ಒಟ್ಟು 4192 ಕಡೆಗಳಲ್ಲಿ , 129 ದಾಸರು , 2829 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆನ್ನ ಮಾತ ಕೇಳದು - ಮಂದಜ್ಞಾನದಿ |ತನುವಿನಾಸೆಯ ಬಿಡಲೊಲ್ಲದು ಪವನಜನಾಭನೆ ನಿನ್ನ ನಾಮ ಸಾಸಿರವ |ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪದೇಹ ಸಂಬಂಧಿಗಳಾದವರೈವರು |ಮೋಹಪಾಶದಿಕಟ್ಟಿಬಿಗಿದಿಹರೈ ||ಕಾಯಅನಿತ್ಯವೆಂಬುದನರಿಯದೆ |ಮಾಯಾಪ್ರಪಂಚದಿಂದಲಿ ಬದ್ಧನಾಗಿಹೆ1ಸಾಧುಸಜ್ಜನರ ಸಂಗವ ಮಾಡಿ ಪರಗತಿ-|ಗಾಧಾರವನು ಮಾಡಲೊಲ್ಲದಯ್ಯ ||ಕ್ರೋಧಕುಹಕದುಷ್ಟರೊಡನಾಡಿ ಕಾಲನ |ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2ಮದಗಜ ಮೈಯ ಮರೆತು ಮುಂದುಗಾಣದೆ |ಕದುವಿನೊಳಗೆ ಬಿದ್ದಂತಾದೆನಯ್ಯ ||ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |ಪದುಮಾಕ್ಷ ವರದ ಶ್ರೀಪುರಂದರವಿಠಲ3
--------------
ಪುರಂದರದಾಸರು
ಮನಸು ನಿನ್ನ ಮೇಲೆ ಬಹಳ-ಕಾಲ |ಅನುಕೂಲಿಸದೊ ಗೋಪಾಲ ಪನಿನ ಕೂಡೆ ಈಗ ಕೂಡುವೆನೆಂದರೆ ಮನೆ-|ಜನರೆಲ್ಲರು ಕೂಡಲೀಸರೊ ಕೃಷ್ಣ ಅ.ಪಗಂಡನೆಂಬವನು ಉದ್ದಂಡ-ಎನ್ನ |ಕಂಡರೆ ಸೇರನುಭಾವಪ್ರಚಂಡ ||ಭಂಡೆ ಅತ್ತೆಯು ಲಂಡೆಅತ್ತಿಗೆಕೇಳೊ |ಕಂಡರಿಬ್ಬರನು ದಂಡಿಸುವರೊ ರಂಗ 1ನೆರೆಹೊರೆಯವರೆನ್ನನೆಲ್ಲ-ಮೈಯ |ನೆರಳ ಕಂಡರೆ ಸೇರರಲ್ಲ ||ಸರಿಸಖಿಯರು ಎಲ್ಲ ಸುಮ್ಮನಿರುವರಲ್ಲ |ಮರೆಮಾತನಾಡಲು ವೇಳೆ ಕೂಡದೊ ರಂಗ 2ಮದುವೆ ಮಾಡುವರೊ ಮನೆಯೊಳು-ನಾಳೆ |ಅದರ ಸಂದಣಿಯ ಹೊಂಚಿನೊಳು ||ಮುದದಿಂದ ಕೂಡುವೆನಾವ ಪರಿಯೊಳು |ಮದನತಂತ್ರದಿಂದ ಪುರಂದರವಿಠಲ3
--------------
ಪುರಂದರದಾಸರು
