ಒಟ್ಟು 5214 ಕಡೆಗಳಲ್ಲಿ , 126 ದಾಸರು , 3313 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮಿಪ ಸದ್ಗುರುರಾಯಾ ಆ ನಿನ್ನ ದಯದಿ ಪುನೀತವಾದುದು ಕಾಯಾ ಅರಿವಾಯ್ತು ಎನ್ನ ಸ್ವರೂಪದನುಭವ ಜೀಯಾ ಮಾಯಾ ಘೋರಕರ್ಮವ ನೀಗಿದೆನು ನಾ ಪಾರಮಾರ್ಥಿಕ ಸತ್ಯವರಿಯುತ ಮೀರಿದಾನಂದದಲಿ ಮುಳುಗತ ಸೇರಿ ಒಂದಗಿಹೆನು ನಿನ್ನೊಳು ಸರಸ ನಿನ್ನಯ ಬೋಧಾ ಈ ಮರುಳು ಮಾನವರೇನು ಬಲ್ಲರು ಮೋದ ಮಾತೆನಲುಬೇಗನೇ ಸಚ್ಚಿದಾತ್ಮನ ಶೋಧಾ ಮರುಳುಮತಿಗಳು ಅರಿದರೆಂತೋ ಪರಮತತ್ವವ ಪರವಿಚಾರದಿ ದುರುಳರಾ ಮಾತೇಕೆ ನಿನ್ನಯಕರುಣೆಯಿಂದಲಿ ಪಾರುಗಂಡÉನು
--------------
ಶಂಕರಭಟ್ಟ ಅಗ್ನಿಹೋತ್ರಿ
ಸಮೀರನ ಮಹಿಮೆ ಪೇಳುವೆವಾಸುದೇವ ವಿಧೀರ ಮುಖಸುರರಾಶಿತಸ್ತ್ರೀ ಮುನಿಯತೀಶ ಸು-ದಾಸರಭಿ ನಮಿಪೆ ಪ ವಾರಿಧಿಯನು ದಾಟುಲೋಸುಗಶ್ರೀ ರಮೇಶನ ನಮಿಸಿ ಗಿರಿಯನುಚಾರು ಚರಣದಿ ಮೆಚ್ಚಿ ಮೇಲಕೆ ಹಾರಿದನು ಹನುಮಾ 1 ಹರಿಯ ಬಲವನು ಸರಿಸಿ ಪೋದುವುತರುಗಳಬ್ಧಿಯು ಯಾದಸಂಗಳುಶರಧಿ ತಳಗತ ಕಪಿಯಗೋಸುಗಗಿರಿಯು ಎದ್ದಿಹನು 2 ಧರಣಿಧರ ಪಕ ನಾಶ ಕಾಲದಿಮರುತ ರಕ್ಷಿತ ಪಕ್ಷ ಹೈಮನುಶರಧಿ ಭೇದಿಸಿ ಹನುಮ ವಿಹೃತಿಗೆತ್ವರದಿ ಬಂದಿಹನು 3 ಪರಮ ಪೌರುಷ ಬ ಲನು ಕಪಿವರಚರಿಸದಲೆ ವಿಶ್ರಮವನದರೊಳುಹರುಷದಿಂದಪ್ಯವನ ಕಂಡನುಉರಗ ಮಾತೆಯನು 4 ಸುರಸೆಯೆಂಬುವ ನಾಗಮಾತೆಗೆವರವ ನೀಡುತ ಕಪಿಯ ಬಲವನುಅರಿಯಲೋಸುಗ ಕಳುಹಿಸೀದರುಸುರರು ಶರಧಿಯಲಿ 5 ಯಾವ ವಸ್ತುವ ತಿನ್ನೋ ಇಚ್ಛೆಯು ೀವಿ ನಿನಗಾಗುವದೊ ಅದು ತವಬಾಯಿಗನ್ನಾಗಿರಲಿ ಎಂದರುದೇವತೋತ್ತುಮರು 6 ಸುರರ ವರವನು ಕಾಯೊಗೋಸುಗಸುರಸೆ ಮುಖದೊಳು ಹೊಕ್ಕು ಹೊರಡುತಪರಮಮಣು ರೂಪದಲಿ ದಿವಿಜರಹರುಷ ಬಡಿಸಿದನು 7 ಅಸುವರಾತ್ಮಜನುರು ಪರಾಕ್ರಮಹೃಷಿತರಾಗುತ ನೋಡಿ ದಿವಿಜರುಕುಸುಮವೃಷ್ಟಿಯ ಮಾಡುತವನಲಿಯಶಸು ಪಾಡಿದರು 8 ಛಾಯಾ ಪ್ರಾಣಿಗಳನ್ನು ಹಿಡಿಯುವಮಾಯಾ ಸಿಂಹಕೆ ನಾಮ ಕಸುರಿಯವಾಯುಸುತ ನೋಡಿದನು ಎದುರೆ ವಿಹಾಯ ಮಾರ್ಗದಲಿ 9 ವಿಧಿಯು ಲಂಕೆಯ ಕಾಯಲೋಸುಗಸುತಿಗ್ವರಗಳನಿತ್ತು ಕಾದಿಹಾಮದದಿ ಅಸುರಿಯು ತನ್ನ ಛಾಯವವದಗಿ ಪಿಡಿದಿಹಳು 10 ಆಗ ಆಕೆಯ ಪೊಕ್ಕು ಪೊಟ್ಟೆಯಯೋಗದಿಂದಲಿ ಪಾವಮಾನಿಯುಬೇಗ ಬಂದನು ಹೊರಗೆ ತತ್ತನುಭಾಗ ಮಾಡುತಲೆ 11 ಆತ್ಮಬಲವಮಿತೆಂದು ತೋರಿವಿಧಾತೃ ವರವುಳ್ಳವಳ ಕೊಲ್ಲುತವಾತನಂತೆ ತ್ರಿಕೂಟ ಪರ್ವತಕೀತ ಹಾರಿದನು 12 ಬೆಕ್ಕಿನಂದದಿ ಹನುಮ ತನ್ನಯಚಿಕ್ಕ ರೂಪವ ಮಾಡಿ ಲಂಕೆಯಪೊಕ್ಕು ನಿಶಿಯಲಿ ಮಧ್ಯಮಾರ್ಗದಿರಕ್ಕಸಿಯ ಕಂಡಾ 13 ಬಟ್ಟಿಯಲಿ ಬಂದಡ್ಡಗಟ್ಟುವದುಷ್ಟ ರಾಕ್ಷಸೀಯನ್ನು ಗೆಲ್ಲುತಮುಷ್ಟಿಯಿಂದಲಿ ಹೊಡೆದು ಲಂಕಾಪಟ್ಟಣವ ಪೊಕ್ಕಾ 14 ಪುರದ ಹೊರಗೊಳಗ್ಹೊಕ್ಕು ರಾಮನತರುಳೆ ಕಾಣದೆ ಹನುಮ ಶಿಂಶುಪತರುನ ಮೂಲದಿ ಕಂಡ ಸೀತೆಯಉರುತರಾಕೃತಿಯಾ 15 ನರಜನಂಗಳ ಮೋಹ ಮಾಡುವಪರಮ ಪುರುಷನ ಚೇಷ್ಟೆಗಳನನುಸರಿಸಿ ನಡೆಯುವ ದೇವಿ ಚರಿಯನುಸರಿಸಿ ಚೇಷ್ಟಿಸಿದಾ 16 ರಾಮನಿಂದಲಿ ಅಂಗುಲಿಯನುಪ್ರೇಮದಿಂದಲಿ ಕೇಸರಿಯ ಸುತಾಭೂಮಿ ಜಾತೆಗೆ ಕೊಟ್ಟು ಸುಖಿಸಿದಾನಾಮ ಹದ್ದನದಿ 17 ರುಚಿ ನೀಡಿದವು ರಾವಣನ್ಹರಣ ಕಾಲದಲಿ 18 ಧರಣಿದೇವಿಯ ಸುತೆಯ ತನ್ನಯಪರಮ ಚೂಡಾಮಣಿಯನಿತ್ತಳುಗುರುತು ತೋರಿಸು ರಾಮದೇವಗೆಮರುತಾ ಸುತನೆಂದು 19 ಸೀತೆ ಹನುಮರದೀ ವಿಡಂಬನಯಾತು ಧಾನರಿಗಲ್ಲಾ ನಾಕಗಭೂತ ವಿಡಂಬನ ಧೈತ್ಯವಂಚನಹೇತು ಆಗುವದು 20 ಇಂಥ ಕಾರ್ಯವ ಮಾಡಿ ತನ್ನಯಾನಂಥ ಪೌರುಷ ಪ್ರಕಟ ಮಾಡುವದಿಂತು ಮನವನು ಮಾಡಿದನು ಮತಿವಂತ ವಾನರನು 21 ಚಾರು ಶಿಂಶುಪ ಬಿಟ್ಟು ರಾಕ್ಷಸವಾರ ವಳಿಸುವ ಮನದಿ ಹನುಮನುಭೂರಿವನವನು ಮುರಿದು ಲಂಕೆಯತೋರಣೇರಿದನು 22 ಭೃತ್ಯ ಜನರಿಗೆಕಟ್ಟಿ ಹಾಕಿರಿ ಕಪಿಯನೆಂದನುರುಷ್ಟನಾಗುತಲೆ 23 ಹರನ ವರದಲಿ ಮರಣ ವರ್ಜಿತಸರವ ಭೃತ್ಯರು ರಾಕ್ಷಸೇಶನಮರುತ ಸೂನುನ ಮೇಲೆ ಬಂದರುಪರಮ ವೇಗದಲಿ 24 ಹತ್ತು ಒಂದು ಕೋಟಿ ಯೂಥವತತ್ಸಮಾನ ಪುರಃ ಸರಾನ್ವಿತಎತ್ತಿ ಆಯುಧ ಸೈನ್ಯ ಹನುಮನಸುತ್ತಿಕೊಂಡಿಹುದು 25 ಹಿಡಿದು ಕರದಲಿ ಆಯುಧಂಗಳಹೊಡೆವ ಸೈನ್ಯವ ನೋಡಿ ಹನುಮನುಹೊಡೆದು ಕರತಳದಿಂದಲೆಲ್ಲರಪುಡಿಯ ಮಾಡಿದನು 26 ನೀಲಕಂಠನ ವರಗಿರಿಪ್ರಭಏಳುಮಂದಿಯ ಮಂದಿ ಪುತ್ರರಕಾಲಿನಿಂದಲಿ ಒದ್ದು ಕೆಡಹಿದನಾಳು ಮಾಧವನಾ 27 ಧುರದಿ ಮುಂಭಾಗದಲಿ ಪೋಗುವಗರುವ ಮಾಡುವ ರಾಕ್ಷಸಂಗಳಮುರಿದು ಸೈನ್ಯದ ತೃತೀಯ ಭಾಗವಹರಿಯು ಕೊಂದಿಹನು 28 ಪೋರ ಬಲವನು ಕೇಳಿ ಹನುಮನಚಾರ ಮುಖದಲಿ ಸ್ವಾತ್ಮ ಸದೃಶರುಮಾರ ಕಾಕ್ಷಾಭಿಧನ ಕಳುಹಿದ ವೀರ ರಾವಣನು 29 ಉತ್ತುಮಾಸ್ತ್ರಗಳಿಂದ ಮಂತ್ರಿತವೆತ್ತಿ ಬಾಣಗಳ್ಹೊಡೆದು ಹನುಮನಕೆತ್ತಿ ಹಾಕಲು ಅಕ್ಷ ಸಾಲದೆಶಕ್ತಿ ನಿಂತಿಹನು 30 ಮಂಡ ಮಧ್ಯೆಯ ತನಯ ಅಕ್ಷನುಪುಂಡ ರಾವಣ ಸಮನು ಸೈನ್ಯದಹಿಂಡಿನೊಳು ತೃತೀಯಾಂಶ ಯಂದುದ್ದಂಡ ಚಿಂತಿಸಿದಾ 31 ಹತ್ತು ತಲೆಯವನನ್ನೆ ಕೊಲ್ಲುವದುತ್ತಮಾತ್ಮವು ಆದರೀತನುತುತ್ತು ರಾಮಗೆ ಕಾರಣಿಂಥಾಕೃತ್ಯ ಥರವಲ್ಲಾ 32 ಇಂದ್ರಜಿತನನು ನಾನು ಈಗಲೆಕೊಂದು ಹಾಕಿದರಿವನ ಕೃತಿಗಳಛಂದ ನೋಡುವುದಿಲ್ಲಾ ಕಪಿಗಳವೃಂದ ಯುದ್ಧದಲಿ 33 ತತ್ಸಮಾಗಿಹ ಮೂರನೆಯವನ್ಹತ್ಯೆ ಮಾಡುವೆನೆಂದು ಹನುಮನುಚಿತ್ತದಲಿ ಚಿಂತಿಸುತ ತತ್ವದ ವೆತ್ತಿ ಹಾರಿದನು 34 ತಿರುಹಿ ಚಕ್ರದ ತೆರನೆ ರಾಕ್ಷಸರರಸೀನಾತ್ಮಜನನ್ನು ಕ್ಷಣದಲಿಧರಿಯ ಮೇಲಪ್ಪಳಿಸಿ ಒಗೆದನುಮರುತನಾತ್ಮಜನು 35 ಹನುಮನಿಂದಲಿ ತನ್ನ ಕುವರನುಹನನ ಪೊಂದಲು ನೋಡಿ ರಾವಣಮನದಿ ಶೋಕಿಸುತಾತನಣ್ಣನರಣಕೆ ಕಳುಹಿದನು36 ಇಂದ್ರಜಿತು ಪರಮಾಸ್ತ್ರಯುತ ಶರವೃಂದದಲಿ ಹೊಡೆದು ಹನುಮನಹಿಂದಕಟ್ಟಲು ಶಕ್ತಿ ಸಾಲದೆನಿಂದು ಚಿಂತಿಸಿದಾ 37 ಸರವ ದುಃಸಹವಾದ ಬ್ರಹ್ಮನಪರಮಮಸ್ತ್ರವ ಬಿಡಲು ರಾವಣಿಹರಿಯು ವ್ಯಾಕುಲನಾಗದಲೆ ಈಪರಿಯ ಚಿಂತಿಸಿದಾ 38 ವಾಣಿನಾಥನ ಎಷ್ಟೊ ವರಗಳನಾನು ಮೀರಿದೆ ದುಷ್ಟ ಜನದಲಿಮಾನಿನೀಯನು ಕಾರಣಾತನಮಾನ ಮಾಡುವೆನು 39 ದುಷ್ಟ ರಾಕ್ಷಸರೆಲ್ಲ ಎನ್ನನುಕಟ್ಟಿ ಮಾಡುವದೇನು ಪುರಿವಳಗಿಷ್ಟು ಪೋಗಲು