ಗೋಪಿ ಜನಪಾಲ ಪಾವನ ತರಲೀಲ
ಲಕ್ಷ್ಮೀಲೋಲ ಕಾಲನಮಿತ ಸುರಜಾಲ ಸೇವಿತ
ಶೌರಿ ಪ
ವಂದಿತ ಸುರಮುನಿ ವೃಂದ ಭಕುತಜನ
ಬಂಧುವಾಗಿರುವ ಗೋವಿಂದ ಗೋಪಾಲದೇವ
ಮಂದಹಾಸ ಬಲಿ ಬಂಧನ ಮುರಹರ
ಸಿಂಧು ಶಯನ ಗೋಪಿಕಂದ ಮುಕುಂದ 1
ಕಂಸಾರಿ ಕರುಣಾಭ್ದಿ ಶೃಂಗಾರಿ
ಸುಜನ ಮನೋರಥ
ಸುರತರು ಹಾರ ಹೀರ ಗಂಭೀರ ವೈಯಾರ 2
ಅಂಬುಜ ಭವನುತ ಶಂಬರಾರಿಯಪಿತ
ಜಂಭಾರಿ ನಮಿತ ಹೇರಂಬ ಜನಕಪ್ರೀತ
ಕಂದರ ಕಮಳಾಂಬಕ ರಮಣ 3
ರಾಗಿ ಜನರ ಭವರೋಗ ಹರಣಹರಿ
ನಗಧರ ಸಗರ ವಂಶೋದ್ಧಾರ
ಖಗವರ ಗಮನ ಸುಗುಣ ಗಂಭೀರ 4
ದುರಿತ ಸಂಹಾರಿ
ಕರದಿ ಚಕ್ರಧಾರಿ ಸುರರ ಸಿರಿ
ಧುರ ಧೀರ ಚಿಪ್ಪಳಿವಾಸ ವೇಣುಗೋಪಾಲ 5