ಮರವನೇರಿ ಮಡುವದು ಮುಂದಾ ಶ್ರೀ ಕೃಷ್ಣ ಕಾಳಿಶಿರವನೇರಿ ತಾಂಡವವಾಡಿದಾಸ್ಮರಿಸಲವನ ತರುಣಿಯರಿಗೆ ವರವ ಪ್ರಾಣವಿರಿಸಿ ಕೊಟ್ಟುಶಿರದಿಚರಣಗುರುತನಿರಿಸಿ ಪೊರೆದ ಕಾಳಿಂಗನನು ಕೃಷ್ಣ 1ರಜತಗಿರಿಗೆ ಸದೃಶವೆನಿಸಿದ ಶ್ರೀಕೃಷ್ಣ ಯಮ-ಳಾರ್ಜುನವೆಂಬ ಮರವ ಕೆಡಹಿದಅಜಗರನ ನಿಜ ಉರಕೆ ಬಿಜಯಂಗೈದು ಸುಜನೋದ್ಭಾರಿಭಜಿಸೆ ಗೋವ್ರಜವ ಕಾಯ್ದ ಅಜಗರನ ಸೀಳಿ ಕೃಷ್ಣ 2ಚಂದ್ರಮುಖಿಯರುಡುವ ಶೀರೆಯ ಶ್ರೀಕೃಷ್ಣನು ಮರದಿಬಂಧಿಸಿಟ್ಟು ಮಾನಗಳೆವೆಯಾನಂದನನ್ನು ಬಂದು ತುಡುಕಿದಂದು ಫಣಿಯ ಹೊಂದಿಸಿದೆನಂದಗೋಪಿ ಕಂದ ಗೋವಿಂದದಾಸವಂದ್ಯ 3
--------------
ಗೋವಿಂದದಾಸ
ಮರವೆ ಎಂಬುದು ಎಲ್ಲಿಹುದೋ ಯೋಗಿಗೆಮರವೆ ಎಂಬುದು ಎಲ್ಲಿಹುದೋಅರಿತು ಸರ್ವವ ಸರ್ವದಲಿ ಆತ್ಮ ತಾನಾಗಿರ್ದುನಿರುತ ಕಾಲದಿ ಮುಕ್ತಗೆ ಅವಗೆಪನಿರ್ವಿಕಲ್ಪಸಮಾಧಿನಿತ್ಯನಿತ್ಯಳವಟ್ಟುದುರ್ವಿಘ್ನಗಳೆಜರಿದುಗರ್ವದೂರವಾಗಿ ಗಾಢ ತೂರ್ಯದೊಳಿದ್ದುನಿರ್ವಹಿಸಿ ನಿಜಸುಖವನುಪರ್ವಿಪಸರಿಸಿ ತನಗೆ ಪ್ರತಿಗಾಣುತಿರುತಿಪ್ಪಸರ್ವಸಾಕ್ಷಿ ತಾನಾದವಗೆ1ನಾದದೊಳು ಕಿವಿಯಿಟ್ಟು ನಾಸ್ತಿಮನವಸಿಮಾಡಿಬೋಧೆ ಬಲಿದಾ ಲಹರಿಯಹಾದಿಯಂತುಟೋ ಅಂತು ಹರಿದಾಡುತಲಿ ತಾಭೇದಾ ಭೇದಗಳನುಳಿದುಸಾಧು ಸಂಗವ ಕೂಡಿ ಸಂತುಷ್ಟನಾಗಿಪ್ಪನಾದ ಮೂರುತಿಯಾಗೆ2ಪರಮಸಾರವ ತಿಳಿದು ಪರಿಪೂರ್ಣನಾಗಿರುತವರಚಿದಾನಂದ ಗುರುವೆಚರಣಸ್ಮರಣೆಯ ಮನದಿ ಚಲಿಸದಂತಾವಾಗಹಿಡಿದು ನಾಲಗೆಯೊಳಿರಿಸಿಗುರುವೆ ಗುರುವೆ ಎಂದು ತಾನಾಗಿರ್ದುನಿರತಿಶಯದ ಪರಮಗೆ3
--------------
ಚಿದಾನಂದ ಅವಧೂತರು
ಮರೆತೆಯೇನೋ ರಂಗ-ಮಂಗಳಾಂಗ ಪಕೋಲು ಕೈಯಲಿ ಕೊಳಲು, ಜೋಲುಗಂಬಳಿ ಹೆಗಲ |ಮೇಲೆ ಕಲ್ಲಿಯ ಚೀಲ ಕಂಕುಳಲಿ ||ಕಾಲಿಗೆ ಕಡಗವು ಕಾಯುತ ಹಸು ಹಿಂಡ |ಬಾಲಕರ ಮೇಳದಿ ಇದ್ದೆಯೊ ರಂಗ 1ಕಲ್ಲುಮಣಿ ಕವಡಿ ಚೆನ್ನೆ ಗುಳ್ಳೆಗುಂಜಿ ಒಡವೆ |ಎಲ್ಲವು ನಿನ್ನ ಸರ್ವಾಂಗದಲಿ ||ಅಲ್ಲಲ್ಲಿಗಳವಟ್ಟು ನವಿಲುಗರಿಯ ದಂಡೆ |ಗೊಲ್ಲ ಮಕ್ಕಳ ಕೂಡೆ ಸಲ್ಲಾಪವಾಡುತೆ 2ಸಿರಿದೇವಿ ಬಂದು ಸೇರಿದ ಬಳಿಕ ಲೋಕದೊಳಗೆ |ಸಿರಿಯರಸನೆಂಬುವರು ||ವರಮುಖ್ಯ ಪ್ರಾಣವಂದಿತ ಉಡುಪಿಯ |ಸಿರಿಪುರಂದರವಿಠಲ ಶ್ರೀ ಕೃಷ್ಣ* 3
