ಒಟ್ಟು 28225 ಕಡೆಗಳಲ್ಲಿ , 136 ದಾಸರು , 9942 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗವಿದು ಪುಸಿಯೈ ಬಗೆವೊಡೆ ಮನುಜಾ ತೋರುತಿಹ ಕನಸಿನಂತೆ ಇರುವೆ ಪ ನನಸಿನ ಅರಿವದು ದೊರಕುವ ತನಕ ಕನಸಿದು ಎನ್ನುವ ಕಲ್ಪನೆ ಇಹುದೆ ? ನನಸಿನ ನನಸಾಗಿಹ ಪರವಸ್ತುವೆ ತಾನೆ ನಿಜವು ಎಂಬರಿವಾಗುತಲಿರೆ 1 ನಿರುತದಿ ಸಮನಾಗಿರಲರಿಯದ ಈ ತೋರಿಕೆ ಅನಿಸಿಕೆಗಳು ನಿಜವಲ್ಲವು ಪರಿಕಿಸೆ ಸತತದಿ ಸಮನಾಗಿರುತಿಹ ಪರಮ ಪದವೆ ತಾನೆಂದರಿಯುತಲಿರೆ 2 ಅಳಿಯುವ ಜಗವಿದು ಬೆದರುವಿ ಏತಕೆ ತಿಳಿಯುತಲೀಪರಿ ನಿಜವಸ್ತುವನು ಗಳಿಸಿಕೊಂಡು ನೀ ನಿನ್ನಯ ಮುಕುತಿಯ ಕಲುಷರಹಿತಶಂಕರನಡಿಯರಿಯಲು 3
--------------
ಶಂಕರಭಟ್ಟ ಅಗ್ನಿಹೋತ್ರಿ
ಜಗವು ನಿನ್ನಧೀನ ಖಗಪತಿವಾಹನ ನಿಗಮ ಗೋಚರ ಕೃಷ್ಣ ನಿತ್ಯತೃಪ್ತ ಮೋಹನ ಪ. ಇಂದಿರೆ ನಾಯಕ ಸಿಂಧುಶಯನ ಸದಾನಂದ ಸುಖಪ್ರದ 1 ಜೀವವಿಲಕ್ಷಣ ಜೀವಸಂಪ್ರೇಕ್ಷಣ ಕೇವಲ ನಿರ್ಗುಣ ಕೇಶಿನಿಷೂದನ2 ವಾಯುಜನಕ ಯದುರಾಯ ರುಕ್ಮಿಣಿ ಸಖ ಪ್ರಿಯ ಶ್ರೀ ಲಕ್ಷುಮಿನಾರಾಯಣ ಪಾವನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಡಮತಿಗಡ ಕಡಿದೀಡ್ಯಾಡಿ ಪಡಿರೋ ಸನ್ಮಾರ್ಗವ ಹುಡುಕ್ಯಾಡಿ ಪ ಗಡಗಡಸದೃಢದಯಿಡುತೋಡೋಡಿ ಪಡಿರೋ ಕಡು ಅನಂದ್ವೊಯ್ಕುಂಠ ನೋಡಿ ಅ.ಪ ಚಿಂತೆ ಭ್ರಾಂತಿಗಳ ದೂರಮಾಡಿ ನಿ ಶ್ಚಿಂತರಾಗಿರೋ ಮನ ಮಡಿಮಾಡಿ ಶಾಂತಿತೈಲ್ಹೊಯ್ದು ಜ್ಞಾನಜ್ಯೋತಿಕುಡಿ ಚಾಚಿ ನಿಂತು ನೋಡಿರೋ ಹರಿಪುರದಕಡೆ ಅಂತ್ಯ ಪಾರಿಲ್ಲದಾತ್ಯಂತ ಪ್ರಕಾಶದಿಂ ನಿಂತು ಬೆಳಗುತಾರೋ ಆನಂತಸೂರ್ಯರು ಕೂಡಿ 1 ಬೋಧಾದಿಮಯ ಮಹದ್ವಾರಗಳು ಮತ್ತು ವೇದ ನಿರ್ಮಯ ಪುರಬೀದಿಗಳು ಆದಿಅಂತಿಲ್ಲದಷ್ಟ ಭೋಗಗಳು ವಿ ನೋದ ಮುಕ್ತಿ ಕಾಂತೇರಾಟಗಳು ವೇದವೇದಾಂತ ಅಹ್ಲಾದದಿಂ ಪೊಗಳುವ ಸುಜನ ಮಹದಾದಿಪದವಿಗಳು2 ಸೇವಿಪ ಸುರಮುನಿಗಣಗಳು ಕೋವಿದ ನಾರದಾದಿ ಗಾನಗಳು ರಂಭೆ ನಾಯಕಿಯರ ಮಹನರ್ತನಗಳು ಸಾವಿರಮುಖಪೀಠದ್ಹೊಳೆವ ಶ್ರೀರಾಮನ ಪಾವನಪಾದಕಂಡು ಸಾವ್ಹುಟ್ಟು ಗೆಲಿರೆಲೋ 3
--------------
ರಾಮದಾಸರು
ಜನಕನೇನೆನುತೆನ್ನ ಘನವಂತನಿವೆನೆಂದು ಮನದÀಂದು ಬಳಿಸಂದು ಕೊಟ್ಟನಿಂದು ವೇಷವನು ನೋಡಿದೊಡೆ ಋಷಿಯಂದಮಾಗಿಹುದೆ ಭಾಷೆಯಿಂ ಭಾವೆಯೊಲು ಭಾಸಮಹುದೆ ಚರ್ಯೆಯಿಂ ಭೂಭುಜನ ಪರ್ಯಾಯದಿಂದಿಹನೆ ವನಿತೆಯನು ಸಂತವಿಸ ಲರಿಯದವನು ವನಮೂಲ ಫಲವತಿಂದು ವಾಸಿಪಂಥದೊಳಾನೆ ಶೂರನೆಂದು ಘೋಷಿಸುವ ಶೇಷಗಿರಿವಾಸನೆಂದು
--------------
ನಂಜನಗೂಡು ತಿರುಮಲಾಂಬಾ
ಜನಕರಾಜನ ಸುತೆ ಜಾನಕಿ ಜೋ ಜೋ ಇನಕುಲತಿಲಕನರ್ಧಾಂಗಿಯೆ ಜೋ ಜೋ ಪ ಕುಂದಣ ಕೆತ್ತಿದ ಚಂದದ ತೊಟ್ಟಿಲ ಮಂದಗಮನೆಯರು ತಂದಿರಿಸಿದರು ಸುಂದರಾಂಗಿ ವೈದೇಹಿಯನೆತ್ತುವ ಆ- ನಂದದಿ ಜೋಗುಳ ಪಾಡ್ವರು ಜೋ ಜೋ 1 ರತ್ನ ಮುತ್ತುಗಳ ಕಿರೀಟವು ಹೊಳೆಯಲು ಮುತ್ತಿನ ತೊಡುಗೆಯಲಿ ರಂಜಿಸುವ ಸುಂದರಿಯ ಉತ್ತಮ ಸತಿಯರು ತೊಟ್ಟಿಲ ಪಿಡಿಯುತ ಅರ್ಥಿಯ ಜೋಗುಳ ಪಾಡ್ವರು ಜೋ ಜೋ2 ಕೌಸಲ್ಯದೇವಿಯ ಕಂದನ ರಮಣಿಯೆ ಕೌಶಿಕಯಜ್ಞದ ಪಾಲನಅರಸಿಯೆ ಹಂಸವಾಹನನ ಪಿತನ ಸತಿಯೆ ಖಳ ಧ್ವಂಸ ಮಾಡಿದ ರಘುರಾಮನರಸಿಯೆ 3 ಅಂಬುಜನಯನೆ ಪೀತಾಂಬರ ಶೋಭಿತ ಕಂಬುಕಂಠಿ ಕೋಕಿಲವಾಣಿ ಜೋ ಜೋ ತುಂಬುಗುರುಳ ಮುಖ ಕಮಲೆಯೆ ಜೋ ಜೋ ನಂಬಿದವರ ಕಾಯ್ವ ಕರುಣಿಯೆ ಜೋ ಜೋ4 ಕಮಲನಯನೆ ಕಮಲಾಲಯೆ ಜೋ ಜೋ ಕಮಲಗಂಧಿಯೆ ಕಮಲೋದ್ಭವೆ ಜೋ ಜೋ ಸತಿ ಜೋ ಜೋ ಕಮಲೆ ಹೃತ್ಕಮಲದಿ ವಾಸಿಸÀು ಜೋ ಜೋ5
