕಸ್ತೂರಿಗಂಧ ಒಲ್ಲ ಉತ್ತಮ ಹಯವನ್ನು ಹತ್ತಿ ಮರೆಯ ಒಲ್ಲ ಮಿತ್ರೆ ಯಾತಕೊಲ್ಲ ಹತ್ತಿರಿಲ್ಲದದಕೊಲ್ಲ2 ಸತಿಯ ಸುತರನೊಲ್ಲ ಅತಿಭಾಗ್ಯವನೊಲ್ಲ ಕ್ಷಿತಿ ಅಧಿಕಾರನೊಲ್ಲ ಛತ್ರ ಚಾಮರನೊಲ್ಲ ಸತತ ಸೌಭಾಗ್ಯನೊಲ್ಲ ಮತಿಮಾನ್ಯವನೊಲ್ಲ ಮತಿಯುತೆ ಯಾತಕೊಲ್ಲ ಗತಿಯಿಲ್ಲದದಕೊಲ್ಲ 3 ಭೋಗಭಾಗ್ಯ ಒಲ್ಲ ರಾಗರಚನೆಯೊಲ್ಲ ಭೋಗದಾಸೆಗೆ ತಲೆದೂಗಿ ಒಲಿಯ ಒಲ್ಲ ತೂಗುಮಂಚವೇರಿ ತೂಗಿಸಿಕೊಳ್ಳಲೊಲ್ಲ ಸುಗುಣೆ ಯಾಕೊಲ್ಲ ಕೈಸಾಗದದಕೆ ಒಲ್ಲ 4 ಜಾಣತನದಿ ಧನಧಾನ್ಯಗಳಿಸಲೊಲ್ಲ ಜಾಣ ಜನರ ಕೂಡಿ ಮಾನ ಪಡೆಯಲೊಲ್ಲ ಜಾಣೆ ಏನಾಶ್ಚರ್ಯ ಏನು ಯಾಕೆ ಒಲ್ಲ ಪ್ರಾಣೇಶ ಶ್ರೀರಾಮ ತ್ರಾಣಕೊಡದದಕೊಲ್ಲ 5
--------------
ರಾಮದಾಸರು
ಯಾತಕೆ ದಯಮಾಡಲೊಲ್ಲೆ ರಂಗಯ್ಯ - ಜಗ ಪ ನ್ನಾಥ ನಿನ್ನ ನಂಬಿದೆನಲ್ಲೊ ರಂಗಯ್ಯ ಅ ಚಿಕ್ಕಂದು ಮೊದಲೆ ನಾನು ರಂಗಯ್ಯ - ನೀನೆದಿಕ್ಕೆಂದು ನಂಬಿದೆನೊ ರಂಗಯ್ಯ1 ನೆಂಟರಿಷ್ಟರು ನೀನೆ ರಂಗಯ್ಯ - ನೀನೆಬಂಟರಿಗೆ ಬಂಟನಯ್ಯ ರಂಗಯ್ಯ2 ದಾಸರ ದಾಸನಯ್ಯ ರಂಗಯ್ಯ - ಕರ್ಮಪಾಶಗಳ ಮೋಚನೆ ಮಾಡೊ ರಂಗಯ್ಯ3 ಶೇಷಗಿರಿ ವಾಸ ರಂಗಯ್ಯ - ಆದಿಕೇಶವನೆ ರಕ್ಷಿಸೊ ರಂಗಯ್ಯ4
--------------
ಕನಕದಾಸ
ಯಾವಪರಾಧ ಮಾಡಿದೆನೋ ರಂಗ ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ ಯಾವ ಎಳಗೂಸನು ಬಾವಿಗೆ ತಳ್ಳಿದೆ ಯಾವ ತಪಸಿಗೆ ಭಂಗವಗೈದೆ ಯಾವ ದಂಪತಿಗಳ ಬೇರೆಗೈದೆನೊ ರಂಗ ಜೀವನು ನಾನೇನ ವಂಚನೆಗೈದೆನೊ 1 ಅಪರಾಧಂಗಳು ವಿಪರೀತವಾದರೂ ವಿಪುಲ ಕೃಪಾಕರ ನೀನಹುದಯ್ಯ ಅಪಕೃತಿಗೈದರೂ ಉಪಕೃತಿಗೈವೆ ನೀ ಕುಪಿತನಾಗದೆ ಕಾಯೋ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ ಬೇಗ ವಿಷ್ಣುಪದವ ತೋರುಸುತ್ತ ಬಂತಿದೆಕೊ ಪ ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತ ವಾಯುಗತಿಯಂತೆ ಗಮಿಸುತಲಿ ಹೇಯ ಕಾಮಾದಿಗಳೆಂಬ ರಜವನಡಗಿಸುತ ನಾಯಕನುಪೇಂದ್ರನಾಜ್ಞೆಯ ಪಡೆದು 1 ಅಂಗಜನಯ್ಯನೆ ಪರನೆಂದು ಫುಡಿಫುಡಿಸುತ್ತ ಕಂಗಳೆಂಬ ಮಿಂಚನೆ ನೆರಹಿ ಲೋಕದಿ ಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯ ಭಂಗಿಸಿ ಸುರಪಥವ ತೋರಿಸುತ್ತ 2 ಸಿರಿಯರಸನ ಸಮ್ಯಕ್ಜ್ಞಾನವೆಂಬ ಪೈರಿಗೆ ಬೇರುಬಿಡಿಸಿ ಹರಿಕಥೆಯೆಂಬ ಮಳೆಗರೆದು ನೆರೆ ಶಿಷ್ಯಮನವೆಂಬ ಕೆರೆತುಂಬಿಸಿ ಕರಗಳೆಂಬ ಭರಕೋಡಿ ಹರಿಸುತ ವಿಜಯೀಂದ್ರನ ಗುರು 3
--------------
ವಿಜಯೀಂದ್ರತೀರ್ಥರು
ರಕ್ಷಿಸು ಕಮಲಾಕ್ಷ ಶ್ರೀ ವಕ್ಷ ಪ ರಕ್ಷಾ ಶಿಕ್ಷಾಶ್ರಿತಜನ ಸಂರಕ್ಷ ಅಕ್ಷಯ ಸುರಪಕ್ಷ ಅಧ್ಯಕ್ಷ ಅ.ಪ. ಪ್ರಾಚೀನ ಕರ್ಮಾಬ್ಧಿ ವೀಚಿಯೊಳಗೆ ಸಿಕ್ಕಿ ಪೇಚಾಡುತಲಿರೆ ತೋರದು ಯೋಚನೆ ಶ್ರೀ ಚರಣಕೆ ಶಿರಬಾಗುವೆ ಶ್ರೀಕರ ಸೂಚಿಸಿ ಘನ ಭಕ್ತಿ ವಿರಕ್ತಿ 1 ಆರ್ತ ಬಾಂಧವನೆಂದು ಕೀರ್ತಿ ಪೊತ್ತವನೆಂದು ಅರ್ತಿಯಿಂದಲಿ ಬಂದೆ ಸುತ್ತುತೆ ತಂದೆ ಕೀರ್ತಿಯ ಉಳುಹಿಕೊ ಕೀರ್ತಿಯ ತಂದುಕೊ ಭಕ್ತವತ್ಸಲ ಸ್ವಾಮಿ ಸುಪ್ರೇಮಿ 2 ಜನನಿ ಜನಕರು ಅನುಜಾ ತನುಜರು ಅನುವಾಗಿದ್ದರೆ ಎಲ್ಲ ನಮ್ಮವರೆ ಅನುವು ತಪ್ಪಿದರಾರು ಕಣ್ಣಲಿ ನೋಡರು ಅನಿಮಿತ್ತ ದಯವಂತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ರಕ್ಷಿಸೆ ಏಕನಾಥೆ ತಾಯೆ ದಯದಿಂದ ಎನ್ನನು ಸೊಕ್ಕಿದ ದೈತ್ಯ ಸಂಹಾರೆ ಶರಣ ಜನೋದ್ಧಾರೆ ಪ. ದುರಿತ ದುಃಖ ನಿವಾರಿ ಶರಣರ ಸಲಹುವ ದಾತೆ ಖಳರೆದೆಗಂತೆ ನಿಡಿ ಗುರುಳ ಬಾಲೆ ಪಲ್ಲವಪಾಣಿ ಸುರರ ನಾಯಕಿ ಅಖಿಲದೇವಮಾತೆ ವಿಖ್ಯಾತೆ 1 ಅಳುವಾಡುವ ರಂಗನ ಅದೇನರಿತು ಭಂಗ ಬಾಳ ಬಡಿಸಿದೆಯವ್ವ ಭಕ್ತರುದ್ಧಾರಿ ಕಾಳಗದೊಳು ಕಂಠೀರವೆ ಕರೆದಭಯವನೀವೆ ಸುಕೃತ ಪಂಥಗಾರ್ತಿ 2 ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆ ಚಂಡಿ ಚಾಮುಂಡಿ ತ್ರೈಲೋಕ್ಯನಾಥೇ ಕಂಡು ನಮಿಸುವರ ಕಾಯ್ವೆ ಕಾಮಿತದಾತೆ 3 ಇಂದ್ರಾದಿ ದಿಕ್ಪಾಲಕರು ವಂದಿಸಿ ಸ್ತುತಿಮಾಡಲವರ ಬಂಧನವ ಪರಿಹರಿಸಿದೆಯೆ ಚಂದ್ರಮುಖಿಯೆ ಇಂದು ಬಂದ ಬಂಧನವ ಬಿಡಿಸಿ ಎಂದೂ ಎನ್ನ ನೀ ಕಾಯೆ ತಾಯೆ 4 ಮಲೆತ ಮಹಿಷಾಸುರನ ಕೊಂದೆ ಮಲೆಬೆನ್ನೂರಿನಲಿ ನಿಂದೆ ಬಲುನೇಮವಂತೆ ಸಂತೆಹರವಿಲೆ ನಿಂತೆ ಪುಲ್ಲಲೋಚನೆ ಪ್ರಖ್ಯಾತೆ ಪರಶುರಾಮನ ಮಾತೆ ಹೆಳವನಕಟ್ಟೆ ರಂಗನ ಸಹೋದರಿ5
--------------
ಹೆಳವನಕಟ್ಟೆ ಗಿರಿಯಮ್ಮ
ರಕ್ಷಿಸೊ ಜಾನಕಿ ಕಾಂತ ಶಾಂತ ಪ ತಕ್ಷಣದಲಿ ಉಪೇಕ್ಷೆಯ ಮಾಡದೆ ಅ.ಪ ದಕ್ಷ ನಾನಲ್ಲವೊ ಪೊಗಳಲು ಶಾಸ್ತ್ರ ವಿ ಚಕ್ಷಣೆಯರಿಯೆನೋ ಲಕ್ಷ್ಮೀನಾಥ1 ಸಂತತಪಡುತಿಹ ಚಿಂತೆಯ ಬಿಡುತಲಿ ಶಾಂತಿಯ ಪೊಂದುವ ತಂತ್ರವ ತೋರುತ 2 ಬೇಡುವ ವಿಧದಲಿ ರೂಢಿಯಿಲ್ಲದೆ ಬಲು ಪಾಡುಪಡುತಿಹೆನೋ ನೀಡುತ ಕರವನು 3 ಕ್ಷೀಣಿಸೆ ಉರುತರ ತಪಗಳಿಂ ತನುವನು ತ್ರಾಣವಿಲ್ಲವೋ ರಮಾಪ್ರಾಣನಾಥನೆ 4 ಕೆಟ್ಟಯೋಚನೆ ಎನ್ನ ಮುಟ್ಟದೆ ಮನವನು ಘಟ್ಟಿಯ ಮಾಡುತ ಶಿಷ್ಟ ಪ್ರಸನ್ನನೇ 5
--------------
ವಿದ್ಯಾಪ್ರಸನ್ನತೀರ್ಥರು
ರಂಗ ನಿನ್ನ ಸಂಗ ಸೌಖ್ಯಕಾಗಿ ಕುರಂಗ ಲೋಚನೆಯು ತಾನುಭಂಗ ಬಡುವಳಂತರಂಗದಲ್ಲಿ ನಿನ್ನ ಅಂಗ ತಂದು ತೋರೈ ಪ ಕುಸುಮ ಗಂಧಿಯು ತಾನುಹಸುಮಗಳಲ್ಲವೆ ಪೊಸತಾಪ ಕಾಯಲಿಲ್ಲವೆ 1 ಕನ್ನೈದಿಲೆ ಸೌವಿಸು ಕಣ್ಣುಗಳಿಂದ ನಿನ್ನರ್ಚಿಸುವೆ ತವಕದಿ |ತನ್ನಾದ ಬೊಂಬೆ ತಾ ಎನ್ನ ನಿಮ್ಮ ಬಳಿಯಲಿಮನ್ನಿಸಿ ಕಳುಹಿದಳೈ 2 ಮುನಿದಗಲಿರುವದು ಮುನಿಜನ ವಂದ್ಯಗೆ ಮುನಿಗಳೊಪ್ಪರೀ ಮಾತನು ಕನಸಿನೊಳವಳ ಕೂಡ ಅನುಭವಿಸುವಾತಂಗೆಜನದ ನಾಚಿಕೆ ಯಾತಕೈ 3 ಅಂಚಗಮನಿ ತಾ ಮಿಂಚು ಮಂಚವ ಕಂಡುಸಂಚಿತವನು ನೆನೆವಳ ವಂಚನೆಯ ಬಿಟ್ಟುಮುಚ್ಚಾವಳ ಕೂಡೈ ನೀ ಕೆಂಚಿಯರಸರೊಲ್ಹದು 4 ಮಂದರ ಧರನೀಗ ಬಂದು ಸಂಮಿಸುವದು ರುಕ್ಮಕಂದನ ಸೊಲ್ಲಿಗೆ 5