--------------
ಪುರಂದರದಾಸರು
ಮರೆಯದಿರು ಮರೆಯದಿರು ಗುರುರಾಯನ |ಲೋಕ ಪರಿಪಾಲಿಸುವಗುರುಸಾರ್ವಭೌಮನ್ನಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಪರಮೇಶ್ವರನು ತಾನೆಪರಮಪ್ರೇಮದಿಂದಗುರುರೂಪವನುಧರಿಸಿ ಧರೆಗೆ ಬಂದು, ತ್ವರದಿಂದ ಮಾನವರ ಮರವೆಯನುಪರಿಹರಿಸಿ | ಸ್ಥಿರ ಮುಕ್ತಿ ಸುಖವಿತ್ತು ಪೊರೆವ ಗುರುವರನ1ಕರುಣದಿಂ ಜನರ ರಕ್ಷಿಸುವ ಸದ್ಗುರುವರನ | ಶರಣು ಪೊಕ್ಕರೆಕೃಪಾ ಸುಧೆಗರೆವನ | ನಿರುತದಲಿ ಭಕುತರಿಗೆ |ನಿರತಿಶಯಸೌಖ್ಯವನು ಸರಿದಂತೆ ವರವಿತ್ತು | ಮೆರೆವ ದೇಶಿಕನ2ಕುವರ ಬಾರೆಂದಭಯಕರವಶಿರದಲ್ಲಿರಿಸಿ |ನೆರೆಸುಬೋಧೆಯಗೈದು ನರಭಾವ ಕಳೆದು |ಮರಣ ಭಯ ಹರಸಿ | ಬಹು ಹರುಷದಿಂದಿರುಎಂದ ಚಿರ ಸಿಂಧುಗಿಯವಾಸ |ಗುರುಶಂಕರನಪಾದ3
--------------
ಜಕ್ಕಪ್ಪಯ್ಯನವರು
ಮರೆಯದೆ ಮನದಲಿ ಸಿರಿವರನ ಚರಣವನುಸ್ಮರಿಸಿದಂಥವರನ್ನು ನರರೆನ್ನಬಹುದೆ ? ಪ.ಮುರಹರನಿಗೆರಗುವ ಶಿರವು ದ್ವಾರಕಾಪುರವುಹರಿಕಥೆ ಕೇಳುವಕರ್ಣ ಗೋಕರ್ಣವುಬಿರುದು ಪೊಗಳುವಜಿಹ್ವೆ ಸ್ಥಿರದಿ ಕ್ಷೀರಾರ್ಣವವರದನ ಪೂಜಿಪ ಕರವು ರಾಮೇಶ್ವರವು 1ಸೃಷ್ಟೀಶ ನಿರ್ಮಾಲ್ಯ ಗೃಹಣನಾಸಿಕ ಕಾಶಿಕೃಷ್ಣನ ನೋಡುವ ದೃಷ್ಟಿ ಶ್ರೀ ಮುಷ್ಣವುಅಷ್ಟಮದಗಳ ಜರೆದ ಮುಖ ಮಥುರಾಪುರವಿಷ್ಣುವನು ಪಾಡುವ ಕಂಠ ಭೂ ವೈಕುಂಠ 2ಪರಕೆ ನಡೆಸುವಜಂಘೆ ಹರಿವ ಗಂಗೆಯು ಈಪರಿಯಲೊಪ್ಪುವ ಅಂಗ ಶ್ರೀರಂಗವುಧರೆಯೊಳುಪುರಂದರ ವಿಠಲರಾಯನಪರಮಭಾಗವತರ ಉದರವೆ ಬದರಿ3
--------------
ಪುರಂದರದಾಸರು