ರಾಕ್ಷಸೇಶನಭೆಟ್ಟಿಯಾಗುವದು 40 ಹೀಗೆ ಚಿಂತಿಸಿ ಹನುಮನಸ್ತ್ರಕೆಬಾಗಿ ನಿಲ್ಲಲು ಅನ್ಯ ಪಾಶಗಳಾಗೆ ಬಿಗಿದರು ಬ್ರಹ್ಮನಸ್ತ್ರವುಸಾಗಿತಾಕ್ಷಣದಿ 41 ಕಟ್ಟಿ ಕಪಿಯನು ರಾಕ್ಷಸೇಶನ ಭೆಟ್ಟಿಗೊಯ್ಯಲು ಆತನೀತನದೃಷ್ಟಿಯಿಂದಲೆ ನೋಡಿ ಪ್ರಶವನೆಷ್ಟೊ ಮಾಡಿದನು 42 ಕಪಿಯೆ ನೀನು ಕುತೋಸಿ ಕಸ್ಯವಾಕೃತಿಯ ಮಾಡಿದಿ ಯಾತಕೀಪರಿಕಿತವ ಕೇಳಲು ರಾಮನೊಂದಿಸಿ ಚತುರ ನುಡಿದಿಹನು 43 ಹೀನ ರಾವಣ ತಿಳಿಯೇ ಎನ್ನನು ಮಾನವೇಶ್ವರ ರಾಮದೂತನುಹಾನಿಮಾಡಲು ನಿನ್ನ ಕುಲವನುನಾನು ಬಂದಿಹೆನು 44 ಜಾನಕೀಯನು ರಾಮದೇವಗೆಮಾನದಿಂದಲಿ ಕೊಡದೆ ಹೋದರೆಹಾನಿ ಪೊಂದುವಿ ಕೇಳೊ ನೀ ನಿಜಮಾನವರ ನೀ ಕೂಡಿ 45 ಶಕ್ತರಾಗರು ಸರ್ವ ದಿವಿಜರುಮತ್ರ್ಯನಾತನ ಬಾಣ ಧರಿಸಲುಎತ್ತೋ ನಿನಗಿವಗಿನ್ನು ಧರಿಸಲುಹತ್ತು ತಲೆಯವನೆ 46 ಸಿಟ್ಟು ಬಂದರೆ ಆತನೆದುರಿಲಿಘಟ್ಟಿನಿಲ್ಲುವನಾವ ರಾಕ್ಷಸಇಷ್ಟು ಸುರದಾನವರೊಳಾತನದೃಷ್ಟಿಸಲು ಕಾಣೆ 47 ಇಂಥಾ ಮಾತನು ಕೇಳುತಾತನಅಂತ ಮಾಡಿರಿಯನ್ನೆ ವಿಭೀಷಣಶಾಂತ ಮಾಡಲು ಪುಚ್ಛ ದಹಿಸಿರಿಯಂತ ನುಡಿದಿಹನು 48 ಅರಿವೆಯಿಂದಲಿ ಸುತ್ತಿ ಬಾಲಕೆಉರಿಯನ್ಹಚ್ಚಲು ಯಾತುಧಾನರುಮರುತ ಮಿತ್ರನು ಸುಡದೆ ಹನುಮಗೆಹರುಷ ನೀಡಿದನು 49 ಯಾತುಧಾನರು ಮಾಡಿದಂಥಪಘಾತವೆಲ್ಲವ ಸಹನ ಮಾಡಿದವಾತಪೋತನು ಲಂಕೆ ದಹಿಸುವಕೌತುಕಾತ್ಮದಲಿ 50 ತನ್ನ ತೇಜದಿ ವಿಶ್ವಕರ್ಮಜಘನ್ನಪುರಿಯನು ಸುಟ್ಟು ಬಾಲಗವನ್ಹಿಯಿಂದಲೆ ಸರ್ವತಃ ಕಪಿಧನ್ಯ ಚರಿಸುತಲೆ 51 ಹೇಮರತ್ನಗಳಿಂದ ನಿರ್ಮಿಸಿದಾಮಹಾ ಪುರಿಯನ್ನು ರಾಕ್ಷಸಸ್ತೋಮದಿಂದಲಿ ಸಹಿತ ಸುಟ್ಟುಸುಧಾಮ ಗರ್ಜಿಸಿದಾ 52 ಹನುಮಸಾತ್ಮಜ ರಾಕ್ಷಶೇಶನತೃಣ ಸಮಾನವ ಮಾಡಿ ನೋಡಲುದನುಜರೆಲ್ಲರ ಭಸ್ಮ ಮಾಡುತಕ್ಷಣದಿ ಹಾರಿದನು 53 ಕಡಲ ದಾಟುತ ಕಪಿಗಳಿಂದಲಿಧಡದಿ ಪೂಜಿತನಾಗಿ ಮಧುವನುಕುಡಿದು ರವಿಜನ ವನದಿ ರಾಘವನಡಿಗೆ ಬಂದಿಹನು 54 ಸೀತೆ ನೀಡಿದ ಚೂಡಾರತ್ನವನಾಥನಂಘ್ರಿಯೊಳಿತ್ತು ಸರ್ವಶಗಾತ್ರದಿಂದಲಿ ನಮಿಸಿ ರಾಮಗೆಶಾತ ನೀಡಿದನು 55 ರಾಮನಾದರು ಇವಗೆ ನೀಡುವಕಾಮ ನೋಡದೆ ಭಕ್ತಿಭರಿತಗೆಪ್ರೇಮದಿಂದಲಿ ಅಪ್ಪಿಕೊಂಡನುಶ್ರೀ ಮನೋಹರನು 56 ಇಂದಿರೇಶನೆ ಎನ್ನ ಚಿತ್ತದಿನಿಂದುಮಾಡಿದ ನೀಸುಕವನವನಿಂದು ಭಕ್ತಿಲಿ ತತ್ಪುದಾಂಬುಜದ್ವಂದ್ವಕರ್ಪಿಸುವೆ 57 ಇತಿ ಶ್ರೀ ಸುಂದರ ಕಾಂಡಃ ಸಮಾಪ್ತಃ (ಪ್ರಾಕೃತ)ಶ್ರೀ ಗುರುವರದ ಇಂದಿರೇಶಾರ್ಪಣಮಸ್ತು ನೋಡುವೆನು ನೋಡುವೆನು ತೋರಿಸುನಿಮ್ಮ ನೋಡುವೆ ಪ ನೋಡುವೆ ಮಾಡು ದಯ ಎನ್ನೊಳುರೂಢಿಯೊಳಗೆ ನಿಮ್ಮ ಪಾಡುತ ಮಹಿಮೆ ಅ.ಪ. ಮದನ ಜನಕನೊಳು ಕದನ ಮಾಡಿದ ದು-ರ್ಯೋಧನನ ಶಿರದೊಳಿಟ್ಟ ಪದುಮ ಪಾದಗಳನು 1 ನೂರುಗಾವುದ ಜಲ ಹಾರುವಾಗಲೆ ದಿವ್ಯಭೂರುಹ ಕೆಡದಿಹ ಊರುಗಳನ್ನು ಸ್ವಾಮಿ 2 ಕೆಟ್ಟ ಬಕನ ಕೊಂದು ಅಷ್ಟು ಅನ್ನವನುಂಡಹೊಟ್ಟಿ ನೋಡುವೆ ದಿವ್ಯ ದೃಷ್ಟಿ ನೀಡಿರಿ ಸ್ವಾಮಿ 3 ಭೂಮಿ ಸುತೆಯ ವಾರ್ತೆ ರಾಮನು ಕೇಳಿದಾಪ್ರೇಮಾಲಿಂಗನವಿತ್ತ ಆ ಮಹಾವುರವನ್ನೆ 4 ಮದಗಜಗಳ ಕೂಡ ಕದನ ಮಾಡಿದ ದಿವ್ಯಗದೆಯ ಪಿಡಿದ ಕರವದು ಮಗಳನು ಸ್ವಾಮಿ 5 ಅಜಗರ ನಹುಷನ ವಿಜಯ ಸಹೋದರ ಪದುಮನಾಭನ ಗುಣಮುದದಿ ಸಾರುತ ದೈತ್ಯ ಕದನಗೆಳೆದ ನಿನ್ನ ವದನಕಮಲವನ್ನು 6 ವೇದ ಶಾಸ್ತ್ರಗಳನ್ನು ಓದಿ ಹೇಳುತ ಶಿಷ್ಯಮೋದಗರೆವ ನಿನ್ನ ವಾಣಿ ಸ್ವಾದು ಕೇಳುವೆ ನಿನ್ನ 7 ಇಂದಿರೇಶನ ದಯದಿಂದ ಗೆಲಿದಿ ಇಪ್ಪ-ತ್ತೊಂದು ಮತವ ಆನಂದ ತೀರ್ಥರೆ ನಿಮ್ಮ 8
--------------
ಇಂದಿರೇಶರು
ಸರಸಿಜಾಲಯವೆಂಬುವ ಸೊಗಸಿನ [ಶಯನಿಸು] ಪ. ವರರತ್ನ ಮಂಟಪದೊಳು ಉರಗಪತಿಯಂತು ವರತಲ್ಪವಾಗಿರಲು ಸಿರಿಯೊಡನೆ ನೀಂ ಶಯನಿಸು ಅ.ಪ ತಪನ ಶಶಿಗಳೆಂಬುವ ಅಪ್ರತಿಮ [ವೆ ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು ಅಪರಿಮಿದಾನಂದದಿಂ ಶಯನಿಸು 1 ತುಂಬುರು ನಾರದರೆಂಬುವ ವಂದಿಮಾಗಧರ ತಂಬೂರಿ ಸ್ವರಗಾನಮಂ | ಸಂಭ್ರಮದಿ ಕೇಳುತ್ತ ನಲಿಯುತ [ಶಯನಿಸು] 2 ಗರುಡಪವನಜರೆಂಬುವ ನಿನ್ನಂಘ್ರಿ | ಸರಸಿಜವ ಸೇವಿಸುವ ವರಭಕ್ತರು ಬಂದು | ಕರಮುಗಿದು ನಿಂದಿರಲು ನಲಮಂ[ಶಯನಿಸು] 3 ವರಶೇಷಗಿರಿ ನಿಲಯನೇ ಜಯಜಯತು | ವರದ ನಾರಾಯಣನೇ | ಕರುಣಾಭರಣ ಲಕ್ಷ್ಮೀನರಹರಿಯೆ ನಿ | ನ್ನರಸಿಯೊಡನೆ ನೀಂ ಶಯನಿಸು 5
--------------
ನಂಜನಗೂಡು ತಿರುಮಲಾಂಬಾ
ಸರಸಿಜೋದ್ಭವನುತ ಸಿರಿಲೋಲ ಹರಿ ಸರ್ವರೊಳಿಹ ಶ್ರೀ ಗೋಪಾಲ ಶರಣಾಗತವತ್ಸಲ ಕರುಣಾನಿಧಿ ಕೃಪಾಲ ಸುರಜನ ಸಾನುಕೂಲ ವರಮುನಿಪಾಲ 1 ಮಾಮನೋಹರ ಮಾರಪಿತನೀತ ಕಾಮಪೂರಿತ ವಿಮಲ ಚರಿತ ಸಾಮಗಾಯನಪ್ರಿಯ ಸೋಮಶೇಖರ ಧೇಯ ಸಾಮಜ ವರದ ಸಮಸ್ತಹೃದಯ 2 ಸಾಹ್ಯಸಕಲಕೆ ಸನ್ನಿಧನೀತ ಇಹ ಸರ್ವಾನಂದ ಸರ್ವಭರಿತ ಸ್ವಹಿತ ಸುಖದಾತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಶ್ರೀಹರಿ ಸಾಕ್ಷಾತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸರಸ್ವತಿ ಕಮಲಭವನ ಪ್ರಿಯ ರಾಣಿ ಪ ಅಂತರಂಗದ ತಂತಿಯ ಮಿಡಿಸೌನಿಂತು ಜಿಹ್ವೆಯಲಿ ಹರಿ ಗುಣ ನುಡಿಸೌಕಂತುಜನಕನ ದಯವನು ಕೊಡಿಸೌಸಂತತ ಶಾರದೆ ವೀಣಾ ಪಾಣಿ 1 ಪನ್ನಗ ವೇಣಿ 2 ಪ್ರೇರೆರಿಸರ್ಥಗರ್ಭದ ನುಡಿಗಳನುತೋರಿಸು ಪದ್ಯವ ರಚಿಪ ರೀತಿಯನುಚಾರು ಚರಣಗಳಿಗೆರಗುವೆ ಗದುಗಿನವೀರನಾರಾಯಣನ ಸೊಸೆಯೆ ಸುವಾಣಿ 3
--------------
ವೀರನಾರಾಯಣ
ಸರಸ್ವತಿ ದೇವಿ ಸರಸ್ವತೀ ಲೋಕಮಾತೆ ದೇವಿ ಪ ಪರಮಕಲ್ಯಾಣಿ ಪಾವನೆವಾಣಿ ಸುರುಚಿರ ಪುಸ್ತುಕಪಾಣಿ ದೇವಿ ಅ.ಪ ಬುದ್ಯಾಭಿಮಾನಿ ಬ್ರಹ್ಮನರಾಣಿ ತಿದ್ದು ಮನದ ಸಂಶಯಗಳನು ದೇವಿ 1 ಮಾತುಮಾತಿಗೆ ನಿನ್ನ ಬೇಡುವೆ ದೇವಿ 2 ಶರಣಜನರ ಸುರಧೇನು ದೇವಿ 3
--------------
ಗುರುರಾಮವಿಠಲ
ಸರಸ್ವತಿ ನಲಿಯೆ ನೀ ಜಿಹ್ವೆಯಲಿ ಚತುರಾನನ ಪ್ರಿಯ ರಾಣಿ ನಾನಾ ಧನಕನಕಾದಿ ವಿಭವಗಳು ಹಿರಿದುಕ್ಕುತಲಿರಲು ಪ ನೀನೊಲಿಯದಿರಲು ಮಾನವನಿಗೆ ಸ ನ್ಮಾನವೆಂತು ಬರುವುದು ಜಗದೊಳಗೆ ಅ.ಪ ಕರ ಧೃತ ವೀಣಾಪಾಣಿ ಉನ್ನತ ಮಹಿಮ ಪ್ರಸನ್ನ ಹರಿಗೆ ಸತಿ 1
--------------
