ಒಟ್ಟು 18204 ಕಡೆಗಳಲ್ಲಿ , 138 ದಾಸರು , 7712 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಮಾಡಿ ಸಲಹಯ್ಯ ಭಯನಿವಾರಣನೆಹಯವದನ ನಿನ್ನ ಚರಣ ನಂಬಿದೆನೊ ಜೀಯ ಪ. ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗÀಳನುಎಣಿಸಲಳವಲ್ಲ ಅಷ್ಟಿಷ್ಟುಯೆಂದುಫಣಿಶಾಯಿ ನೀನೆನ್ನ ಅವಗುಣಗಳೆಣಿಸದೆನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ 1 ಕಂಡ ಕಂಡ ಕಡೆಗೆ ಪೋಪ ಚಂಚಲ ಮನವುಪಿಂಡ ತಿಂಬಲ್ಲಿ ಬಹು ನಿಷ್ಠ ತಾನುಭಂಡಾಟದವನೆಂದು ಬಯಲಿಗೆ ತಾರಣಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ 2 ಜಾತಿಧರ್ಮವ ಬಿಟ್ಟು ಅಜಾಮಿಳನು ಇರುತಿರಲು ಪ್ರೀತಿಯಿಂದಲಿ ಮುಕುತಿ ಕೊಡಲಿಲ್ಲವೆಖ್ಯಾತಿಯನು ಕೇಳಿ ನಾ ಮೊರೆಹೊಕ್ಕೆ ಸಲಹಯ್ಯವಾತಜನ ಪರಿಪಾಲ ಶ್ರೀರಂಗವಿಠಲ 3
--------------
ಶ್ರೀಪಾದರಾಜರು
ದಯಮಾಡು ದಯಮಾಡು ಎನ್ನ ಮೇಲೆ | ಅಂತರಂಗದೊಳಿಪ್ಪ ಅಚ್ಚುತಮೂರ್ತಿ ಪ ಕುಸುಮ ಜಾಜಿ ಮಲ್ಲಿಗೆ ಮಾಲೆ | ಮಂದಾರ ಹಾರ ಕೊರಳೊಳಿಡಲೂ || ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ | ಹಂದಿಯಂದದಿ ಇಲ್ಲಿ ಇಪ್ಪ ನರಗೆ || 1 ಹೆತ್ತ ತುಪ್ಪ ಸಣ್ಣಶಾವಿಗೆ ಪರಮಾನ್ನ | ಹೆತ್ತತಾಯಿ ತಂದು ಉಣ್ಣ ಬಡಿಸಲು || ಅತ್ತ ಮೊಗವಗಬೆ ತೊತ್ತು ಉಣಬಡಿಸಿದ | ಓಗರ ತಿಂದು ಇಪ್ಪೆನೆಂಬ ನರಗೆ 2 ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು | ಅಂಬಿಗ ತಡೆಯದೆ ದಾಟಿಸಲು || ಅಂಬುವಾಸನೆ ನೋಡಿ ದಾಟಿ ಪೋಗುವೆನೆಂ | ದೆಂಬ ಮಾನವನಾದೆ ವಿಜಯವಿಠ್ಠಲ ಕರುಣೀ3
--------------
ವಿಜಯದಾಸ
ದಯಮಾಡೊ ರಂಗ ದಯ ಮಾಡೊಕೈವಲ್ಯಪತಿ ನಮಗೆ ಕರುಣೆ ಮಾಡೊ ಕೃಷ್ಣ ಪ. ಕುಂತಿ ದೇವಿಯರು ತಂದ ಅನಂತ ಪದಾರ್ಥವ ಶಾಂತ ಮೂರುತಿಯೆ ಕೈಕೊಳ್ಳೊ ಕೃಷ್ಣಶಾಂತ ಮೂರುತಿಯೆ ಕೈಕೊಳ್ಳೊ ಎನುತಲಿ ಕಾಂತೆ ಸುಭದ್ರಾ ನುಡಿದಳು1 ಶ್ರೀದೇವಿಯರಸನ ಪಾದವ ತೊಳೆದರು ಕ್ಯಾದಿಗೆ ಗಂಧ ತುಳಸಿಕ್ಯಾದಿಗೆ ಗಂಧ ತುಳಸಿ ಅಕ್ಷತೆಯಿಂದ ವೇದಗೋಚರನ ಉಪಚರಿಸಿ 2 ಕರವ ಜೋಡಿಸುತ ಐವರು3
--------------
ಗಲಗಲಿಅವ್ವನವರು
ದಯಮಾಡೋ ದಯಮಾಡೋ ಪ ಭಯಕರ ಸುಮಹ -ದ್ಭಯಹರ ಯತಿವರ ಅ.ಪ ಮೋಕ್ಷದ ಕರುಣ - ಕಟಾಕ್ಷದಿ ಎನ್ನನು ವೀಕ್ಷಿಸಿ ನಿನ್ನ ನಿರೀಕ್ಷಿಸುವಂತೆ 1 ಲಕ್ಷ್ಯಾಧೀಶರ ಲಕ್ಷಿಲ್ಲದೆ ಙÁ್ಞ - ನಾಕ್ಷದಿ ತವಪದ ಲಕ್ಷಿಸುವಂತೆ 2 ಸತ್ಯಾಭಿದ - ನಪ - ಮೃತ್ಯುಹರಿಸಿ ಮುದ ವಿತ್ತು ಪಾಲಿಸಿದ - ಉತ್ತಮ ಎನಗೇ 3 ಬಲ್ಲಿದತರ ಮಹ - ಪ್ರಲ್ಹಾದ ನಿನ್ನೊಳು ನಿಲ್ಲಿಸು ಎನಮನ - ಎಲ್ಲಿ ಚಲಿಸದಂತೆ 4 ದಾತಗುರು ಜಗನ್ನಾಥ ವಿಠಲನ ದೂತಾಗ್ರಣಿ ಸು - ಖೇತರ ಕಳೆದು 5
--------------
ಗುರುಜಗನ್ನಾಥದಾಸರು
ದಯಮಾಡೋ ಹನುಮಾ ದಯಮಾಡೋ ಪ ಎನ್ನೊಡನಾಡೋ ಬೇಡಿದ ವರಗಳ ಎನಗೆ ನೀಡೋ ಅ.ಪ. ಅಂಜಾನಿಯ ಕಂದನೆ ಸಂಜೀವನ ತಂದನೆ ಅಂಜಾದೆ ರಕ್ಕಸರ ಕೊಂದಾನೆ 1 ಕೀಟಕಾಂತಕನೆ ಕಿರೀಟ ಸಖನೆ ಪಾಂಚಾಲಿ ಹೃತ್ಕುಮುದ ಚಂದ್ರನೆ 2 ಆನಂದತೀರ್ಥನೆ ಅಮ್ನಾಯಸ್ತುತನೆ ಮಾನಿಧಿವಿಠಲನ ದೂತನೆ 3
--------------
ಮಹಾನಿಥಿವಿಠಲ
ದಯವ ತೋರೆ ತುಳಸಿ ಹರುಷವೆರಸಿ ಪರಾಂಬರಿಸಿ ಹರಿಯ ಸ್ಮರಿಸಿ ಪ. ಭವ ದಯಾವೆರೆದು ಪ್ರೇಮಗರೆದು ತಾಯೆ ನೀ 1 ಮಲ್ಲೆ ಮಲ್ಲಿಗೆ ಜಾಜಿ ಮರುಗ ಸೇವಂತಿಕೆ ಎಲ್ಲ ಪೂಜೆ ಮಾಡೆ ಸಲ್ಲಲಿತದಲಿ ನೀನಿಲ್ಲದ ಪೂಜೆಯ ವಲ್ಲನು ಶ್ರೀ ಹರಿಯು ಎಲ್ಲರಿಗಧಿಕಳೆಂದು ಪೂಜೆಗೊಂಡು ದಯಾಸಿಂಧು ತಾಯೆ ನೀ 2 ಶ್ರೀ ಶ್ರೀನಿವಾಸನೊಳು ವಾಸಿಪೆ ಸರ್ವದಾ ಪೋಷಿಪೆ ಭಕ್ತರನು ವಾಸುದೇವನ ತೋರಿ ಪೋಷಿಸೆ ಬಾರಮ್ಮ ವಾಸವಾಗಲು ಮನೆಗೆ ಸೂಸಿ ಭಕುತಿಯಿಂದ ಪೂಜಿಪೆ ನಿಮ್ಮ ಚರಣವಮ್ಮಾ ತಾಯೆ ನೀ 3
--------------
ಸರಸ್ವತಿ ಬಾಯಿ
ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ಪ ವಸುದೇವಾತ್ಮಜನಾದ ಕೇಶವ ದೇವಕಿ ಬಸುರೊಳಗುದಿಸಿದ ನಾರಾಯಣನು ಎಸೆದು ನಿಂದನು ಗೋಕುಲದೊಳು ಮಾಧವ ಕುಸುಮನಾಭನು ಗೋವಿಂದ ನಂದ ನಂದನಕಂದ 1 ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು ತೊಟ್ಟಿಲ ಶಿಶುವಾಗಿ ಮಧುಸೂದನ ಮೆಟ್ಟಿ ಕೊಂದನು ತ್ರಿವಿಕ್ರಮ ಶಕಟನ ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ 2 ಬೆಣ್ಣೆಯ ಮೆದ್ದನು ಮಿಣ್ಣನೆ ಶ್ರೀಧರ ಕಣ್ಣಿಯ ಕರುವನು ಹೃಷಿಕೇಶನು ಉಣ್ಣಬಿಟ್ಟನು ತಾಯ ಮೊಲೆಯ ಪದ್ಮನಾಭ ಸಣ್ಣವ ಕ್ಷಣದೊಳು ದಾಮೋದರನಾದ 3 ವಾಸುದೇವನು ದ್ವಾರಾವತಿವಾಸನೆನಿಸಿದ ಸಾಸಿರ ನಾಮನು ಸಂಕರುಷಣನು ಆಸುರವಾಗಿಯೆ ಪ್ರದ್ಯುಮ್ನನೆಸೆದನು ದೋಷರಹಿತನಾದ ಅನಿರುದ್ಧನು 4 ಉತ್ತಮನಾಗಿ ಪುರುಷೋತ್ತಮನೆಸೆದನು ಅಧೋಕ್ಷಜ ನಾಮದಿ ಮೃತ್ಯುವಾದನು ದೈತ್ಯಕುಲಕೆಲ್ಲ ನರಸಿಂಹ ಮುಕ್ತಿದಾಯಕನಾದನಚ್ಯುತ ನಾಮದಿ 5 ಕಡಲ ನಡುವೆ ಜನಾರ್ದನನೆನಿಸಿ ತಾನು ಹಡಗನು ಸೇರಿಯೆ ಬಂದನುಪೇಂದ್ರನು ಉಡುಪಿಯ ಸ್ಥಳದೊಳು ಹರಿಯೆಂಬ ನಾಮದಿ ಕಡಗೋಲ ಕೈಯೊಳು ಹಿಡಿದು ನಿಂದಿಹ ಕೃಷ್ಣ 6 ಇಪ್ಪತ್ತು ನಾಲ್ಕು ನಾಮದ ಸ್ವಾಮಿಯು ತಪ್ಪದೆ ಒಂಬತ್ತು ಪೂಜೆಯಗೊಂಬನು ವರಾಹ ತಿಮ್ಮಪ್ಪರಾಯನು ಒಪ್ಪುಗೊಂಡನು ಮಧ್ವರಾಯನಾಗಮದೊಳು 7
--------------
ವರಹತಿಮ್ಮಪ್ಪ
ದಯಾಬ್ದಿ ಸಿರಿಧರಣಾ ಪಾ'ಮಾಂಭಯಕೃದ್ಭಯನಾಶನ ಹಯವದನಾ ಪಜಯಪ್ರದ ಮುರಹರ ಜಾನಕೀಶ ಅಘಕ್ಷಯ ಖಗವಾಹನ ಸಾರಸೇಕ್ಷಣ 1ಚಾತುರ್ಥದ ರಾಮಕೋಟಿಯ ಜರುಗಿಸಿಕೌತೂಹಲ ಪ್ರಜತತಿಗೆ ಲಭಿಸಿದೆ 2ಆಪದೊದ್ಧಾರಣ ಆರ್ತಶರಣ್ಯಾಭೊಪಸುಜನಗಣ ತಾಪನಿವಾರಣ 3ಪ್ಲೇಗಿನವಾಂತರ ಪರಿಹರಿಸಿಪುರಭೋಗಿಶಯನ ಪರಪಾಲಿಸು ಬೇಡುವೆ 4ಚನ್ನಪಟ್ಣಾಧೀಶ ಸ್ತೌತ್ಯವುಮೇಶಎನ್ನಪರಾಧಗಳ ಮನ್ನಿಸು ಶ್ರೀಶ 5ಯುವತೀಮಣಿಯರೆಲ್ಲ ಶಿವಕರಭಕ್ತಿುದಿಂತವನಾಮಾಮೃತ ಸ'ಗೊಲಿದರು ರಕ್ತಿ 6ಪ್ರೇಮ ತುಲಸಿಗುರುಸ್ವಾ'ು ಸೇವಕ ರಂಗಸ್ವಾ'ುದಾಸ ಹೃದಿಧಾಮ ಶ್ಯಾಮಾಂಗ 7
--------------
ಮಳಿಗೆ ರಂಗಸ್ವಾಮಿದಾಸರು
ದರಿಶಕುಪ್ಪ ವೆಂಕಟದಾಸರಿಂದಗುರುರಂಗಸ್ವಾ'ುಕೃಪಾಂಗಾ ಸತ್ಕøಪಾಂಗಾಭಜಿಪೆ ವರತುಲಸೀರಾಮಪಾದ ಸಾರಸಭೃಂಗ ಪಗುರ್ರಮಾಂಬ ಕುವರನೆ ಗುರುಸೇವಾ ದುರಂಧರನೆಕರುಣಿಸೊಯಮ್ಮನು ನಿರುತವು ಬೇಡುವೆ 1ಅಗಣಿತಮ'ಮನೆ ಭಾಗ್ಯಾದಣ್ಣಯ್ಯಸುತನೆಭಗವಂvನಪ್ರಿಯನೆ ಹಗಲಿರಳು ಭಜಿಪೆವು 2ದುಂದುಭಿಶಾಲೆಯಂತೆ ಧನುರ್ಮಾಸಭಜನೇಗೆಬಂದು ಪಾಮರರ ಭವಬಂಧನ ಬಿಡಿಸಿದ 3ರಾಮನ ನಾಮವ ಪ್ರೇಮಾದಿಂ ಬೊಧಿಸಿನೇಮವತೋರಿಸಿ ಸ್ವಾ'ುೀಕೃಪೆ ಪಡೆದ 4ತುಲಸೀಮಹಾತ್ಮರ ತತ್ವಾಬೊಧಾನುಭವತಿಳಿದುನಿರ್ಮಲ ಹೃದಯದಲ್ಲಿ ಭಕ್ತಕೃತಮುಖನೆ 5ಪರಿಪೂರ್ಣ ತುಲಸೀರಾಮ ಮರೆಯದೆ ಇರಿಸೆನ್ನದರಿಶಕುಪ್ಪದ ದಾಸ ಕರವೆತ್ತಿ ಮುಗಿಯುವೆನೂ 6
--------------
ಮಳಿಗೆ ರಂಗಸ್ವಾಮಿದಾಸರು
ದರುಶನವನು ಕೊಡೆಲೊ ದೇವ ಪ ಸರಸಿಜ ಮಿತ್ರನು ಮೂಡೆ ಪ್ರಾರ್ಥಿಸುವೆನು ಅ.ಪ ತುಂಗಾ ಕೃಷ್ಣ ಕಾವೇರಿ ಗಂಗೆ ಯಮುನೆ ಗೋದಾವರಿ ನರ್ಮದಾ ಮಂಗಳ ನದಿಗಳು ಕಾದುಕೊಂಡಿರುವುವು ರಂಗ ನಿನ್ನ ಚರಣಂಗಳ ಸೇವೆಗೆ 1 ಜಗವನುದ್ಧರಿಸಿದ ಸುಂದರ ನಿನ್ನಯ ಮೊಗವನು ನೋಡುತ ಸಂಭ್ರಮದಿ ಬಗೆ ಬಗೆ ಹೈಮವಸ್ತ್ರಗಳನು ಧರಿಸುತ ನಗವೃಂದವು ಕಾದಿರುವುದು ದೇವ 2 ತರುಲತೆಗಳು ಕಾದಿರುವುದು ಪೂಮಳೆ ಗರೆಯಲು ನಿನ್ನಯ ಶಿರದಲ್ಲಿ ಪರಮಹಂಸರುಗಳು ಕರದಲಿ ಜಪಮಣಿ ಧರಿಸಿ ಜಪಿಸುವರೊ ಕರುಣಾ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ದರುಶನವಾಯಿತು ಪಂಢರೀಶನ ಪ ದರುಶನದಿಂದಲಿ ಧನ್ಯರಾದೆವು ಸರಸಿಜಭವನ ನಾಭಿಯಲಿ ಪಡೆದವನ ಅ.