ಒಟ್ಟು 4058 ಕಡೆಗಳಲ್ಲಿ , 131 ದಾಸರು , 2776 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ಮಹಿಮಗೆ ನೀರಾಜನಂಗಳ ಪೈಸರಿಸಿ ಭೃಂಗಾಳಕಂಗಳೆಯರು ಸ್ಮಿತವದನಂಗಳೆಯರು ಶಿರಿ ತಿರುವೆಂಗಳಪತಿಗಾರತಿಯ ಬೆಳಗಿರೆ ಪ.ಅಕ್ರಮದಲಿಶ್ರುತಿಕದ್ದೊಯ್ದವನಾಕ್ರಂದಿಸಿ ಸೀಳಿದಶುಭಮತ್ಸ್ಯಾಕೃತಗೆ ಜಗಂಗರ್ಭಾಕೃತಗೆ ಹತತಮವ್ಯಾಕೃತಗಾರತಿಯ ಬೆಳಗಿರೆ 1ಇಂದಿರನೈಶ್ವರ್ಯವು ಮಕರದಮಂದಿರ ಮಗ್ನಾಗಿರೆ ಗಿರಿಭೃತಕಂಧರಗೆ ಕಚ್ಛಪ ಸುಂದರಗೆ ಕರುಣಾಸಾಂದರಗಾರತಿಯ ಬೆಳಗಿರೆ 2ಪೊಂಗಣ್ಣಿನದಿತಿಜಕ್ಷಿತಿಯಹಿಂಗದೆ ಬೈಚಿಡಲು ಕ್ರೋಡದಿಭಂಗಿತಗೆ ವಸುಮತಿ ಸಂಗತಗೆ ದಿವಿಜರಇಂಗಿತಗಾರತಿಯ ಬೆಳಗಿರೆ 3ದಾನವಗಂಜದೆ ಶಿಶು ವರಹರಿನೀನೆ ಗತಿಯೆನೆ ಕಾಯ್ದ ಸುಜಾಣನಿಗೆ ನಿಜಜನಪ್ರಾಣನಿಗೆ ನರಪಂಚಾನನಗಾರತಿಯ ಬೆಳಗಿರೆ 4ಧರ್ಮದಿ ಕೊಬ್ಬಿದ ಬಲಿಚಕ್ರನಮರ್ಮದಿ ಜಡಿದ ವಿಚಿತ್ರಕರ್ಮನಿಗೆ ಧೃತಮೃಗಚರ್ಮನಿಗೆ ಅಣುವಟುಶರ್ಮನಿಗಾರತಿಯ ಬೆಳಗಿರೆ 5ವೀರ ಕ್ಷತ್ರಿಯರ ಕುಲ ಸಂಹಾರ ರೇಣುಕೆ ಕಂಠ ವಿದಾರಿಗೆ ವಿತರಣ ಶೂರಗೆಘೋರಕುಠಾರಿಗಾರತಿಯ ಬೆಳಗಿರೆ 6ಮುನಿಮಖಪಾಲಕ ತ್ರಯಂಬಕಧನುಹರ ಸೀತಾವರ ದಶಮುಖಹನನಗೆ ಮತ್ತವನನುಜಪಗೆ ಅಂಜನಾತನುಜಪಗಾರತಿಯ ಬೆಳಗಿರೆ 7ಪೊಂಗೊಳಲೂದುತ ಗೋಜಂಗುಳಿಹೆಂಗೆಳೆಯರ ಮೋಹಿಪ ತಾವರೆಗಂಗಳಗೆ ಸುಖದ ತರಂಗನಿಗೆ ಪಾಂಡವಸಂಗನಿಗಾರತಿಯ ಬೆಳಗಿರೆ 8ನೀಚರ ಬಲವಳಿಯಲು ಸತ್ವರಖೇಚರನಾರಿಯರ ವ್ರತಹೃತಆಚರಗೆಜಿತಬೌದ್ಧಾಚರಗೆ ನಿಗಮವಿಗೋಚರಗಾರತಿಯ ಬೆಳಗಿರೆ 9ಸಂಕರ ಕಲಿಯಂ ಮಥಿüಸಲು ತಾಬಿಂಕದಿ ಹಯವೇರಿದ ಸದ್ಧರ್ಮಾಂಕುರಗೆ ವರ್ಧಿಪ ಕಿಂಕರಗೆ ಪ್ರಸನ್ವೆಂಕಟರೇಯಗಾರತಿಯ ಬೆಳಗಿರೆ 10
--------------
ಪ್ರಸನ್ನವೆಂಕಟದಾಸರು
ಮಂಗಳಂಜಯಮಂಗಳಂ ಪ.ವಾತಸುತ ಹನುಮನ ಒಡೆಯಗೆ ಮಂಗಳದಾತ ಶ್ರೀ ರಘುಪತಿಗೆ ಮಂಗಳ ||ಸೇತುವೆಗಟ್ಟಿದ ರಾಯಗೆ ಮಂಗಳಸೀತಾರಮಣಗೆಶುಭಮಂಗಳ1ಬಿಲ್ಲ ಹಿಡಿದು ಬಲು ಬಿಂಕದ ದೈತ್ಯರಹಲ್ಲ ಮುರಿದವಗೆ ಮಂಗಳ |ಕಲ್ಲಾದಹಲ್ಯೆಯನುದ್ಧಾರ ಮಾಡಿದಬಲ್ಲಿದದಾಶರಥಿಗೆ ಮಂಗಳ2ಹರಧನು ಮುರಿದ ವಿನೋದಿಗೆ ಮಂಗಳವರದ ತಿಮ್ಮಪ್ಪಗೆ ಮಂಗಳ ||ಪುರಂದರವಿಠಲರಾಯಗೆ ಮಂಗಳಸರುವೋತ್ತಮನಿಗೆ ಶುಭಮಂಗಳ 3
--------------
ಪುರಂದರದಾಸರು
ಮಂಗಳಂಮಕರಕುಂಡಲಮಂಡಿತಾದವಗೆಪ.ಮಂಗಳಂ ಮಾರಪಿತ ಮಾರಮಣಗೆಮಂಗಳಂ ಮಿತ್ರಕೋಟಿ ಮಹಾಕಾಶಗೆಮಂಗಳಂ ಪನ್ನಗಾಚಲನಿಲಯಗೆ ಜಯಮಂಗಳಂ ಮತ್ತೆ ಶುಭಮಂಗಳಂ ಅ.ಪ.ಕಣ್ಣನೋಟದಿ ಚೆಲುವ ಕಮಠರೂಪಾದವಗೆಹೆಣ್ಣ ನೆಗಪಿದ ಹಿರಣ್ಯಕ ಮರ್ದಗೆಚಿನ್ನವಟು ಭಾಗ್ರ್ವಾಂಧಚರಹರ ಗೋವ್ರಜಚರಗೆಕನ್ನೆಯರ ವ್ರತಗೇಡಿ ಕಲಿಮಥÀನಗೆ 1ನೀರಚರನಗಧರಕನಕನೇತ್ರನೊರಸಿದಗೆಕ್ರೂರವದನಾಂಕಿತ ಕುಬುಜ ವಿಪ್ರಗೆವೀರಕುನೃಪಾರಿ ರಘುವಿಜಯಸಖನಾದವಗೆಚಾರುಮೋಹನಚಟುಲಹಯರೂಢಗೆ2ಆಗಮೋದ್ಧರ ಕಚ್ಛಪಅವನಿಧರಹರಿಮೊಗಗೆತ್ಯಾಗ ಬೇಡಿದ ತಾಯಿ ತಲೆಗಡಿದಗೆಯಾಗಪಾಲಹಿಮರ್ದ ಯೋಗೇಶಜೋದ್ಧರಗೆನಾಗಾದ್ರಿ ಪ್ರಸನ್ವೆಂಕಟನಾಥಗೆ 3
--------------
ಪ್ರಸನ್ನವೆಂಕಟದಾಸರು
ಮಂಗಳಾತ್ರಿಪುರಸುಂದರಿಗೆ | ಮಂಗಳಾ ಶಾಕಂಬರಿಗೆಮಂಗಳಾ ಬಾದಾಮಿ ಬನಶಂಕರಿಗೆ ಜಯತು ಹಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಭೂಧರಭೂಷಿಗೆ ಜಯತು |ಭೂಧರವೈರಿಗೆ ಜಯತು |ಭೂಧರವೈರಿವಾಹನನ ಸಂಹರಳಿಗೆ ||ಜಯ1ಹರಿಮಿತ್ರಿ ಲೋಚನೆ ಜಗತ್ | ಹರಿಗಾತ್ರ ಸೂಚನೀ ಜಯ ||ಹರಿಪುತ್ರ ಕೋಟಿ ಲಾವಣ್ಯ ಸುಲೋಚನೆ || ಜಯ2ಪಾಹಿಪರಾತ್ ಪರೇ ||ಜಯ||ಪಾಹಿಪರಮಪರೆ | ಜಯ |ಪಾಹಿಪರಮಪರಮೇಶ್ವರೀ ಪುರಹರೀ ||ಜಯ||ತ್ರಾಹಿತ್ರಾಹಿತ್ರ್ಯಂಬಕೇ | ಜಯ |ತ್ರಾಹಿತ್ರೈಲೋಕ್ಯಾಂಬಿಕೆ | ಜಯ |ತ್ರಾಹಿತ್ರಾಹಿತ್ರಿಪುರಿ ಶ್ರೀ ಮೂಕಾಂಬಿಕೆ ಜಯತು3ಕುಲಸ್ವಾಮೀ ಸ್ವಾಮಿನೀ | ಜಯ |ಕುಲ ಕೋಟಿಯೇ ಕಲ್ಯಾಣೀ | ಜಯ |ಕುಲರಹಿತ ಕುಲೀ ಶಾಂಕರೀಶಂಕರ ರಾಣೀ ಜಯತು4
--------------
ಜಕ್ಕಪ್ಪಯ್ಯನವರು
ಮಂಗಳಾರತಿ ಕೀರ್ತನೆಗಳು259ಮಂಗಳಂ ಜಯ ಮಂಗಳಂ | ಜಯಮಂಗಳಂಪರಮೇಷ್ಟಿಜನಕ ಉಪೇಂದ್ರಾ ಪವೇದ ಉದ್ಧಾರ ಶ್ರೀಬಾದರಾಯಣಮಧು |ಸೂದನ ಅಮರರ ಕಾಯ್ದ ದಯಾಬ್ಧೀ 1ನಂದಗೋಪಾತ್ಮಜಸಿಂಧೂರಪಾಲ ಮು- |ಕುಂದಪಾಲಿಪುದೆನ್ನ ಇಂದೀವರಾಕ್ಷಾ 2ತುಂಗವಿಕ್ರಮನೆ ಕಾಳಿಂಗ ಮರ್ದನ ದೇವಾ |ಗಂಗ ಜನಕ ಶ್ರೀವಿಹಂಗವಾಹನನೇ 3ಸಣ್ಣರೂಪದಿ ಬಲಿಯನ್ನು ತುಳಿದ ಶ್ರೀ ವಾ- |ಮನ್ನ ಕ್ಷಿತಿಪಹರ ವನ್ನಜನಾಭಾ 4ಪ್ರಾಣೇಶ ವಿಠಲ ಶ್ರೀಮಾನಿನಿಪ್ರತಿಶತ|ಮೀನಾಂಕಲಾವಣ್ಯಭಾನುಪ್ರಕಾಶಾ 5
--------------
ಪ್ರಾಣೇಶದಾಸರು
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನಖಗಕುಲರನ್ನ ಮನೋರಮಣಮನೋರಮಣ ಕಾಂತ ಶ್ರೀರಾಮನಅಗಲದಿರು ಕಾಣೆ ಮರಿಯಾನೆ ಶೋಭಾನೆ 1ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ-ಕೃತ್ಯಕೆಲ್ಲಕ್ಕನುಸರಿಸಿಅನುಸರಿಸಿ ನಡೆ ನೀ ಮಗಳೆಹಿತವಾಗಿ ಬಾಳು ಪತಿಯೊಳು ಶೋಭಾನೆ 2ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆಗಂಡನುಣ್ಣದ ಮೊದಲು ನೀಮೊದಲು ನೀನುಣ್ಣದಿರುಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3ಮುಗುಳು ನಗೆಯ ಬೀರು ಜಗಳವ ಮಾಡದಿರುಜಗದೊಳು ಕೀರ್ತಿಯುತಳಾಗುಯುತಳಾಗು ಬಂಧುಗಳಲಿ ನೀಹಗೆಯ ಮಾಡದಿರು ಕೃಪೆದೋರು ಶೋಭಾನೆ 4ವೃದ್ಧ ಮಾವನಪಾದಹೊದ್ದಿ ಸೇವೆಯಮಾಡುಸುದ್ಧ ಭಾವದೊಳು ನಡೆ ಮಗಳೆನಡೆ ಮಗಳೆ ನಿತ್ಯಸುಮಂಗಲೆಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರುಪ್ರತ್ಯೊಬ್ಬಳೆ ಸ್ಥಳದಿ ನಿಲದಿರುನಿಲದಿರು ನೀರಜಗಂಧಿಸತ್ಯ ವಚನವನೆ ಸವಿಮಾಡು ಶೋಭಾನೆ 6ಮೈದುನರನ್ನು ತನ್ನ ಮಕ್ಕಳೆಂಬಂತೆನೋಡುಸಾಧುಭಾವದದಲಿ ನಡೆ ಮಗಳೆನಡೆ ಮಗಳೆ ಪಂಕ್ತಿಯಲಿಭೇದ ಮಾಡದಿರು ಕೃಪೆದೋರು ಶೋಭಾನೆ 7ಕಂಡರೆ ಶಿಷ್ಟರ ದಂಡ ನಮಸ್ಕರಿಸುಹಿಂಡುದಾಸಿಯರ ದಣಿಸದಿರುದಣಿಸದಿರು ಉತ್ತಮಳೆಂದು ಭೂ-ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ 8ಚಂಡಿತನವ ನಿನ್ನ ಗಂಡನೊಳ್ಮಾಡದಿರುಗಂಡಸರ ಮುಂದೆ ಸುಳಿಯದಿರುಸುಳಿಯದಿರು ಸಂತತ ಸೌಖ್ಯ-ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆಸುರತಸಮಯದಿ ವೇಶ್ಯಾ ತರುಣಿಯಳತರುಣಿಯಳ ತೆರದಿ ರಾಮನ ಸತಿಯಂ-ತೆ ಮಾಡವ್ವ ಸುಖಂ ಜೀವಾ ಶೋಭಾನೆ 10ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವುಕುಕ್ಷಿಈರೇಳು ಜಗವನ್ನುಜಗವನ್ನು ನಮ್ಮನ್ನು ಸರ್ವರರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಡೆಬಾಗಿಕರವಮುಗಿವೆ ಕಾಯೊ ಹರಿಹರಿ |ಪುಂಡರೀಕನಯನ ಮರೆಯಬೇಡವೊ ಹರಿಹರಿ ಪಕರಿವರದನೆ ಸರ್ವಾಂತರ್ಯಾಮಿ ಹರಿಹರಿ |ಕರುಣಾಸಾಂದ್ರ ತರುಣಿ ಮಾನಕಾಯ್ದ ಹರಿಹರಿ ||ಶರಧಿಸುತೆಯ ರಮಣ ದೀನಬಂಧು ಹರಿಹರಿ |ಅರಿಯೆ ನಿನ್ನನುಳಿದು ಕಾಯ್ವರನ್ನು ಹರಿಹರಿ 1ಮೀನನಾಗಿ ವೇದಗಳನು ತಂದೆಹರಿಹರಿ|ಆ ನಗವನು ಪೊತ್ತು ಅಮೃತವೆರೆದೆಹರಿಹರಿ||ನೀನೇ ವರಾಹನಾಗಿಯವನಿಯ ತಂದೆಹರಿಹರಿ|ದಾನವನುದರವ ಬಗೆದು ಅಂದುಹರಿಹರಿ 2ಚಿಕ್ಕ ರೂಪದಿಂದ ಬಲಿಯ ತುಳಿದೆಹರಿಹರಿ|ಸೊಕ್ಕಿದರಸುಗಳನು ಸವರಿಬಿಟ್ಟೆಹರಿಹರಿ||ರಕ್ಕಸರನು ಕೊಂದು ಸತಿಯ ತಂದೆಹರಿಹರಿ|ಅಕ್ಕರದಲಿ ಪಾರಿಜಾತ ತಂದೆಹರಿಹರಿ3ಅಂಬರವನು ತೊರೆದೆ ಬೌದ್ಧನಾಗಿ ಹರಿಹರಿ |ಕುಂಭಿಣಿಯೊಳು ಕುದುರೆಯೇರಿ ಮೆರೆದೆಹರಿಹರಿ||ಶಂಬರಾಂ ಜನಕ ಧರ್ಮತನಯಹರಿಹರಿ|ಅಂಬುಜಾಸನಾದಿ ದಿವಿಜವಂದ್ಯಹರಿಹರಿ4ಶೌರಿರಘುಜ ಮುನಿಜ ಪ್ರಾಣೇಶ ವಿಠಲಹರಿಹರಿ|ಸಾರಿದ ಶರಣರಿಗೆ ಕಲ್ಪತರುವೆಹರಿಹರಿ||ಘೋರದುರಿತವನಕೆ ಧನಂಜಯನೆ ಹರಿಹರಿ |ಭಾರನಿನ್ನದೆವೆ ಹೇಳಲ್ಯಾಕೆಹರಿಹರಿ 5
