ಒಟ್ಟು 49270 ಕಡೆಗಳಲ್ಲಿ , 136 ದಾಸರು , 11161 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಂದಣದ ಹಸೆಗೆ ಛಂದದಿಂದ ಬಾರೆ | ಸಿಂಧು ಕುಮಾರೆ | ಶೃಂಗಾರಮಯವಾದ ಕಂಗೊಳಿಸುವ ಬಹು ಸಹೋದರಿ 1 ಸಿಂಧುರಮಂದಗಮನೆ ಕುಂದಕುಟ್ಮಲರದನೆ ಇಂದು ಧರೆಯಲಿ ಸುರವೃಂದವಂದಿತ ಜನನಿ 2 ಕಾಮನ ಜನನಿ ಕಾಮಿತದಾಯಿನಿ ಗೋಮಿನಿರುಕ್ಮಿಣಿ ಶಾಮಸುಂದರನ ರಾಣಿ 3
--------------
ಶಾಮಸುಂದರ ವಿಠಲ
ಕುಂದಣದಾರುತಿ ತಂದು ಬೆಳಗಿರೆ ಪ ಮಂದರ ಧರಗೆ ವಂದಿಸುವರ ಭವಬಂಧ ಬಿಡಿಸುವಗೆ 1 ವಿಜಯಸಾರಥಿಗೆ ದ್ವಿಜವರ ಗಮನಗೆ ಪಂಕಜ ಭವಪಿತಗೆ 2 ಸುರಪರಿ ಪಾಲಗೆ ಶರಧಿಜ ಲೋಲಗೆ ಶರಣರ ಪೊರಿವ “ಕಾರ್ಪರ ನರಸಿಂಹಗೆ” 3
--------------
ಕಾರ್ಪರ ನರಹರಿದಾಸರು
ಕುಂದಣಾರುತಿ ತಾರೆ ಸಖಿ | ಸಿಂಧುನಂದನೆಗಿಂದು ಮುಖಿ ಪ ವಿಧಿ ಮಾತೆಗೆ ವರದಾತೆಗೆ | ಕೃತಿಲೀಲೆ ನುತಿನೀಲೆ ರುಕ್ಮಿಣಿಗೆ 1 ಜಂಭಾರಿ ವಂದಿತೆ ಶ್ರೀರಂಬೆಗೆ ಜಗದಂಬೆಗೆ | ಸುನೀತಾಂಬೆಗೆ | ಅಂಬುಜ ಮಂದಿರ ಅಂಭ್ರಣಿಗೆ 2 ಶ್ರೀ ಶಾಮಸುಂದರನರ್ಧಾಂಗಿಗೆ ಶುಭಾಂಗಿಗೆ | ದಯಾಪಾಂಗೆಗೆ | ಭೂಸುರ ಸುಚರಿತ ಭಾರ್ಗವಿಗೆ 3
--------------
ಶಾಮಸುಂದರ ವಿಠಲ
ಕುಂದದೆಮ್ಮನು ಕರುಣದಿಂದ ಪೊರೆವರ ಪ ನಂಬಿ ತುತಿಸುವಾ ಜನ ಕದಂಬಕಿಷ್ಟವ ತುಂಬಿ ಕೊಡುವರೋ ಅನ್ಯ ಹಂಬಲೀಯರು 1 ವಿನುತ | ಮೂಲ ರಾಮನಾ ಶೀಲ ಸದ್ಗುಣ ನುತಿಪ ಮೇಲು ಭರತನಾ 2 ಜಲಧಿ ಚಂದಿರಾ ಒಲಿದು ಭಕ್ತಾರಾ ಪೊರೆವ ಸುಲಭ ಸುಂದರಾ 3 ಗುರು ಸುಧೀಂದ್ರರಾ ವಿಮಲ | ಕರಜರೆನಿಪರಾ ಸ್ಮರಿಸಿ ಸುರುಚಿರಾ ವಿಮಲ ಚರಣ ಪುಷ್ಕರಾ 4 ಭೂತ ಭಾವನಾ ಜಗನ್ನಾಥ ವಿಠಲನಾ ಪ್ರೀತಿ ಪಾತ್ರನಾ ನಂಬಿರೀತನೀಕ್ಷಣಾ 5
--------------
ಜಗನ್ನಾಥದಾಸರು
ಕುದುರೆ ಕಂಡೀರ್ಯಾ ಬಿಳಿ ಕುದುರೆ ಕಂಡೀರ್ಯಾ ಚೆಲುವ ಕುದುರೆ ಕಂಡೀರ್ಯಾ ಮಧ್ವರಾಯರಿಗೊಲಿದ ಕುದುರೆ ವಾದಿರಾಜರ ಪೊರೆದ ಕುದುರೆ ಇಂದಿರಾ ದೇವಿಯನಪ್ಪಿದ ಕುದುರೆ ಬಂದರೆ ನರರು ಬೆದರದಂಥ ಕುದುರೆ 1 ಮಂದರಗಿರಿಯನ್ನೆತ್ತಿದ ಕುದುರೆ ಚಂದಿರನಂತೆ ಪೊಳೆಯುವ ಕುದುರೆ ಸೋದೆಯ ಪುರದೊಳಿರುವ ಕುದುರೆ ಮೋದದಿಂದ ಮೆರೆಯುವ ಕುದುರೆ 2 ನರನ ರಥವನು ಏರಿದ ಕುದುರೆ ಸ್ಮರನ ತಾತನೆನಿಪ ಕುದುರೆ ಸುರತರುವನೆ ಭೂಮಿಗೆ ತಂದ ಕುದುರೆ 3 ಕಡಲೆ ಹೂರಣ ಮೆಲುವ ಕುದುರೆ ಪಂಡರಪುರದಿ ಮೇದ ಕುದುರೆ ಪುಂಡರೀಕನಿಗೆ ಒಲಿದಿಹ ಕುದುರೆ ಪಾಂಡವರನೆ ಪೊರೆದ ಕುದುರೆ 4 ರಾಜನಾಥನೆನಿಪ ಕುದುರೆ ವಾಜಿವದನ ತಾನೆನಿಪ ಕುದುರೆ ಕಂಜಸುತಗೆ ಶ್ರುತಿಯನ್ನಿತ್ತ ಕುದುರೆ ಕಂಜನಾಭನೆನಿಪ ಕುದುರೆ 5
--------------
ವಿಶ್ವೇಂದ್ರತೀರ್ಥ
ಕುದುರೆ ಬಂದಿದೆ ಚೆಲುವಕುದುರೆ ಬಂದಿದೆ ಪ. ಕುದುರೆ ಬಂದಿದೆ ವಾದಿರಾಜಗೆಮುದದಿ ಜ್ಞಾನ ಭಕುತಿ ಕೊಡುವ ಅ.ಪ. ಹಿಂಗಾಲಿಂ ರಕ್ಕಸರ ಒದೆವ ಕುದುರೆಮುಂಗಾಲು ಕೆದರಿ ಬಾಲವ ಬೀಸಿತಗ್ಗಿಸಿ ತಲೆಯ ಅಡಿಗಡಿಗೆಜಿಗಿದು ಹಾರಿ ಹುಂಕರಿಸುವ1 ಗರುವಿ ಮಹಲಕ್ಷ್ಮಿ ತನ್ನವರನೆಂದು ಒಲಿದು ಬರುವಉರದಿ ಶ್ರೀವತ್ಸ ಕೌಸ್ತುಭಧsÀರಿಸಿ ತಾಂ ಮೆರೆಯುವಂಥ 2 ಹಲ್ಲಣವಿಲ್ಲದೆ ನಿಲ್ವುದು ಕುದುರೆಒಲ್ಲದು ಕಡಿವಾಣ ಕುದುರೆಬೆಲ್ಲಕಡಲೆ ಮೆಲ್ಲುವ ಕುದುರೆಚೆಲುವ ಹಯವದನನೆಂಬೊ ಕುದುರೆ 3
--------------
ವಾದಿರಾಜ
ಕುಮಾರ ಗುಹಗೆ ಎಸಗೀ ಪ ವಾಹನನಿಗೆ ಧೀರಗೆ ಜಯವೆಂದು ಆರತಿ ಅ.ಪ ವೇದೋಕ್ತ ಮಂತ್ರದಿಂದ ಶರ್ಕರ ಮೊದ-ಲಾದ ದ್ರವ್ಯದಿಂದ ಸಾಧು ವಂದಿತನಿಗೆ ಭೂದೇವರಭಿಷೇಕ ಸಾದರದಲಿ ಮಾಡಿ ಮೋದದಿ ಜಯವೆಂದು ||ಆರತಿ|| 1 ಕಲಶೋದಕ ಮಂತ್ರಿಸಿ ಭೂಸುರರೆಲ್ಲ ನಲವಿಂದಲಭಿಷೇಕಿಸಿ ತಲೆಗೆ ಗಂಧಾಕ್ಷತೆ ತುಲಸಿ ಪತ್ರವು ವುಷ್ಪಗಳ ಮಾಲೆ ಇರಿಸುತ್ತ ನಲವಿಂದೆ ಜಯವೆಂದು ||ಆರತಿ|| 2 ಓಗರ ಜಂ- ಬೂಫಲ ಭಕ್ಷ್ಯವ ಶ್ರೀಪತಿ ಸಖಗೆ ಸ-ಮಾರ್ಪಿಸಿ ಜಯವೆಂದು ||ಆರತಿ|| 3 ಮೂರು ಪ್ರದಕ್ಷಿಣೆಯ ಭಕ್ತಿಯೊಳ್ ನಮ-ಸ್ಕಾರವ ಪ್ರಾರ್ಥನೆಯ ಮಾರಾರಿಸುತಗೆ ಅ-ಪಾರ ಮಹಿಮನಿಗೆ ಹಾರುವರೆಸೆಗುತೊ-ಯ್ಯಾರದಿ ಜಯವೆಂದು ||ಆರತಿ|| 4 ಮಂಗಳ ಶರಜನಿಗೇ ಗುಹಗೆ ಜಯ ಮಂಗಲ ಸ್ಕಂಧನಿಗೇ ಮಂಗಲ ಪಾವಂಜೆ ವಾಸ ಷಡ್ಶಿರನಿಗೆ ಮಂಗಲದಾಸರ ಕಾವಗೆ ಜಯವೆಂದು ||ಆರತಿ|| 5
--------------
ಬೆಳ್ಳೆ ದಾಸಪ್ಪಯ್ಯ
ಕುಮಾರವ್ಯಾಸ ನಿತ್ಯ ಶುಭ ಮಂಗಳಂ ಪ ಮಂಗಳಂ ವೀರನಾರಾಯಣನ ಭಕ್ತಂಗೆಮಂಗಳಂ ಶಿವನಂಶ ದ್ರೋಣಸುತ ಶಿಷ್ಯಂಗೆಮಂಗಳಂ ಕನ್ನಡದೆ ಭಾರತವನೊರೆದವಗೆಮಂಗಳಂ ಯೋಗೀಂದ್ರ ಕುವರವ್ಯಾಸಂಗೆ 1 ಕವಿ ಪುಂಗವಂಗೆ 2 ಭಾರತದ ಶಾಸ್ತ್ರಾರ್ಥದೊಗಟವನು ಬಿಡಿಸುತಲಿಸಾರಿಜನರಿಗೆ ರಮ್ಯಗಮಕದಲಿ ಹೇಳಲಿಕೆಭಾರತದ ಶ್ರೀ ಬಿಂದುರಾಯರನು ಪ್ರೇರಿಸಿದ ತೋರ ಗದುಗಿನ ವೀರ ನಾರಾಯಣಂಗೆ 3
--------------
ವೀರನಾರಾಯಣ
ಕುರುಣಾವಾರುಧೀಶ ಭಾರತೀಶ ಕರಪಿಡಿದು ಕಾಪ್ಯಾಡೊ ಕೊರವಿಯ ವಾಸ ಪ ಸುಜನರೆನ್ನಗೆ ಹಿಂದೆ ಸೂಚಿಸಿದ್ದರೊ ದ್ವಿಜ ಕುಲಾರ್ಚಿತ ಇಂದು ನಿನ್ನ ಭಕುತರಲ್ಲಿಡು ಎನ್ನ 1 ದಂತಿಪುರಪತಿಗೆ ಕೃತಾಂತನೆನಿಸಿದ ಧೀರ | ವಿಂತು ಪೊಗಳಲಿ ನಿನ್ನ ಮಹಿಮೆಯನು ಕುಂತಿಜನೆ ತವನಾಮ ಚಿಂತಿಯನು ಸಂತತದಲಿ ಸಲಹೋ ಧೀಮಂತ ನಂಬಿದೆ ಪರಮಾ 2 ಕಾಮಾರಿಸುತ ನಮೊ ಸೋಮಕುಲಭವ ಭೀಮ | ಶ್ರೀಮಧ್ವಮುನಿನಾಥವರ ಪ್ರದಾತ ಭೂಮಿಜಾತೆಯ ಪ್ರವೀತ ಶಾಮಸುಂದರದೂತ ಸ್ವಾಮಿಗುರು ತವನಾಮ ಸ್ಮರಿಪೆ ಘುನ್ನ 3
--------------
ಶಾಮಸುಂದರ ವಿಠಲ
ಕುಲ ಕುಲ ಕುಲವೆನ್ನುತಿಹರು ಪ ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ಅ ಕೆಸರೊಳು ತಾವರೆ ಪುಟ್ಟಲು ಅದ ತಂದುಬಿಸಜನಾಭನಿಗರ್ಪಿಸಲಿಲ್ಲವೆಹಸುವಿನ ಮಾಂಸದೊಳುತ್ಪತ್ತಿ ಕ್ಷೀರವವಸುಧೆಯೊಳಗೆ ಭೂಸುರರುಣಲಿಲ್ಲವೆ1 ಮೃಗಗಳ ಮೈಯಲಿ ಪುಟ್ಟಿದ ಕತ್ತುರಿಯತೆಗೆದು ಪೂಸುವರು ದ್ವಿಜರೆಲ್ಲರುಬಗೆಯಿಂದ ನಾರಾಯಣನ್ಯಾವ ಕುಲಅಗಜ ವಲ್ಲಭನ್ಯಾತರ ಕುಲದವನು 2 ಆತ್ಮ ಯಾವ ಕುಲ ಜೀವ ಯಾವ ಕುಲತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯಆತ್ಮಾಂತರಾತ್ಮ ನೆಲೆಯಾದಿಕೇಶವನುಆತನೊಲಿದ ಮೇಲೆ ಯಾತರ ಕುಲವಯ್ಯ 3
--------------
ಕನಕದಾಸ
ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯನೇನಾದರೂ ಬಲ್ಲಿರ ಪ ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲಅಟ್ಟು ಉಣ್ಣದ ವಸ್ತುಗಳಿಲ್ಲಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನುನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ 1 ಜಲವೆ ಸಕಲ ಕುಲಕ್ಕೆ ತಾಯಲ್ಲವೆಜಲದ ಕುಲವನೇನಾದರೂ ಬಲ್ಲಿರಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹನೆಲೆಯನರಿತು ನೀ ನೆನೆ ಕಂಡ್ಯ ಮನುಜ 2 ಹರಿಯೆ ಸರ್ವೋತ್ತಮ ಹರಿಯೆ ಸರ್ವೇಶ್ವರಹರಿಮಯವೆಲ್ಲವೆನುತ ತಿಳಿದುಸಿರಿ ಕಾಗಿನೆಲೆಯಾದಿಕೇಶವರಾಯನಚರಣ ಕಮಲವ ಕೀರ್ತಿಸುವನೆ ಕುಲಜ 3
--------------
ಕನಕದಾಸ
ಕುಲದ ಮೇಲೆಯೇ ಹೊಂದಲಿಬೇಡ ಕೇಳಿದನೋ ಕತ್ತೆಕುಲವು ಬೇರೆ ಜ್ಞಾನದ ಹಾದಿಗೆ ನಿನಗೆ ತಿಳಿಯಿತೆ ಪ ಸಣ್ಣವನಾಗಲಿ ಸ್ತ್ರೀಯು ಆಗಲಿ ಆರು ಆದರೆ ಏನುತನ್ನನ್ನು ತಿಳಿದು ತಾನೆಯು ಆದರೆ ಅವನೆ ನಿಜ ಮುಕ್ತಾ 1 ಹಿರಿಯನು ಇಲ್ಲವು ಕಿರಿಯನು ಇಲ್ಲವುತನ್ನನು ತಿಳಿದವ ಹಿರಿಯ ಕರೆಕರೆಸಂಸಾರ ಕೇವಲ ಸುತ್ತಲು ಅರಿತವ ಎಂದಿಗೆ ಮನೆಯೂ 2 ಆವ ಕುಲವು ಆದರೆ ಏನು ತನ್ನ ತಿಳಿಯೆ ಜ್ಞಾನದೇವ ಚಿದಾನಂದನವನನು ಇಲ್ಲವನೆಂದವ ನಲಿವನಾ 3
--------------
ಚಿದಾನಂದ ಅವಧೂತರು