ಪ ತಂದೆತಾಯಿಯರ ಭಕ್ತಿಯಿಂದ ಸೇವಿಸುವರಿಗೊಲಿದಾ- ನಂದಪದವಿಯನಿತ್ತ ನಂದನ ಕಂದನ 1 ಇಷ್ಟ ಭಕುತ ಕೊಟ್ಟ ಇಟ್ಟಿಗೆ ಮೇಲೆ ನೆಲಸಿ ಶಿಷ್ಟರ ಸಲಹುವ ವಿಠ್ಠಲರಾಯನಂಘ್ರಿ 2 ಉರದಲಿ ಸಿರಿಯನು ಧರಿಸಿ ಸುರರ ಕಾರ್ಯ ನೆರವೇರಿಸುವ ಜಗದ್ಭರಿತನ ಶ್ರೀಪಾದ 3 ನಾಗಶಯನ ನಿಖಿಲಾಗಮವೇದ್ಯನ 4 ಮುಕುತಿದಾಯಕ ಗುರುರಾಮವಿಠಲ ಚರಣ5
--------------
ಗುರುರಾಮವಿಠಲ
ದರ್ಪಣದಲಿ ಮುಖ ನೋಡಿಕೊಂಡನೆ ಪ ಮಲ್ಲಿಗೆ ಮುಗುಳಿನ ತೆರದಲಿ ಶೋಭಿಪ ಪಲ್ಲುಗಳಲೆ ಸಿರಿಯುಗಲ್ಲವು ಭೂಪತಿಯಂದದಿ ಬೃಸ್ವರಾಬಿಲ್ಲಿನ ಸೌಭಗವು1 ಶರದುದಿತಾಮಲ ತರುಣಿಕರಾರ್ಚಿತ ಸರಸಿಜದಳನಯನಾಕರುಣಪೂರ್ಣ ಕಟಾಕ್ಷ ರಕ್ಷಣ ವರಪಲ್ಲವರರಸನು 2 ರತ್ನಕುಂಡಲದ್ವಯ ಸಂಶೋಭಿತ ಸ್ತೋತ್ರಯುಗಳ ನೇಮಮಸ್ತಕದಲಿ ಮಾಣಿಕ ಮುಕುಟ ಶ್ರೀ ಉತ್ತಮ ಮುಖಧಾಮ 3 ನಿತ್ಯಾನಂದ ಚಿದಾತ್ಮಕ ಶಕ್ತನು ಭಕ್ತಕಾಮಿತದಾತಎತ್ತುವೆ ಕರಯುಗ ತವ ಕಮಲಕೆ ಚಿತ್ರ ಚರಿತ್ರ ಗಾತ್ರಾ 4 ನಾಸಕ ಚಂಪಕ ಕೋಶವು ಬಿಂಬಾಧರ ಯುಗಳದೋಷರಹಿತ ಸುರಾಹ ಸರೋಜ ಇಂದಿರೇಶ ವದನ 5
--------------
ಇಂದಿರೇಶರು
ದರ್ಭಶಯನ ಶ್ರೀರಾಮದೇವರ ಸ್ತೋತ್ರ ಪಂಕ ಕಳೆಯೊ ಎನ್ನ | ಕರುಣಾರಸ ಪೂರ್ಣ ಪ ಲಂಕೇಶನನು ಜಗ್ವೊಲಿದ ಹರಿಯೇ | ಆಶ್ರಿತರಿಗೆ ಧೊರೆಯೇ ಅ.ಪ. ಭವ ವಿಮುಕ್ತನಹನೂಕವಿ ಜನ ನುತ ಸತ್ಪ್ರವರ ನಿನ್ನ ಲೀಲಾ | ಲೋಕ ಶಿಕ್ಷೆಗನುಕೂಲ |ತವಕದಿ ಗೈದೆ ವಿವಿಧ ಪೂಜೆಗಳನ್ನ | ನವ ಪಾಪಾಣಗಳನ್ನ 1 ಶರಧಿ ಸಿಂಧು ಪತಿಯ ನೋಡೀ | ದರ್ಭಶಯನ ಮಾಡೀಕಪ್ಪುಗೊರಳ ಸಖ ಕುಪಿತನಾಗೆ ನೀನೂ | ಬೆದರಿ ಬಿನ್ನವಿಸಿದನೂಒಪ್ಪಿ ಬಂಧಿಸಿದೇ ಸೇತುವೆಯನ್ನಾ | ಭಕ್ತರಿಗೆ ಪ್ರಸನ್ನಾ 2 ಸಿರಿ ಮಾಧವ ಶ್ರೀನಲ್ಲಾ | ಗುರು ಗೋವಿಂದ ವಿಠ್ಠಲ |ಮಾತು ಮಾತಿಗೆ ಕೊಡು ತವ ಲೀಲಾ | ಉಚ್ಚರಿಸುವ ಸೊಲ್ಲಾ 3
--------------
ಗುರುಗೋವಿಂದವಿಠಲರು
ದಶರಥರಾಮಹರೆ ಸೀತಾಪತೆ ದಶರಥರಾಮ ಸುಧಾಕರವದನ ¥ರಶುರಾಮ ಬಾಹುಪರಾಕ್ರಮ ಜಿತಶ್ರೀ ಪ ಸುರಮುನಿ ಸೇವಿತ ಶುಭಕರ ಚರಿತ ಕೌಸ್ತುಭ ಶೋಭಿತ ವರ ವಿಶ್ವಾಮಿತ್ರಾಧ್ವರ ಪರಿಪಾಲನ ಖರ ದೂಷಣ ರಾಕ್ಷಸ ಬಲ ಖಂಡನ 1 ವಾಲಿ ಮರ್ದನ ಭಕ್ತವತ್ಸಲ ಮಾಧವ ವಿನುತ ಪಾದ ಪದ್ಮ ನೀಲ ನೀರದ ಸನ್ನಿಭಗಾತ್ರ ಪರಮ ದಯಾಳು ನಾರಾಯಣ ಲೀಲಾ ಮಾನುಷ ವೇಷ 2 ಸಿಂಧು ಬಂಧನ ಪಂಕ್ತಿ ಕಂಧರಾಂತಕ ಗೋವಿಂದ ಮುಕುಂದಾರ ವಿಂದೋದರ ಇಂದಿರಾಧಿಪ ಶ್ರೀ ಹೆನ್ನೆಪುರ ನಿಲಯಾ ನಂದ ವಿಗ್ರಹ ಜಗದ್ವಂದ್ಯ ಮಂದಹಾಸ 3
--------------
ಹೆನ್ನೆರಂಗದಾಸರು
ದಶವಿಧ ನಾದವು ಭಕ್ತರಿಗೆ ಕೇಳುತಿದೆದಶವಿಧ ನಾದವು ಭಕ್ತರಿಗೆ ಕೇಳುತಿದೆದುಶ್ಮಾನರು ಇಬ್ಬಗೆಯಾಗಲು ದೆಸೆ ಬಿರಿಯಲುಯೋಗಿಯ ಕಿವಿ ಎರಡರಲಿ ಪ ಛಿಣಿ ಛಿಣಿ ಎಂಬ ಚಿನ್ನಿನ ನಾದವು ಚಿತ್ಕøತಿಯಾಗಿ ಚಿಮ್ಮತಿರೆಝಣಝಣವೆಂಬ ಝಿಲ್ಲಿಯ ನಾದವು ಝೇಂಕಾರದಿ ಝೇಂಕರಿಸುತಿದೆಎಣಿಕೆಯಿಲ್ಲದೆ ನಾಗಸ್ವರದ ಧ್ವನಿ ಎಡೆದೆರೆಪಿಲ್ಲದೆ ಕೂಗುತಿದೆಧಣಧಣ ಎನಿಪ ತಾಳನಾದವು ದಟ್ಟಣೆಯಾಗಿ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಾಟ್ಟಾಗಿಯೆ ನುಡಿಯುತಿದೆತನನಾ ಎಂಬ ವೀಣಾಸ್ವರವು ತಂಪಾಗೆಲ್ಲವ ಮುಚ್ಚುತಿದೆಘನಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ2 ಭೇರಿಯ ನಾದವು ಧಮಧಮ ಎನುತಲಿ ಬಹಳಾಗಿಯೆ ಭೋಂಕರಿಸುತಿದೆಘೋರದಿ ಮೇಘದ ನಾದವು ಘರ್ಜಿಸುತಿದೆ ಘುಡಿ ಘುಡಿಸುತಿದೆನೂರಾರು ಸಿಡಿಲಂತೆ ನೂಕು ನುಗ್ಗಡಿಸುತಿದೆವೀರ ಚಿದಾನಂದ ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ3
--------------
ಚಿದಾನಂದ ಅವಧೂತರು