ವಿದ್ಯಾಪ್ರಸನ್ನತೀರ್ಥರು
ಸರಸ್ವತಿ ಬ್ರಹ್ಮನರಸಿ ವಾಣೀ ನಿನ್ನ ಸ್ಮರಿಸೆ ವೇದಮರ್ಮ ತಿಳಿಸಿ ಪರಬ್ರಹ್ಮನ ತೋರಿಸೆ ಪ ಆನನ ತೂಗುತಶ್ರೀನಿವಾಸನ ಗುಣಗಾನ ಮಾಡುವಿಯೆ 1 ಮಣಿ ಭೂಷ ವೃಂದ ಶೋಭಿತ ಕರಇಂದುವದನೆ ಮಯೂರೇಂದ್ರ ವಾಹನಳೆ2 ಈಸು ಪುಸ್ತಕದೊಳು ವಾಸಮಾಡುತಇಂದಿರೇಶನ ಸೊಸೆ ಭಕ್ತರಾಶಿಗೆ ಪೊಳೆಯೆ 3
--------------
ಇಂದಿರೇಶರು
ಸರಸ್ವತಿ ಮಂಗಳಾರುತಿಯನೆತ್ತೀರೆ ವಾರಿಜಭವಮುಖಿಗೆ ಮಂಗಳಾರುತಿಯನೆತ್ತೀರೆ ಪ ಇಂದು ಬಿಂಬ ಸದೃಶ ವದನೆಗೆ ಲಾವಣ್ಯ ಖಣಿಗೆ ಅಂದ ಕುಂಕುಮಭೂಷಿತ ಫಣೆಗೆ ಹರಿದ್ರ ಭೂಷೆಗೆ ಸಂದ ಮೌಕ್ತಿಕ ಚಂಪಕ ನಾಸಿಕೆಗೆ ಚಂದ ಕರುಣಾಭರಣ ಭೂಷಿತೆಗೆ ಚಾಪ ಇಂದು ಛವಿಯ ಕಿರೀಟ ಭೃತೆಗೆ ಹಿಂದೆ ಜೋಲ್ವ ಕನಕವೇಣಿಗೆ ಮಂಗಳಾರುತಿಯನೆತ್ತಿರೆ 1 ಚಾರುವಸನ ಭೂಷಿತಾಂಗೆಗೆ ವಿದ್ಯುತ್ಸುಕಾಂತೆಗೆ ಹಾರಪದ ಶÀಮಿರೂಪ ಕಂಠೆಗೆ ಸುಕಂಬು ಶ್ರೀದೇವಿಗೆ ಸಾರ ವೇದಾಂಗ ಭೂತೆಗೆ ನೀರಜ ಪಲ್ಲವಗಾತ್ರೆಗೆ ಸಾರಸಾಕ್ಷಿ ಶಿರಿವಂತೆಗೆ ಮಂಗಳಾರುತಿಯನೆತ್ತಿರೆ2 ಕರದಿ ವೀಣೆ ಧರಿಪ ದೇವಿಗೆ ಪಾವನ್ನಗಾತ್ರೆಗೆ ಧರೆಯ ಸೃಷ್ಟಿಕರ್ತನರಸಿಗೆ ಮಂಗಳ ವಾಣಿಗೆ ಪರಿಪರಿಯಲಂಕಾರ ಭೂಷಿತೆಗೆ ಸರಸ ಕೋಮಲ ಪದ್ಮಪಾತೆಗೆ ಮರಕತಭೂಷಣ ಭಾಸೆಗೆ ನಿರುತ ಜನಕೆ ವಿದ್ಯಪ್ರದೆಗೆ ನರಸಿಂಹವಿಠ್ಠಲನ ಬಾಲೆಗೆ ಮಂಗಳಾರುತಿಯನೆತ್ತಿರೆ 3
--------------
ನರಸಿಂಹವಿಠಲರು
ಸರಸ್ವತಿ ತಾಯಿ ಬಿಡದೆನ್ನ ಕಾಯಿ || ಮೂರ್ತಿ ಹರಿಯ ಸುತನಸತಿ || ಪ ಕಡಗ ಕಂಕಣ ಗೆಜ್ಜೆ ಕಾಲು ಪೆಂಡಿಗಿಯಿಂದ || ಸಡಗರದಲಿ ಹೊಳೆವ ನಡುವಿನೊಡ್ಯಾಣವು || ಪೊಡವಿಯೊಳಗೆ ನಿಮ್ಮ ವಡಸತಿಯರೊಳು || ಕಡುಸುಂದರಿ ಜಗದಂಬೆ ಕನಕದ ಗೊಂಬೆ 1 ಕೊರಳಿಗೆ ವೈರನ(?) ಪೊಲುವ ಮುಖದಲ್ಲಿ ಹೊರಳೆಲಿಯಂದದಿ(?)ಫಣಿಯಲ್ಲಿ ತಿಲಕ | ಎರಳೆ ಕಂಗಳೆ ನಿನ್ನ ಹೆರಳಿನ ಸೊಬಗು ಉರಗನ ಪೋಲ್ವದು ಬಾಲೆ ಸುಲೀಲೆ 2 ಧರೆಯೊಳಧಿಕ ` ಹೆನ್ನೆಪುರ ಹೆನ್ನೆವಿಠಲನ’ ಚರಣ ಕಮಲದಲಿ ದೇವ ಭಜಿಸುವ ಪರಮ ಭಕುತಿಯಿಂದ ಪಾಲಿಸೆ ಮಣೀಯುವೆ | ಸ್ಥಿರ ನಿನ್ನ ನಂಬಿದ ಜನರನು ಕಾಯುವೀ 3
