ಒಟ್ಟು 54621 ಕಡೆಗಳಲ್ಲಿ , 139 ದಾಸರು , 12331 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೊ ಕರುಣಾಭಯ ಕೃದ್ಭಯ ನಾಶನ ಧ್ರುವ ಕಂದ ಪ್ರಲ್ಹಾದಗಾಗಿ ಸಂಧಿಸೊದಗಿನಿಂತು ಬಂದು ರಕ್ಷಿಸಿದೆ ಪ್ರಾಣ ಚಂದವಾಗಿ ನೀ 1 ಕರಿಯ ಮೊರೆಯ ಕೇಳಿ ನೆರಯ ಬಿಡಿಸಿದೆ ಎಂದು ಮೊರೆಯ ಹೊಕ್ಕೆನು ನಿಮಗೆ ಹರಿಹರಿಯೆಂದು 2 ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ ಉಪಾಯದಲಿಗಾಯ್ದ ಅಪಾರ ಮಹಿಮ 3 ಸ್ಮರಿಸಿದಾಕ್ಷಣ ಬಂದು ಕರುಣದಿಂದನ್ಯರಿಗೆ ಪರಿಪರಿಯಿಂದ್ಹೊರೆದೆ ವರಮುನಿಗಳ 4 ಶರಣು ಹೊಕ್ಕೇನು ನಿಮ್ಮ ತರಳ ಮಹಿಪತಿ ಪ್ರಾಣ ಹೊರೆದು ರಕ್ಷಿಸು ಎನ್ನ ಪರಮಪಾವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕರುಣಾಳು ಅಂಬುದಛಾಯ ಬಿನ್ನಹ ಕೇಳು ತಾಯೊಳು ಶಿಶು ಗುಡಪಾಯಸಗೋಸುಗ ಬಾಯತೋರ್ಪುದು ನ್ಯಾಯವೇ ಪೇಳು ಪ. ಭೂತಿದೇವಿಯ ರಮಣಾ ನೃಪ ಸಂಪ್ರೀತಿ ಪೂರ್ತಿ ಕರಣಾ ಚಾತೂರ್ಯ ಕರಣಾ ದಿವಿಜಾರಾತಿ ಶಿರೋಹರಣಾ ಮಾತು ಮಾತಿಗೆ ವಿಖ್ಯಾತಿಗೊಳಿಪ ತೆರ ನೀ ತಿಳಿಯೇಯ ಖಗಕೇತನ ಶುಭದಾ 1 ಮಧುಮಯ ಮೃದುಭಾಷಾ ಮಧುಹರ ಮಧುಕರ ಮುಖಭೂಷಾ ಅಧರೀಕೃತ ತೋಷಾ ದಾನವ ಮದಜಲನಿಧಿಶೋಷಾ ಮಧುರಾ ಪಟ್ಟಣ- ಕಧಿಪನೆಂದೆಸೆವ ಬುಧರಿಪು ಕಂಸನ ಸದೆದ ಪರೇಶಾ 2 ಶ್ರೀಪತಿ ಸರ್ವೇಶಾ ದುರಿತಮಹಾಪದ್ಗಣನಾಶಾ ತಾಪೋನ್ಮಥನೇಶಾ ಪಾಲಿಸು ಭೂಪ ಶೇಷಗಿರೀಶಾ ನೂಪುರ ಕಿಂಕಿಣಿಕ್ವಣಿತ ಚರಣ ಲ- ಕ್ಷ್ಮೀ ಪರಿರಂಭಿತ ಪರಮಾನಂದದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯೊ ಕಾಯೊ ಕರುಣಕಾರ ಗೋವಿಂದ ಕಾಯೊ ನಮ್ಮ ಕೃಪಾಸಿಂಧು ಹರಿ ಮುಕುಂದ ಧ್ರುವ ಬೊಮ್ಮನಾ ಪಡೆದ ಪರಾವರ ದೊರಿಯೆ ಸಮ್ಯಜ್ಞಾನವಿತ್ತು ಕಾಯೊ ಮುರಾರಿಯೆ ನಿಮ್ಮ ವಿನಾ ಅನ್ಯಪಥವ ನಾನರಿಯೆ ನಮ್ಮ ದೈವ ನೀನಹುದೊ ನರಹರಿಯೆ 1 ದುರಿತ ಪರಿಹರಿಸೊ ಭಾವ ಭಕ್ತಿಯೊಳೂ ಮನಪೂರ್ಣವಿರಿಸೊ ಕಾವಕರುಣನೆ ನಿಮ್ಮ ದಯ ಬೀರಿಸೊ ದಿವಾರಾತ್ರೆಯಲಿ ನಿಮ್ಮ ಸ್ಮರಣಿಲಿರಿಸೊ 2 ಕಾಯೊ ಕಾಯೊ ಕೊಟ್ಟು ನಿಮ್ಮ ನಿಜಧ್ಯಾನವ ಕಾಯೊ ಕರುಣಿಸಿ ಎನ್ನ ಜೀವನದ ಕಾಯೊ ದಯದಿಂದ ಎನ್ನ ಅಭಿಮಾನ ಕಾಯೊ ನಿಜ ದಾಸ ಮಹಿಪತಿ ಪ್ರಾಣವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಕಾಮಿತ ಫಲದ ಕಾಯೊ ಕಾಯೊ ಪ ಕಾಯೊ ಕಾಯೊ ಎನ್ನ ಕಾಯಜನಯ್ಯನೆ ಕಾಯದಿದ್ದರೆನ್ನ ಕಾವವರಾರೊ ಅ.ಪ ಎಂದೆಂದಿನ ಕರ್ಮಗಳನೆಣಿಸುತಲಿ ಕಂದಿಸಿ ಕುಂದಿಸಿ ಬಂಧಿಪರೇನೋ 1 ತಾಳಲಾರೆ ಈ ಕಾಲನ ಬಾಧೆಯು ಬೇಳುವೆ ನಿನ್ನಯ ಕಾಲಿಗೆ ಸ್ವಾಮಿ 2 ಆಲಸ ಮಾಡದೆ ಆರ್ತಿಗಳೋಡಿಸಿ ಪಾಲಿಪುದೆನ್ನನು ಪಾವನ ಮೂರ್ತೆ3 ಮಾಡಿದ ಪಾಪಗಳೋಡಿಸಿ ಸುಖದಿಂ ದಾಡಿಸು ಕಣ್ಣಿಗೆ ಕಾಣಿಸಿಕೊಂಡು 4 ವಾಸುದೇವವಿಟ್ಠಲ ನೀ ಎನಗಿನ್ನು ವಾಸಿ ಮಾಡಿಸಿ ಕೀರ್ತಿಯ ಪಡೆಯೊ 5
--------------
ವ್ಯಾಸತತ್ವಜ್ಞದಾಸರು
ಕಾಯೊ ಕಾಯೊ ಕಾಯೊ ಕಾಯೊ ಕೃಪಾನಿಧಿ ಕಾಯೊ ಕೃಪಾಳು ಸದ್ಗುರು ದಯ ನೀ ಪಾಲಿಸಿ ಸೋಹ್ಯಸೊನ್ನೆ ಸೂತ್ರಗುಹ್ಯ ಗೂಢದೋರಿ ಸಾಹ್ಯಮಾಡೊ ಸ್ವಾಮಿ ಸಾಕ್ಷಾತ್ಕಾರ ನೀ ದೋರಿಸಿ ನ್ಯಾಯದಲಿ ಮಿಥ್ಯಾಮಾಯ ಮೊನೆಮುರಿಸಿ ತೋಯಜಾಕ್ಷ ನಿಮ್ಮ ಶ್ರಯ ಸುಖ ಬೀರಿ ಭವ ಭಯ ಹರಿಸೊ ಗುರು ಕರುಣಿಸೊ 1 ನಾನಾರು ಎಂದು ಸಾಖೂನ ತಿಳಿಯದೆ ನಾನಾ ಯೋನಿಮುಖ ಜನಿಸಿ ಬಂದೆÀನಯ್ಯ ಜನುಮ ಜ್ಞಾನಗಮ್ಯವಾದ ಸ್ಥಾನದೋರಿ ನಿಜ ಧ್ಯಾನ ಮೌನದನುಭವ ಸುಖ ನೀಡೊ ನಿಮ್ಮ ನ್ಯೂನ ಪೂರ್ಣ ಎನ್ನ ನೀ ನೋಡದೆ ಸ್ವಾಮಿ ಸ್ವಾÀನುಭವದ ಸುಜ್ಞಾನ ದೀಪಲಿಡೊ ನಮ್ಮ ಮನೋನ್ಮನವಾಗಿ ಘನ ಕೈಗೂಡುವಾ ಸನ್ಮತ ನೋಡಿ ಸುವರ್ಮ 2 ನೋಡದೆ ಗುಣದೋಷ ಮಾಡಿ ಉಪದೇಶ ದೃಢಭಾವದ ಸುಪಥ ಒಡನೆ ಗೂಡಿಸೊ ನೋಡಿ ದೃಷ್ಟಿಲೆನ್ನ ಒಡೆಯ ಸದ್ಗುರು ಪೂರ್ಣ ಓಡಿಹೋಗುವಂತೆ ಭಕ್ತಿ ಜ್ಞಾನ ವೈರಾಗ್ಯವಿಡಿಸೊ ನೀಡಿ ಅಭಯಕರುಣಕವಚವ ತೊಡಿಸೊ ಪಿಡಿದು ಎನ್ನ ಕೈಯಾ ಮೂಢ ಮಹಿಪತಿಯ ಬಿಡದೆ ಕಡೆಗಾಣಿಸೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಗುರು ವಿಜಯರಾಯಕಾಯೊ ಕಾಯೊ ವರವೀಯೊ ವಿಜಯ ಗುರುರಾಯ ನೀನಲ್ಲದೆ ಉಪಾಯವೆ ಯಿಲ್ಲ ಪ ಪರಿ ಪರಿ ಥರವೆ 1 ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ ಪಡೆದ ಸುರಾಪಗದಂತೆ 2 ದುರಿತ 3 ಮಾಳ್ಪದು ನೀ ಕರಿಸದೆ ಬಲುವ್ಯಾಕುಲನಾಗಿಹೆ ನೀ ಕರುಣದಲಿ 4 ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆಗುರುವೆ ನಿಮ್ಮಯ ಚರಣ ಸೇವಕನ 5 ನೀನಾಳುವರೊಳು ಈ ನರಮೂರ್ಖನುಏನು ಅರಿಯೆ ಬಲು ದೀನವಾಗಿಹನೊ 6 ಆಲಸ ತಾಳದು ಪಾಲಿಸು ವೇಣು ಗೋ- ಪಾಲ ವಿಠಲನ ಆಳು ಕೃಪಾಳೊ 7
--------------
ವೇಣುಗೋಪಾಲದಾಸರು
ಕಾಯೊ ಕಾಯೊ ಗುರುನಾಥತ್ರಯಗುಣಾತೀತ ಧ್ರುವ ಭಾನುಕೋಟಿ ಸುಪ್ರಭೆಯ ಅನುದಿನಕ್ಷಯ ಘನಮಹಿಮರ ಹೃದಯ ಆನಂದೋದಯ ಅನಾಥರಿಗೆ ಆಶ್ರಯ ನೀನಹುದೊನÀಮ್ಮಯ 1 ದೇಶಿಕÀರಿಗೆ ನೀ ದೇವ ಲೇಸಾಗಿ ಕಾವ ಋಷಿ ಮುನಿಗಳ ಸಂಜೀವ ವಾಸವಾಗಿವ್ಹ ವಿಶ್ವಾತ್ಮನಹುದೊ ಶ್ರೀದೇವ ಭಾಸುತಲಿವ್ಹ ಭಾಷೆಯ ಪಾಲಿಸುವ ಈಶ ನೀನೆ ಕೇಶವ 2 ಬಾಹ್ಯಾಂತ್ರ ನೀ ಸದೋದಿತ ಗುಹ್ಯಗುರುತು ಶ್ರೀಹರಿ ನೀನೆ ಸಾಕ್ಷಾತನಹುದೊ ಸ್ವಹಿತ ಇಹಪರ ನೀನು ದಾತಮಹಿಪತಿ ಪ್ರಾಣನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಜಿತಕಾಯ ಗುರು ಬಾದ ರಾಯಣ ತತ್ವಜ್ಞರಾಯ ಪ ನಾ ಯಾರಿಗೆ ಬಿನ್ನೈಪೆ | ಹೇಯಸಂಸಾರದ ಎರಡೊಂದು ಮಠದಲಿ ಧರಿಸಿ ತೂರ್ಯಾಶ್ರಮ ಸಿರಿಯರಸನ ದಿವ್ಯ ಮೂರ್ತಿಗಳ ಕರದಿಂದ ಪೂಜಿಸಿ | ಮರುತ ದೇವನ ಮತ ಪರಮಾನಂದವೆಂದು ಧರೆಗೆ ಬೀರಿದ ಕರುಣಿ 1 ಜ್ಷಾನಿಗಳರಹುವ | ವಾಣಿಯಿಂದಲಿ ದೇ ಮೌನಿವರಿಯ ಎನ್ನ | ಹೀನಪಾತಕವೆಂಬ ಕಾನನ ದಹಿಸೆಂದು | ಸಾನುರಾಗದಿ ನೋಡಿ 2 ಭೂಸುರ ಪರಿಪಾಲ | ಶ್ರೀ ಶಾಮಸುಂದರನ ಲೇಸಾಗಿ ಒಲಿಸುತಲಿ ಕಿಟಜದಲಿ ಭಾಸುರ ಘನವೇಣಿ | ಭೇಶಪುರದಿ ನೆಲಸಿ ದಾಸರ ಮನದಭಿಲಾಷೆ ನೀಡುವ ದಾನಿ 3
--------------
ಶಾಮಸುಂದರ ವಿಠಲ
ಕಾಯೊ ಕಾಯೋ | ಗುರುವರ್ಯ | ಕಾಯೊ ಕಾಯೋ ಪ ಕಾಯೊ ಕಾಯೊ ಗುರುವರ್ಯ ಪರಮ ಪ್ರಿಯಜೀಯ ನಿನ್ನಯ ಪಾದಕೆರಗುವೆನಯ್ಯಾ ಅ.ಪ. ಒಂದರಿತವನಲ್ಲ | ಕಂದನು ಎಣಿಸದೆಬಂದು ಸಲಹೊ | ತಂದೆ ಮುದ್ದು ಮೋಹನ್ನ 1 ಹಿಂದಿನ ಸುಕೃತದಿ | ಬಂದು ಜನಿಸಿದೆನಂದ ಮುನಿಯ ಮತ | ಸಿಂಧುವಿನಲ್ಲಿ 2 ಇಂದಾದರು ತವ | ದ್ವಂದ್ವಪದವ ಮನಮಂದಿರದಲಿ ತೋರಿ | ದಂದುಗ ಬಿಡಿಸೋ 3 ಎಂದಾಗುದೊ ತಂದೆ | ಇಂದಿರೇಶ ಪದದ್ವಂದ್ವ ಸಂದರ್ಶನ | ಸಂಧಿಸೊ ಬೇಗನೆ 4 ತಂದೆ ನಿನ್ನಲಿ ಗುರುಗೋ | ವಿಂದ ವಿಠಲನಅಂದ ಮೂರುತಿಯನು | ಛಂದದಿ ತೋರೊ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಯೊ ಬಾರೊ ಹರಿಯೆ ಕರುಣಾ ಪಯೋಂಬುಧಿ ಪ. ಕಾಯೊ ಬಾರೊ ಕರುಣಾಂಬುಧಿ ಕಮಲದ- ಳಾಯತ ನೇತ್ರ ರಸಾಯನ ಸುರಿವುತ ಅ.