--------------
ನಿಡಗುರುಕಿ ಜೀವೂಬಾಯಿ
ಜನನ ಮರಣ ಎರಡು ಇಲ್ಲವೊ ತಾ ತಿಳಿದ ಮೇಲೆ ಪ ಮನದೊಳಿರುವ ಮಮತೆ ಅಳಿದು ಘನವಿವೇಕವಾಗಿ ಕಾಣುವ ಇನಕುಲೇಶನನ್ನು ಬಿಡದೆಅನುರಾಗದೊಳು ಭಜಿಸಿದವಗೆ ಅ.ಪ ಆರುಮೂರು ಮೀರಿ ನೋಡೆಲೈ ಅಲ್ಲಿರುವ ತಾರಕದಾರಿ ಪ್ರಣವ ಸಾರುತಿದೆ ನೋಡೈ ಘೋರ ಕತ್ತಲೆಯನರಿದು ಮಾರಜನಕನನ್ನು ನೆನೆದು ಏರಿ ಶಿಖರದೊಳಗೆಯಿರುವ ತೇರು ಕಂಡುಬಂದಬಳಿಕ 1 ದಾನವಾರಿಯನ್ನು ಕಾಣೆಲೊ ಶ್ರೀಪರಮ ಚರಿತ ಗಾನಲೋಲನನ್ನು ಕಾಣೆಲೈ ಭಾನುಕೋಟಿರೂಪನಹುದು ಗುರುವು ತುಲಸಿರಾಮದಾಸ ದೀನರಕ್ಷಕನೆಂದು ಭಜನೆ ಮಾಡಿಕೊಂಡು ಬಂದಬಳಿಕ 2
--------------
ಚನ್ನಪಟ್ಟಣದ ಅಹೋಬಲದಾಸರು
ಜನನಿ ಜಾನಕೀ ನೀದಯಮಾಡೇ ಜಗದೀಶ್ವರ ನಾಯಕೀ ಪ ಫಣಿವಿಲಾಸನ ಪ್ರೀಯೆ ಭಜಕರ ಮನವಿಗಳ ನೀಕಾಯೆ ತಾಯಳೇ ಪ್ರಣವರೂಪಳೆ ಪ್ರಣಮಿಸುವೆ ತ್ರಿಣಯಸಖನಾರಾಣಿ ಸುಂದರೀ 1 ಸರ್ವತಂತ್ರಳೆ ಸಾಕ್ಷರೂಪಿಣಿ ದುರ್ಮದಾಂತಕಿ ದುಃಖದೂರಳೆ ನಿರ್ವಿಕಲೆ ಗೀರ್ವಾಣೆ ಶುಭಕರಿ ಉರ್ವಿಪಾಲಿಕಳಾದ ಸೀತೆಯ 2 ಆದಿಶಕ್ತಿ ಅನಂತರೂಪಳೆ ವೇದಮಾನಿನಿ ವಾದಿಭೀಕರಿ ಪಾದಸೇವ ಕನಿಷ್ಟಮೊದಗಿಸೆ ಭೂಧರಗೆ ನಿಜರಾಣಿ ವೈಭವೆ 3 ರಂಗನಾಯಕಿ ರಾಧೆ ಶ್ರೀ ಜಯ ಮಂಗಳಾಂಗಿ ಸಮೋದೆ ನಿಚ್ಚಲೆ ಜಂಗಮಾರ್ಚಿತ ಗುರುವು ತುಳಸೀ ಬೆಂಗಳೂರೊಳಗಿರುವ ಕಾರಣ4
--------------
ಚನ್ನಪಟ್ಟಣದ ಅಹೋಬಲದಾಸರು
ಜನನಿ ಪಾಲಿಸೆ ಶುಭಾಂಗಿ ಸಲೆ ದಯದಿ ವಲಿಸುತಲಿ ಪಾಲಾಬ್ಧಿ ಬಾಲೆ ಶೀಲೆ ಪ ವಾರಿಜಾರೊ ಸಹೋದರಿಯೆ | ಮೂರು ಭುವನೋದ್ಧಾರಿ ಚಾರುಗಾತ್ರಿ ಶ್ರೀರಮಣಿ | ದೂರ ನೋಡದಿ ಬಾರೆ ಮನೆಗೆ 1 ದಾತೆ ಖ್ಯಾತೆ ಮಾತೆ | ಸುಜನೋಪಕಾರಿ ಪಾವನಿ ಪ್ರೀತೆ ಸದಯೆ 2 ಸ್ತೋಮವಂದಿತೆ ತ್ರಿಗುಣಮಾನಿ ಭಾಮೆ ಭಾಗ್ಯದಾಯಕಿಯೆ ಪ್ರೇಮವಾರಧಿ ಬೀರು ದಯವ 3
