ಸಾರ್ಥಕವು ವರ ವೈಷ್ಣವ ಜನುಮವು ಸಾರ್ಥಕವು ಪ
ಸಾರ್ಥಕವಿದು ಪುರುಷಾರ್ಥಕೆ ಸಾಧನಅ.ಪ
ಸ್ವಾಮಿದಾಸ ಭಾವವನು ನಿರಂತರ
ನಿಯಮದಿಂದ ಬೋಧಿಸುತಿರುವ
ಕಾಮಕ್ರೋಧಗಳ ಜರಿದು ಶ್ರೀ ಹರಿಯಲಿ
ಪ್ರೇಮವೇ ಪರಮ ಸಾಧನವೆಂದರಿತರೆ 1
ದಾನ ಸ್ನಾನ ಜಪ ಸಂಧ್ಯಾತ್ರಿಯಗಳು
ಜ್ಞಾನಕೆ ಸಾಧನವೆಂಬುದರಿಯುತ
ಕಾಣಲು ಹರಿಯನು ಹೃದಯಾಂಬರದಲಿ
ಕರ್ಮ ಸವೆಯುತಿರೆ 2
ವಿಶ್ವ ಜನನ ಸ್ಥಿತಿ ಪ್ರಳಯಗಳಿಗೆ ಸದಾ
ಈಶ್ವರ ತಾನು ಪ್ರಸನ್ನನಾಗಲು
ಶಾಶ್ವತವಾದ ಸ್ವರೂಪಾನಂದವ
ಸ್ವಪ್ನಯೋಗ್ಯ ರೀತಿಯಲಿ ಪಡೆಯುವುದೇ 3