ಪ. ಸಿಲುಕಿ ಬಾಧೆಗೊಂಡು ಬಹು ಬೆದರುವ ದಾಸನ ಕಾದುಗೊಳ್ಳು ಕಂಬ್ವರಿಗದಾಬ್ಜಧರ ಮಾಧವ ಮಧುಮಥನ ಮನದಿ ವಿನೋದಿಸುವ ಕಥನ ಶ್ರೀ ಪದಾಬ್ಜಾಮೋದಯುಗ ಸಾಸ್ವಾದನಾತ್ಮಕ ವಿನೋದ ನಲಿವುತ 1 ಕತ್ತಲೆ ಮುಸುಕಿರುವ ಸಮಯದಿ ಸುತ್ತ ವ್ಯಾಘ್ರವಿರುವ ವನದಲಿ ಸತ್ವಹೀನವಾದೆತ್ತಿನ ಕೆಡಹುವದುತ್ತಮವೆ ಪುರುಷೋತ್ತಮ ನಿನ್ನಯ ತತ್ವಮಾರ್ಗ ತಿಳಿಸಿ ತ್ರಿಕರಣವೆತ್ತಿ ಬೋಧೆಗೊಳಿಸಿ ಜನೋತ್ತಮನೆನಿಸುತ 2 ಇಂದಿರೇಶ ನಿನ್ನ ಚರಣವನೆಂದಿಗು ನಂಬಿದನ ಬಂಧ ಬಿಡಿಸಿ ಕೃಪೆಯಿಂದ ಪೊರೆವನೆಂಬಂದಕಪಾಯವ ಕರುಣಾಸಿಂಧು ನಿನ್ನ ಕೀರ್ತಿ ಮನೋಗತ ಸಂದಣಗೊಳಿಸುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯೊ ಸುಖಸಾರ ಮಾಯಾವಿದೂರ ಭಾವಜನಯ್ಯ ಭಕುತರ ಪ್ರಿಯಕರ ಪ ಕಾಯಕಾಂತಾರದೊಳು ನೋಯುತ ವಿಧ ವಿಧ ಬಾಯ ಬಿಡುವೆನಯ್ಯ ತೋಯಜಾಕ್ಷನೆ ನೋಡೊ 1 ಸಂಸಾರತೆರೆಯೊಳು ಹಿಂಸೆ ಪಡುತ ಮತಿ ಕಂಸಾರಿ ಕರುಣಿಸೊ 2 ಜಡಭವತೊಡರನು ಕಡೆಹಾಯ್ಸಿ ಕೊಡುಮುಕ್ತಿ ಕಡುದಯಾನಿಧೆ ಎನ್ನೊಡೆಯ ಶ್ರೀರಾಮನೆ 3
--------------
ರಾಮದಾಸರು
ಕಾಯೊ ಸುಗುಣ ಮಣಿಯೆ ಪ ಪ್ರೀಯ ಮುರಾರಿ ವಿನಾಯಕ ಸೋದರ ||ಅ|| ಅಘ ಪಾವನಮೂರ್ತಿ ಶರಣರ ರಕ್ಷಕ 1 ಕುಂದ ಕುಂದಕುಟ್ಮಲಪದನಾನಂದಿಧ್ವಜ ಸುತ ಸುಂದರ ಮೂರುತಿ | ಇಂದುವದನ ಮುನಿವೃಂದ ವಂದಿತ ಗುಹ 2 ಮಯೂರ ಧ್ವಜಾ | ಕ್ಲೇಶದಿ ನರಳುವ ದಾಸರ ರಕ್ಷ ಸ-ರ್ವೇಶಕರಜ ನಿರ್ದೋಷಿ ಸುಬ್ರಹ್ಮಣ್ಯ 3