--------------
ಪ್ರಾಣೇಶದಾಸರು
ಮತದೊಳಗೆ ಒಳ್ಳೆ ಮತ ಮಧ್ವಮತವು - ರಘು - |ಪತಿಪೂಜಾವಿಧಾನಕೆ ಪಾವನ ಮತವುಪ.ನಾರಾಯಣನ ನಾಮ ತುಂಬಿದ ಮತವೇದ - |ಪಾರಾಯಣಕೆ ಅನುಕೂಲ ಮತವು ||ತಾರತಮ್ಯದಿ ಉದ್ಧರಿಸಿ ಶ್ರುತಿಗಳನೊರೆದಧಾರಣಿಸುರರ ಸಂತೋಷದ ಮತವು 1ಅಕಲಂಕ ಶ್ರೀಹರಿಗೆ ವಜ್ರಾಂಕಿತ ಮತವು |ಸಕಲ ದೇಶಕೆ ಸನ್ಮತವಾದ ಮತವು ||ಅಕುಟಿಲಶುಕ - ಸನಕಾದಿ ಮುನೀಂದ್ರರ |ನಿಖಿಲಕ್ರಿಯ ಪದವೀವ ನಿರ್ಮಲ ಮತವು 2ಸರಸ ಸದ್ಗುಣ ಸತ್ಯಸಾತ್ತ್ವಿಕ ಮತವಿದು |ಗುರುಶಿಷ್ಯರಿಗೆ ಅನುಕೂಲ ಮತವು ||ಪರಮತ ಖಂಡಿಸಿ ಪಂಡಿತರು ಪೇಳಿದ |ಪುರಂದರವಿಠಲನ ಮತವೆ ಹನುಮನ ಮತವು 3
--------------
ಪುರಂದರದಾಸರು
ಮಂದಗಮನೆ, ಇವನಾರೆ ಪೇಳಮ್ಮ |ಮಂದರಧರಗೋವಿಂದ ಕಾಣಮ್ಮಪಕೆಂದಳಿದನಖಶಶಿಬಿಂಬ ಪಾದಪದ್ಮ |ಅಂದುಗೆಯಿಟ್ಟವನಾರು ಪೇಳಮ್ಮ ||ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ |ನಂದನ ಕಂದ ಮುಕುಂದ ಕಾಣಮ್ಮ 1ಉಡುಗೆ ಪೀತಾಂಬರ ನಡುವೀಣೆ ಉಡುದಾರ |ಕಡಗ-ಕಂಕಣವಿಟ್ಟವನಾರಮ್ಮ ||ಮಡದಿ ಕೇಳ್ ಸಕಲಲೋಕಂಗಳ ಕುಕ್ಷಿಯೊಳ್ |ಒಡನೆ ತೋರಿದ ಜಗದೊಡೆಯ ಕಾಣಮ್ಮ 2ನೀರದನೀಲದಂತೆಸೆವ ವಕ್ಷದಿ ಕೇ-|ಯೂರ-ಹಾರಗಳನಿಟ್ಟವನಾರಮ್ಮ ||ನೀರೆ ಕೇಳು ನಿರ್ಜರರಾದವರಿಗೆ |ಪ್ರೇರಿಸಿ ಫಲವಿತ್ತು ದಾರಿ ಕಾಣಮ್ಮ 3ಶಂಖ ಚಕ್ರವ, ಗದೆ-ಪದ್ಮ ಕೈಯೊಳಗಿಟ್ಟ-|ಲಂಕೃತನಹನೀತನಾರಮ್ಮ ||ಪಂಕಜಮುಖಿಶ್ರೀಭೂದೇವಿಯರರಸನು |ಶಂಕೆಇಲ್ಲದೆ ಗೋಪೀತನಯ ಕಾಣಮ್ಮ4ಕಂಬುಕಂಧರಕರ್ಣಾಲಂಬಿತಕುಂಡಲ|ಅಂಬುಜಮುಖದವನಾರೆ ಪೇಳಮ್ಮ ||ರಂಭೆ ಕೇಳೀತ ಪುರಂದರವಿಠಲ |ನಂಬಿದ ಭಕ್ತಕುಟುಂಬಿ ಕೇಳಮ್ಮ 5
