ಒಟ್ಟು 4256 ಕಡೆಗಳಲ್ಲಿ , 116 ದಾಸರು , 2832 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆನ್ನ ಮಾತ ಕೇಳದು - ಮಂದಜ್ಞಾನದಿ |ತನುವಿನಾಸೆಯ ಬಿಡಲೊಲ್ಲದು ಪವನಜನಾಭನೆ ನಿನ್ನ ನಾಮ ಸಾಸಿರವ |ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪದೇಹ ಸಂಬಂಧಿಗಳಾದವರೈವರು |ಮೋಹಪಾಶದಿಕಟ್ಟಿಬಿಗಿದಿಹರೈ ||ಕಾಯಅನಿತ್ಯವೆಂಬುದನರಿಯದೆ |ಮಾಯಾಪ್ರಪಂಚದಿಂದಲಿ ಬದ್ಧನಾಗಿಹೆ1ಸಾಧುಸಜ್ಜನರ ಸಂಗವ ಮಾಡಿ ಪರಗತಿ-|ಗಾಧಾರವನು ಮಾಡಲೊಲ್ಲದಯ್ಯ ||ಕ್ರೋಧಕುಹಕದುಷ್ಟರೊಡನಾಡಿ ಕಾಲನ |ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2ಮದಗಜ ಮೈಯ ಮರೆತು ಮುಂದುಗಾಣದೆ |ಕದುವಿನೊಳಗೆ ಬಿದ್ದಂತಾದೆನಯ್ಯ ||ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |ಪದುಮಾಕ್ಷ ವರದ ಶ್ರೀಪುರಂದರವಿಠಲ3
--------------
ಪುರಂದರದಾಸರು
ಮನುಜ ವಿಶ್ವಾಸ ಬೇಡ ವನಿತೇರೊಳ್ಮನುಜ ವಿಶ್ವಾಸ ಬೇಡ ತಿಳಿದು ಪ.ನಗೆಮೊಗದಬಲೇರ ಬೆಗಡು ಸ್ನೇಹದಕಿಂತಹೆಗಲ ಶೂಲವೆ ಸುಖವುಸುಗುಣವಿಲ್ಲದ ನರ್ಕಸೌಖ್ಯ ಬೇಕಾದರೆವಿಗಡೆಯರ್ಸಖ್ಯವೆ ಸಾಕು ತಿಳಿದು 1ಮಹಪ್ರೇಕ್ಷರಾದರ ಅಹಿತಕಾರಿಣಿಮಾಯೆಸಹಜ ತಾಮಸರೂಪಿಯಐಹಿಕಾಮುಷ್ಮಿಕದ ಬಹು ಪುಣ್ಯ ಕೆಡಿಸುವಕುಹಕಕೃತ್ರಿಮಶೀಲೆಯ ತಿಳಿದು2ಗುರುಹಿರಿಯರ ಭಕ್ತ್ಯಾಚರಣೆಗೆ ಪ್ರತಿಕೂಲೆತ್ವರಿತ ಕಾಮುಕಿ ಮೋಹಿಯಧರೆಯೊಳಭಿಜÕರ ಮರುಳು ಮಾಡುವ ಬುದ್ಧಿಭರಿತೆ ನಿಷ್ಠುರೆ ನೀಚೆಯ ತಿಳಿದು 3ಎನಿತಿಲ್ಲ ಪತಿವ್ರತೆ ವನಿತೇರವರೆ ನಾಕಾವನಿಯ ಪಾವನ ಮಾಳ್ಪರುಅನುದಿನವರ ನಾಮ ನೆನವಿಗಿರಲಿ ಮಿಕ್ಕಬಿನುಗುನಾರೇರ ನೆಚ್ಚದೆ ತಿಳಿದು4ಪ್ರಸನ್ವೆಂಕಟೇಶಪಾದಬಿಸಜಾರ್ಚನಾನುಕೂಲೆಯಾದಸಿಯಳೆ ಶುಭಗುಣಳುಹುಸಿಢೌಳಿಕಾರ್ತಿ ದುವ್ರ್ಯಸನಿಯನಾಳ್ವಮಾನಿಸಗೆ ಸುಖವೆ ಸ್ವಪ್ನವು ತಿಳಿದು 5
--------------
ಪ್ರಸನ್ನವೆಂಕಟದಾಸರು
ಮನುಷ್ಯನಾದ ಫಲವೇನುಶ್ರೀನಿವಾಸನ ಕಂಡು ಸುಖಿಯಾಗದನಕ ಪ.ಭಾನುಉದಿಸದ ಮುನ್ನ ಸ್ವಾಮಿ ಪುಷ್ಕರಿಣಿಯಲಿಸ್ನಾನಸಂಧ್ಯಾನಜಪಗಳನೆ ಮಾಡಿಸಾನುರಾಗದಿ ಶ್ರೀವರಹಗೆ ನಮಿಸಿತಾನಖಿಳ ಪುಣ್ಯವನು ಸೂರೆಗೊಳದನಕ 1ಹಸ್ತದಲಿ ವೈಕುಂಠವೆಂದು ತೋರುವ ವಿಮಾನಸ್ಥಾಚ್ಯುತನ ಕರ್ಮಗುಣನಾಮವಸ್ವಸ್ಥಮತಿಯಾಗಿ ಕೊಂಡಾಡಿ ಕುಣಿದಾಡಿ ತಾವಿಸ್ತರದಕೈವಲ್ಯಪಡೆಯದನಕ2ತುಲಸಿ ಬರ್ಹಕೆ ಪೋಲ್ವ ಆ ಮಹಾಪ್ರಸಾದವನುಅಲಸದೆ ಸೇವಿಸಿ ಕೃತಾರ್ಥನಾಗಿಹಲವು ದುರಿತಾರಿ ಪ್ರಸನ್ವೆಂಕಟಗಿರಿಯನಿಲಯನೆ ಗತಿಯೆಂದು ಭಜಿಸದನಕ 3
--------------
ಪ್ರಸನ್ನವೆಂಕಟದಾಸರು
ಮರುಳಾಟವೇಕೊ - ಮನುಜಾ |ಮರುಳಾಟವೇಕೊ? ಪ.ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |ಮಧ್ವಶಾಸ್ತ್ರ ಓದದವನವಿದ್ಯೆಏತಕೊ - ಮನುಜಾ1ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |ಭಂಡ ಮಾತನಾಡುವನ ಪಾಂಡಿತ್ಯವೇತಕೊ |ಪುಂಡರೀಕವರದ ಶ್ರೀ ಪುರಂದರವಿಠಲನ |ಕಂಡು ಭಜಿಸಲರಿಯದವನವಿತಂಡಬುಧ್ಧಿಯೇತಕೋ5
--------------
ಪುರಂದರದಾಸರು
ಮರುಳಾಟವ್ಯಾಕೆ ಮನುಜಗೆ ಮರುಳಾಟವ್ಯಾಕೆಹರಿಭಕ್ತನಲ್ಲದವಗೆ ಹಲವಂಗವ್ಯಾಕೆ ಪ.ಮೃತ್ತಿಕಾಶೌಚವಿಲ್ಲದೆ ಮತ್ತೆ ಸ್ನಾನ ಜಪವ್ಯಾಕೆಹತ್ತು ಕಟ್ಟದವಗೆ ಅಗ್ನಿಹೋತ್ರವ್ಯಾತಕೆತೊತ್ತುಬಡಕಗೆ ಬಹು ತತ್ವವಿಚಾರವ್ಯಾಕೆಕರ್ತಕೃಷ್ಣನ್ನೊಪ್ಪದ ವಿದ್ವತ್ತವ್ಯಾತಕೆ1ಹಸಿವೆತೃಷೆತಾಳದವಗೆಹುಸಿವೈರಾಗ್ಯವ್ಯಾತಕೆವಿಷಮ ಚಿತ್ತಗೆ ಪರರ ಕುಶಲ ಬಯಕ್ಯಾಕೆದಶ ಜಪ ಮಾಡಲಾರ ಮುಸುಕಿನ ಡಂಬವ್ಯಾಕೆಕುಶಶಾಯಿಗರ್ಪಿಸದ ಅಶನವ್ಯಾತಕೆ 2ಮೂಲಮಂತ್ರವರಿಯದ ಮೇಲೆ ದೇವಾರ್ಚನೆ ಯಾಕೆಸಾಲಿಗ್ರಾಮವಿಲ್ಲದ ತೀರ್ಥವ್ಯಾತಕೆಸೂಳೆಗಾರಗೆ ತುಳಸಿಮಾಲೆ ಶೃಂಗಾರವ್ಯಾಕೆಮೇಲೆ ಮೇಲೆ ಹರಿಯೆನ್ನದ ನಾಲಿಗ್ಯಾತಕೆ 3ಊಧ್ರ್ವಪುಂಡ್ರಿಲ್ಲದಾಸ್ಯ ತಿದ್ದಿನೋಡಬೇಕ್ಯಾಕೆಶುದ್ಧ ಸಾತ್ವಿಕವಲ್ಲದ ಬುದ್ಧಿ ಯಾತಕೆಕದ್ದು ಹೊಟ್ಟೆ ಹೊರೆವವಗೆ ಸಿದ್ಧ ಶೀಲವೃತ್ತಿಯಾತಕೆಮಧ್ವ ಮತವÀ ಬಿಟ್ಟಿತರ ಪದ್ಧತ್ಯಾತಕೆ 4ಕಂಡ ನಾರೇರಿಚ್ಛೈಸುವ ಲೆಂಡಗೆ ಪುರಾಣವ್ಯಾಕೆಭಂಡು ಮಾತಿನ ಕವಿತ್ವ ಪಾಂಡಿತ್ಯಾತಕೆಕುಂಡಲಿಪ್ರಸನ್ವೆಂಕಟ ಮಂಡಲೇಶನ ಶ್ರೀಪಾದಪುಂಡರೀಕಬಿಟ್ಟವನ ವಿತಂಡವ್ಯಾತಕೆ5
--------------
ಪ್ರಸನ್ನವೆಂಕಟದಾಸರು
ಮರೆಯದಿರು ಮನವೆ ಮಾಧವನ ನಮ್ಮದುರಿತದಾರಿದ್ರ್ರ್ಯವನು ಹರಿಸಿ ಹೊರೆವವನಪ.ಆಳರಿತು ಊಳಿಗವ ಕೊಂಡುಂಡು ದಣಿವಂತೆಮೇಲಾಗಿ ಜೀವವನು ಕೊಡುವ ದೇವನಕಾಲಕಾಲಕೆ ಮಾಳ್ಪ ನಡೆತಪ್ಪು ನುಡಿತಪ್ಪುಆಲೋಚಿಸದೆ ಕರುಣಿಸುವ ಕರುಣನ 1ಮೂಢನಾಗಲಿ ಮತಿಯುಳ್ಳ ನರನಾಗಲಿಪಾಡಿದಾಕ್ಷಣ ಭೃತ್ಯನೆಂದು ಒಲಿದುಕೂಡಿಕೊಂಬುವ ದೊರೆಗಳಿಲ್ಲ ಹರಿಯಲ್ಲದಾನಾಡಾಡಿಬಣಗುಕಲ್ಲುಗಳ ಬೇಡಿ2ಮುನ್ನಾರು ಅನ್ಯದೇವರ ಭಜಿಸಿ ಭವಗೆದ್ದರಿನ್ನಾರು ಹರಿಯೊಲುಮೆಯಲಿ ದಣಿದರುನಿನ್ನ ಗುರುಗಳಿಂದರಿತು ನೆರೆನಂಬು ಪ್ರಸನ್ನ ವೆಂಕಟಪತಿಯ ಪಾದವನಜವ 3
--------------
ಪ್ರಸನ್ನವೆಂಕಟದಾಸರು
ಮರೆಯದಿರೆಲೆ ಮನವಿಲ್ಲಿ - ಯಮಪುರಿಗೆ ಒಯ್ದು ಬಾಧಿಸುತಿಹರಲ್ಲಿ ಪ.ಪರನಾರಿಯರ ಸಂಗವಿಲ್ಲಿ - ಉಕ್ಕುಎರೆದ ಸತಿಯರ ತಕ್ಕೈಸುವರಿಲ್ಲಿಗುರು - ಹಿರಿಯರ ನಿಂದೆಯಿಲ್ಲಿ - ಬಾಯೊಳೆರದು ಸೀಸವ ಕಾಸಿ ಹೊಯಿಸುವರಿಲ್ಲಿ 1ಉಂಡ ಮನೆಯ ಕೊಂಬುದಿಲ್ಲಿ - ಎದೆಗುಂಡಿಗೆಯನು ಸೀಳಿ ಕೊಲುತಿಹರಲ್ಲಿಗಂಡನ ದಣಿಸುವುದಿಲ್ಲಿ - ಯಮಕುಂಡದೊಳಗೆ ಹಾಕಿ ಕುದಿಸುವರಲ್ಲಿ 2ಚಾಡಿಯ ಹೇಳುಸುದಿಲ್ಲಿ - ನುಡಿದಾಡುವ ನಾಲಿಗೆ ಕೇಳುವರಲ್ಲಿಬೇಡಿದರಿಗೆ ಧರ್ಮವಿಲ್ಲಿ - ಇದನೀಡದಿರಲು ಒದ್ದು ನೂಕುವರಲ್ಲಿ 3ಪುಸಿ - ಠಕ್ಕು - ಠವುಳಿಗಳಲ್ಲಿ -ಕಟ್ಟಿಎಸೆದು ಕೊಲ್ಲುವರೊ ನಿನ್ನವರು ಕೇಳಿಲ್ಲಿಅಶನಪ್ರಭದಿಗಳಲ್ಲಿ - ಮಾಡೆಬಿಸಿಯ ಕೆಂಡವ ತಂದು ತಿನಿಸುವರಲ್ಲಿ 4ಸಿರಿಮದದೊಳಗಿಹುದಿಲ್ಲಿ - ಸೊಕ್ಕಮುರಿದು ಹಲ್ಲುಗಳ ಕಳಚುವರಲ್ಲಿಪುರಂದರವಿಠಲನ ಇಲ್ಲಿ - ನೆನೆಯಸ್ಥಿರವಾದ ಮುಕುತಿ ಪಡಕೊಂಬುವರಲ್ಲಿ 5
--------------
ಪುರಂದರದಾಸರು
ಮರೆಹೋಗಿ ಬುಧರೀ ತಾತನ್ನ ವರಗುರು ಸತ್ಯನಾಥನ್ನ ಪ.ಇಂದ್ರಿಯಜಿತ ಸುಜನೌಘ ಚಕೋರಕೆ ಚಂದ್ರನ್ನಮುದಸಾಂದ್ರನ್ನಮಂದರಧರಜಾನಕಿಪತಿ ರಾಮಚಂದ್ರನ ಪ್ರಿಯ ಮುನೀಂದ್ರನ್ನ1ಅಮಲಸುಖತೀರ್ಥ ಪ್ರಮೇಯಸಾಕಲ್ಯನಿರ್ಣಯ ಬಲ್ಲನ್ನಎಲ್ಲಾ ಬಲ್ಲೆಂಬೋ ಮಾಯಿಮತದಲ್ಲಣನ ಪಟುಮಲ್ಲನ 2ರುಕ್ಷಮಾಯಿಗಳ ಶಿಕ್ಷಿಪನ ಸಪಕ್ಷನ್ನ ಕರುಣಾಕ್ಷನ್ನಪಕ್ಷ್ಷಿಗಮನನ ದೀಕ್ಷೆಲಿ ಪೂಜಿಪ ದಕ್ಷನ್ನ ಸುರಪಕ್ಷನ್ನ 3ಶಂಕರನ ಗರ್ವ ಮುರಿದು ಬಿರುದಾಂಕನ್ನ ನಿಶ್ಯಂಕನ್ನಕಿಂಕರಜನಸÀುರಭೂರುಹ ಸುಗುಣಗಣಾಂಕನ್ನ ಶಶಿಗಧಿಕನ್ನ 4ಮರುತಮತಾಗ್ರಣಿಗುರುಸತ್ಯಾಧಿಸುತ ವಿರತನ್ನಾಮಲ ಚರಿತನ್ನಕರ್ತಪ್ರಸನ್ನವೆಂಕಟಪತಿಪದನಿರತನ್ನ ಶುಭಕರತನ್ನ5
--------------
ಪ್ರಸನ್ನವೆಂಕಟದಾಸರು
ಮಲಗಯ್ಯ ಜಲಜನಾಭ ಪಆದಿಶೇಷ್ಟನು ಬಂದು ಹಾಸಿಗೆಯಾಗಿಹವೇದವಿನುತ ಜಗದಾದಿ ಪುರುಷ ಕೇಳೊ 1ಸಿರಿ ಭೂ ದುರ್ಗೆಯರು ತರುಣಿಯರು ಮೂವರುಚರಣವೊತ್ತಲಿಕೆ ಕೈಕಟ್ಟಿ ನಿಂತಿಹರು 2ಸರುವಜÕ ಮುನಿವಂದ್ಯ ಸರುವ ಸ್ವತಂತ್ರನೇಪರಮ ಸುಂದರ ಪುರಂದರವಿಠಲರಾಯಾ3
--------------
ಪುರಂದರದಾಸರು
ಮಹತಿಗೆ ಮಹತು ಹರಿನಾಮಬಹುಜನ್ಮಜಲಧಿ ಶೋಷಿಸುವ ಹರಿನಾಮ ಪ.ಹಿಂದೊದಗಿದಘರಾಶಿ ಬೇಯಿಸಿ ಬಿಸುಟುವ ನಾಮಮುಂದೆ ಬಹ ದುರಿತಕಡ್ಡಹ ನಾಮಮಂದಮತಿ ಕತ್ತಲೆಗೆ ಬಾಲಾರ್ಕಸಮ ನಾಮದಂದುಗದ ಬಳ್ಳಿಯನು ಹರಿವ ನಾಮ 1ಮುಕುತಿ ನಗರವ ತುಂಬಿಸುವ ಅಭಯಕರ ನಾಮಶಕುತ ಯಮಾಲಯಕೆÉ ಭಯಂಕರದ ನಾಮಅಕಳಂಕ ದಾಸರಿಗೆ ಆದ್ಯಂತಗತಿ ನಾಮಭಕುತರೆಡರಿನ ಗಿರಿಗೆ ವಜ್ರನಾಮ 2ಸರ್ವ ಶ್ರುತಿಮುನಿಗಳುಗ್ಗಡಿಸುತಿಹ ನಾಮಉರ್ವಿಯೊಳು ನಂಬಿದರ ಪೊರೆವ ನಾಮಸರ್ವಜÕರಾಯಗುರು ನಿರ್ವಚನಿಸುವ ನಾಮಸರ್ವೇಶ ಪ್ರಸನವೆಂಕಟೇಶನ ಶ್ರೀನಾಮ 3
--------------
ಪ್ರಸನ್ನವೆಂಕಟದಾಸರು
ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ ಬಿನ್ನವಿಪೆ ನಿರ್ದೋಷ ||ಆಹಾ ||ಕುಹಕಾರಿ ಹರಿಪಾದ ಮಹಿಮೆ ಕೊಂಡಾಡಿಸೊ |ಗಹನವಿಕ್ರಮಭೀಮ ಮಹೀಧರಪ ಜಾಧವ ಪಸ್ಫಟಿಕಾಭ ಶ್ರೀಕಂಠ ದಕ್ಷ ಧ್ವಂಸಿ |ನಿಟಿಲಲೋಚನ ಸುರಪಕ್ಷ ಹೇ || ಧೂ |ರ್ಜಟ ಹೀನ ವಿಷಯಾಖ್ಯ ಕಕ್ಷವಹ್ನಿ|ಕುಟಿಲತ್ವ ಬಿಡಿಸತಿ ದಕ್ಷ ||ಆಹಾ||ಕಠಿಣ ಸಂಸಾರದಿತ್ರುಟಿಮಾತ್ರ ಸುಖ ಕಾಣೆ |ವಟುರೂಪಿ ಭಕುತರ ಕಟಕದೊಳಿರಿಸೆನ್ನ1ಇಳಿರಥ ನಗಶರಸೋಮಮೌಳಿ|ನಳನಂದಿನಿಪ ಸುತ ರಾಮ ನಾಮಾ |ನಲಿದು ಪಾಡುವ ಗುಣಧಾಮ ರೌಪ್ಯಾ |ಬಲಾವಾಸಾನಂಗ ವಿರಾಮಾ ||ಆಹಾ||ಹಲವರಾಶ್ರಯಿಸಿ ನಾ ಬಲು ನೊಂದೆನೋರ್ವರು ಕಾಯ್ವ |ಸುಳಿವು ಕಾಣೆನೋ ಹೇ ಗರಳಕಂಠ ಪೊರೆಯೆನ್ನ 2ಪಂಚ ಸುಸ್ಮಿತ ಯುಕ್ತ ವದನಾ ನಿಷ್ಪ್ರ |ಪಂಚ ಗಜಾಸುರ ಹನನಾ ಏಕಪಂಚಾಸ್ಯ ಜನಕ ಕೇಶವನಾ ಪ್ರೀತಿ |ಮಂಚ ನೀನಾಹೆ ಖಳರನಾ ||ಆಹಾ||ಹಿಂಚಾಗಿ ಅಳಿವಂಥ ಹಂಚಿಕೆಯಲಿವರ|ಮುಂಚೆ ಕರೆದು ಕೊಟ್ಟು ವಂಚಿಪೆ ಅತ್ರಿಜ 3ಅಹಂಕಾರಾಧೀಶ ನಭೇಶತಾತ|ಮಹಾ ಮುನಿ ವಂದ್ಯಾಮರಾಸ್ಯ ಚಂದ್ರ |ದಿನಪತೇಕ್ಷಣನೆ ಅಶೇಷಾಮೋದ|ಬಹುಮೋದಸಕ್ತಾಯನ್ನಾಶಾ ||ಆಹಾ||ದಹಿಸೊಜಠರಪೋಷ ವಹಿಸಿ ಬೆಂಡಾದೆನೊ |ಅಹಿಮಲಾಂಧಕಾಸುರ ಗುಹಹ ಅಶ್ವತ್ಥಾಮ 4ಶಕ್ರಾವರಜ ಶ್ರೀ ಪ್ರಾಣೇಶ ವಿಠ್ಠಲ |ನಕ್ರಾಹನಂಘ್ರಿಯನಿಶದಲ್ಲಿ |ವಕ್ರವಿಲ್ಲದೆ ಸೇವಿಪೀಶ ಹೇ ತ್ರಿ- |ವಿಕ್ರಮಕರವ್ಯೋಮಕೇಶ||ಆಹಾ||ಶುಕ್ರಪೂಜಿತಪಾದಅಕ್ರೂರಯನ್ನೊಳಿ |ದ್ದ ಕ್ರಮವೆಣಿಸದೆ ಸುಕೃತವೊದಗಿಸೊ5
--------------
ಪ್ರಾಣೇಶದಾಸರು
ಮಹಾಲಕ್ಷುಮಿಗೆನಿತ್ಯಮಂಗಳಶುಭಮಂಗಳಮಹಾವಿಷ್ಣುವಿನ ರಾಣಿಗೆ ಮಹಾ ಮಂಗಳ ಪ.ಪೂರ್ಣಚಂದ್ರಾರ್ಣವ ಪೂರ್ಣಗುಣಾರ್ಣವಪೂರ್ಣಮನೋರಥದಾಯಕಿಗೆ ಸುಪರ್ಣೇಂದ್ರವಾಹನನರ್ಧಾಂಗಿ ದೇವಿಗೆ ವಿಶ್ವ ನಾಯಕಳಾದ ಜಗನ್ಮಾತೆಗೆ 1ಕರವೀರಪುರದಲ್ಲಿ ನೆರಹಿದ ಭಕ್ತರಕರಕರದಭೀಷ್ಠೆಯ ಕೊಡುವಂದಿಗೆಕರಕಮಲಗಳಲ್ಲಿ ಅಕ್ಷಯಾಮೃತಕುಂಭಧರಿಸಿದ ಜಾಣೆ ಕಲ್ಯಾಣಿಗೆ ನೀಲವೇಣಿಗೆ 2ಶ್ರೀಮದನಂತಾಸನ ವೈಕುಂಠಶ್ರೀ ಮತ್ಯ್ವೇತದ್ವೀಪನಿವಾಸಿನಿಸ್ವಾಮಿ ಪ್ರಸನ್ನವೆಂಕಟನ ಪಟ್ಟದರಾಣಿಕಾಮಿತಾರ್ಥದಾಯಿ ಕಲ್ಯಾಣಿಗೆ 3
--------------
ಪ್ರಸನ್ನವೆಂಕಟದಾಸರು
ಮಾಡುಸಾಧು ಸೇವೆಯ ಬೇಡು ಆಭಯಕೂಡು ನಂತರ ನೀ ನಿರಂತರೀಡಾಡಿದರೆಅಂಜಿ ಓಡದೆ ಆತ್ಮ ಪ.