--------------
ಬೆಳ್ಳೆ ದಾಸಪ್ಪಯ್ಯ
ಕಾಯೋ - ಕಾಯೋ ಪ ಕಾಯೋ ಕಾಯೋ ಗುರು - ರಾಯನೆ ತವ ಪದ ತೋಯಜ ಯುಗ ಎನ್ನ ಕಾಯದಲಿಟ್ಟು ಅ.ಪ ಕ್ಷುಲ್ಲಕ ಮನುಜರ - ಸೊಲ್ಲನೆ ನೀಗಿಸಿ ಹಲ್ಲನೆ ಮುರಿಯುವ - ಬಲ್ಲಿದ ನೀನೇ 1 ಭದ್ರ ಭಕುತಿಯ - ಉದ್ರೇಕವಿತ್ತು 2 ತ್ವತ್ಸೇವಾ ಜನರಲಿ - ಮತ್ಸರ ಮಾಡುವ ಕುತ್ಸಿತ ಜನತÀÀತಿ - ವಿಚ್ಛೇದ ಮಾಡುವ 3 ನಿನ್ನಯ ಜನರನ - ಮನ್ನಣೆ ಮಾಡದೆ ಬನ್ನವ ಬಡಿಪರ - ಖಿನ್ನರ ಮಾಡೀ 4 ದೂತರ ನಿಚಯಕೆ - ಈ ತೆರ ಚಿಂತೆಯು ಯಾತಕೆ ಗುರು ಜಗನ್ನಾಥ ವಿಠಲ ದೂತಾ 5
--------------
ಗುರುಜಗನ್ನಾಥದಾಸರು
ಕಾಯೋ ಕರುಣ ಕೃಪೆಯಿಂದ ಹರಿ ಮುಕುಂದ ಧ್ರುವ ಕರುಣಾನಂದದ ಸಾಗರ ಕರಿವರ ಶರಣಾಗತಜನರ ಮಂದಾರ ಪರಮ ಉದ್ಧಾರ ಸುರ ಸಂಸಾರಾಯದಾಗರ ಪರಾತ್ಪರ ತರಣೋಪಾಯದಾಧಾರ 1 ಅನಾಥ ಜನರಾಶ್ರಯ ನೀನೆ ನಿಶ್ಚಯ ಅನುಭವಾನಂದಾ ಹೃದಯ ಘನಮಯ ದಿನಕರಕೋಟಿ ಪ್ರಭೆಯೆ ಜನವನಲಿಹ್ಯ ಮುನಿಜನರ ಹೃದಯ ಅನುದಿನದಲಕ್ಷಯ 2 ವಿಹಿತವಿಚಾರದ ವಿವರ ಈಹ್ಯಶ್ರೀಧರ ಸ್ವಹಿತ ಸುಖದ ಸುಸಾರ ಬಾಹ್ಯಾಂತರ ಮಹಿಮೆ ನಿನ್ನದು ಅಪಾರ ಮಹೇಶ್ವರ ಇಹ್ಯ ಪರದ ದಾತಾರ ಮಹಿಪತಿ ಸಹಕಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೋ ಕರುಣಾನಿಧೆ | ಶ್ರೀ ಹರಿ | ಖಗವರ ಗಮನಾ ಪ ಘೋರ ಸಂಸಾರದ ತಾಪದಿ ನೊಂದೆ | ಭವ ಭಯ ಅಘಕುಲ ಶಮನಾ 1 ಜ್ಞಾನ ಧ್ಯಾನದ ನಿಜ ಸಾಧನವರಿಯೆ | ನೀನೆ ಗತಿಯೆನುತ ಮಾಡುವೆ ನಮನಾ2 ಗುರು ಮಹೀಪತಿ ಪ್ರಭು ಅನಾಥ ಬಂಧು | ಚರಣದ ಭಜನೆಯ ಲಿರಿಸೆನ್ನ ಮನ |3
--------------
ಕಾಖಂಡಕಿ ಶ್ರೀ ಕೃಷ್ಣದಾಸರು