ಒಟ್ಟು 672 ಕಡೆಗಳಲ್ಲಿ , 80 ದಾಸರು , 354 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಮ ತನ್ನ ಪುರದಿ ಸಾರಿದನು ಎಮ್ಮ ಕಮಲನಾಭನ ದಾಸರ ಮುಟ್ಟದಿರಿಯೆಂದು ಪ. ಭುಜದಲೊತ್ತಿದ ಶಂಖಚಕ್ರಾಂಕಿತವನ್ನು ನಿಜ ದ್ವಾದಶನಾಮ ಧರಿಸಿಪ್ಪರಾ ತ್ರಿಜಗವಂದಿತ ತುಲಸಿಯ ಮಾಲೆ ಹಾಕಿದ ಸುಜನರಂಗಣವ ಪೊಗದೆ ಬನ್ನಿರೆಂದು 1 ಗೋಪಿಚಂದನ ಬಿಟ್ಟು ದೇಹಕ್ಕೆ ಭಸ್ಮವ ಲೇಪಿಸಿ ಹರಿಹರರೊಂದೆಂಬ ಪಾಪಿಗಾಳೆಳತಂದು ಕಣ್ಣು ಕಳಚಿ ಅಂಧ ತಾಮಸಿನೊಳಗ್ಹಾಕಿ ಕಲ್ಲು ದಬ್ಬಿರೊ ಎಂದು 2 ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ ಊಳಿಗವನು ಮಾಳ್ಪ ಹರಿದಾಸರ ಕೇಳುತಲೊಮ್ಮೆ ಕರಗಳ ಮುಗಿದು ನ - ಮ್ಮಾಳುಗಳೆನುತ ಪೇಳದೆ ಬನ್ನಿರೆಂದು 3 ಗುರುಮುದ್ರೆಯವನು ತಾನೆಂದು ಪ್ರಾಣಿಗಳ ಮಂ- ದಿರಕೆ ಪೋಗಿ ಪೋಗಿ ನಿರ್ಬಂಧಿಸಿ ಬರಿದೆ ಬೈದು ಬಳಲಿಸುವ ಪಾಪಿಗಳ ಕೊರೆದು ಕುಟ್ಟಿತಂದು ಮುರಿದು ಕೊಲ್ಲಿರೊ ಎಂದು 4 ಅನ್ಯದೈವ ಅನ್ಯಮಂತ್ರ ತಂತ್ರವ ಬಿಟ್ಟು ಪನ್ನಗಶಯನನೆ ಗತಿಯೆನುತ ಉನ್ನತ ಹರಿದಿನ ವ್ರತವನಾಚರಿಪ ಪ್ರ- ಸನ್ನರ ಗುಣವ ಕೆಣಕದೆ ಬನ್ನಿರೆಂದು 5 ಚರ್ಮಕ್ಕೆ ಸಿಡಿ ಊರಿ ಬೇವಿನುಡುಗೆವುಟ್ಟು ಚಿಮ್ಮುತ ಚೀರುತ ಬೊಬ್ಬೆಗಳಿಡುತ ಕರ್ಮ ಕೂಗುರಿಯಾಗಿ ಪ್ರಾಣಹಿಂಸೆಯ ಮಾಳ್ಪ ಬ್ರಹ್ಮೇತಿಕೋರನ ಬ್ಯಾಗನೆ ಎಳತನ್ನಿ 6 ಕೇಶವ ಹರಿ ಅಚಲಾನಂದವಿಠಲನ್ನ ಶೇಷಗಿರಿಯ ತಿರುಮಲೇಶನ ದಾಸರ ದಾಸರ ದಾಸನೆಂದೆನಿಸುವ ದಾಸರ ಗುಣವ ಕೆಣಕದೆ ಬನ್ನಿರಿ ಎಂದು 7
--------------
ಅಚಲಾನಂದದಾಸ
ಯಲ್ಲರಮ್ಮನಲ್ಲವೆ ಸಿರಿದೇವಿ | ಎಲ್ಲರಮ್ಮನಲ್ಲವೆ || ಬಲ್ಲಿದರಾಗಿಪ್ಪ ಬೊಮ್ಮಾದಿಗಳಿಗೆ ಪ ಆಲದೆಲೆಯ ಮೇಲೆ ತನ್ನ ಪುರುಷನಂದು | ಕಾಲವರಿತು ಪವಡಿಸಿರಲು || ವಾಲಗವನು ಮಾಡಿ ಕೊಂಡಾಡಿ ಜೀವರ | ಮೂಲ ಕರ್ಮಂಗಳು ತೀರುವಂತೆ ಮಾಡಿದ 1 ಆಮೋಘ ವೀರ್ಯ ಗರ್ಭದಿ ಧರಿಸಿ ತಾ | ಬೊಮ್ಮಾಂಡವನೆ ಪೆತ್ತ ಲೋಕಾಮಾತಾ || ಸುಮನಸರಿಗೆ ಕಡೆಗಣ್ಣ ನೋಟದಿ | ಆ ಮಹಾ ಪದವಿಯ ಕೊಡುವ ಭಾಗ್ಯವಂತೆ 2 ಎರಡೊಂದು ಗುಣದಲ್ಲಿ ಪ್ರವಿಷ್ಠಳಾಗಿ ಜೀ ವರ ಯೋಗ್ಯತೆಯಂತೆ ಪಾಲಿಸುತಿಪ್ಪಳು || ನಿತ್ಯ 3
--------------
ವಿಜಯದಾಸ
ಯಾಕೆ ಬಾರನೇ ರಂಗಯ್ಯ ಯಾಕೆ ಬಾರನೇ | ಲೋಕವೀರೇಳು ವ್ಯಾಪಕ ಸುಖವವಿರಲು ಮನೆಗೆ ಧ್ರುವ ಸ್ಮರನ ಬಾಣದ ಮೊನಿಗೆ | ಗುರಿಯಮಾಡಿ ತಾಯೆನೆಗೆ | ಸಾರುವರೇ ಎನ್ನಗಲಿ ತರಳೆಯಂದರುವುತಲಿ 1 ಕಡೆಗೆ ಕರುಣಾಳು ನಮ್ಮ ವಡಿಯಾನೊಳೂ ತಪ್ಪಿಲ್ಲಮ್ಮಾ | ಪೊಡವಿಲೆ ಪೆಣ್ಣೊಡಲೆ ವಿಡಿಯಬಾರದು ಬಾಲೆ 2 ಎನ್ನ ಮನಾ ಎನೊಲ್ಲದು ಕಣ್ಣಿಗೆ ನಿದ್ರೆಬಾರದು | ಸನ್ನುತ ಮಹಿಪತಿ ಪ್ರೀಯಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಾರೆ ಹುಡುಗಿ ನೀನು ಬಂದವಳಿಲ್ಲಿಯಾರೆ ಹುಡುಗಿ ನೀನು ಪ ಯಾರೆ ಹುಡುಗಿ ನೀನು ಮೂರು ಬಾರಿಲಿ ಬಂದಿನೀರಜಾಂಬಕ ಕರವೀರದವಳೆ ನೀ 1 ಮಾನಿನಿ ಮಣಿಯೆ 2 ಏನು ಪೇಳಿದನಮ್ಮಾ ಅಚ್ಯುತಪ್ರಾಣದೇವನು ನಿಮ್ಮಾಏನು ಸೂಚಿಸಲೆಂದು ನೀನು ಪೇಳಿದರೀಗನಾನು ಶೋಧಿಸುವೆನೆ ದೀನರುದ್ಧಾರಳೇ 3 ಇಂದುಮುಖಿಯೆ ನೀನು ಸುಮ್ಮನೆನಿಂದ ಕಾರಣವೇನುಇಂದಿರೇಶನ ಸಖಿ ಒಂದು ಮಾತಾಡದೆ ನಿನ-ಗೊಂದಿಸುವ ಕರದಿಂದ ಮಹಾಸಕ 4
--------------
ಇಂದಿರೇಶರು
ಯೆಂದಿಗೆ ಬರುತೀಯೆ ಸುಂದರ ಭಾರತಿ ಮಂದರೋದ್ಧರನ ತೋರಿಸೆಂದೆ ನಾ ಬಂದೆ ಪ. ಅಂಧಕಾರಣ್ಯದೊಳು ನಿಂದು ತತ್ತರಿಸುವೆನು ತಾಯೆ ಕುಂದುಗಳೆಣಿಸಾದಿರು ಆನಂದ ತೋರು ಅ.ಪ. ಹರಿಗೆ ಕಿರಿಯ ಸೊಸಿ ವಾತನಸತಿಯು ನೀನು ಪ್ರಖ್ಯಾತಿವಂತಳೇ ಏಕಾಂತ ಭಕ್ತಳೇ ತ್ರಿವಿಧ ಜೀವರೊಳಗೆ ನಿಂತು ತ್ರೀವಿಧ ಪ್ರೇರಣೆ ಮಾಡುವಿ ದೇನಿ ನಿನ್ನಾ ಮಹಿಮೆಗೆ ನಮೋ ಎಂಬೆ ಪುತ್ಥಳಿಯಾ ಬೊಂಬೆ 1 ಮಂದರೋದ್ಧರನ ಪಾದಸೇವಕಳೇ ನಿನಗೀಡೆ ನಲಿದಾಡೆ ಒಂದನಾದರೂ ಮಾತನಾಡೆ ವರಗಳ ನೀಡೆ ದಯಮಾಡಿ ನೋಡೆ ತವಪಾದವ ಕೊಡೆ ಕರವ ಜೋಡಿಸಿ ಬೇಡುವೆನಿಂದು ನಾ ಬಂದು 2 ಗರುಡ, ಶೇಷ ರುದ್ರಾದಿಗಳೊಡೆಯಳೇ ನೀನು ನಿನ್ನಡಿಗಳಿಗೆರಗುವೆ ನಾನು ತಡಮಾಡ ಬ್ಯಾಡಮ್ಮಾ ನಡೆದು ಬಾರಮ್ಮ ಭವ ಮಡುವಿನೊಳಗಿರುವೆನು ತೋರಿಸೋ ದಯಪಾಲಿಸೋ 3
--------------
ಕಳಸದ ಸುಂದರಮ್ಮ
ರಂಗನಟ್ಟುಳಿ ಕೇಳಿ ಗೋಪೆಮ್ಮಾ ರಸಗನಾಹಲ ವಂಗದಿಂದ ಕಾಡುವನಮ್ಮಾ ಬಾಲನೇ ಗೊಪಾಲನೇ ಪ ಹಾಲು ಮೊಸರು ಬೆಣ್ಣೆ ಮಾರಲು ಬಂದರಾ ಚಿಕ್ಕ ಬಾಲೆರ ನೋಡುತ ಮೊಗಚಂದಿರಾ ಅವರಾ ಶಾಲೆಯ ಸೆಳೆದು ಸುಮ್ಮನೇ ನಿಂದಿರಾ ಬಟ್ಟ ಮೊಲೆಯನು ಚಂಡು ಕುಡೆಂಬಾ ಮಂದರಾಧರ ಸುಂದರಾ 1 ನಾರೇರಾ ಸೀರೆಯಾ ಕದ್ದಾ ಪುಂಡನೇ ಮರ ನೇಚಾಳಿಸಿ ನುಡಿದ ಪ್ರಚಂಡನೇ ಕೈಯ್ಯ ದೋರಿಯರಡು ಎಂದು ಲಜ್ಜೆಯ ಕೊಂಡನೇ ಬಲು ಭಂಡನೇ 2 ಕಂಸನರಮನೆ ಬಲಗುಂದಿತೇ ನಂದ ನಂಶಕ ವಡೆತನ ಬಂದಿತೇ ಮುರ ದುರುಳ ತನವು ಸಂದಿತೇ ಇನ್ನು ಸಂಶಯಾತಕ ಮಹಿಪತಿ ಸುತ ವಂದಿತೇ ಮನಕ ಬಂದಿತೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಘುಪತಿಯಾ ತೋರಮ್ಮಾ | ರಾಜೀವಾಂಬರೆ ಬಾರಮ್ಮಾ ಪ ಭಕುತರಾ - ಭೀಷ್ಟೇಯನು | ಪೂರಿಸುವನಾ ಅನುದಿನ ಕಾವನಾ | ನಿನ್ನಯ ಜೀವನಾ ಅ.ಪ ಸರಸಾ ಕೋಕಿಲಾಲಾಪೆ | ಸಕಲಾ ಮಂಗಳ ರೂಪೆ || ಸದ್ಗುಣ ಧಾಮನಾ | ದಶರಥ ರಾಮನಾ 1 ವಸುಧಾಕಾಯ ಸಂಭೂತೆ | ವರದೇವೇದ ವಿಖ್ಯಾತೆ || ಅಸಮಧನು ವನೆತ್ತ್ಯಭಯವಿತ್ತನಾ | ನಿನಗೊಲಿದಾತನಾ | ರಘುಕುಲಜಾತನಾ 2 ಶರಣೆಂಬೆ ಮಹಾಮಾಯೆ ಸಲಹಬೇಕೆನ್ನತಾಯೆ ಗುರು ಮಹಿಪತಿಸ್ವಾಮಿ | ಜಗದಯ್ಯನಾಪವನಜ ಪ್ರಿಯನಾ ಸುರಮುನಿಧೇಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮಾ ನಿನ್ನಯ ದಿವ್ಯ ನಾಮಾ ನೆನೆವೆನು ರಾಮಾ ನಿನ್ನಯ ದಿವ್ಯ ನಾಮಾ ಪ್ರೇಮವ ಕೊಟ್ಟನ್ನಾ ನೇಮದೊಳಿರಿಸೊ ನೀ ಕರುಣದಿ ಪ ಚಿತ್ತ ಶುದ್ಧವ ಮಾಡಿ ಮತ್ತೆ ನಿನ್ನಯ ಪಾದ ನಿತ್ಯದಿ ನೆನೆವಂತೆ ಭಕ್ತಿಯೊಳಿರಿಸೊ ನೀ ಎನ್ನನು 1 ದಶರಥನುದರದಿ ಶಿಶುವಾಗಿ ಜನಿಸಿದೆ ಹೊಸ ಆಭರಣವಿಟ್ಟು ಕುಶಲಮಾತೆಯನು ನೋಡುವ 2 ಛಂದದಿಂದಲಿ ಆನಂದದೊಳಿಹ ರಾಮಾ ಚಂದ್ರನ ಮೊಗ ಅತಿ ಸುಂದರವಾಗಿರುವವನೇ 3 ಬಿಲ್ಲ ಬಾಣವಪಿಡಿದು ಎಲ್ಲಾ ದೈತ್ಯರ ಕೊಂದು ಅಲ್ಲೇ ಕೌಶಿಕಯಾಗ ಎಲ್ಲ ಸಲಹಿದೆ ಧೀರನೇ 4 ವಿಥುಳಾಪುರದಿ ಬಂದು ಅತುಳ ಧನುವ ಮುರಿದು ಸತಿ ಸೀತಾ ಸಹಗೂಡಿ ಪಿತನಾ ಪಟ್ಟಣವನು ಸೇರಿದೆ 5 ಮಾತೆಯ ವರ ಕೇಳಿ ನೀತಿಯಿಂದಲಿ ಅನು ಜಾತನ ಒಡಗೂಡಿ ಖ್ಯಾತಿಯಿಂದಲಿ ಪೋದಂತಹ 6 ಸರಯು ತೀರದಿ ಬಂದು ಪುರದ ಜನರ ಬಿಟ್ಟು ಭರದಿ ನಾವೆಯನೇರಿ ತ್ವರಿತದಿಂ ದಾಟಿ ನೀ ಪೋದೆ 7 ಭಕ್ತಿಯಿಂದಲಿ ಆ ಸಕ್ತ ಭರತನ ಕಂಡು ಯುಕ್ತಿಯಿಂದಲಿ ತೇಜೋಯುಕ್ತಪಾದುಕವನು ಕೊಟ್ಟೆನೀ 8 ಪುಸಿಯತಿಯಾಗಿ ಶೀತೆಯ ಅಸುರ ಕೊಂಡೊಯ್ದನೆಂದು ವ್ಯಸನದಿಂದಲಿ ಪೋಗಿ ಪಕ್ಷಿಯುದ್ಧರಿಸಿದೆ ಘಮ್ಮನೆ 9 ಶಾಂತಮೂರುತಿ ಹನುಮಂತರೆಲ್ಲರು ಕೂಡಿ ಅಂತರದಲಿ ಸೇತು ನಿಂತು ನೋಡುವೆ ನೀ ಛಂದದಿ 10 ಶರಣ ಬಂದ್ವಿಭೀಷಣನ ಕರುಣದಿಂದಲಿ ಕಾಯ್ದೆ ಸ್ಥಿರದಾಪಟ್ಟವಗಟ್ಟಿ ಹರುಷದೋಳ್ ನಿಲಿಸಿದೆ ಅವನನು 11 ವಾನರರೊಡಗೊಂಡು ಸೇನೆ ಸಹಿತಲೇ ದಶಾ ನನ ರಾವಣನಕೊಂದು ಮಾನಿನೀ ಸಹಿತನೀ ಬಂದಿಹೆ 12 ಪುಷ್ಪಕವನೆ ಏರಿ ಅಕಸ್ಮಾತದಲಿ ಬಂದು ಆಕ್ಷಣದಲಿ ಭರತ ರಕ್ಷಣ ಮಾಡಿದ ದೇವನೇ 13 ಪಟ್ಟಣದಲಿ ಮಾಹಾ ಪಟ್ಟವನೇರಿಸಿ ಶಿಷ್ಟ ಅಯೋಧ್ಯೆಯ ಪಟ್ಟಣವಾಳಿದೆ ರಾಮನೆ 14 ಬ್ರಹ್ಮಮೂರುತಿ ರಾಮಾಗಮನ ಚರಣದಿ ಸುಮ್ಮಾನದಲಿ ಶಾಂತಿ ತನ್ಮಯಗೊಳಿಸಾನಂದದಿ 15
--------------
ಶಾಂತಿಬಾಯಿ
ರುದ್ರದೇವರು ಶಿವನೆ ನಾ ನಿನ್ನ ಸೇವಕನಯ್ಯ ದುಮ್ಮಾನ ಬಿಡಿಸಯ್ಯ ಸುಜನ ಸಹಾಯ ಸಿರಿಧರನರಮಯ್ಯ ಪ ಭಾಗವತ ಶಾಸ್ತ್ರವನು ಅವನೀಶಗೆ ಪೇಳ್ದವ ನೀನಲ್ಲವೆ ಅ.ಪ. ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ ಸಾಂಬ ಸುರಪಾದ್ಯರ ಬಿಂಬ ವೈಕಲ್ಯಾಸ್ಪದವನು ಕಳೆದೊಮ್ಮೆಲೆ ವೈಕುಂಠಕೆ ಕರೆದೊಯ್ಯೊ ಕರಿಗೊರಳಾ 1 ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳ ಕಾವ ಸ್ತುತ್ಯಾದ್ರಿಜಾಪತಿ ಜತತೀವನದಾವ ದುರಿತಾಂಬುಧಿ ನಾವ ಕೃತ್ತಿವಾಸ ಉನ್ನತ್ಯವರಾಧಗ - ಳೆತ್ತಿಣಿಸದೆ ಕೃತಕೃತ್ಯನ ಮಾಡೈ 2 ಗಂಗಾಧರ ಷಣ್ಮುಖ ಗಣಪರ ತಾತ ತ್ರೈಲೋಕ್ಯಖ್ಯಾತ ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ ತುಂಗ ಮಹಿಮ ನಿಸ್ಸಂಗ ಹರಿಯದ್ವತೀ ಯಂಗ ಡಮರು ಶೂಲಂಗಳ ಧರಿಸಿಹ 3 ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ ಸಂಚಿಂತನ ಮಾಡುವ ಸಂತತ ನೇಮ ಶ್ರೀರಾಮನಾಮ ಪಂಚಶರಾರಿ ವಿರಿಂಚಿಕುವರ ನಿ - ಷ್ಕಿಂಚನರೊಡೆಯನ ಮಂಚಪದಾರ್ಹನೆ4 ಸ್ಪಟಿಕಾಭ ಕಪಾಲಿ ಕಾಮಿತಫಲದ ಫಲ್ಗುಣಸಖ ಶ್ರೀದ - ವಿಠಲಾಶ್ರಯವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ ಕುಟಿಲರಹಿತ ಧೂರ್ಜಟಿ ವೈಷ¨sಕಧ್ವಜ ನಿಟಿಲನಯನ ಸಂಕಟವÀ ನಿವಾರಿಸೊ 5
--------------
ಶ್ರೀದವಿಠಲರು
ಲೀಲೆಯಿಂ ಬಾ ಲೋಲಲೋಚನೆ ಕೋಲನಾಡುವ ಪ. ಶೀಲದಿಂದೆಮ್ಮಾಳ್ವ ಭೂಪಗೆ ಜಯವ ಪಾಡುವ ಅ.ಪ. ಮಂದಗಮನದಿಂದ ಬಾ ಅರವಿಂದ ಲೋಚನೆ ಮಂದಿಗಳಿಗಾನಂದ ಸಮಯಮಿಂದು ಪೊಸತೆನೆ 1 ಬಣ್ಣ ಬಣ್ಣ ಬೆಳೆಗಳಿಂ ಪೊಂಬಣ್ಣ ದುಡುಪಿನಿಂ ಕಣ್ಮನಂಗಳ ತಣ್ಪುಗೊಳಿಪಳ್ ಜನ್ಮಭೂಮಿತಾಂ 2 ನವನವೊತ್ಸವದಿರವ ಸೂಚಿಪ ಶರತ್ಸಮಾಗಮಂ [ತವ] ಮೆರೆವುದರರೆ ಶೇಷಶೈಲವರದನೊಲವಿನಿಂ3
--------------
ನಂಜನಗೂಡು ತಿರುಮಲಾಂಬಾ
ಲೋಕದವರ ತಳ್ಳಿ ಕಾಲಿಗೆಸುತ್ತಿದ ಬಳ್ಳಿ ಶೋಕಮಯಸಂಕೋಲೆ ಸಾಕು ಹರಿ ಕಡಿ ಕೀಲಿ ಪ ದಮ್ಮನಿದ್ದರೆ ಠೊಣ್ಯನೆಂಬುವರು ತೆಳ್ಳಗಿದ್ದರೆ ಬಡಕನೆಂಬುವರು ರಮ್ಯನುಡಿಯೆ ಬಾಯ್ಬಡಕನೆಂಬುವರು ಸುಮ್ಮನಿದ್ದರೆ ಗುಸುಕನೆಂಬುವರು 1 ಜಮ್ಮಾಸಿ ಉಂಡರೆ ಜೋಗಿಯೆಂಬುವರು ಕಮ್ಮಿ ಉಂಡರೆ ರೋಗಿಯೆಂಬುವರು ದಿಮ್ಮಾಕೆಂಬುವರು ಜಳಜಳವಿದ್ದರೆ ಸಮ್ಮತಬಡರು ಹೊಲಸುಕಂಡರೆ 2 ಮಾಡಿ ಉಂಡರೆ ನೋಡಿ ಸಹಿಸರು ಬೇಡಿ ಉಂಡರೆ ಹೇಡಿಯೆಂಬುವರು ಗಾಢಮುಕ್ತಿಪದ ಕೊಡುವ ಶ್ರೀರಾಮನ ಹಾಡಿ ಪಾಡಿದರೆ ನಿಂದೆ ಮಾಡುವರು3
--------------
ರಾಮದಾಸರು
ಲೋಕನೀತಿ ಅಚ್ಯುತಾನಂತ ಗೋವಿಂದ ಅಕ್ಷರೊತ್ತಮ ಸದಾನಂದ ಪ. ನಿಶ್ಚಲ ಭಕ್ತಿಯಿಂ ಮೆಚ್ಚಿಸು ಹರಿಯಂ ನಿಶ್ಚಯ ಪೋಪುದು ಭವಬಂಧ ಅ.ಪ. ಆಧಿವ್ಯಾಧಿಹರಣ ಕಾರಣ ಮಧು ಸೂದನ ಸತ್ಯ ಸದ್ಗುಣವೃಂದ ವೇದಗಮ್ಯ ಪ್ರಹ್ಲಾದ ಕ್ಷೇಮದ ಮ- ಹೋದಧಿಶಯನ ಮುಕುಂದ 1 ಶ್ರೀಬ್ರಹ್ಮಾದಿ ದಿವಿಜಕುಲವಂದಿತ ಶೋಭಿತ ಪಾದಾರವಿಂದ ಈ ಭೂಮಿಯೊಳಗೆ ಜನಿಸಿದಕೆ ಸಫಲ ಲಾಭವೆ ಹರಿಕಥಾನಂದ 2 ಪ್ರಾಣನಿಯಾಮಕ ಸರ್ವತ್ರ ವ್ಯಾಪ್ತ ಧ್ಯಾನಿಸದಿರು ನೀ ಬೇರೊಂದ ದೀನವತ್ಸಲ ಸುಮ್ಮಾನದಿ ಕಾವ ಲ- ಕ್ಷ್ಮೀನಾರಾಯಣ ದಯದಿಂದ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಲೋಕನೀತಿ ಇಳೆಯೊಳಗೆ ದೇಹತಾಳಿ ಬಂದೆಲ್ಲಾ ತಮ್ಮಾ ಗಳಸಿ ಮನೆ ಹೆಂಡಿರು ಮಕ್ಕಳಿಟ್ಟಿಲ್ಲಾ ಬಲಿಸಿ ಹಣ ಹೊನ್ನು ಹೂಳಿಟ್ಟಿಲ್ಲಾ ತಮ್ಮಾ ಒಲಿದು ಉಂಡಿ ವಿಷಯ ಸುಖವಾ ಪೇಳಲ್ಲಾ 1 ತೆರಪೀರಾದೆ ಜನಿಸಿದಾವು ಸುತ್ತಲು ಪರಿಪರಿಯ ಸುಖದುಃಖ ಪಗಲಿರುಳು ತಮ್ಮಾ ಇರದೆಯೊದಗಿ ದಣಿಸಿದಾವು ನಿನ್ನ ಮರುಳೆ 2 ಯಮನವರು ಬರುವದು ಮರೆತೇಯ ತಮ್ಮಾ ರಮಣೀ ಮೋಹಾ ಕೇಳಿರು ನೀನರಿಯಾ ಅಮಿತ ಧನ ಬಳಗ ಇನ್ನೆಲ್ಲಯ್ಯಾ ತಮ್ಮಾ ನಮೋ ನರಸಿಂಹವಿಠಲ ಎನ್ನಯ್ಯ 3
--------------
ನರಸಿಂಹವಿಠಲರು
ವತ್ಸರ ಸಾರ್ಥಕವಾಗಲಿಪಾರ್ಥ ಸಖನ ಗುಣ ಕೀರ್ತಿಸುತಾ ಪ ಅರ್ಥಿಯಿಂದ ಹರಿಕೀರ್ತನೆ ಮಾಡಲುಆರ್ತೇಷ್ಟದ ಸಕಲಾರ್ಥವ ಕೊಡುವ ಅ.ಪ. ವತ್ಸರ ಸಾರಿತು ಹಿಂದೆಸಾರಿತು ನಮ್ಮಾಯುವು ಮುಂದೇ |ವಾರಿಜಾನಾಭನ ಸೇರಿ ಭಜಿಸಲುಸೇರಲಿಲ್ಲ ನಾವ್ ದಿನ ಒಂದೇ1 ತಂದೆ ವೆಂಕಟನ ಪ್ರೇಮದ ದಾಸರುಸಂದೇಶವನೆ ಕಳುಹಿಸದರೂಇಂದಿರೆಯರಸನ ಭಕ್ತ ವೃಂದದಿಛಂzಸÀದಿ ಭಜಿಸೆಂದರುಹಿದರೂ 2 ಇಂದಿನಿಂದಾದರು ಒಂದು ಗೂಡುತ ನಂದಕಂದನನು ಭಜಿಸುವ ಬನ್ನಿಸುಂದರ ಗುರು ಗೋವಿಂದ ವಿಠಲನದ್ವಂದ್ವ ಚರಣವನು ವಂದಿಸೆ ಬನ್ನಿ 3
--------------
ಗುರುಗೋವಿಂದವಿಠಲರು
ವನಿತೆಯರ ಆರತಿಕಂ||ಸಿರಿಧರಣಿಯರೊಡೆವೆರಸಿಯೆತಿರುಪತಿಯಧಿನಾಥನೊಲಿದು ಶಯ್ಯಾಸನದೊಳ್ುರುತಿರೆ ಸತಿಯರು ಹರುಷದಿಪರಿಪರಿಯಾರತಿಯನೆತ್ತಿ ನಡೆದರು ಮುದದಿಂಆವ ಜನ್ಮದ ಪುಣ್ಯ ಫಲಿಸಿತು ನಮಗೆದೇವಾಧಿದೇವ ಬಂದನು ನಮ್ಮ ಮನೆಗೆ ಪನೆನೆಯಲು ಮನದೊಳು ನೆಲೆಗೊಂಡನಮ್ಮ ಸನಿಯಕೆ ಕರೆದರೆ ುದಿರಾದನಮ್ಮಮನದ ಮಧ್ಯಕೆ ಮತ್ತೆ ಬರುವ ಕಾಣಮ್ಮವನಿತೆಯರಾರತಿಯ ತಂದೆತ್ತಿರಮ್ಮಾ 1 ಪಾದವ ತೊಳೆದು ಪನ್ನೀರಿಂದ ನಾನುಆದರದಿಂ ಹಸ್ತಕಿತ್ತು ಹಸ್ತವನುಪಾದಾವಧಾನವ ಪೇಳಲೈದಿದನುಮೋದದಿಂದಾರತಿಯಾ ತಂದೆತ್ತಿರಮ್ಮಾ 2 ತಿರುಪತಿುಂದ ಭಕ್ತರ ಪಾಲಿಸಲೆಂದುವರದ ವೆಂಕಟರಾಯ ತಾ ಬಂದನಿಂದುಗುರುವಾಸುದೇವಾರ್ಯನಾದನೀ ಬಂಧುತರುಣಿಯರಾರತಿಯ ತಂದೆತ್ತಿರಮ್ಮಾ 3ಓಂ ಯುಧ್ಠಿರಪ್ರತಿಷ್ಠಾತ್ರೇ ನಮಃ
--------------
ತಿಮ್ಮಪ್ಪದಾಸರು