ಮಲವು ತೊಳೆಯಬಲ್ಲುದೆಮನವ ತೊಳೆಯದನಕ ಪಹಲುವು ನೀರಿನೊಳಗೆ ಪೊಕ್ಕುಹಲುಬಿದರಿನ್ನೇನು ಫಲ? ಅಪಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿಭೋಗಬೇಡಿ ಜನರು ಜೀವಕಾಗಿ ಮುನಿವರುಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? 1ಪರರ ಕೇಡಬಯಸಿಗುರು - ಹಿರಿಯರನ್ನು ನಿಂದಿಸುತಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ 2ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲಮಂದಗಮನೆಯರೊಡನೆ ಆನಂದದಿಂದ ನಲಿಯುತತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ 3ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲುಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? 4ಏನು ಮಾಡಲೇನು ಫಲ - ಏನು ನೋಡಲೇನು ಫಲಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡುದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ 5
--------------
ಪುರಂದರದಾಸರು
ಮಹತಿಗೆ ಮಹತು ಹರಿನಾಮಬಹುಜನ್ಮಜಲಧಿ ಶೋಷಿಸುವ ಹರಿನಾಮ ಪ.ಹಿಂದೊದಗಿದಘರಾಶಿ ಬೇಯಿಸಿ ಬಿಸುಟುವ ನಾಮಮುಂದೆ ಬಹ ದುರಿತಕಡ್ಡಹ ನಾಮಮಂದಮತಿ ಕತ್ತಲೆಗೆ ಬಾಲಾರ್ಕಸಮ ನಾಮದಂದುಗದ ಬಳ್ಳಿಯನು ಹರಿವ ನಾಮ 1ಮುಕುತಿ ನಗರವ ತುಂಬಿಸುವ ಅಭಯಕರ ನಾಮಶಕುತ ಯಮಾಲಯಕೆÉ ಭಯಂಕರದ ನಾಮಅಕಳಂಕ ದಾಸರಿಗೆ ಆದ್ಯಂತಗತಿ ನಾಮಭಕುತರೆಡರಿನ ಗಿರಿಗೆ ವಜ್ರನಾಮ 2ಸರ್ವ ಶ್ರುತಿಮುನಿಗಳುಗ್ಗಡಿಸುತಿಹ ನಾಮಉರ್ವಿಯೊಳು ನಂಬಿದರ ಪೊರೆವ ನಾಮಸರ್ವಜÕರಾಯಗುರು ನಿರ್ವಚನಿಸುವ ನಾಮಸರ್ವೇಶ ಪ್ರಸನವೆಂಕಟೇಶನ ಶ್ರೀನಾಮ 3
--------------
ಪ್ರಸನ್ನವೆಂಕಟದಾಸರು
