ಒಟ್ಟು 735 ಕಡೆಗಳಲ್ಲಿ , 93 ದಾಸರು , 556 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನವಗುಣ ಜರಿದು ಎನ್ನ ಮನವೇ | ನಿನ್ನವಗುಣ ಜರಿದೆನ್ನ ಮನವೇ | ಶಿರಿ | ಪನ್ನಗಾದ್ರೀಶನಾ ಕೂಡೋ ಸುಖ ಸೂರ್ಯಾಡೋ ಪ ಕೆಲವು ಪುಣ್ಯವನೇ ಮಾಡಿ | ನರದೇಹದಲ್ಲಿ | ಇಳಿಯೊಳಾಗ್ರದಲಿ ಮೂಡಿ | ಹಲವು ಹಂಬಲಿಂದ ಗೆಳೆಯರೈವರ ಛಂದಾ | ಬೆಳೆಸಿ ಸದ್ಗುಣ ಬಿಡುವರೇ ಅಂಧರಾಗುವರೇ 1 ಮರಹು ಮನೆಯನೆ ಸೇರಿ | ಮಂದತನದೀ | ಅರಿವ ಪಂಥದಲಿ ಜಾರಿ | ಅನುದಿನ | ಕೊರವನಾ ಕೋಡಗದಂತೆ ಕುಣಿದುಚಿತೆ 2 ಒಂದೇ ನಿಷ್ಟೆಯಾ ವಿಡಿದು | ಸದ್ಭಾವದಿಂದಾ | ದುಂದುಗಾವೃತ್ತಿ ಕಳೆದು | ತಂದೆ ಮಹಿಪತಿದಯಾ ನಂದ ಪಡೆದು | ನಿನ್ನಾ ಬಂದ ಸಾರ್ಥಕದಿ ಬಾಳು ಮುನ್ನಿನ ಕೇಳು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿರ್ತದೊಡ್ಡದೈಯ್ಯಾ | ಅರ್ತವರಿಗೆಲ್ಲಿದೆ ಭಯವು ಪ ಗುರುವಿನಂಘ್ರಿಯ ಕಂಡು | ಗುರುದಯ ಪಡಕೊಂಡು | ಚರಿಸುವರಾನಂದ ನುಂಡು 1 ಘನದೆಚ್ಚರುಳ್ಳವಗ | ಬಿನಗುದೈವದ ಸಂಗ | ಆನಿಯೇರಿ ಕುನ್ನಿಯ ಹಂಗ 2 ಮೊಮ್ಮಕ್ಕಳ ಕಂಡಿರೆ | ಗುಮ್ಮನೆಂದರಂಜುವರೆ | ತಮ್ಮನುಭವ ಬಿಡುವರೆ 3 ಮುಂದಾಗುವ-ಹಿತೊಂದು | ಇಂದಿವೆ ಬಾರದ್ಯಾಕೆಂದು | ಮುಂದಗಿಡನು ಎಂದೆಂದು 4 ಮದಿರೆಕೊಂಡವನಂತೆ | ಮದವೇರಿಹ ನಗುತ | ಮಧುಹರನ ಕೊಂಡಾಡುತ 5 ತಂದೆ ಮಹಿಪತಿದಯಾ | ನಂದ ಕವಚದಿ ಕಾಯಾ | ಛಂದ ಮಾಡಿದಾ ಉತ್ಸಾಯಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿಲ್ಲ ಬಾ ನಿಲ್ಲ ಬಾ ಮೆಲ್ಲಮೆಲ್ಲನೆ ಹೆಜ್ಜೆನಿಟ್ಟುನಿಲ್ಲ ಬಾರೋ ಕೃಷ್ಣಾ ನಿಲ್ಲ ಬಾರೋ ಪ ದುಷ್ಟ ಪೂತನಿಯ ದೊಡ್ಡ ಹೊಟ್ಟೆಯೊಳಾಡಿದಿ ಮಂದಿದೃಷ್ಟಿ ತಾಕಿಹುದೊ ರಕ್ಷೆನಿಟ್ಟು ಮುದ್ದಿಸುವೆ 1 ಆಲಯದಂಗಳದೊಳು ಲೀಲೆ ಮಾಡುವಿಯೊ ಕೆಟ್ಟಬಾಲೆಯರ ಗಾಳಿ ಸೋಕಿಹುದೋ ಹಣ್ಣು ನಿವಾಳಿಸಿಒಗೆವೆ ಕೃಷ್ಣ 2 ಇಂದಿರೇಶ ನಿನ್ನ ಬಹುಮಂದಿ ನೋಡುವರೋ ದೃಷ್ಟಿಇಂದು ಆಗಿಹುದೊ ಮಾಳ್ಪೆ ಕದಲಾರತಿಯ ಕೂಸೆ 3
--------------
ಇಂದಿರೇಶರು
ನಿಲ್ಲದೋ ನಿಲ್ಲದೋ ಮನವಿದು ಸಲ್ಲದೋ ಸಲ್ಲದೋ ಪ ಸ್ನಾನ ಸಂಧ್ಯಾದಿ ಮೌನ ವಿಡದು ಅನು | ಷ್ಠಾನ ಜಪವ ಮಾಡಲಿ ಕುಳಿತರೆ | ತಾನಾಗ ಹೊರಡುತಲಿ ತಿರಗÀುತ | ನಾನಾ ದುರ್ವಿಷಯದಲಿ ತಂದು ಮಹಾನಿದ್ರೆ ಒಡ್ಡುತಲಿ1 ಘಾಸಿ ಬಡುವರೆಂಬ | ದೀ ಶಾಸ್ತ್ರಗಳ ಬಲ್ಲದು ಸದ್ಗುಣ | ಧ್ಯಾಸ ವೆಂದಿಗು ಮಾಡದು ದುವ್ರ್ಯತ್ತಿ | ಹೇಸದಾ ಚರಿಸುವದು2 ಆವಗತಿಯೋ ಯೆನಗಾವ ಜನುಮವೋ | ಆವಬವಣೆಯಂಬುದು ತಿಳಿಯದು | ದೇವನೇ ಸಲಹುವದು ಮನ | ವಿವೇಕದಿ ತಿದ್ದುವದು | ಗುರು ಮಹಿಪತಿ ಸುತಗೊಲಿದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀಡುವರು ಮತ್ಯಾರಿಲ್ಲ ಪ ಬೇಡದಿರುವ ಸಜ್ಜನರಡಿಗಳ ಕೊಂ- ಡಾಡುತಲಿರು ನೀ ಹಗಲೆಲ್ಲ ಅ.ಪ ಕಾಸಾದರು ಹಿಡಿಕಾಳಾದರು ಹರಿ- ದಾಸರಿಗೋಸುಗ ಕೊಡಲಿಲ್ಲ ಲೇಸು ದೊರೆವುದೆಂದ್ಹಾರಾಡಿದರಾ- ಯಾಸವಲ್ಲದೆ ಫಲವಿಲ್ಲ 1 ನಿನ್ನಂತೆಯೆ ಪರರನು ನೋಡಿ ದಯೆ- ಯನ್ನು ಅವರಲ್ಲಿ ಇಡಲಿಲ್ಲ ಮುನ್ನಿನ ಕರ್ಮವು ಬಿಡದಲ್ಲ 2 ತಿಳಿವಳಿಕೆಯು ಸ್ವಪ್ನದಲಿಲ್ಲ ನೆಲದೊಳು ಬಚ್ಚಿಟ್ಟಿರುತಿಹ ದ್ರವ್ಯವು ಎಲೊ ನಿನಗದು ಸ್ವಾಧೀನವಲ್ಲ 3 ವ್ಯಾಪ್ತವಾಗಿ ಹೆಚ್ಚುವದೆಲ್ಲ ಆಪ್ತರು ದಾರಾ ಪುತ್ರಾದ್ಯರು ನಿ- ನ್ನಾದರಿಸುವರೊಬ್ಬರು ಇಲ್ಲ 4 ಕಾಮಕ್ರೋಧದೊಳಗೆ ಮುಳುಗಿ ನೀ ಕಂಡ ಕಂಡದು ಕೋರುವೆಯಲ್ಲ ಕ್ಷಣವಾದರು ನೆನೆ ಭಯವಿಲ್ಲ 5
--------------
ಗುರುರಾಮವಿಠಲ
ನೀದಯಮಾಡಿ ಸಲಹೊ ಎನ್ನ ಪರಮಾತ್ಮ ಭವ ತೊಡರು ಬಿಡಿಸೊ ಪರಮಾತ್ಮ ಪ -----ಸಂಖ್ಯಾನೂರು ಬಳಲುತಿರೆ ಪರಮಾತ್ಮ ಇವರ ಸಂಚಿತವು ಏನೋ ಕಾಣೆನು ಪರಮಾತ್ಮ ಕೋಟಿ ಉದ್ಯೋಗದವರು ---- ಪರಮಾತ್ಮ ಪ್ರಪಂಚಕ್ಕೆ ಸರಿ ಕಾಣಲಿಲ್ಲ ಪರಮಾತ್ಮ 1 ನಾನಾ ಪರಿಯಿಂದ ನಡೆದೆ ಕಷ್ಟದಿಂದ ಪರಮಾತ್ಮ ನಿಮ್ಮ ಧ್ಯಾನವು ಎನ್ನ ಮನಕೆ ನಿಲಕದು ಪರಮಾತ್ಮ ------- ಜೀವಕೆ ಇನ್ನು ಪರಮಾತ್ಮ ಸುಜ್ಞಾನಿಗಳಿಗೆ ಜೀವನ ನೀನು ಪರಮಾತ್ಮ 2 ಸಾರಜಗವ ರಕ್ಷಿಸುವಂಥ ಪರಮಾತ್ಮ ನಿ- ಸ್ಸಾರ ಮಾಡುವರೆ ಎನ್ನ ಪರಮಾತ್ಮ ವೀರ ' ಹೊನ್ನ ವಿಠ್ಠಲಾ’ ಶ್ರೀ ಪರಮಾತ್ಮ ಗುಣ ಗಂಭೀರ ಪುಣ್ಯಪರುಷ ಕೇಳೊ ಪರಮಾತ್ಮ 3
--------------
ಹೆನ್ನೆರಂಗದಾಸರು
ನೀನಲ್ಲದನ್ಯವೆನಗಿಲ್ಲ ನಾರದ ವರದಏನೆಂಬೆ ಸರ್ವರಿಗು ನೀನೆಯಹುದಾದಡೆಯು ಪಧನದ ಬಲವುಳ್ಳವರು ಧರ್ಮಗಳ ಮಾಡುವರುಮನದ ಮೇಧಾವಿಗಳು ಮಂತ್ರಿಸುವರು ತನುವಿನಲಿ ತ್ರಾಣಿಗಳು ತೀರ್ಥಗಳ ಪಡೆಯುವರುಅನುವದಿಸಿ ವೇದಗಳನವರಾಢ್ಯರಹರು 1ತನುವ ದಂಡಿಸಿ ಪೂಜ್ಯ ತನುವಾದರವರ್ಗುಂಟುಧನದ ತ್ಯಾಗದಿ ಮುಂದೆ ದೈನ್ಯ ಹರವುಮನವ ನಿಗ್ರಹಿಸಿದರೆ ಮುಖ್ಯ ಜ್ಞಾನವುಬಹುದುಇನಿತಾದರವರ್ಗಿರುವದೇನುಂಟು ನನಗೆ 2ಇತರ ಮಾತುಗಳಾಡದೀ ವಾಕನೊಳಗಿರಿಸಿಮಿತವಾಗಿ ಸತ್ಯಯುತಮಾಗಿ ನುಡಿಸಿಅತಿದೋಷಗಳು ಹೋಗಿಯವರ್ಗೆ ಮುಂದಣ ಭವದಿವಿತತವಾಹದವಿದ್ಯೆ ವಿವರಿಸಲಿದುಂಟೆ 3ಸತತವೂ ಧನವಿಲ್ಲ ಸಾಧು ಸಮ ತನುವಿಲ್ಲವ್ರತತೀರ್ಥಗಳಲಾಡಿದೊಡಲಿದಲ್ಲಮತಿಯಲ್ಲಿ ನೋಡಿದರೆ ಮಂತ್ರ ಮನನಗಳಿಲ್ಲಸ್ತುತಿ ಮಾಳ್ಪ ಸೂಕ್ತಗಳ ಸೊಲ್ಲು ತಾನಿಲ್ಲ 4ಹಿಂದಾದ ಮುಂದೆ ಬಹ ಹೊಂದಿದೀ ಭವ ಸಹಿತತಂದೆ ಕಣ್ದೆರಪಾಗಿ ತಾ ತೋರಿತುಬಿಂದು ಸಾಧನವಿಲ್ಲದೊಡಲೊಂದು ಲಭಿಸಿರಲುಬಂಧವನು ಬಿಡಿಸುವರೆ ಬಂದೆ ಗುರುವಾಗಿ 5ಪರಮ ಕರುಣಾಸಿಂಧು ಪತಿತ ಪಾವನ ಶೀಲದುರಿತಾಂಧಕಾರಕ್ಕೆ ದಿವಸಕರನುಹರಿ ದೀನವತ್ಸಲನು ಹಾಗನಾಥರ ತಾನುಹೊರೆವನೆಂಬೀ ಮಾತು ಹುಸಿಯಾಗಲಿಲ್ಲ 6ನನ್ನನೀಪರಿಯಲ್ಲಿ ನೋಡಿ ಸಲಹಿದ ಮೇಲೆುನ್ನೇಕೆ ಸಂದೇಹವಿದೆ ಚೋದ್ಯವುಸನ್ನುತನೆ ತಿರುಪತಿಯ ಸ್ವಾಮಿ ವೆಂಕಟರಮಣನಿನ್ನಡಿಯ ಸ್ಮರಣೆಯನು ನನಗಿತ್ತೆಯಾಗಿ 7ಕಂ|| ಭೃಗುವಾರದರ್ಚನೆಯನಿದಭೃಗುಸುತೆ ಸಹ ನೀನು ಕೊಳುತೆ ರಕ್ಷಿಸುಯೆನ್ನಂಹೊಗಲಾರೆನು ಭವಸಿಂಧುವನಿಗಮಾರಾಧಿತನೆ ದೇವ ವೆಂಕಟರಮಣಾಓಂ ಯಜ್ಞ ಭೋಕ್ತ್ರೇ ನಮಃ
--------------
ತಿಮ್ಮಪ್ಪದಾಸರು
ನೀನೆ ದಯಮಾಡಿ ಸಲಹೊ ಎನ್ನ ಪರಮಾತ್ಮ ಭವ ತೊಡರು ಬಿಡಿಸೊ ಪರಮಾತ್ಮ ಪ ಸಂಚಮಾರು ಬಿಡಲು ತಾರೊ ಪರಮಾತ್ಮಾ ಇವರ ಸಂಚಿತವು ಏನೊ ಕಾಣೆ ಪರಮಾತ್ಮಾ ಕಾಂಚದ್ಭೋಗದವರು ಇಷ್ಟೊ ಪರಮಾತ್ಮಾ ಪ್ರಪಂಚಕ್ಕೆ ಸರಿಗಾಣನಿಲ್ಲ ಪರಮಾತ್ಮಾ 1 ನಾನಾಪರಿ ನಡೆ ಕಷ್ಟದಿಂದ ಪರಮಾತ್ಮ ನಿನ್ನ ಧ್ಯಾನ ಎನ್ನ ಮನಕೆ ಸಿಕ್ಕಿತು ಪರಮಾತ್ಮ ನಾ ಜೀವನ ಜೀವಕೆ ಇನ್ನು ಪರಮಾತ್ಮ ಸುಜ್ಞಾನಿಗಳಿಗೆ ಜೀವನ ನೀನು ಪರಮಾತ್ಮ 2 ಸಾರ ಜಗವು ರಕ್ಷಿಸುವಂಥ ಪರಮಾತ್ಮ ನಿಸ್ಸಾರ ಮಾಡುವರೆ ಎನ್ನ ಪರಮಾತ್ಮ ನೇರ ಹೆನ್ನ ವಿಠ್ಠಲ ಶ್ರೀ ಪರಮಾತ್ಮ ಗುಣಗಂ- ಭೀರ ಪುಣ್ಯ ಪುರುಷ ಕೇಳೋ ಪರಮಾತ್ಮ 3
--------------
ಹೆನ್ನೆರಂಗದಾಸರು
ನೀನೆ ನಿರ್ದಯನಾಗಲಿನ್ನೇನು ಗತಿಯೋ ದೀನಜನಮಂದಾರ ಜಾನಕೀ ಮನೋಹರ ಪ ಪಿತ ಮಾತೆಯರ ಸುತರ ಹಿತದಿಂದ ನೋಡದಿರೆ ಕ್ಷಿತಿಯೊಳಗಿತರರು ಹಿತದಿಂ ನೋಡುವರೊ ಪಿತ ನೀನೆ ಮೂಜಗಕೆ ನುತಿಸುವ ಭಕ್ತರ ಸ್ಥಿತಿ ವಿಚಾರಿಸದಿರೆ ಗತಿಯೇನು