ಸಂತರೊಳು ಕುತರ್ಕ ಕಲ್ಪಾಂತ ರೌರವನರ್ಕಸಂತರೊಳು ಉಗ್ರ ಮನಸು ಆದ್ಯಂತ ಪಾಪದ ಬೆಳಸುಸಂತರ ಕೂಡ ದುಶ್ಚಿತ್ತ ದೇಹಾಂತ ಪ್ರಾಯಶ್ಚಿತ್ತಸಂತರಾಧೀನನಾದರೆಹರಿತಾ ಸಂತೋಷದಿಂದ ಒಲಿವನುನಿತ್ಯ1ತೀರ್ಥ ಸ್ನಾನವು ಹಲವು ಕಾಲೋತ್ತರಕಾಹುದು ಫಲವುಮೂರ್ತಿಔಪಾಸನವು ಧರ್ಮಾರ್ಥ ಮುಂದಣ ಅನುವುಅರ್ಥಗಳ ವಿತರಣವು ಶೂನ್ಯಾರ್ಥ ಸಮಯಕೆ ದಣಿವುಸಾಥರ್Àಕವು ಸಧ್ಯ ಸಾಧುನಿಕರದಗಾತ್ರಕ್ಷೇತ್ರಯಾತ್ರೆಯ ಬಿಡದೆ2ಸಾಧುಸಂಗವಗಿಲ್ಲ ಮುಕ್ತಿಯ ಹಾದಿ ಅವನಿಂಗಿಲ್ಲಸಾಧುರದಾವಹಳಿವ ತಮಸಕೈದುವುದು ಅವನ ಕುಲವುಸಾಧುಕೃಪೆ ದಾವಗುಂಟು ಎಲ್ಲಿ ಹೋದರಾನಂದದ ಗಂಟುಸಾಧುಪ್ರಿಯ ಪ್ರಸನ್ವೆಂಕಟರಮಣನು ಸಾಧುರ ಮೆಚ್ಚಿದವರಿಗೆಮೆಚ್ಚುವನು 3
--------------
ಪ್ರಸನ್ನವೆಂಕಟದಾಸರು
ಮಾಧವಜಯಮಾಧವಜಯಯಾದವ ಕುಲಮಣಿ ಭೂದೇವೀಪ್ರಿಯ ಪ.ವಿದ್ಯಾಧರಮುನಿ ಸದ್ಯೋಜಾತ ವಿರಿಂಚಾದ್ಯರ್ಚಿತ ವೇದವೇದ್ಯ ಮುಕುಂದ 1ಸ್ವರ್ಣಗಿರೀಶ ಸುಪರ್ಣಗಮನವಿಶ್ವನಿರ್ಣಯ ಶೀಲ ದಯಾರ್ಣವ ಪೂರ್ಣ 2ಪುಣ್ಯ ಸತ್ಪುರುಷವರೇಣ್ಯದನುಜಜನಾರಣ್ಯಪಾವಕ ದೋಷಶೂನ್ಯಗುಣಾಂಕ3ಕಠಿಣ ದಂಡಕ ದೇಶಾಟಣ ಸುಪ್ಲವಗ ಸಂಘಟಣಾಹಿಫಣ ತಟನಟಣ ಶ್ರೀಮೂರ್ತೆ 4ಕಿಂಕರರಕ್ಷ ನಿಶ್ಯಂಕ ಸದಾದೇವಸಂಕಟಹರ ಪ್ರಸನ್ವೆಂಕಟವರದ 5
--------------
ಪ್ರಸನ್ನವೆಂಕಟದಾಸರು
ಮಾಧವಭವಂತು ತೇ ಮಂಗಳಂಮಧುಮುರಹರತೇ ಮಂಗಳಂಪ.ದಶರಥನಂದನ ತಾಟಕಿಭಂಜನದಾನವ ಸಂಹಾರ ದಯಾನಿಧೇಆದಿದೇವ ಸಕಲಾಗಮ ಪೂಜಿತಯಾದವ ಕುಲಮೋಹನರೂಪಾವೇದೋದ್ಧರ ತಿರುವೇಂಕಟನಾಯಕನಾದಪ್ರಿಯ ನಾರಾಯಣತೇ ನಮೋ ನಮೋ 1ಗೋವಿಂದ ರಾಮಕೃಷ್ಣÀ ನಮೋ ನಮೋಗೋವಿಂದ ಸೀತಾರಾಮ ನಮೋಗೋವಿಂದಮಾಧವಗೋಪಾಲ ಕೇಶವಗೋವಿಂದ ನಾರಸಿಂಹಾಚ್ಯುತ ನಮೋ 2ರಾಮಾಗೋವಿಂದ ರಾಮ ರಾಘವಾರಾಮಾ ರಾಜೀವಲೋಚನಕಾಮಿತ ಫಲದಾಯಕ ಕರಿವರದಾರಾಮಕೃಷ್ಣ ತುಳಸಿವರದಗೋವಿಂದ3
--------------
ತುಳಸೀರಾಮದಾಸರು