ಒಟ್ಟು 8021 ಕಡೆಗಳಲ್ಲಿ , 132 ದಾಸರು , 4501 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಗೋ ಬಾಗೋ ಜೀವನೇ ಸಾಗರನಿಲಯಗೆ ಪ ಬಾಗೋ ಮನಸಿನ ನೀಗಿ ಕಲ್ಮಷ ಬೇಗ ತಿಳಿದು ನೀಜೋಗಿವಂದ್ಯಗೆ ಅ.ಪ ಕನಸಿದು ಜಗಮೋಹ ಕಾಣು ಕಾಣೋ ನಿನಗೆ ವೈಕುಂಠ ಒಂದೇ ಗೇಣೋ ಚಿನುಮಾಯಾತ್ಮನ ತ್ವರ ಕಾಣು ಕಾಣೋ ತನುಮನವರ್ಪಿಸಿ ನೆನವು ನಿಲ್ಲಿಸಿ ನಿಜ ಘನಮಹಾತ್ಮನ ಹಿಡಿ ಖೂನ ಖೂನೋ 1 ಕಾಯ ಕಾಯ ಗುರುತಿಟ್ಟರಿಯಿದರ ನೆಲೆಯ ನೆಲೆಯ ಮರುಳನೆ ನರಕದ ಕುಣಿಯು ಕುಣಿಯೋ ನೆರೆದು ತೋರಿ ಸಂತೆ ಹರಿದು ಹೋಗುವಂತೆ ಧರೆ ನಿನಗೊಂದಿನ ಮಾಯ ಮಾಯ 2 ಬಂದದ್ದು ವಿಚಾರ ಮಾಡೋ ಮಾಡೋ ಇಂದಿನ ಸಮಯ ಕಳಿಬೇಡೋ ಬೇಡೋ ಬಂಧುರಸುಖಕೆ ಮನ ನೀಡೋ ನೀಡೋ ಇಂದು ನಾಳೆನ್ನದೆ ತಂದೆ ಶ್ರೀರಾಮನ ಬಂಧುರಚರಣವ ಪಾಡೋ ಪಾಡೋ 3
--------------
ರಾಮದಾಸರು
ಬಾಟ ಪಕಡೊ ಸೀದಾ | ನ ಘಡೆ ತೇಥೆ ಬಾಧಾ ಇದುವೆ ಗುರು ನಿಜಬೋಧ | ಸ್ವಸುಖ ಸಮ್ಮತವಾದಾ ಧ್ರುವ ಬಂದಗೀ ಕರ್ತಾ ಕರಕೇ ಝೂಟಾ | ತಿಳಿಯದು ನಿಜ ಘನದಾಟಾ ಮರ್ಮನ ಕಳತಾ ಕರಣೀ ಖೋಟಾ ಕೇಳಿ ಶ್ರೀ ಗುರುವಿಗೆ ನೀಟಾ 1 ಜಾನಭೂಜಕರ ಚಲನಾ ಭಾಯಿ ಲಕ್ಷ ಲಾವುನೀ ಗುರುಪಾಯೀ ಇದು ಎಲ್ಲರಿಗೆ ದೋರುದೇನಯ್ಯ ಹೇ ಸಮಝೆ ವಿರಲಾ ಕೋಯೀ2 ತಿಳಿದು ನೋಡಿ ಶ್ರೀ ಗುರುಕೃಪೆಯಿಂದಾ ಹುವಾ ಖುದಾಕಾ ಬಂದಾ ಮಹಿಪತಿಗಾಯಿತು ಬಲು ಆನಂದಾ ಹರೀ ಮ್ಹಣಾ ಗೋವಿಂದಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾದರಾಯಣನ ಪಾದವ ನಂಬದೆ ಪ ತುಂಬಿ ತುಳುಕುತಿರೆ ವದನದಿ ಮಂತ್ರವ ಪಠಿಸಿ ಫಲವೇನು ಉದರ ಪೋಷಣೆಗಾಗಿಯೆ ಮಾಡುವ ಕರ್ಮ ನೋಡಿ ನಗುವರು 1 ಕಂಣನು ಮುಚ್ಚಿ ಮೌನದಿ ಕುಳಿತು ಪರ ಹೆಂಣಿನ ರೂಪವ ಮನದೊಳು ನೆನೆದು ಚಿಂಣತನದಿ ಅವಳ ಬೆರೆಯಲು ಯೋಚಿಸಿ ಹೊನ್ನು ಕೂಡಿಸುವ ಪರಿಯದಲ್ಲದೆ 2 ಗುಟ್ಟಲಿ ಪೂಜಿಪ ಗುರುತನು ಅರಿಯದೆ ಪಟ್ಟೆ ನಾಮವ ಹಚ್ಚಿ ಮಡಿಗಳನು ದಿಟ್ಟ ರಂಗೇಶವಿಠಲನ ಮರೆದು 3
--------------
ರಂಗೇಶವಿಠಲದಾಸರು
ಬಾಧಕರೊಳು ಬದ್ಧನು | ಮಧುಸೂದನ ಭಕ್ತಿಗೆ ದೃಢವಿಲ್ಲದವನು ಪ ಧರೆಯೊಳು ನೋಡಲು ಕೊಳಲುಂಟು ಕೊಡಲುಂಟು | ಹರಿಪರದೈವೆಂದು ಹೇಳುವನು | ದುರಿತವು ಬಂದಡೆ ನೀಚದೈವಂಗಳಿ | ಗೆರಗಿ ಕೊಂಡಾಡುವ ಸಂದೇಹಿ ಆತ್ಮಾ 1 ನಾನಾ ಶಾಸ್ತ್ರವನೋದಿ ಕಾಂಚನದಾಶೆಗೆ | ನೃಪರ ವಾಲ್ಗೈಸುವನು | ಈ ನಿಖಿಳದ ವೃತ ಜಪ ತಪವನು ಮಾಡೀ | ನಾನೆಂಬ ಹಮ್ಮಿಲಿ ಪರರನು ಹಳಿವಾ 2 ವಾಸುದೇವ ಸರ್ವಯಂಬುವ ದೇವರ | ದಾಸರ-ಸೂಯದಿ ಬಾಳುವನು | ಲೇಸಾಗಿ ಗುರುವರ ಮಹಿಪತಿಸ್ವಾಮಿಯ | ಧ್ಯಾಸವಿಲ್ಲದೆ ವಣಡಂಬದಲ್ಲಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾಯಿ ತೆರೆದ ಬಗಿಯೇನೊ ದೇವದೇವ ತೋಯಜದಳ ನೇತ್ರನೆ ನೀಯೆನಗಿದು ಪೇಳೈ ನಿಜವಾಗಿ ಲಕ್ಷ್ಮೀನಾ ರಾಯಣ ನರಸಿಂಹನೆ ಪ ಅಸುರನ ಉದರವ ಹಸನಾಗಿ ಬಗೆವಾಗ ಬಾಯ ತೆರೆದಿಯಾ ಬಿಸಜ ಭವಾಂಡವು ಬಸುರೊಳಗಿದ್ದ ಉ- ಬ್ಬಸಿಗೆ ಬಾಯ ತೆರೆದಿಯೊ 1 ಮಡದೀಯ ರೂಪಕ್ಕೆ ಮರುಳಾಗಿ ಅದರಿಂದ ಬಿಡದೆ ಬಾಯ ತೆರೆದಿಯಾ ದೃಢದಿ ಪ್ರಹ್ಲಾದನ ಒಡೆಯ ರಕ್ಷಿಸೊ ನುಡಿಗೆ ಬಾಯ ತೆರೆದಿಯೊ 2 ಗುರು ಸತ್ಯಬೋಧರಾಯರ ನಿತ್ಯಭಜನೆಗೆ ಬರಿದೆ ಬಾಯ ತೆರೆದಿಯೊ ವರ ಕದರುಂಡಲಗಿ ಹನುಮಯ್ಯನೊಡೆಯನೆ ಕರವ ಮುಗಿವೆ ಕರುಣಿಸೊ 3
--------------
ಕದರುಂಡಲಗಿ ಹನುಮಯ್ಯ
ಬಾರಕ್ಕಾ ನಾವಿಬ್ಬರಾಡುವಾ ಯೋಗ ಸಾಧನವೆಂಬುದು ಮಾಡುವಾ ತಾಮಸ ತನುಗುಣಗಳ ಬಿಟ್ಟು ಸುಜ್ಞಾನ ಕ್ಷೀರ ಸಾಗರದೊಲಗಾಡುವಾ ಪ ಕಳೆಗೂಡಿ ಒಳನೋಟ ನೋಡುವಾ ಅಲ್ಲಿ ಒಳಸಭೆ ಪ್ರಭೆಯೊಳಗಾಡುವಾ ಥಳಥಳಿಸುವ ಮೆರೆವ ಚಿದಾತ್ಮನ ಬೆಳಕಿನೊಳ್ ಬೆಳಕಾಗಿ ಪರವಶವಾಗುವಾ 1 ಅಂಬಾ ಚಂದನ ಗಂಧಿಯೇ ಶಾರ ದಾಂಬಾ ಸುಪ್ರದವೇಣಿಯೇ ಶಂಭು ಸದ್ಗುರು ಎನ್ನೊಳು ಕಡೆನೋಡೆ ಕಂಬುಕಂಠಿನಿ ಚಲ್ವ ಕಮಲದಳಾಕ್ಷಿ 2 ಎಂಟೆರಡು ಕದಗಳ ಕಟ್ಟುವಾ ಅಲ್ಲಿ ಬಂಟರ ತಡೆಗಳ ಅಟ್ಟುವಾ ಮಂಟಪವೆಂಬುದು ಮಹಾಲಿಂಗನದೆಡೆ ಅಂತರಂಗದ ಕಾಂತೆಗಾಡುವಾ 3 ಮಂದರ ಗಿರಿಯಂತೆ ಅಲ್ಲಿ ಭೋರೈಸುವ ಘಂಟಾ ಧ್ವನಿಯಂತೆ ಸಾರ ಅಮೃತವುಂಡು ಕ್ಷೀರಸಾಗರಮಿಂದು ತೋರುವ ಗುರು ವಿಮಲಾನಂದಾ 4
--------------
ಭಟಕಳ ಅಪ್ಪಯ್ಯ
ಬಾರನೇಕೆ ಬಾಲಕೃಷ್ಣನೂ | ಎನ್ನ ಮನಕೆಪೋರ ಶೀಲ ಗೋಪ ಕೃಷ್ಣನೂ ಪ ಸಾರಿ ಸಾರಿ ಕೂಗಿದಾರೂ | ದೂರವಿರುವನಂತೆ ನಟಸಿತೋರಗೊಡನು ತನ್ನ ರೂಪ | ಅರಿಗ್ಹೋಗಿ ಪೇಳಲಮ್ಮ ಅ.ಪ. ಗೋಪಿ ಕೊಟ್ಟ | ಕಲ್ಲಿ ಬುತ್ತಿಯೊಡನೆ ಪೋಗಿಹಳ್ಳ ಕೊಳ್ಳದಲ್ಲಿ ಕುಳಿತು | ಮೆಲ್ಲುತಿರುವನೇನೊ ಅಮ್ಮ 1 ಗೋಪಿ ಜನರ | ಕಂಡು ಕಾಣಧಾಂಗೆ ಇಹನೆ 2 ತಂದೆ ಮುದ್ದು ಮೋಹನ ಗುರುಗಳೂ | ನಿನ್ನ ರೂಪತಂದು ತೋರಿ ಮನದಿ ನಿಲ್ಲಲೂ ||ಅಂದು ಕೇಳಿಕೊಂಡು ಇಹರು | ಅಂದ ವಚನ ಮರೆತೆಯೇನೋತಂದೆ ಗುರು ಗೋವಿಂದ ವಿಠಲ | ಇಂದೆ ನೀನೆ ಮನಕೆ ಪೊಳೆಯೊ 3
