ಹರಿದಿನದಲಿ ಉಂಡ ನರರಿಗೆ -ಘೋರ |ನರಕ ತಪ್ಪದು ಎಂದುಶ್ರುತಿಸಾರುತಲಿದೆಪ.ಗೋವ ಕೊಂದ ಪಾಪ, ಸಾವಿರ ವಿಪ್ರರ |ಜೀವಹತ್ಯದ ಮಾಡಿದ ಪಾಪವು ||ಭಾವಜನಯ್ಯನ ದಿನದಲುಂಡವರಿಗೆ |ಕೀವಿನೊಳಗೆ ಹಾಕಿ ಕುದಿಸುವ ಯಮನು 1ಒಂದೊಂದು ಅಗಳಿಗೆ ಕೋಟಿ ಕೋಟಿ ಕ್ರಿಮಿಗಳು |ಅಂದಿನ ಅನ್ನವು ನಾಯ ಮಾಂಸ ||ಮಂದರಧರನ ದಿನದಲುಂಡವರನು |ಹಂದಿಯ ಸುಡುವಂತೆ ಸುಡುವನು ಯಮನು 2ಅನ್ನ -ಉದಕ ತಾಂಬೂಲ - ದರ್ಪಣಗಳು |ಚೆನ್ನವಸ್ತ್ರಗಳೆಲ್ಲ ವರ್ಜಿತವು ||ತನ್ನ ಸತಿಯ ಸಂಗ ಮಾಡುವ ಮನುಜನ |ಬೆನ್ನಲಿ ಕರುಳ ಉಚ್ಚಿಸುವನು ಯಮನು 3ಜಾವದಜಾಗರಕ್ರತು ನಾಲ್ಕು ಸಾವಿರ |ಜಾವ ನಾಲ್ಕರ ಫಲಕೆ ಮಿತಿಯಿಲ್ಲವು ||ದೇವದೇವನ ದಿನದಿ ನಿದ್ರೆಗೈದರೆ ಹುರಿ - |ಗಾವಿಲಿಯೊಳು ಹಾಕಿ ಹುರಿಯುವ ಯಮನು 4ಇಂತು ಏಕಾದಶಿ ಉಪವಾಸಜಾಗರ |ಸಂತತ ಕ್ಷೀರಾಬ್ಧಿಶಯನನ ಪೂಜೆ ||ಸಂತೋಷದಿಂದಲಿ ಮಾಡಿದ ಜನರಿಗ - |ನಂತ ಫಲವನೀವ ಪುರಂದರವಿಠಲ 5