ಕುಲಮದ ವೈಭವಮದ ವಿದ್ಯಾಮದಗಳನುಳಿದು ಹರಿದಾಸರ ಮರೆಯೊಕ್ಕು ಸುಖಿಯಾಗು ಪ. ಮಾನವ ಪೇಳೆಯಸರ್ಪತÀಲ್ಪನ ಪೂಜೆಗುಚಿತನಾದರೆ ಅವನಇಪ್ಪತ್ತೊಂದು ಕುಲ ಸುಕುಲ ನೋಡಾ1 ಸುರರ ಸೋಲಿಸಿ ಸ್ವರ್ಗಸಿರಿಯ ಭೋಗಿಸಿದ ದೈ-ತ್ಯರ ಭಾಗ್ಯ ಬಿಸುಟುಪೋದುದ ಕೇಳೆಯಸ್ಥಿರವಲ್ಲ ಸಂಪತ್ತು ಪರಕೆ ಪ್ರತ್ಯಹವೆಂದರಿದುನರಹರಿಯ ಚರಣಸೇವೆಯ ಮಾಡು 2 ಎತ್ತು ಹೊತ್ತಗೆಯ ಹೊರೆ ಹೊತ್ತಡದಕೆ ಸಂ-ಪತ್ತೇನೋ ಮರುಳ ಸರ್ವಜ್ಞರುಂಟೆಭಕ್ತಿಯುಳ್ಳವನೊಬ್ಬ ನೆರೆಜಾಣ ಜಾಣರಿವರೆತ್ತ್ತೆಂದರಿಯದ ಹಯವದನನಂಘ್ರಿಯ ಬಲ್ಲ 3
--------------
ವಾದಿರಾಜ
ಕುಲವಂತನೇ ನೀನು ಎಲೋ ಪರಮಾನಂದ ಕುಲಹೀನನೇ ನಾನು ಪೇಳೆಲವೊ ಸ್ವಾಮಿ ಪ ಹೊಲೆಯ ಪೆದ್ದಯ್ಯಗೆ ಒಲಿದವನ ಆಳಾದಿ ಕುಲದಿ ಮಾದಿಗರ್ಹರಳಯ್ಯನ ಮನೆಲುಂಡಿ ಚೆಲುವ ಕೂಸಿನ ಕೊರತೆ ಸಲಿಸಿದಿ ಬಲುಹಿತದಿ ಮಲಿನಸೀರೆಯ ನಿನ್ನ ತಲೆಗೆ ಸುತ್ತಿಕೊಂಡಿ 1 ಡೊಂಬಿತಿಯ ಗುಡಿಸಿಲಲಿ ಸಂಭ್ರಮದಿ ಮಲಗಿದಿ ಶಂಭೋ ಕುಣಿದೆಲೋ ಕುಂಬಾರಗೊಲಿದು ಸಾಂಬ ನೀ ನಡ ಪೊತ್ತು ಇಂಬು ಸುಡುಗಾಡು ನಿನಗಂಬುಧಿಧರನೆ 2 ಪುಲಿಚರ್ಮ ಹಾಸಿಕೊಂಡ್ಹೊಲಸು ಚರ್ಮುಟ್ಟಿರುವಿ ತಲೆ ಬುರುಡೆ ಕೊರಲಿಗೆ ಮಾಲೆ ಧರಿಸಿರುವಿ ಎಲೊ ದೇವ ಇನಿತಿರ್ದು ಕುಲವನೆಣಿಸುವಿ ನಿನ್ನ ಒಲವು ಬೇಡುವರಿಗೆ ಶ್ರೀರಾಮಸಖನೆ 3
--------------
ರಾಮದಾಸರು
ಕುಲವೇನೆಂತು ಹೇಳಲಿ ಯೋಗೀಶನಕುಲವೇನೆಂತು ಹೇಳಲಿಕುಲವ ಕೇಳುತಿಹ ಕತ್ತೆಯ ಮಗನಿಗೆ ಪ ಬಲಿದು ಆಧಾರವನು ಕುಂಬಕದೊಳು ನಿಲಿಸಿ ವಾಯುವನುನೆಲೆಯನು ಹತ್ತಿಸಿ ನೆಲೆಯಾಗಿ ನೆಲೆಸಿನೆಲೆಯೊಳು ಕುಳಿತಿಹ ಪುಣ್ಯ ಪುರುಷನಿಗೆ 1 ಜಾಗ್ರತದಿ ಸ್ವಪ್ನವನು ಸುಷುಪ್ತಿಯು ಸಹನಿಗ್ರಹಿಸೆಲ್ಲವನು ಸ್ವರ್ಗದ ಮೇಲೆ ಮಹಾ ಸ್ವರ್ಗವಿರಲುಸುಸ್ವರ್ಗದಿ ನೆಲೆಸಿಹ ಭರ್ಗನಾದವಗೆ2 ಎಣಿಕೆಯ ಜನ್ಮವನು ಕಳೆದು ಮುಂದೆಕ್ಷೀಣಿಸಿ ಪ್ರಾರಬ್ಧವನು ತ್ರಿಣಯನನಾಗಿ ದಿನಮಣಿಯಾಗಿ ಕಣಿಯಾಗಿಗುಣಕಗೋಚರ ಚಿದಾನಂದನಾದವನಿಗೆ 3
--------------
ಚಿದಾನಂದ ಅವಧೂತರು