--------------
ಗುರುಗೋವಿಂದವಿಠಲರು
ಬಾರನ್ಯಾತಕ ಯದು ವೀರಾ|ಪದಾಂಬು ಜವದೋರಾ| ದಯರಸವಾಬೀರಾ| ಸಾರಿದವರಿಗಿನ್ನುದರಾವಾಗಿರಾ ಧೀರಾ ಪ ಮಂದ ಮುಗುದೆಯು ನಾನೆಂದು ಅರಿತು ಮೊದಲಿಂದು| ಕೈಯ್ಯ ಪಿಡಿದು ಬಂದು| ಕುಂದಾಲಿಸುವ ದಯಸಿಂಧು|ಉಚಿತ ವೇನಿಂದು 1 ಎನ್ನ ಬಿನ್ನಹ ಹೇಳಲೇ ಜಾಣೇ| ತಾಪಕೌಷಧಕಾಣೆ| ಕ್ಷಣಯುಗವ ನಿನ್ನಾಣೆ| ಮನ್ನಿಸಿ ತಂದು ತೋರಿನ್ನೆನೆ ಬಾರೇ ಪ್ರವೀಣೇ 2 ಶರಣ ಹೊಕ್ಕವರೆಂದು ಮರೆಯಾ|ನೆಂಬ ಮಾತಿದು ಖರೆಯಾ ಬಂದು ಕೂಡಿದ ತ್ವರಿಯಾ| ಗುರು ಮಹಿಪತಿ ಸ್ವಾಮಿಚರಿಯಾ ಬೊಮ್ಮತಾನರಿಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರಮ್ಮ ಭಾಗ್ಯನಿಧಿಯೆ | ಸಿರಿಯೆ ಪ ಬಾರಮ್ಮ ನಿನ್ನ ಪಾದಾರವಿಂದ ತೋರಲು ಅ.ಪ ಸರಸಿಜಾಕ್ಷನ ವಕ್ಷ ಮಂದಿರೆ ಇಂದಿರೆ ಸರಸಿಮುದವೆರಸಿ ನಿನ್ನರಸನೊಡನೆನೀ 1 ಸೀತಾರುಕ್ಮಿಣ್ಯಾದ್ಯವತಾರಿಣಿ ಬುಧ- ವ್ರಾತ ಮನಃ ಪದ್ಮ ವಿಹಾರಿಣಿ ಚೇತೋದ್ಭವ ಜನನೀ ಶ್ರೀತರುಣೀಮಣಿ 2 ಬ್ರಹ್ಮರುದ್ರೇಂದ್ರಾದಿ ಸುರಸೇವಿತೆ ಬ್ರಹ್ಮಾಣಿ ಗಿರಿಜಾ ಶಚೀವಂದಿತೆ ಪರ- ಬ್ರಹ್ಮ ಗುರುರಾಮವಿಠಲನ ದಯಿತೆ 3
--------------
ಗುರುರಾಮವಿಠಲ