ಮಾಡುವ ಬನ್ನಿ ನಾವು ನೀವು ಎಲ್ಲರು ಏಕಾರತಿಯಗೂಢ ಚಿದಾನಂದನೊಳು ಕೂಡಿಕೊಂಬರ್ಥಿಯಪನೀರು ಲವಣ ಕೂಡಿ ಒಂದೇ ನೀರು ನಿಜವೆ ಆದಂತೆಕಾರಣಾತ್ಮಕನೆಲ್ಲ ಕರಗಿಹೋಗುವ ಏಕಾರತಿ1ಉರಿಯುವ ಕರ್ಪೂರವ ತಗುಲಿ ಉರಿಯು ತಾನಾಗಿ ಬೆಳಗಿದಂತೆನರನು ತಾನೇ ಸಾಕ್ಷಾತ್ ಹರನಾದುದೇ ಏಕಾರತಿ2ಕೀಟಭೃಂಗ ಧ್ಯಾನದಿಂದ ಕೀಟ ಭೃಂಗವಾದ ತೆರದಿಪಾಡಿ ಚಿದಾನಂದ ತಾನೇ ತಾನಾದುದೇ ಏಕಾರತಿ3
--------------
ಚಿದಾನಂದ ಅವಧೂತರು
ಮಾಡುಸಂಸಾರ ಅಂಟದಂದದಿ ಮನುಜಮಾಡಿದರೆ ಸತ್ಪುರುಷರೊಳಗೆ ನೀ ಕುಲಜಪಜಾರೆ ಹೆಂಡತಿಯಾಗೆ ಮನಸಿಗೆ ತರಬೇಡಆರಾದರಭಿಮಾನ ಹಚ್ಚಿಕೊಳಬೇಡಶರೀರ ನಿನ್ನದು ಈಗ ಎಂದು ಎನಬೇಡನೂರು ದೂಷಣವಾಡೆ ನೋಯಬೇಡ1ಎನ್ನ ಮನೆ ಪಶು ಬಂಧು ಇಂದೀಗ ಬೇಡಅನ್ಯರನು ಬೇರೆಯವರೆಂದು ನುಡಿಬೇಡಭಿನ್ನ ಪರಮಾತ್ಮನೆಂದು ಜಗವ ಕಾಣಲು ಬೇಡನೀ ಬ್ರಹ್ಮೆಂಬುದನು ಮರೆಯಬೇಡ2ಮಾಡಬೇಕೆನಿಸಿದರೆ ಸಂಸಾರವನುಮಾಡುಕೂಡಿದರೆ ಹತ್ತುವುದು ನಿನಗೆ ಭವಕೇಡುಪೀಡೆಯಿದು ಮಮತೆಯ ಬಿಟ್ಟು ಬೆರದಾಡುಗೂಢ ಚಿದಾನಂದ ನೀನಹುದಲ್ಲವೇನೋಡು3
--------------
ಚಿದಾನಂದ ಅವಧೂತರು
ಮಾತೆ ಸರಸ್ವತಿ ಮಂಜುಳ ಮೂರುತಿಚೇತನಾತ್ಮಕಿಭಾರತಿಪ.ಪ್ರೀತಿಯಿಂದೀವುದು ಪೀತಾಂಬರಧರನಸಾತಿಶಯದ ಭಕುತಿ ಅ.ಪ.ಗುರುಹಿರಿಯರ ಕಂಡು ಬಿರುನುಡಿ ನುಡಿಸದೆಕರುಣಿಸೆನಗೆಸನ್ಮತಿಪರಮಪಾವನ ವೈಷ್ಣವರ ಪಾದಾಂಬುಜ ಮಧು-ಕರದಂತಿರಲಿ ಮದ್ರತಿ 1ಶ್ರೀಶನಮೂರ್ತಿತಾರೇಶನಂದದಿ ಹೃದಯಾ-ಕಾಶದೊಳು ಕಾಣುತಿದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತಗೈಸಮ್ಮ ಹರಿಯ ಸ್ತುತಿ 2ಮನುಜರ ರೂಪದಿ ದನುಜರು ಭೂಮಿಯೊಳ್ಜನಿಸಿದರ್ಜಲಜನೇತ್ರಿಅನಘಲಕ್ಷುಮಿನಾರಾಯಣನ ದಾಸರಿಗೆಲ್ಲಜನನಿಯೆ ನೀನೆಗತಿ3ಭಾರತಿದೇವಿಯ ಸ್ತುತಿ