--------------
ರುಕ್ಮಾಂಗದರು
ರಮಣಿ ಕೇಳೆಲೆ ಮೋಹನ ಶುಭಕಾಯನ ಅಮರ ವಂದಿತ ರವಿಶತಕೋಟಿ ತೇಜನ ವಿಮಲ ಚರಿತ್ರದಿ ಮೆರೆವ ಶ್ರೀ ಕೃಷ್ಣನಕಮಲವದನೆ ನೀ ತೋರೆ ಪ ಬಾಯೊಳಗಿಹಳ ಗಂಡನ ನಿಜ ತಮ್ಮನತಾಯ ಪಿತನ ಮಡದಿಯ ಧರಿಸಿದನಸ್ತ್ರೀಯಳ ಸುತನ ಕೈಯಲಿ ಶಾಪಪಡೆದನದಾಯಾದಿಯ ಮಗನಸಾಯಕವದು ತೀವ್ರದಿ ಬರುತಿರೆ ಕಂಡುಮಾಯಾಪತಿ ಭೂಮಿಯನೊತ್ತಿ ತನ್ನಯಬೀಯಗನ ತಲೆಗಾಯಿದಂಥರಾಯನ ಕರೆದು ತೋರೆ 1 ನಾಲಗೆ ಎರಡರವನ ಭುಂಜಿಸುವನಮೇಲೇರಿ ಬಹನ ತಂದೆ ಇಹ ಗಿರಿಯನುಲೀಲೆಯಿಂದಲಿ ಕಿತ್ತೆತ್ತಿದ ಧೀರನಕಾಳೆಗದಲಿ ಕೊಂದನಲೋಲಲೋಚನೆಯ ಮಾತೆಯ ಪುತ್ರನಣುಗನಮೇಲು ಶಕ್ತಿಗೆ ಉರವನಾಂತು ತನ್ನವರನುಪಾಲಿಸಿದಂಥ ದಾತನಹ ದೇವನಲೋಲೆ ನೀ ಕರೆದು ತೋರೆ 2 ಉರಿಯೊಳು ಜನಿಸಿದವನ ನಿಜ ತಂಗಿಯಸೆರಗ ಪಿಡಿದ ಖಳನಣ್ಣನ ತಂಗಿಯವರನ ತಲೆಯನು ಕತ್ತರಿಸಿದ ಧೀರನಗುರುವಿನೊಳುದಿಸಿದನಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನಕರೆದು ವರವನಿತ್ತು ಮನ್ನಿಸಿ ಸಲಹುವಉರಗಗಿರಿಯ ವೆಂಕಟಾದಿಕೇಶವನ ಗರತಿ ನೀ ಕರೆದು ತಾರೆ 3
--------------
ಕನಕದಾಸ
ರಾಜಿಯಿದ್ದೋರೆಲ್ಲ ಕೇಳ್‍ಬಹುದಣ್ಣ ಪೂಜೆ ಮಾಡೋ ಇದ ಹೇಳತೀನಣ್ಣ ಪ ಸಾಜದ ಹಾದಿಲಿ ಬಾಳ್ಯವ್ರಣ್ಣ ಅ.ಪ ಹಾಸಿಗೇಲಿ ತಿಂಡಿ ತಿನಬಾರ್ದಣ್ಣ ಮೋಸದ ಯೋಚನೆ ಯಿರಬಾರ್ದಣ್ಣ ಕಾಸಿಗೆ ಸುಳ್ಳ ಯೋಳ್ಬಾರದಣ್ಣ 1 ನಾಮ ಇಬೂತಿಯ ಅಣೆಗಚ್ರಣ್ಣ ರಾಮಾ ನಿನ್ಪಾದ್ವೇಗತಿಯೆನ್ನಣ್ಣ 2 ಮಣ್ಣಿನ ಭೂಮಿಯ ನಂಬದಿರಣ್ಣ ಸಣ್ಣ ಕೃಷ್ಣನೇ ಗತಿಯೆನ್ನಣ್ಣ 3 ನೋಡುವ ಕಣ್ಗಳ ಮನದಲಿಡಣ್ಣ ನೋಡದರಲಿ ಹೊಳೆ ಹೊಳೆವಾಬಣ್ಣ 4 ಅದರ ಮೇಲೆಳ್ಡು ಕಾಲ್ಗಳ ನೋಡಣ್ಣ ಮದನ ಗೋಪಣ್ಣನು ಕಾಣುವನಣ್ಣ 5 ಮಡಿಯ ಪೀತಾಂಬ್ರದವುಡಗೆಯ ನೋಡಣ್ಣ ಹಿಡಿದೆತ್ತಿದ ಕೈಕೊಳಲನು ನೋಡು 6 ಮುಡಿಯ ಕಿರೀಟದ ಹೊಳಪನು ನೋಡು ನಡುಹಣೆಯ ನಿಡು ತಿಲಕವ ನೋಡು ಕಡೆನೋಟದ ಕಣ್ಮಿಂಚನು ನೋಡು 7 ಅಂಬರದಂತೆ ಸರೀರವ ನೋಡು ನಂಬಿಕೆಯಲಿ ಸರಣಾರ್ತಿಯ ಮಾಡು 8 ಬೋಗಾನಂದವ ಪಡಿತೀಯಣ್ಣ ಕೂಗಿಗೆ ಬರುವನು ಮಾಂಗಿರಿಯಣ್ಣ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮ ರಾಮ ಎಂಬೆರಡಕ್ಷರ | ಪ್ರೇಮದಿ ಸಲುಹಿತು ಸುಜನರನು ಪ ಹಾಲಾಹಲವನು ಪಾನವಮಾಡಿದ | ಫಾಲಲೋಚನನೆ ಬಲ್ಲವನು || ಆಲಾಪಿಸುತ್ತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು 1 ಅಂಜಿಕೆಯಿಲ್ಲದೆ ಗಿರಿಸಾರಿದ ಕಪಿ-| ಕುಂಜರ ರಮಿಸುತÀ ಬಲ್ಲವನು || ಎಂಜಲ ಫಲಗಳ ಹರಿಗರ್ಪಿಸಿದ | ಕಂಜಲೋಚನೆಯ ಕೇಳೇನು 2 ಕಾಲವರಿತು ಸೇವೆಯ ಮಾಡಿದ ಲೋಲ ಲಕ್ಷ್ಮಣನೆ ಬಲ್ಲವನು || ವ್ಯಾಳಶಯನ ಶ್ರೀ ವಿಜಯವಿಠ್ಠಲನ ಲೀಲೆ ಶರಧಿಯ ಕೇಳೇನು3
--------------
ವಿಜಯದಾಸ
ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ ಪ ತಾಮರಸಸಖ ಸುವಾಂಶಾಬ್ಧಿಶರ ತ್ಸೋಮಾ ಕಮಲಧೀಮ ಅ.ಪ. ಅಜ ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದಾ ಕಾಮಿತ ನೆರೆದಾ ಭೂತಾಧಿಪನ ಭವನದೊಳರ್ಚನೆಗೊಂಡಾ ದೃತಕೋದಂಡಾ ಮಾತಂಗಾರಿ ವರೂಥಿಯ ಜನಕ ಮೇದಾಗಾರಕೆ ಪೋದಾ 1 ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿ ಕೊಟ್ಟ ಜಗಕತಿಧಿಟ್ಟ ನಾಭಿಜನ್ಮನಿಹ ನಗವರ ಸ್ಥಾನಕೆ ಬಂದ ಶುಭಗುಣ ವೃಂದಾ ವೈಭವದಿಂದಲಯೋಧ್ಯಾ ನಗರದಿ ಮೆರೆದಾ ಕಾಮಿತವೆÀರೆದಾ ಸ್ವಾಭಿಮಾನದಲಿ ಸತಿಯಳಿಗಿತ್ತನು