--------------
ಶಾಮಸುಂದರ ವಿಠಲ
ಜನನಿ ಬ್ರಹ್ಮಾಣಿಯೆ | ವರ ವೀಣಾಪಾಣಿಯೆ || ಜನನಿ ಬ್ರಹ್ಮಾಣಿಯೆ ಪ. ಕರುಣಿಯೆ | ಫಣಿವೇಣಿಯೆ || ಬಾ ಬಾ ಶುಕವಾಣೀ | ಜನನೀ ಬ್ರಹ್ಮಾಣಿಯೆ 1 ದೋರುತೆ ವರಗಳೀಯುತೆ | ಬಾ ಬಾ ಗೀರ್ವಾಣೀ ಜನನಿ ಬ್ರಹ್ಮಾಣಿಯೆ 2 ವಿಮಲಚರಿತೆಯೆ || ಬಾ ಬಾ ವಾಗ್ವಾಣೀ | ಜನನಿ ಬ್ರಹ್ಮಾಣಿಯೆ 3
--------------
ವೆಂಕಟ್‍ರಾವ್
ಜನನಿ ರುದ್ರಾಣಿ ರಕ್ಷಿಸು ಎನ್ನ ಜಗದೀಶನ ರಾಣಿ ಪ. ವನಜಭವಸುರಮುನಿಕುಲಾರ್ಚಿತೆ ಕನಕವರ್ಣಶರೀರೆ ಕಮಲಾ- ನನೆ ಕರುಣಾಸಾಗರೆ ನಮಜ್ಜನ- ಮನಮುದಾಕರೆ ಮಾನಿತೋದ್ಧರೆ ಅ.ಪ. ಆದಿಕೃತಾಯುಗದಿ ಪ್ರತಿಷ್ಠಿತ- ಳಾದೆ ಧರಾತಳದಿ ಆದಿತೇಯರ ಬಾಧಿಸುವ ದಿತಿ- ಜಾಧಮರ ಭೇದಿಸಿದೆ ಸಜ್ಜನ- ರಾದವರ ಮನ್ನಿಸಿದೆ ತ್ರೈಜಗ- ದಾದಿಮಾಯೆ ವಿನೋದರೂಪಿಣಿ 1 ಖಂಡ ಪರಶುಪ್ರೀತೆ ನಿಖಿಲಬ್ರ- ಹ್ಮಾಂಡೋದರಭರಿತೆ ಚಂಡಮುಂಡವೇತಂಡದಳನೋ- ದ್ದಂಡಸಿಂಹೆ ಅಖಂಡಲಾರ್ಚಿತೆ ಪಾಂಡುತನುಜ ಕೋದಂಡ ವಿತರಣೆ ಚಂಡಿಕೇ ಕರದಂಡಲೋಚನಿ2 ಸಿಂಧೂರ ಸಮಯಾನೆ ಸರಸ ಗುಣ- ವೃಂದೆ ಕೋಕಿಲಗಾನೆ ಸುಂದರಾಂಗಿ ಮೃಗೇಂದ್ರವಾಹಿನಿ ಚಂದ್ರಚೂಡಮನೋಜ್ಞೆ ಸತತಾ- ನಂದಪೂರ್ಣೆ ಮುನೀಂದ್ರನುತೆ ಸುಮ- ಗಂಧಿ ಗೌರಿ ಶಿವೇ ಭವಾನಿ 3 ಲಂಬೋದರಮಾತೆ ಲಲಿತ ಜಗ- ದಂಬಿಕೆ ಗಿರಿಜಾತೆ ಕಂಬುಕಂಠಿ ಕಾದಂಬನೀಕು- ರುಂಬಜಿತಧಮ್ಮಿಲ್ಲೆ ತವ ಪಾ- ದಾಂಬುಜವ ನಾ ನಂಬಿದೆನು ಎನ- ಗಿಂಬು ಪಾಲಿಸೆ ಶುಂಭಮರ್ದಿನಿ 4 ಘನವೇಣುಪುರವಾಸೆ ಸರ್ವಾರ್ಥದಾ- ಯಿನಿ ತ್ರೈಜಗದೀಶೆ ಸನಕನುತೆ ಶ್ರೀಲಕ್ಷುಮಿನಾರಾ- ಯಣಭಗಿನಿ ಶ್ರೀಮಹಿಷಮರ್ದಿನಿ ಮನಮಥಾಮಿತರೂಪೆ ಕಾತ್ಯಾ- ಯಿನಿ ನಿರಾಮಯೆ ಮಂಜುಭಾಷಿಣಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಜನನೀ ತ್ರಿಜಗತಿ ಜನಾರ್ದನೀ ಜನನೀ ಜಯತು ಶ್ರೀಪದ್ಮಾವತೀ ಪ. ಗುಣಗಣಾರ್ಣವೆ ವಿಶ್ವಪೂಜಿತ ಜನನಮರಣವಿದೂರೆ ಪದ್ಮಾಸನೆ ಘನಗಗನಭೂಪಾಲನಂದಿನಿ ಅ.ಪ. ಶ್ರೀನಿವಾಸನ ರಾಣಿ ಸರ್ವಾರ್ಥ ನಿ- ದಾನಾಂಬುಜಪಾಣಿ ಭಾನುಕೋಟಿಸಮಾನ ತೇಜೆ ಸ- ದಾನುರಾಗಪ್ರದಾನೆ ವಿಬುಧ- ಶ್ರೇಣಿನುತೆ ಮಹದಾದಿಮಾಯಾ- ಮಾನಿ ಮಾಧವಮನವಿಲಾಸಿನಿ 1 ಸುಂದರಿ ಸುಮನೋಹರಿ ಸುಜ್ಞಾನಾ- ನಂದೆ ಸಿಂಧುಕುವರಿ ಚಂದ್ರವದನೆ ಚರಾಚರಾತ್ಮಕಿ ವಂದನೀಯೆ ಪರೇಶಪರಮಾ- ನಂದರೂಪೆ ಸನತ್ಸುಜಾತ ಸ- ನಂದನಾದಿಮುನೀಂದ್ರವಂದಿತೆ 2 ಅಂಬೆ ಶ್ರೀಹರಿಪ್ರೀತೆ ಶಂಭುಸಂಭಾವಿತೆ ತ್ರಿಲೋಕಾ- ರಂಭಸೂತ್ರೆ ಪವಿತ್ರೆ ವಿಶ್ವಕು- ಟುಂಬೆ ಕಮಲಯನೇತ್ರೆ ಸಾಧ್ವೀಕ- ದಂಬಮಸ್ತಕಮಣಿಪ್ರಭಾಶಿನಿ 3 ಪದ್ಮ ಸರೋವಾಸಿನೀ ಪಾವನಹೃ ತ್ಪದ್ಮನಿತ್ಯಭಾಸಿನಿ ಪದ್ಮನವಕ್ರೀಡಾವಿಲಾಸಿನಿ ಮ- ಹನ್ಮನೋಧ್ಯಾನಾಧಿರೂಢೆ ಸು- ಪದ್ಮಹಸ್ತೆ ನಮಸ್ತೆ ಪಾವನೆ ಪದ್ಮನಾಭನರಮಣಿ ಕರುಣಿ 4 ವರಲಕ್ಷ್ಮೀವಾರಾಯಣಿ ಕಲ್ಯಾಣಿ ಶ್ರೀ- ಕರೆ ಕಾಳಾಹಿವೇಣಿ ಧರೆಯೊಳುತ್ತಮ ಕಾರ್ಕಳದಿ ಸು- ಸ್ಥಿರನಿವಸವ ಗೈದೆ ಕರುಣಾ- ಶರಧಿ ಭಕ್ತರ ಪ್ರಾರ್ಥನೆಯ ಸ್ವೀ- ಕರಿಸಿ ಪೊರೆವಿಷ್ಟಾರ್ಥದಾಯಿನಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಜನರ ಪಾಲಿಸುವ ಷಣ್ಮುಖನ ನಾಮಾ ಪ ಪರಕೆ ಪರತತ್ವವಾಗಿಹ ದಿವ್ಯನಾಮ 1 ತಾರಕ ಬ್ರಹ್ಮವಾಗಿಹ ದಿವ್ಯನಾಮ 2 ಶಂಭುಪುತ್ರನೆ ನಿನ್ನ ದಿವ್ಯನಾಮ 3 ನಿಚ್ಚ ಸಚ್ಚಿದಾನಂದ ಚಿನ್ಮಯ ನಿನ್ನ ನಾಮ 4 ಅನುದಿನ ಅಘ ಕಳೆವ ನಾಮ ||5||
--------------
ಬೆಳ್ಳೆ ದಾಸಪ್ಪಯ್ಯ
ಜನಿಸಿ ನಾ ಬುವಿಯೊಳು ನಿನಗೆ ದುಡಿಯುವುದಾಯ್ತು ಎನಗೇನುಫಲ ಪೇಳು ಮಾಯವೆ ಎಲೆ ಜೀವವೆ ಪ ನಿನಗೆ ನೀ ದುಡಿಯುವಿ ಎನಗೆ ದುಡಿಯುವುದೇನು ದಿನಸರಿಯದೆನುವುದು ನ್ಯಾಯವೆ ಎಲೆ ಕಾಯವೆ ಅ.ಪ ಘನರೋಗ ತಾಪತ್ರವನುಭವಿಸುವುದೆಲ್ಲ ನಿನಗಾಗಲ್ಲೇನು ಪೇಳು ಮಾಯವೆ ಎಲೆ ಜೀವವೆ ನಿನಗೆ ಬಂದ ಕರ್ಮವನುಭವಿಪೆಯಲ್ಲದೆ ಎನಗಾಗೆನುವುದು ನಿಜನ್ಯಾಯವೆ ಎಲೆ ಕಾಯವೆ 1 ಬನ್ನ ಬಡುವೆನಲ್ಲ ಕರ್ಮ ಮಾಯವೆ ಎಲೆ ಜೀವವೆ ಎನ್ನ ಜೋಪಾನವು ನಿನ್ನಿಂದಲೆಂಬುವುದು ಮಣ್ಣುಗೊಂಬೆ ನಿನಗೆ ನ್ಯಾಯವೆ ಎಲೆ ಕಾಯವೆ 2 ಚಳಿಮಳೆಬಿಸಿಲಿನ ಬಲುತಾಪದಲಿ ನಿನ್ನ ಸಲಹುವರಾರ್ಹೇಳು ಮಾಯವೆ ಎಲೆ ಜೀವವೆ ಚಳಿಮಳೆಬಿಸಿಲಿನ ಬಲುತಾಪ ಎನಗೆಲ್ಲಿ ಎಲುವಿನ್ಹಂದರ ನಿಂದೀನ್ಯಾಯವೆ ಎಲೆ ಕಾಯವೆ 3 ಭಿನ್ನ ಮಾತುಗಳೇನೋ ಮಾಯವೆ ಎಲೆ ಜೀವವೆ ನಿನ್ನದು ದಾವೂರು ನನ್ನದು ದಾವೂರು ಎನ್ನ ಸರಿಗಟ್ಟುವುದು ನ್ಯಾಯವೆ ಎಲೆ ಕಾಯವೆ 4 ನಾನಿಲ್ಲದಿರೆ ನಿನ್ನ ಖೂನವರಿವರಾರು ನೀನೆ ಪೇಳೆಲೋ ನಿಜ ಮಾಯವೆ ಎಲೆ ಜೀವವೆ ಹೀನನೆ ನೀನೆನ್ನ ಖೂನವರಿಯದೆ ಬಿನಗು ಶ್ವಾನನಂತೊದರುವುದು ನ್ಯಾಯವೆ ಎಲೆ ಕಾಯವೆ 5 ಹೊನ್ನೂ ಹೆಣ್ಣು ಮಣ್ಣು ಎನ್ನಿಂದ ಪಡೆದು ನೀ ಧನ್ಯನೆನಿಸುವೆಯಲ್ಲ ಮಾಯವೆ ಎಲೆ ಜೀವವೆ ನಿನ್ನಗದರ ಫಲ ಎನ್ನಗೇನೆಲೆ ಪಾಪಿ ನಿನ್ನ ಮೋಹಿಸಿ ನಾನು ಕೆಡುವೆ ಎಲೆ ಕಾಯವೆ 6 ಎನ್ನಿಂದ ಕೆಡುವೆನೆಂಬನ್ಯವಾದವು ಬೇಡ ನಿನ್ನದೆಲ್ಲವ ಬಲ್ಲೆ ಮಾಯವೆ ಎಲೆ ಜೀವವೆ ಬನ್ನ ಬಡುವೆ ಸತತ ಎನ್ನನರಿವುದು ನಿನ್ನಗಳವೇ ಎಲೆ ಕಾಯವೆ 7 ಹೇವನಿನಗ್ಯಾಕಿಷ್ಟು ಸಾವುತ್ಹುಟ್ಟುತ ನೀನು ನೋಯುವುದ ಬಲ್ಲೆ ನಾ ಮಾಯವೆ ಎಲೆ ಜೀವವೆ ಹೇವದಮಾತಲ್ಲ ಸಾವುಹುಟ್ಟೆನಗಿಲ್ಲ ಕೇವಲನಾದಿಕಾಲದಿರುವೆ ಎಲೆ ಕಾಯವೆ 8 ಕೇವಲನಾದಿಯು ಜೀವ ನೀನಾದರೆ ದೇವರೆ ನೀನಿದ್ದಿ ಮಾಯವೆ ಎಲೆ ಜೀವವೆ ದೇವರು ನಾನಲ್ಲ ದೇವ ಶ್ರೀರಾಮನ ಕೇವಲದಾಸ ನಾನಿರುವೆ ಎಲೆ ಕಾಯವೆ 9
--------------
ರಾಮದಾಸರು
ಜನುಮ ಜನುಮದಲಿ ಎನಗಿರಲಿ ಪ ಹನುಮ ಭೀಮ ಮಧ್ವಮುನಿಗಳ ಸೇವೆಯು ಅ.ಪ ಮಾತರಿಶ್ವ ನೀ ಪ್ರೀತನಾಗೆ ಅಜ ತಾತನು ಸುಲಭದಿ ಒಲಿಯುವನು ಕೋತಿಯ ರೂಪದಿ ಭೂತಲದಲಿ ಬಲು ಖ್ಯಾತಿ ಪಡೆದ ರಾಮದೂತರ ಸೇವೆಯು 1 ಹರನ ಭಕುತ ಜರಾಸಂಧನ ಕಾಯುವ ಹರಿದು ಮುರಿದು ಬಲು ಸುಲಭದಲಿ ಹರಿಗಪರೋಕ್ಷದಿ ಅರ್ಪಣೆ ಮಾಡಿದ ಕುರುಕುಲಪತಿ ಬಲಭೀಮರ ಸೇವೆಯು 2 ಶುದ್ಧ ದ್ವಿಜಕುಲದಿ ಉದ್ಧವಿಸುತ ಅನಿ ರುದ್ಧನಿಗನುಮತವಾಗಿರುವ ಸಿದ್ಧಾಂತದ ಪದ್ಧತಿಯನು ತೋರಿದ ಮಧ್ವಮತದ ತತ್ವದಲಿ ಪ್ರಸನ್ನತೆ 3
--------------
ವಿದ್ಯಾಪ್ರಸನ್ನತೀರ್ಥರು
ಜನುಮ ಜನುಮದಲ್ಲಿ ಕೊಡು ಕಂಡ್ಯ ಹರಿಯೆ ಪ ಅನಿಮಿತ್ತ ಬಂಧು ಕೃಷ್ಣ ದಯದಿಂದಲೆನಗೆ ಅ.ಪ ಮೆರೆವ ಊಧ್ರ್ವ ಪುಂಡ್ರ ಎರಡಾರು ನಾಮವುಕೊರಳೊಳು ತುಲಸಿಯ ವನಮಾಲೆಯುಮೆರೆವ ಶಂಖಚಕ್ರ ಭುಜದೊಳೊಪ್ಪುತ ನಿಮ್ಮಸ್ಮರಿಸುತ್ತ ಹಿಗ್ಗುವ ವೈಷ್ಣವ ಜನುಮವ 1 ಹರಿಯೆ ಸರ್ವೋತ್ತಮ ರಾಣಿ ಲಕುಮಿ ಬೊಮ್ಮಹರ ಇಂದ್ರಾದ್ಯಖಿಳರು ತವ ಸೇವಕರುವರ ತಾರತಮ್ಯ ಪಂಚ ಭೇದ ಸತ್ಯವೆಂದುನೆರೆ ಪೇಳುವ ವಾಯುಮತದ ಸುಜ್ಞಾನವ 2 ಸಿರಿ ಕೃಷ್ಣ ನಿನ್ನಲ್ಲಿಅಕಳಂಳವಾದ ನವವಿಧ ಭಕುತಿಯನು 3
--------------
ವ್ಯಾಸರಾಯರು