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಾಧವಜಯಮಾಧವಜಯಯಾದವ ಕುಲಮಣಿ ಭೂದೇವೀಪ್ರಿಯ ಪ.ವಿದ್ಯಾಧರಮುನಿ ಸದ್ಯೋಜಾತ ವಿರಿಂಚಾದ್ಯರ್ಚಿತ ವೇದವೇದ್ಯ ಮುಕುಂದ 1ಸ್ವರ್ಣಗಿರೀಶ ಸುಪರ್ಣಗಮನವಿಶ್ವನಿರ್ಣಯ ಶೀಲ ದಯಾರ್ಣವ ಪೂರ್ಣ 2ಪುಣ್ಯ ಸತ್ಪುರುಷವರೇಣ್ಯದನುಜಜನಾರಣ್ಯಪಾವಕ ದೋಷಶೂನ್ಯಗುಣಾಂಕ3ಕಠಿಣ ದಂಡಕ ದೇಶಾಟಣ ಸುಪ್ಲವಗ ಸಂಘಟಣಾಹಿಫಣ ತಟನಟಣ ಶ್ರೀಮೂರ್ತೆ 4ಕಿಂಕರರಕ್ಷ ನಿಶ್ಯಂಕ ಸದಾದೇವಸಂಕಟಹರ ಪ್ರಸನ್ವೆಂಕಟವರದ 5
--------------
ಪ್ರಸನ್ನವೆಂಕಟದಾಸರು
ಮಾನಭಂಗವಮಾರಿ ಮೇಲುಪಚಾರವ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಏನ ಮಾಡಿದರಿಲ್ಲಿ ಇರಬಾರದಯ್ಯ ಪ.ಕುಂದುಗಳನಾಡಿ ಕುಚೋದ್ಯಗಳನೆ ಮಾಡಿಕಂದ ಬಾಯೆಂದು ಬಣ್ಣಿಸಿ ಕರೆಯಲುಹಿಂದೆ ಮುಮ್ಮೊಳೆಯಿಟ್ಟು ಮುಂದೆ ಬಣ್ಣಿಸಿ ಕರೆದುಮುಂದಲೆಯನು ಕೊಯ್ದು ಮಂಡೆಗೆ ಹೂವ ಮುಡಿಸಿದಂತೆ 1ನಗಗೇಡಿ ಮಾಡಿ ನಾಲುವರೊಳಗೆ ಕೈಯಮುಗಿವೆ ಬಾಯೆಂದು ಬಣ್ಣಿಸಿ ಕರೆಯಲುಮಿಗಿಲಾದ ವಸ್ತ್ರಭೂಷಣವಿತ್ತು ಮನ್ನಿಸಲುತುದಿಮೂಗ ಕೊಯ್ದು ಚಿನ್ನದ ಮೂಗನಿಟ್ಟಂತೆ 2ಆರ್ಥ ಹೋದರು ಪ್ರಾಣ ಹೋದರೂಮಾನವ್ಯರ್ಥವಾಗದ ಹಾಗೆ ಕಾಯಬೇಕುಕರ್ತೃ ಶ್ರೀಹರಿ ನಮ್ಮ ಪುರಂದರವಿಠಲನಭಕ್ತರಿಲ್ಲದ ಸ್ಥಳ ಬಿಡಬೇಕು ಹರಿಯೆ 3
--------------
ಪುರಂದರದಾಸರು
ಮಾಯಾಮಯ ಜಗವೆಲ್ಲ ಇದ-ರಾಯತ ತಿಳಿದವರಿಲ್ಲ ಪ.ಕಾಯದಿಂ ಜೀವನಿಕಾಯವ ಬಂಧಿಸೆನೋಯಿಸುವಳು ಸುಳ್ಳಲ್ಲ ಅ.ಪ.ತಿಳಿದು ತಿಳಿಯದಂತೆ ಮಾಡಿ ಹೊರ-ಒಳಗಿರುವಳು ನಲಿದಾಡಿಹಲವು ಹಂಬಲವ ಮನದೊಳು ಪುಟ್ಟಿಸೆನೆಲೆಗೆಡಿಸುವಳೊಡಗೂಡಿ 1ಯೋಷಿದ್ರೂಪವೆ ಮುಖ್ಯ ಅ-ಲ್ಪಾಸೆಗೆ ಗೈವಳು ಸಖ್ಯದೋಷದಿ ಪುಣ್ಯದವಾಸನೆತೋರ್ಪಳುಜೈಸಲಾರಿಂದಶಕ್ಯ 2ಕರ್ತಲಕ್ಷ್ಮೀನಾರಾಯಣನಭೃತ್ಯರ ಕಂಡರೆ ದೂರಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ-ರಾರ್ಥಕೆ ಕೊಡಳು ವಿಚಾರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