--------------
ಹೆನ್ನೆರಂಗದಾಸರು
ಸರಸ್ವತಿ ದೇವಿ ವಾರಿಜನೇತ್ರೆಯ ಶಾರದೆ ಶ್ರೀಮುಖ ತೋರುವದೆನ್ನಯ ಪಾರ ಪರಾತ್ಪರೆ ಪ ಮಯೂರ ವಾಹಿನಿ ಕಾಯುವುದೆನ್ನ ತಾಯೆ ಚಿದ್ಛನ ನಿಜದಾಯುವ ನೀಯುವ 1 ಬಾಲೆಯ ಭಾಗ್ಯವಿಶಾಲೆಯ ನವಕುಸುಮ ಮಾಲೆಯ ಗಾನವಿಲೋಲೆ ವಾಗೇಶ್ವರಿ 2 ಛಂಧದೊಳೆನ್ನ ಸಾನಂದವ ಪಾಲಿಪ ಮಂದಮತಿಯ ತಿದ್ದಿ ಸುಂದರ ಮುಖಿಯೆ ನೀ3 ನಂಬಿಕೆ ಹೊಂದಿಹನೆಂಬುವ ಭಕ್ತರ ಇಂಬುಗಳನ್ನೆ ಕೊಟ್ಟು ಬೆಂಬಲಕಿರ್ಪಳೆ 4 ಕಂತು ಬ್ರಹ್ಮನರಾಣಿ ಅಂತರಿಕ್ಷಣೆವಾಣಿ ಶಾಂತಿ ಸದ್ಗುರುಪದ ಸಂತಸಕಾರಿಣಿ 5
--------------
ಶಾಂತಿಬಾಯಿ
ಸರಸ್ವತಿ ದೇಹಿ ಸನ್ಮತಿ ಪ. ವಿಧಿಸತಿ ಸುವ್ರತಿ ಶ್ರೀಮತಿ ಭಾರತಿ ಅ.ಪ. ನಿತ್ಯ ಪೊಗಳುತಿ ಜಗದೀಶ್ವರಿ ಜಲಜಾಯತನೇತ್ರಿ ಭಗವತಿ ಪವಿತ್ರಿ ಸಾವಿತ್ರಿ ಗಾಯತ್ರಿ ಸರಸ್ವತಿ ದೇಹಿ ಸನ್ಮತಿ 1 ಶರ್ವೇಂದ್ರಪೂರ್ವ ಗೀರ್ವಾಣತತಿ ಸರ್ವದಾಚರಿಸುವುದು ತವ ಸ್ತುತಿ ಸದ್ಭಕ್ತಿ ವಿರಕ್ತಿ ತ್ರಿಶಕ್ತಿ ದೇವಕಿ ಸರಸ್ವತಿ ದೇಹಿ ಸನ್ಮತಿ 2 ಲಕ್ಷ್ಮೀನಾರಾಯಣನ ಮೂರುತಿ ಲಕ್ಷಿಸಿ ಮನದೊಳಾನಂದದೊಳಿರುತಿ ಗುಣವತಿ ಸುಗತಿ ಸುಧೃತಿ ವಿಧಾತ್ರಿ ಸರಸ್ವತಿ ದೇಹಿ ಸನ್ಮತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸ್ವತಿ ವಿಧಿಸತೀ ಸುರತತಿ ಪೂಜಿತೇ ಪ ಅಹಿವೇಣಿ ಶುಕವಾಣಿ ಸದ್ಗುಣ ಶ್ರೇಣೀ | ಕಲ್ಯಾಣೀ ಪದ್ಮಿನೀ 1 ರಮಣಿ ಕುಲದೊಳತಿ ಖ್ಯಾತೇ ಮುನಿನೀಕಾ ಸನ್ನುತೇ 2 ದಾಸ ರಕ್ಷೆ ಬುಧೆ ಪುನೀತೇ ವನಜಾಕ್ಷಾ ಮಾನಿತೇ 3
--------------
ಬೆಳ್ಳೆ ದಾಸಪ್ಪಯ್ಯ
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ- ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ - ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