ವರವಾ ದೇವರ ದೇವಾ 2 ಜಾಂಬವಂತನಿಗೆ ಜಾನಕಿರಮಣನು ಇತ್ತ ತನ್ನಯಧ್ಯಾತ ಸಂಭ್ರಮದಲಿ ವೇದಗರ್ಭನೊಡನಾಡ್ದಾ ಮುಕ್ತಿಯ ನೀಡ್ದಾ ಕುಂಭೀಶ್ವರನ ಸುಕೋಶದಿ ಬಹುದಿನ ವಾಸ ವೆಸಗಿದನೀಶಾ ಒಲಿದಾ ಮೋದದಿ ನಲಿದ 3 ಅಲವಬೋಧಮುನಿ ಅತಿಮೋದದಲರ್ಚಿಸಿದ ಸಲೆ ಮೆಚ್ಚಿಸಿದ ಇಳೆಯೊಳು ಬಹು ಯತಿಕರ ಪೂಜಿತನಾದ ಲೀಲ ವಿನೊದಾ ಕಳೆದ ಮನದೊಳು ಪೊಳೆದ ಪ್ರೀಯ ಕವಿಜನಗೇಯ 4 ವಾರಿಧಿಬಂಧನ ವಾನರ ನಾಯಕರಾಳ ದೈತ್ಯರ ಸೀಳ್ದಾ ಪದಾಂಬುಜನೀತಾ ತ್ರಿಗುಣಾತೀತ ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವಾ ದುರಿತವ ತಡೆವ ನೀರಜಾಕ್ಷ ಜಗನ್ನಾಥ ವಿಠ್ಠಲ ನಿಶ್ಚಿಂತಾ ಸೀತಾಕಾಂತ 5
--------------
ಜಗನ್ನಾಥದಾಸರು
ರಾಮಯನ್ನಮ:ಎನ್ನೋ ರಾಮಾಯನ್ನಮ: ನಾಮವರಿತದ್ದೇ ರಾಮಾಯನ್ನಮ: ಪ ಬಂದದ್ದು ಬಾರದ್ದು ರಾಮಾಯನ್ನಮ: ತಂದದ್ದು ತಾರದ್ದು ರಾಮಾಯನ್ನಮ: ಅಂದದ್ದು ಆಡದ್ದು ರಾಮಾಯನ್ನಮ: ಮಿಂದದ್ದು ಮೀಯದ್ದು ರಾಮಾಯನ್ನಮ: 1 ಉಂಡದ್ದು ಉಟ್ಟದ್ದು ರಾಮಾಯನ್ನಮ: ಕೊಂಡದ್ದು ಕೊಟ್ಟದ್ದು ರಾಮಾಯನ್ನಮ: ಕಂಡದ್ದು ಕಾಣದ್ದು ರಾಮಾಯನ್ನಮ: ಬಂಡಾದದ್ದಾಗದ್ದು ರಾಮಾಯನ್ನಮ: 2 ಇದ್ದದ್ದು ಇಲ್ಲದ್ದು ರಾಮಾಯನ್ನಮ: ಮೆದ್ದದ್ದು ಮೆಲ್ಲದ್ದು ರಾಮಾಯನ್ನಮ: ಬಿದ್ದದ್ದು ಬೀಳದ್ದು ರಾಮಾಯನ್ನಮ: ಕದ್ದದ್ದು ಕದಿಯದ್ದು ರಾಮಾಯನ್ನಮ: 3 ಬಿತ್ತಿದ್ದು ಬೆಳೆದದ್ದು ರಾಮಾಯನ್ನಮ: ಎತ್ತಿದ್ದು ಎತ್ತದ್ದು ರಾಮಾಯನ್ನಮ: ಸುತ್ತಿದ್ದು ಮುತ್ತಿದ್ದು ರಾಮಾಯನ್ನಮ: ಅತ್ತದ್ದು ಹೊತ್ತದ್ದು ರಾಮಾಯನ್ನಮ: 4 ಭಕ್ತಿ ಭಾವನೆಯೆಲ್ಲ ರಾಮಾಯನ್ನಮ: ಯುಕ್ತಿ ಯೋಚನೆಯೆಲ್ಲ ರಾಮಾಯನ್ನಮ: ಯುಕ್ತಾಯುಕ್ತವು ರಾಮಾಯನ್ನಮ: ಮುಕ್ತಿ ಸಾಧ್ಯ ಶ್ರೀ ರಾಮಾಯನ್ನಮ: 5
--------------
ರಾಮದಾಸರು