ಬಾರಮ್ಮಾ ಶ್ರೀಗುರು ಜನನೀ | ಘನಕರುಣೀ | ಬಾರ ನಿಜ ಸುಖ ದಾನೀ ಪ ಭವದಾಟವ ಕೇರಿಯೊಳು ಹೋಗಿ | ಮನಮರವಾಗಿ | ಪರಿ ಬಲು ಪಾಡಿದೆ | ಬಂದೇ ತವಕದಿ ಓಡಿ 1 ಬೋಧದ ಸ್ತನಪಾನ ಮಾಡಿಸೇ | ಸುಧೆ ಉಣಿಸೇ | ತಾಪ | ಬಾಧೆಯ ಬಿಡಿಸೇ | ನಿನ್ನುದರೊಳಗಿರಿಸೇ 2 ಭಕುತಿ ತೊಟ್ಟಿಲವನ್ನು ತೂಗಿಸೀ | ಯನ್ನ ಕೂಡಿಸೀ | ಪಾಡುತಖಿಲೇಶ ನಾಮಾ | ಬಾಲಕಗ ಮಹಿಪಮ್ಮ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರಯ್ಯ ಗುರು ಸ್ವಾಮಿ ಶ್ರೀಸದ್ಗುರು ಎನ್ನ ಮನೋಮಂದಿರಕೆ ಕರುಣಾನಂದದ ಸುಖ ಬೀರುತ ಬಾರೈ ಆತ್ಮಾನುಭವಕೆ ಧ್ರುವ ಕಣ್ಣು ಹಾರುತಿದೆÀ ಬಲದೆನ್ನ ಖೂನದೋರವ್ಹಾಂಗಿಂದು ಚೆನ್ನಾಗ್ಹೊಳಿಯುತಿ ಸುಚಿಹ್ನ ನೀನೊಲಿಯವ್ಹಾಂಗೆ ಬಂದು ಎನ್ನೋಳೀವ್ಹಾಂಗ ಸನಾತನ ಪಾಲಿಸಿದೆನಗೊಂದು ಧನ್ಯಗೈಸುವ ದಯಾಳು ನೀನಹುದೊ ಕೃಪಾಸಿಂಧು 1 ಏನೊಂದರಿಯೆ ಒಂದು ಸಾಧನ ಧ್ಯಾನಮೌನ ಹ್ಯಾಗೆಂದು ಖೂನಬಲ್ಲೆನೊ ನಿಮ್ಮ ಬಿರುದಿನ ದೀನನಾಥ ನೀ ಎಂದು ನ್ಯೂನಾರಿಸದೆನ್ನೊಳಗಿನ ನೀನೆ ಅನಾಥಬಂಧು ಎನಗುಳ್ಳ ಸ್ವಾಮಿ ಸದೋದಿತ ನೀನಹುದೊ ಎಂದೆಂದು 2 ತಾಯಿ ಶಿಶುಸ್ತನಪಾನಕೆ ಬಾಯಿಯೊಳಗಿಡುವ್ಹಾಂಗ ಸಾಯಾಸವಿಲ್ಲದೀಪರಿ ದಯಮಾಡುವದೆನಗೆ ಶ್ರೇಯಸುಖದಾಯಕೊಬ್ಬನು ನೀನೆ ಭಾನುಕೋಟಿ ಎನಗೆ ಅನುದಿನ ದೀನಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಗುರುದೇವರಾಯ ಶ್ರೀ ಹರಿಯೆ ನಮ್ಮಯ್ಯ ಗುರು ಭಕ್ತಜನ ಪ್ರಿಯ ಧ್ರುವ ನೀರೊಳು ಪೂಕ್ಕು ನಿಗಮನ ತಂದಿ ಬಾರಯ್ಯ ಧರಿಯ ಬೆನ್ನಿಲಿ ಪೊತ್ತು ನಿಂದಿ ನೀ ಬಾರಯ್ಯ ಧಾರುಣಿಯ ಗೆದ್ದು ಹಿರಣ್ಯಕನ ಕೊಂದಿ ಬಾರಯ್ಯ ಎಂದೆನಯ್ಯ ಗುರುತಂದೆಬಾರಯ್ಯ 1 ಮೂರು ಪಾದವನಳಿದುಕೊಂಡಿ ನೀ ಬಾರಯ್ಯ ಶಿರಗಳನೆ ಚೆಂಡಾಡಿ ಸಿರಿ ತಂದಿ ಬಾರಯ್ಯ ಗಿರಿಯೆನೆತ್ತಿ ನಿಂದಿ ಬಾರಯ್ಯ ಶ್ರೀ ಹರಿ ಮುಕುಂದಯ್ಯ ಗೋವಿಂದ ಬಾರಯ್ಯ 2 ಬರಿಯ ಬೆತ್ತಲೆ ಆಗಿ ವ್ರತವಳಿದಿ ಬಾರಯ್ಯ ಏರಿ ಕುದುರಿಯನೆ ರಾವುತನಾದಿ ಬಾರಯ್ಯ ಪರಮಭಕ್ತರನು ಹೊರಿಯಲಿ ಬಂದಿ ಬಾರಯ್ಯ ಪರಿಪರಿ ರೂಪವಾದಯ್ಯ ತರಳ ಮಹಿಪತಿ ಪ್ರಾಣದೊಡೆಯ ಬಾರಯ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರಯ್ಯ ಬಾ ಗುರುವೆ ಪರಬ್ರಹ್ಮದರುವೆ ಪ ಮೂರ್ತಿ ಪ್ರಭುವೆ ಅ.ಪ. ಸುರನದಿ ಉರಗ ಕಂಕಣ ಕರಕಪಾಲ ಪಿಡಿವೆ | ಹರ ಹರ ಎಂಬ ಭಕ್ತರಿಗೆ ವರವೆ || ಬಾರಯ್ಯ 1 ತರಣಿ ಸೆಳೆದ ವಸನ ಮಿಂಚಿನ ವರ್ಣ |ಶರಣು ಮಾಡುವೆ ನಿಮ್ಮ ಎರಡೂ ಚರಣ || ಬಾರಯ್ಯ 2 ಧಾಮ ಮಾಡಿದಿ ನಿಮ್ಮ ಭೃಂಗಾವಳೀ ಗ್ರಾಮಾ | ಭೀಮಾಶಂಕರಗೊಲಿದ ಸದ್ಗುರು ಆತ್ಮಾ || ಬಾರಯ್ಯ 3ಚಿ
--------------
ಭೀಮಾಶಂಕರ
ಬಾರಯ್ಯ ಬಾ ಬಾ ಬುಧಜನಗೇಯಾ | ಹೇ ಗುರರಾಯಾಸಾರಿ ಬರುವ ಭಕುತರೊಡೆಯ | ಕಾಯಯ್ಯ ಜೀಯಾ ಪ ವಾರಿಜನಾಭನ ವಾರಿಧಿಮಥನನವೈರದಿ ಭಜಿಸಿದ ಪುರಟ ಕಶ್ಯಪನ |ವರ ಉದರೋದ್ಭವ ಹರಿ ಪ್ರಿಯ ಭಕುತನೆಶರಣರ ಪೊರೆಯಲು ತ್ವರ್ಯದಿ ಬಾರೋ ಅ.ಪ. ದಿತಿಸುತ ದೊರೆಯೇ | ಬಾಹ್ಲೀಕ ದೊರೆಯೇ |ಚತುರ ಚಂದ್ರಿಕೆ ಗುರು ಮಂತ್ರಾಲಯ ಗುರುವೇ | ದೊರೆಬಲು ಮೊರೆಯೇ |ವ್ಯಥೆಯಾಕೆನ್ನುತ | ಹಸ್ತವ ಚಾಚುತಹುತ ವಹ ನೊಳು ಬಲಾ | ಜತನಾಗಿರಿಸಿಹ ರತುನವ ಹಾರವ | ಪ್ರೀತಿಲಿ ಕೊಡುತಅತಿಶಯ ತೋರಿದ | ಯತಿ ರಾಘವೇಂದ್ರ 1 ಸುಧೀಂದ್ರರ ಕರಜ ಮಂತ್ರಾಲಯ ನಿಲಯ | ಬಲು ಮಂತ್ರಗಳೊಡೆಯಾ |ಬಧಿರ ಮೂಕರ ಅಂಧರ ಹೊರೆಯಾ | ಪರಿಹರಿಸುವ ದೊರೆಯಾ |ಮಧ್ವಾಂತರ್ಗತ ಮಧು ಕೈಟ ಭಾರಿಯಸಿದ್ಧಾಂತದ ಸವಿ ಹೃದ್ಗತ ಮಾಡಿದ |ವಿದ್ವನ್ಮಣಿಗಳ ಸದ್ವøಂದದ ಖಣಿಸದ್ವಿದ್ಯದ ಸವಿ ಮೋದದಿ ಉಣಿಸಲು 2 ಮನ್ರೋವಿನ ಮನ ತಿಳಿಯುತಲಿನ್ನೂ | ಮುನಿವರ ತಾನೂ |ಸಾನುರಾಗದಿ ತನುವ ತೋರಿದನೂ | ಘನ ಕರುಣಿಯು ತಾನೂ |ಜ್ಞಾನಿಗಮ್ಯ ಗುರುಗೋವಿಂದ ವಿಠಲನಧ್ಯಾನಿಸೆ ಪೊಗುತಲಿ ವೃಂದಾವನವ |ಆನತ ಜನ ಮನದಿಷ್ಟವ ಸಲಿಸುತಮೌನಿವರೇಣ್ಯನೆ ತುಂಗೆಯ ತೀರಗ 3
--------------
ಗುರುಗೋವಿಂದವಿಠಲರು
ಬಾರಯ್ಯ ಬಾರಯ್ಯ ಬಾರೊ ಶ್ರೀ ಹರಿಯೆ ಬಾರಯ್ಯ ಗುರು ಶಿರೋಮಣಿಯೆ 1 ಮಚ್ಛನಹುದು ಗುರು ಸಚ್ಚಿದಾನಂದನೆ ಅಚ್ಯುತಾನಂತ ನೀ ಬಾರಯ್ಯ 2 ಕೂರ್ಮನಹುದು ಗುರು ಧರ್ಮ ಸಹಕಾರನೆ ನಿರ್ಮಳಾನಂದ ನೀ ಬಾರಯ್ಯ 3 ವರಾಹನಹುದು ಗುರು ವಾರಿಜನೇತ್ರನೆ ವರಮುನಿಹೃದಯ ನೀ ಬಾರಯ್ಯ 4 ನರಸಿಂಹನಹುದು ಗುರು ನರಹರಿಯೆ ನಾರಾಯಣನೆ ನೀನು ಬಾರಯ್ಯ 5 ವಾಮನಹುದು ನೀ ಬ್ರಾಹ್ಮಣೋತ್ತಮನೆ ಬ್ರಹ್ಮಾನಂದ ಶ್ರೀ ಗುರು ಬಾರಯ್ಯ 6 ಭಾರ್ಗವರಾಮನಹುದು ಪರಾಕ್ರಮನೆ ಪರಮಪುರಷ ಗುರು ಬಾರಯ್ಯ 7 ರಾಮನಹುದು ಗುರು ಕಾಮ ನೀ ಪೂರಿತ ಸಾಮಗಾಯನ ಪ್ರಿಯ ಬಾರಯ್ಯ 8 ಕೃಷ್ಣನಹುದೊ ಗುರುವಿಷ್ಣು ಪರಮಾತ್ಮನೆ ದೃಷ್ಟ ಮೂರುತಿ ನೀನು ಬಾರಯ್ಯ 9 ಬೌದ್ಧನಹುದು ಗುರು ವೇದಾಂತಮಹಿಮನೆ ಸಿದ್ಧಶಿಖಾಮಣಿ ಬಾರಯ್ಯ 10 ಕಲಿಕ್ಯವತಾರನಹುದು ಮೂಢನಾತ್ಮನೆ ಬಾಲಮುಕಂದ ನೀ ಬಾರಯ್ಯ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು