ಒಟ್ಟು 307 ಕಡೆಗಳಲ್ಲಿ , 65 ದಾಸರು , 271 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಯ ಮುಖ ಪದಾಬ್ಜ ಮಧುಪಾ | ದುರ್ಭವಭಯವ ತಾರಿಸು ಮುನಿಪಾ ಪ ವ್ರಯವಾಯಿತು ಮಮ | ಆಯುವು ಎಲ್ಲವುಪ್ರಿಯ ನೀನಲ್ಲವೆ | ಭಯ ಪರಿಹರಿಸೈ ಅ.ಪ. ರಜತ ಪುರಿಲಿ ನಿಂದೂ | ವಿಧಿಸಿದಿಅಜಪಿತ ಭಜನೆಯ ನಂದೂ |ಋಜಗಣದಲಿ ಬಹು | ರಾಜಿಪ ಗುರುವೇಅಜನ ಸುಪದವಿಗೆ | ನಿಜದಿ ಬರುವ ಯತಿ 1 ಸೋದೆ ಪುರದಿ ವಾಸಾ | ಭಕ್ತರ$ಗಾಧ ದೋಷ ನಾಶಾ ||ವಾದಿ ಜನರ ಮದ | ಛೇದನ ದಶಮತಿಬೋಧಪ್ರೀಯ ಗುರು | ಮೋದವ ಪಾಲಿಸು 2 ಪಂಚ ವೃಂದಾವನವಾ | ರಚಿಸುತಪಂಚರೂಪಿ ಹರಿಯಾ ||ಸಂಚಿಂತಿಸಿ ಭಕ್ತ | ವಾಂಛಿತ ಗರೆಯಲುಸಂಚುಗೊಳಿಸಿ ಪ್ರ | ಪಂಚವ ತೊರೆದೇ 3 ಅಮರೇಂದ್ರ ನಾಳ್ಬರಲೂ | ತ್ರೈವಿಕ್ರಮ ದುತ್ಸವದೋಳೂ ||ಸಮಯವಲ್ಲವಿದು | ನಿಮಗೆಂದೆನುತಲಿಕ್ರಮಿಸುವ ತೆರ ನೀ | ಮಾಡಿದೆ ಯತಿವರ 4 ಪೂವಿಲ್ಲನ ಪಿತನಾ | ಗುರುಗೋವಿಂದ ವಿಠ್ಠಲನಾ ||ಭಾವದಿ ಕಾಣುತ ಮೈಮರೆದ್ಹಿಗ್ಗುವಈ ವಿಧ ಸುಖ ಯಾವಾಗಲೂ ಕಾಣುವ 5
--------------
ಗುರುಗೋವಿಂದವಿಠಲರು
ಹರಕೆಯ ಮಾಡಿಕೊಳ್ಳೀ ಕೇಶವನಿಗೆ ಹರಕೆಯ ಕಟ್ಟಿಕೊಳ್ಳೀ ಪ ಹರಕೆಯ ತೀರಿಸಿಷ್ಟಾರ್ಥವ ಪಡಕೊಳ್ಳೀ ಹರುಷದಿ ಹರಿಗಾತ್ಮವರ್ಪಿಸಿಕೊಳ್ಳೀ ಅ.ಪ. ಭಜನೆಯ ಮಾಳ್ಪೆನೆಂದೂ ಕೇಶವನಿಗೆ ಭಜನೆಯರ್ಪಿಸುವೆನೆಂದೂ ಅಜಪಿತ ಶ್ರೀಹರಿದಾತನಾಗಿರುವಾಗ ಭಜಕರು ಕೊಡುವ ಭೋಜನ ಭಕ್ಷವ್ಯಾಕೇ 1 ಸ್ಮರಣೆಯ ಮಾಳ್ಪೆನೆಂದು ಕೇಶವನಿಗೆ ಸ್ಮರಣೆಯರ್ಪಿಸುವೆನೆಂದೂ ನಿತ್ಯ ತೃಪ್ತನುಯಿರೆ ಬರಿದೆ ನೈವೇದ್ಯವ ಸಲಿಸುವುದ್ಯಾಕೇ 2 ಸೇವೆಯ ಮಾಳ್ಪೆನೆಂದು ಕೇಶವನಿಗೆ ಸೇವೆಯರ್ಪಿಸುವೆನೆಂದೂ ಭಾವಜನಯ್ಯನೆ ತ್ರಿಜಗಪಾಲಕನಾಗಿ ದೇವತಾನಿರುತಿರೆ ಭವಭಯವ್ಯಾಕೇ 3 ವಂದನೆ ಮಾಳ್ಪೆನೆಂದು ಕೇಶವನಿಗೆ ವಂದನೆ ಕೊಡುವೆನೆಂದೂ ಚಂದದಿ ಹರಿತಾನೇ ಸೃಷ್ಟಿಗೀಶನುಯಿರೆ ಅಂದದಿ ಕೊಡುವ ದಾನಗಳವಾಗ್ಯಾಕೇ 4 ಆತ್ಮವ ಕೊಡುವೆನೆಂದೂ ಕೇಶವನಿಗೆ ಅತ್ಮವರ್ಪಿಸುವೆನೆಂದೂ ಸಾತ್ವಿಕ ಜನವಂದ್ಯ ದೂರ್ವಾಪುರದೊಳಿರೆ ಮತ್ಯಾಕೆ ಯೋಚನೆ ಭಕ್ತಿಯುಳ್ಳವಗೇ 5
--------------
ಕರ್ಕಿ ಕೇಶವದಾಸ
ಹರಿ ಕುಣಿದ ನಮ್ಮ ಹರಿ ಕುಣಿದ ಹರಿ ಕುಣಿದ ನಮ್ಮ ಹರಿ ಕುಣಿದ ಹರಿ ಕುಣಿದ ನಮ್ಮ ಕೃಷ್ಣ ಕುಣಿದ ಪ. ಹರಿದಾಸುರಗಳ ನೆರೆದಿಹ ಸಭೆಯಲಿ ಭಜನೆಯ ಸಮಯದಿ ಹರಿ ಕುಣಿದ ಅ.ಪ. ಅತಿಭಕ್ತಿಯಿಂದ ಪತಿತ ಪಾವನನ ಪೂಜೆ ಅತಿ ಸಂತೋಷದಿ ಮಾಡುವ ಸಮಯದಿ 1 ವೇದಮಂತ್ರದಿಂದಾ ವೇದಘೋಷದಲ್ಲಿ ವೇದ ವ್ಯಾಸರೆಂಬೋ ನಾಮದಿಂದಿರುವ 2 ಅಂದಿಗೆ ಕಿರುಗೆಜ್ಜೆ ಚಂದದಿ ಪೊಳೆಯುತಾ ಗೋವಿಂದ ದಾಸರ ಮಂದಿರದೊಳಗೆ 3 ಪುರಂದರ ದಾಸರ ಆರಾಧನೆ ದಿನ ಪುರದೊಳಗೆಲ್ಲಾ ಮೆರವಣಿಗೆ ದಿನ ಯತಿಗಳೀರ್ವರು ಪೂಜಿಸಿ 4 ವರದ ಅತಿ ಸಂಭ್ರಮದಿ ಗತಿ ಕೊಡುವವ ಬಂದ ರಮಾವಲ್ಲಭವಿಠಲನ ಪೂಜೆಯ ಸಮಯದಿ 5
--------------
ಸರಸಾಬಾಯಿ
ಹರಿ ಭಜನೆ ಮಾಡು ನೀ ತ್ವರದಿ ತ್ವರದಿ ಪ ಸಲಹುವ ನಮ್ಮ ಪರಮ ಪಾವನ 1 ವರಧ್ರುವರಾಜನು ನರಹರಿ ಸ್ಮರಿಸಲು ಕರುಣಿಸ್ಯೆವನ ಹರಿ ಭರದಿ ಪೊರೆದೆ 2 ವನವಾಸದಲಿ ಶ್ರಮ ಅನುಭವಿಸಿದ ಪಾಂಡು ತನಯರ ಸಲಹಿದ ಹನುಮೇಶವಿಠಲ 3
--------------
ಹನುಮೇಶವಿಠಲ
ಹರಿ ಭಜನೆಯ ಮಾಡು ಮನವೇ ಪ ಚರಿತವ ಕೇಳಿ ಹರುಷದಿ ಬಾಳೀ | ಸ್ಮರಿಸುತ ಜಿಹ್ವದಿ ವನಮಾಲಿ ಮನವೇ 1 ತನುಧನವಾಣೀ ಇಂದ್ರಿಯ ಶ್ರೇಣಿ | ಕಮಲ ಪಾಣಿ ಮನವೇ 2 ಗುರುಮಹಿಪತಿ ಪ್ರಭು ಧರಿಯೊಳಿದು | ಇಹಪರ ಗತಿಮನವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿನಾಮ ಭಜನೆಯೊಳಿರು ಇರೂ ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ ಸಜ್ಜನರ ಸಂಗವ ಮಾಡು ಮಾಡು ದುರ್ಜನರ ಸಂಗವ ಬಿಡೂ ಬಿಡೂ ಮೂಜ್ಜಗದೊಡೆಯನ ಪಾಡು ಪಾಡು ಇನ್ನು ಮುಕುತಿಯ ಬೇಕೆಂದು ಬೇಡು ಬೇಡು 1 ಪಾದ ಹಿಡಿ ಹಿಡಿ ಮನದಿರುವ ಕಾಮ ಕ್ರೋಧ ಕಡಿ ಕಡಿ ಶರಣರ ಕೂಟದೋಳ್ ಕೂಡಿ ಕೂಡಿ ಬೇಗ ನರಹರಿ ಮೂರ್ತಿಯ ನೋಡಿನೋಡಿ 2 ರಾಮನಾಮಾಮೃತ ಕುಡಿ ಕುಡಿ ಅತಿಕಾಮುಕ ದ್ರವ್ಯವ ಬಿಡಿಬಿಡಿ ಸ್ವಾಮಿ ನಾರಾಯಣನೆಂದು ನುಡಿನುಡಿ ಬಹು ಪ್ರೇಮದಿ ಹರಿಕರುಣ ಪಡಿಪಡಿ 3 ಸಕಲಶಾಸ್ತ್ರಗಳ ನೋಡು ನೋಡು ಅದರ ಸಾರಾಂಶ ತಿಳಿದು ಆಡೂ ಆಡೂ ಪ್ರಕಟಿತ ಭಕ್ತರಿಗನ್ನ ನೀಡು ನೀಡು ಇನ್ನು ಪರಮಾತ್ಮನ ಕೊಂಡಾಡು ಆಡು 4 ನರಹರಿಯು ಕಥೆಯ ಕಿವಿಲಿ ಕೇಳುಕೇಳು ಪರಮ ಭಕ್ತರ ಪಾದಕೆ ಬೀಳು ಬೀಳು ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು 5 ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು 6 ಸನ್ಯಾಸಿಗಳನು ಸೇರು ಸೇರು ದುಷ್ಟದುರ್ಮಾಗರ ಕಂಡು ದೂರು ದೂರು ಮರ್ಮ ಬಲ್ಲವರಲ್ಲಿ ಜಾರು ಜಾರು ಶ್ರೀ ಮಹಾ 'ಹೆನ್ನ ವಿಠ್ಠಲನ’ ‘ಸಾರೂ ಸಾರೂ’ 7
--------------
ಹೆನ್ನೆರಂಗದಾಸರು
ಹರಿಪಾದಕಮಲಕ್ಕೆ ಮರೆಹೊಕ್ಕ ಬಳಿಕ ಮರಮರ ಮರುಗುವ ಪರಿಯು ಇನ್ನ್ಯಾಕೋ ಪ ಪರಮಪಾವನ ತನ್ನ ಚರಣದಾಸರ ಸ್ಥಿತಿ ಅರಿಯನೆನೆನ್ನುತ ಸ್ಥಿರವಾಗಿ ನಂಬಿ ಅ.ಪ ಕಂತುಪಿತನಧ್ಯಾನ ಚಿಂತಾಮಣಿಯೆಂದು ಚಿಂತಾದೂರನ ನಿಜಸ್ಮರಣೆಯೇ ಪರಷೆಂದು ಸಂತರೊಡೆಯ ಶ್ರೀಕಾಂತನ ಭಜನೆಯೇ ಭ್ರಾಂತಿನೀಗಿಸುವಂಥ ಕಲ್ಪತರುವಿದೆಂದು 1 ಸೃಷ್ಟಿಕರ್ತನ ಕಥನ ಕಷ್ಟನಿವಾರಣ ಅಷ್ಟಮೂರುತಿ ಕೀರ್ತನಷ್ಟಸಂಪದ ಪೂರ್ಣ ಎಷ್ಟು ಮಾತ್ರಕೆ ತನ್ನ ಇಷ್ಟ ಭಕ್ತರಿಗಿಹ್ಯ ಕಷ್ಟ ನಿವಾರಿಸಿದೆ ಬಿಡನೆಂದು ಗಟ್ಟ್ಯಾಗಿ 2 ಧ್ಯಾನಮೂರುತಿ ಎನ್ನ ಮಾನಾಪಮಾನವು ನಿನ್ನಗೆ ಕೂಡಿತು ಎನಗಿನ್ನೇನೆಂದು ಅನ್ಯಾಯವನು ತ್ಯಜಿಸಿ ಧ್ಯಾನವ ಬಲಿಸಿ ಜಾನಕೀಶನೆ ಭಕ್ತಧೇನು ಶ್ರೀರಾಮೆಂದು 3
--------------
ರಾಮದಾಸರು
ಹರಿಭಜನೆ ಮಾಡುವಗೆ ಅನಂತಫಲವೂ ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ ಭವರೋಗ ಸಂಚಿತವು ಪರಿ ಪರಿಯ ನರಕಾದಿ ಬಂಧಕವು ಬಿಡದು 1 ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ ಗಾರಾಮವಾದಂಥ ಸುಖಸೌಖ್ಯವು ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು 2 ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ ಸತತಧ್ಯಾನವು ಮಾಡುವ ಸಾಧು ಜನರಾ ಪತಿತ ಪಾವನನಾದ ಪರಮಾತ್ಮ ಪಾಲಿಸೆ ಗತಿಯು ತೋರುವ ಇನ್ನು ಕರುಣದಲಿ ಹರಿಯು 3
--------------
ಹೆನ್ನೆರಂಗದಾಸರು
ಹರಿಯ ಭಜನೆ ಮಾಡೋ ನಿರಂತರ ಪ. ಪರಗತಿಗಿದು ನಿರ್ಧಾರ ಅ.ಪ. ಮೊದಲೆ ತೋರುತದೆ ಮಧುರ ವಿಷಯಸುಖ ಕಡೆಯಲಿ ದುಃಖ ಅನೇಕ 1 ವೇದಶಾಸ್ತ್ರಗಳನೋದಿದರೇನು ಸಾಧನಕಿದು ನಿರ್ಧಾರ 2 ಸಾರವೊ ಬಹುಸಂಸಾರ ವಿಮೋಚಕ ಸೇರೊ ಶ್ರೀಹಯವದನನ್ನ 3 ತತ್ವವಿವೇಚನೆ
--------------
ವಾದಿರಾಜ
ಹರಿಯೇ ದಯಮಾಡು ಮಾಡು ಮಾಡು ಮಾಡು ಪ ಮರೆತು ಭವಾಟವಿಯಲ್ಲಿ ಬಹು ನೊಂದೆನು | ಕರುಣ ಕಟಾಕ್ಷದಿ ನೋಡು ನೋಡು ನೋಡು | ನೋಡು 1 ಹರಿಸಿ ತ್ರಿತಾಪವ ಸ್ವಸುಖ ಬೀರುವಾ | ಚರಣದ ಭಜನೆಯ ನೀಡು ನೀಡು ನೀಡು ನೀಡು 2 ಹೃದಯ ಮಂದಿರದೊಳಗಾಡು ಆಡು ಆಡು ಆಡು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಲವೂ ಜನ್ಮ ತಳೆದೂ ಬಂದೇ ಹಲವೂ ದುಃಖವ ಸಹಿಸೀ ಬಂದೇ ಪ ಫಲಗಳ ತಿಂದೂ ಸೋತೂ ಬಂದೇ ಸಲಹÉೂೀ ರಂಗನೇ ದೂರ್ವಾಪುರಿಯೇ ಅ.ಪ. ಘೋರ ಕಷ್ಟವು ಮಾಯಾಭವವು ಸಾರವಿಲ್ಲವು ಸಂಸಾರದಲೀ ಧಾರುಣಿಯಲಿ ಬಾಳಲಾರೆ ನೀರಜಾಕ್ಷನೇ ದೂರ್ವಾಪುರಿಯೇ 1 ಖೂಳ ಪಾಪಿಯಹುದು ನಾನು ಬಾಲನಂತೆನ್ನ ಅಪರಾಧ ಕ್ಷಮಿಸೋ ಜಾಲದಿಂದ ಮೊದಲು ಬಿಡಿಸೋ ಬಾಲಮೂರ್ತಿಯೇ ದೂರ್ವಾಪುರಿಯೇ2 ನಿನ್ನ ಭಜನೆಯ ಮಾಡುತ್ತಿರುವೆನು ನಿನ್ನ ದಾಸನಾಗುವೆ ನಾನು ನಿನ್ನ ನಾಮ ಸ್ಮರಿಸುತ್ತಿರುವೆನು ಚನ್ನ ಕೇಶವ ದೂರ್ವಾಪುರಿಯೇ 3
--------------
ಕರ್ಕಿ ಕೇಶವದಾಸ
ಹುಚ್ಚು ಹಿಡಿಯಬೇಕು ಭಜನೆಯ ರಚ್ಚೆ ತೊಡಗ ಬೇಕು ಪ [ಮೆಚ್ಚುತ] ಅಚ್ಯುತನಾಮವ ಉಚ್ಚರಿಸುತಲಿರೆ ಕಿಚ್ಚೂ ಮಂಜಹುದು ಅ.ಪ ನೇರುತಲಿರಬೇಕು ಊರುಹೆಜ್ಜೆಗೂ ನಾರಾಯಣ ನಾಮೋ ಚ್ಚಾರದ ಹಸಿವು ಬಾಯಾರಿಕೆಯಾಗುವತನಕ 1 ಕೀರ್ತನೆಯಲಿ ಮುಳುಗಿ ಕೃಷ್ಣನ ಮೂರ್ತಿಯ ಕಾಣುತಲಿ ಪಾರ್ಥಸಾರಥಿಯವ ಅನಾಥರಕ್ಷಕನೆಂಬ ಕೀರ್ತಿಯನಾಂತ ಮಾಂಗಿರಿಯ ಭಜನೆಯಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹೇ ಮುರಾರೆ ಹೇ ಮುಕುಂದ ಪ ಪ್ರೇಮ ವೀಕ್ಷಣದಿಂದ ಪೊರೆಯೊಅ.ಪ ಈ ಮಹಾ ಕುತಾಪಗಳಲಿ ನಾಮ ಕೀರ್ತನೆಯೊಂದೆ ಎನಗೆ ಕ್ಷೇಮಕರವೆಂದರಿತು ವದನದಿ ರಾಮ ರಾಮನೆಂದು ಕೂಗುವೆ 1 ನೋಡಿದೆನೋ ಈ ಭವದ ಭೋಗವ ಬೇಡದಾಯಿತೊ ನಿನ್ನ ದಯದಿ ಈಡನರಿಯೆನೊ ನಿನ್ನ ಗುಣಗಳ ಪಾಡಿ ಹಿಗ್ಗುತ ಕುಣಿಯುವುದಕೆ 2 ಆಸೆ ಎನ್ನನು ಮೋಸ ಮಾಡಿತೊ ಕ್ಲೇಶ ಬಿಡದೊ ಈಶ ನಿನ್ನಯ ಭಜನೆಯೊಂದೆ ಲೇಸೊ ಲೇಸೊ ಹೇ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಹೇಗೆ ಮಾಡಬೇಕು ಭಜನೆಯನು ಹೇಗೆ ಮಾಡಬೇಕುಬೇಗ ಜ್ಞಾನ ಭಕ್ತಿ ವೈರಾಗ್ಯ ಬರುವಂತೆ ಭಜನೆಮಾಡಬೇಕು ಪಆಧ್ಯಾತ್ಮಿಕ 'ಷಯದಲಿ ಮೊದಲು ಬಲು ಶುದ್ಧಜ್ಞಾನ ಬೇಕುಮಹಾತ್ಮ್ಯದ ಸುಜ್ಞಾನ ಪೂರ್ವಕ ಸುಧೃಡ ಸ್ನೇಹಬೇಕುದೇಹದೌಲತ್ತಿನ ಸ್ವರೂಪವರಿತು ವೈರಾಗ್ಯ ಹುಟ್ಟಬೇಕುಈ ಮೂರು ಮನಸಿನಲಿ ಮೂಡುವಂತೆ ನಾವು ಭಜನೆ ಮಾಡಬೇಕು 1ನಾನು ನನ್ನದೆಂಬ ಅಹಂಕಾರ ದಿನದಿನಕೆ ಅಳಿಯಬೇಕುಮಾನಾಪಮಾನವು ಆದರೆ 'ಗ್ಗದೆ ಕುಗ್ಗದೆ ಇರಬೇಕುಹೆಣ್ಣು ಹೊನ್ನು ಮಣ್ಣುಗಳ 'ಷಯದಲಿ ತ್ಯಾಗ ವೈರಾಗ್ಯ ಬುದ್ಧಿಬೇಕುಪುಣ್ಯ ಪಾಪಗಳನರಿತ ಸದ್ಭಕ್ತರ ಸಂಗತಿ ಇರಬೇಕು 2ಮಧ್ವಮತದ ಸಾತ್ವಿಕರ ಸಂಗದಲಿ ಭಜನೆ ನಡೆಯಬೇಕುಶುದ್ಧಮನದ ಸಾತ್ವಿಕರ ಸಂಗದಲಿ ಭಜನೆ ನಡೆಯಬೇಕುಬುದ್ಧಿಗೇಡಿ ದುರ್ದೈ' ದುಷ್ಟರನು ದೂರದಲಿ ಇಡಬೇಕುಶ್ರದ್ಧೆುಂದ ಭೂಪತಿ'ಠ್ಠಲನನು ಭಜಿಸಿ ಕುಣಿಯಬೇಕು ನ
--------------
ಭೂಪತಿ ವಿಠಲರು
ಹೊಂದಿಲ್ಲದೆ ನೀ ಕುಂತೀ ಪ ಪರಮನು ಕೇಳಿದರೇನಂತೀ ಕೆಟ್ಟ ನರಕದೊಳಗೆ ಯಮಬಾದಂತೀ ಅ.ಪ ಅಜನನು ಬೆರೆಯಲು ಬೇಕಂತೀ ಆದು ಭಜನೆಗೆ ಬಾರದು ಯಾಕಂತೀ ನಿಜವೊಂದಿಲ್ಲದೆ ನೀಕುಂತೀ ಆದ ಭಜಿಸಿ ನೋಡದೆ ಸುಮ್ಮನ್ಯಾಕ್ಕುಂತೀ 1 ಸಾಧನೆ ಮಾಡುವೆ ಹೀಗಂತೀ ನಿಜ ಬೋಧೆಯಿಲ್ಲದೆ ಯಾಕೀ ಭ್ರಾಂತೀ ಭೇದಿಸುವನು ಸೂರ್ಯನಕಾಂತಿ ನಿಜ [ದಿಂದ]ತುಲಸಿರಾಮನೆ ಗುರು ವೇದಾಂತಿ 2
--------------
ಚನ್ನಪಟ್ಟಣದ ಅಹೋಬಲದಾಸರು