ಕೇಳು ಇದು ನಿಜಸಾಧನಾ
ಮಾಡು ಕೈವಲ್ಯಪ್ರಾಪ್ತಿಯಿದೋ
ಮಾಡು ನೀ ಮಾಡು ಆನಂದಪ್ರಾಪ್ತಿಯಿದೋ ಪ
ಭಕ್ತಿಭಾವದಿ ಭಜಿಸುತ ನಿನ್ನ
ಚಿತ್ತವನು ಪರಮಾತ್ಮನೊಳಿನ್ನು ನಿಜಾತ್ಮದೊಳಿನ್ನು
ನಲೆಸುತಲಿ ಭವಬಂಧವಾ ನೀಗಿ
ಆನಂದಪ್ರಾಪ್ತಿಗಿದೊ1
ವಿಷಯಚಿಂತನೆ ಮನದೊಳಗಿಹುದೇ
ನಾನು ನನ್ನದಿದೆಂಬುದು ಬೆಳೆಯೆ ಇದೇ ಕೇಳ್ ಮಾಯೆ
ನಾಶವಹುದೀ ಮಾಯೆ ನೀ ನೋಡು ಈ ಭಕ್ತಿಯೋಗದಲಿ
ಮಾಡು ನೀ ಮಾಡು ಸನ್ಮಾರ್ಗಸಾಧನೆಯಾ 2
ಭಕ್ತಿಯೊಂದೇ ಸುಲಭದ ಸಾಧನೆ ಚಿತ್ತಶುದ್ಧಿಯನೀವುದು ನಿಜದಿ
ಮನುಜಗಿದು ಜಗದಿ ತತ್ವದಿ ತಿಳಿವಾ ಮಾರ್ಗವತೋರಿ
ಕೈವಲ್ಯವೀವುದಿದೋ ಕೇಳು ನೀ ಕೇಳು
ಶ್ರೀ ಶಂಕರನ ಬೋಧಾ 3