--------------
ಪುರಂದರದಾಸರು
ಮಂದರಧರ ದೇವ ಮೊರೆಹೊಕ್ಕವರ ಕಾಯ್ವಪಮಂದಾಕಿನಿಯ ಪಿತ ಮಾವ ಕಂಸನ ಹೃತ |ಸುಂದರ ಶಶಿವದನ ರಂಗಯ್ಯ ಅ.ಪಕಣ್ಣು ನೋಟದಿ ಚೆಲುವ, ಕಮಠರೂಪದಿ ನಲಿವ |ಹೆಣ್ಣ ಮೊರೆಯಕೇಳಿ ಹಿರಣ್ಯನುದರ ಸೀಳಿ ||ಮಣ್ಣು ಬೇಡಿ ಬೆಳೆದೆ - ಕೃಷ್ಣಯ್ಯ ||ಹೊನ್ನ ಕೊಡಲಿಯ ಪಿಡಿದು ಹತ್ತು ಗ್ರೀವನ ಕಡಿದು |ಚಿಣ್ಣರ ಒಡಗೂಡಿ ಚಪಲೆಯರ ವ್ರತಗೆಡಿಸಿ |ಚೆನ್ನರಾವುತನಾದೆಯೊ - ರಂಗಯ್ಯ 1ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ |ಭೂಚೋರನ ಕೊಂದು ಬಾಲ ಕರೆಯಲು ಬಂದು |ಯಾಚಕ ನೀನಾದೆ - ರಂಗಯ್ಯ ||ಸೂಚತನ ಸುತಗೊಲಿದು ಶರಧಿಯಕಟ್ಟಿ ಮೆರೆದೆ |ಕೀಚಕಹತಪೋಷ ಖೇಚರಪುರವಾಸ |ನೀಚಜನರ ತರಿದೆ - ರಂಗಯ್ಯ 2ವನವನಲೆದು ಬಂದ - ವನಿತೆರತ್ನವ ತಂದ |ಘನಕಂಭದಿಂದ ಬಂದುಗರುವ ಮುರಿದು ಬಲಿಯ |ಜನನಿಯ ಶಿರವರಿದೆ - ರಂಗಯ್ಯ ||ಹನುಮವಂದಿತಪಾದ ಹರುಷ ಪಾಂಡುವವರದ |ಮನಸಿಜ ವೈರಿಗೊಲಿದು ಮಹಾಕಲಿಕಿಯಾದೆ |ಘನಪುರಂದರ ವಿಠಲ - ರಂಗಯ್ಯ 3
--------------
ಪುರಂದರದಾಸರು
ಮಧ್ವಮತಕಿನ್ನು ಸರಿಯುಂಟೆ - ಪ್ರ - |ಸಿದ್ಧ ವೈಕುಂಠಕಿಂತಧಿಕ ಮತ್ತುಂಟೆ ? ಪ.ವೃಕ್ಷದೊಳಗೆ ತುಳಸಿ ವೃಕ್ಷಕಧಿಕವಿಲ್ಲ |ಪಕ್ಷಿಯೊಳಗೆ ಗರುಡ ಪಕ್ಷಿಗಿಂತ ಮಿಗಿಲಿಲ್ಲ ||ದಕ್ಷ ಹನುಮಂತನಂತೆ ಲೋಕದೊಳು ಬಂಟರಿಲ್ಲ |ಲಕ್ಷ್ಮಿಗೆ ಸರಿಯಾದ ಸ್ತ್ರೀಯರಿಲ್ಲ - ನೀ ಕೇಳೊ |ಪಕ್ಷಿವಾಹನನೆನಿಪ ದೇವ ತಾ ಬಲ್ಲ 1ಸಕಲ ಮಣಿಗಳಲಿ ಚಿಂತಾಮಣಿಗೆ ಸರಿಯಿಲ್ಲ |ಮಿಕ್ಕ ರತ್ನಮೊಳಗೆ ಮಾಣಿಕತೆ ಮಿಗಿಲಿಲ್ಲ ||ಭಕುತರೊಳಗೆಲ್ಲ ಚಂದ್ರಶೇಖರಗೆ ಸರಿಯಿಲ್ಲ |ಮುಕುತಿ ಸುಖಗಳಿಗೆಣೆಯಿಲ್ಲ - ನೀ ಕೇಳೊ |ಅಖಿಳಬ್ರಹ್ಮಾಂಡನಾಯಕ ತಾ ಬಲ್ಲ2ಪ್ರಥಮಯುಗದಲಿ ಹನುಮ , ದ್ವಿತಿಯ ಯುಗದಲಿ ಭೀಮ |ತೃತಿಯ ಯುಗದಲಿ ಮಧ್ವಾಚಾರ್ಯರೆಂದೆನಿಸಿ ||ಸತುಶಾಸ್ತ್ರ ಕಿದಿರಿಲ್ಲಅಮೃತಕಿಂತಧಿಕವಿಲ್ಲ |ರತಿಪತಿಗಿಂತ ಚೆಲುವರಿಲ್ಲ - ನೀ ಕೇಳೊ |ಕಥೆಯನು ಪುರಂದರವಿಠಲ ತಾ ಬಲ್ಲ 3
--------------
ಪುರಂದರದಾಸರು
ಮಧ್ವಮುನಿಯೆ -ಗುರು- ಮಧ್ವಮುನಿಯೆಪಮಧ್ವಮುನಿ ನಮ್ಮೆಲ್ಲರ | ಉದ್ಧರಿಸುವ ಕಾಣಿರೊ ಅ.ಪಅಂದು ಹನುಮಂತನಾಗಿ | ಬಂದ ರಾಮಪದಾರ-ವಿಂದದಿ ನೆರೆದು ತುಂಬಿಯಂದದಿ ಶೋಭಿಸಿದ 1ಏಣಾಂಕವಂಶದಿ ಪುಟ್ಟಿ | ಕ್ಷೋಣಿಪಾಲಕ ಶಿರೋಮಾಣಿಕ್ಯವಾಗಿ ಹರಿಗೆ | ಪ್ರಾಣನೆಂದೆನಿಸಿಕೊಂಬ 2ಕಟ್ಟಕಡೆಯಲ್ಲಿ ಯೋಗ | ದಿಟ್ಟನಾಗಿಪುರಂದರ|ವಿಠಲಗಾವಾಸವಾದ | ಪೆಟ್ಟಿಗೆಯೊಲೊಪ್ಪುವಂಥ 3
--------------
ಪುರಂದರದಾಸರು
ಮಧ್ವರಾಯರ ನೆನೆದು ಶುದ್ಧರಾಗಿರೊ |ಹೊದ್ದಿ ವೈಷ್ಣವ ಮತಭವಾಬ್ಧಿದಾಟಿರೋಪಉದಯದಲಿ ಏಳುವಾಗ ನದಿಯ ಸ್ನಾನ ಮಾಡುವಾಗಒದಗಿನಿತ್ಯಕರ್ಮಗಳನು ನಡೆಸುವಾಗ ||ಹೃದಯದಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗಸದಮಲಾನಂದ ಹನುಮನನ್ನು ನೆನೆಯಿರೊ 1ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗಪ್ರೇಮದಿಂದ ವೈಷ್ಣವರು ಅರ್ಚಿಸುವಾಗ ||ಆ ಮಹಾ ಭಕ್ಷ್ಯಭೋಜ್ಯ ಆರೋಗಣೆ ಮಾಡುವಾಗನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೊ 2ಕರಗಳನ್ನು ತೊಳೆದು ತೀರ್ಥ ತುಳಸೀದಳವ ಮೆಲ್ಲುವಾಗಪರಿಪರಿಯ ಪುಷ್ಪವೀಳ್ಯ ಅರ್ಪಿಸುವಾಗಸರುವಾಂತರ್ಯಾಮಿ ಗುರುಮಧ್ವರಂತರಾತ್ಮಕಪುರಂದರವಿಠಲಗೆ ಸಮರ್ಪಣೆ ಮಾಡಿರೊ3
--------------
ಪುರಂದರದಾಸರು
ಮಧ್ವರಾಯಾ-ಗುರು-ಮಧ್ವರಾಯಾಮಧ್ವರಾಯಾ-ಗುರು-ಮಧ್ವರಾಯಾ ಪರಾಮಾವತಾರದೊಳೊಮ್ಮೆ ಮಧ್ವರಾಯಾಆ ಮಹಾ ಹನುಮನಾದೆ ಮಧ್ವರಾಯಾ ||ವಾಮಮುಷ್ಟಿಲಿ ರಾವಣನ ಗೆಲಿದೆ ಮಧ್ವರಾಯಾ ||ಕಾಮಿತಾರ್ಥಸುರರಿಗಿತ್ತೆ ಮಧ್ವರಾಯಾ1ಕೃಷ್ಣಾವತಾರದೊಳೊಮ್ಮೆ ಮಧ್ವರಾಯಾದುಷ್ಟಕುಲಕೆ ಭೀಮನಾದೆ ಮಧ್ವರಾಯಾ ||ಕುಟ್ಟಿದೆ ಕೌರವರನೆಲ್ಲ ಮಧ್ವರಾಯಾ - ಶ್ರೀ -ಕೃಷ್ಣನ ಪ್ರೀತಿಯ ಪಡೆದೆಯೊ ಮಧ್ವರಾಯಾ 2ಧರೆಯೊಳು ಯತಿಯಾಗಿ ಜನಿಸಿದೆ ಮಧ್ವರಾಯಾಗುರುವ್ಯಾಸರ ಹಿತವ ಪಡೆದೆ ಮಧ್ವರಾಯಾದುರುಳಮಾಯಿಮತವ ಮುರಿದೆ ಮಧ್ವರಾಯಾಪುರಂದರವಿಠಲನ ದಾಸನಾದೆ ಮಧ್ವರಾಯಾ3
--------------
ಪುರಂದರದಾಸರು
ಮನವೆ ಮಾಧವನ ಮರೆಯದಿರೆಂದೆ ದಣುವಾಯಿತು ಹಿಂದೆಕ್ಷಣವೊಂದು ಬಿಡದಿರು ಕೃಷ್ಣನ ಮುಂದೆ ಪ.ಘನವಿಷಯಂಗಳ ನೆನವಿಲಿ ಪುನ:ಪುನ:ತನುವ ವಹಿಸಿಭವವನವನ ಚರಿಸದೆಅ.ಪ.ಹರಿವಾರ್ತೆಯನು ಕೇಳು ಕೇಳಿದ್ದೆ ಕೇಳು ಅರಿಅರುವರನಾಳುಅರಿವಿಂದ ಗರುವದ ಮೂಲವ ಕೀಳುಹೆರವರ ಹರಟೆಗೆ ಪರವಶನಾಗದೆಕರಿವರವರದನ ವರವನೆ ಬಯಸು 1ಹರಿಗುರುವಿಗೆರಗು ಅರಿತರಿತೆರಗು ತಪವೆರಡಲಿ ಸೊರಗುಸೊರಗಿದವರ ಕಂಡು ಕರಗು ಮರುಗುತಿರುಗ್ಯೊಡಲುರಿಗೆ ಮುಳ್ಳ್ಹೊರೆಗೆ ಸ್ಮರಾಸ್ತ್ತ್ರಕೆಗುರಿಯಾಗದೆ ಹರಿಸೆರಗ ಬಿಡದಿರು 2ಹರಿವಿಗ್ರಹನೋಡುನೋಡಿದ್ದೆನೋಡುಮಮಕಾರವೀಡಾಡುಸ್ಥಿರವೊಂದನೆ ಬೇಡಸ್ಥಿರವ ಬಿಸಾಡುಸಿರಿವಂತರಸಿರಿಪರವಧುಗಳ ಸಿಂಗರವೆಣಿಸದೆ ಸಿರಿವರನ್ನೆನೋಡು3ಹರಿಪ್ರಸಾದವನುಣ್ಣು ನೆನೆನೆನೆದುಣ್ಣು ಶ್ರೀಹರಿ ಪ್ರೀತ್ಯೆನ್ನುಹರಿಪ್ರೇರಕ ನೇಮಕ ಸಾಕ್ಷಿಕನೆನ್ನುಹರಿಪ್ರಿಯವಲ್ಲದನರುಪಿತ ಪರಿಪರಿಚರುಪವ ಚರಿಸದೆ ಹರಿಯಚರಿಸು4ಹರಿಯಂಘ್ರಿ ಪರಾಗವ ಗ್ರ್ರಹಿಸಾಘ್ರಾಣಿಸು ಹರಿಯವರಿಗೆ ಉಣಿಸುಹರಿಭಕ್ತಿ ಜ್ಞಾನ ವೈರಾಗ್ಯವ ಗಳಿಸುಹರಿಪ್ರಿಯ ಪ್ರಭು ಮಧ್ವಾಚಾರ್ಯರ ಪ್ರಿಯ ಮೇಲ್ಗಿರಿ ಪ್ರಸನ್ವೆಂಕಟ ದೊರೆಯನೆ ನಂಬು 5
--------------
ಪ್ರಸನ್ನವೆಂಕಟದಾಸರು