ಮುಂದೆ 1 ಲೋಕ ಎರಡೇಳು ನೀ ಕರುಣದೊಡಲೊಳಿಟ್ಟು ಜೋಕೆ ಮಾಡುವಿ ನಿನ್ನೊಳ್ಯಾಕೆ ದಯವಿಲ್ಲ ಬೇಕೆಂದು ನಿನ್ನಪಾದ ಏಕಭಕ್ತಿಲಿ ನುತಿಪೆ ಮೂಕನಾಗಲು ಬೇಡ ಶ್ರೀಕರನೆ ದಯಮಾಡೊ 2 ನರಜನ್ಮವಿತ್ತೆನಗೀಪರಿ ಬವಣೆ ಬರಲಿಕ್ಕೆ ಕರುಣವನಿತು ನಿನಗೆ ಬರಲಿಲ್ಲವೇನೋ ಹರಿಯೆನ್ನ ಬರೆಹ ಹೀಗೆ ಬರೆದದ್ದೇ ತಪ್ಪು ನೀ ಮರೆಯಾದರೆ ಬಿಡದಯ್ಯಾ ತ್ವರೆಬಾರೋ ಶ್ರೀರಾಮ 3
--------------
ರಾಮದಾಸರು
ನೀನೇ ಅನಾಥ ನಾನೇ ಸನಾಥ ಪ ಜ್ಞಾನಿಗಳಾಡುವರು ಯೀಪರಿ ಮಾತಾ ಅ.ಪ ನಂಬಿರುವುದೆ ಸುಳ್ಳು ನಂಬಿದಿರುವದೆ ನಿಜ ಹಂಬಲಿಸಿದರೇನು ತುಂಬುವುದಿಲ್ಲ 1 ಇಲ್ಲಾ ಎಂಬೋದುಂಟು ಉಂಟೂ ಎಂಬೋದಿಲ್ಲ ಬಲ್ಲರು ಸರ್ವರು ಬಾಯಿಮಾತಲ್ಲ 2 ಮಾನಾಭಿಮಾನ ನಿನ್ನಧೀನವು ಹರಿಯೇ 3 ಕಾಣೋದು ಕೇಳೋದು ಮಾಣಾದೆ ಮಾಡೋದು ನೀನೆ ಯನ್ನೊಳಗಿದ್ದು ನಡೆಸುತ್ತಲಿರುವೆ 4 ಎನಗೇ ನೀನೆ ತಂದೆ ನಿನಗೇ ತಂದೆ ಕಾಣೆ ಸಿರಿನಲ್ಲ 5 ನಿನ್ನೊಳಗೆ ಜಗವು ಜಗದೊಳಗೆ ನೀನೆ ಪನ್ನಗ ಶಯನಾ ಪಾವನ ಚರಿತನೆ 6 ಸರುವಾರೊಳಗೂ ಗುರುರಾಮ ವಿಠ್ಠಲ ಪರಿಪೂರ್ಣನೆಂಬೋದು ಪ್ರಹ್ಲಾದ ಬಲ್ಲ7
--------------
ಗುರುರಾಮವಿಠಲ
ನೀನೊಲಿಯಬೇಕು ನೀನೊಲಿಯಬೇಕು 'ಜ್ಞಾನ'ೀನನಿಗೆ ನಿತ್ಯಾನಂದ ಮೂರುತಿಯೆ ವಾಸುದೇವಾರ್ಯ ಪನರಳಿ ಬಹುಭವದಿ ನಾನಾ ಯೋನಿಮುಖಗಳಿಂದುರುಳಿ ಕೋಟಲೆಗೊಂಡು ಪುಳು ಪಕ್ಷಿ ಪಶು ಜಲಜತರು ಶಿಲೆಗಳೆನಿಪ ಹಲವಲಿ ನವೆಸವೆದು ಸ್ತ್ರೀಪುರುಷತ್ವ ಭೇದವಹ ನರಜನುಮ ಬಹರೆ 1ಪುರುಷನೆನಿಸಿದರು ಪಾದೋರು ಬಾಹುಜ ಭೇದವರಿತು 'ಪ್ರತ್ವ 'ದ್ಯಾ ನಯ 'ಜ್ಞಾನಶರಧಿಯೆನಿಸುವ ಭಾಗ್ಯ ಬರುವ ಸಾಧನಗಳನುಕರುಣಿಸುವ ಪರಮೇಶನೊಲಿವಂತೆನಗೆ 2'ವೃತ ಫಲವಹ ಸಶಾಸ್ತ್ರ ನಿಗಮಾಧೀತಿಯೊಪ್ಪದಿತದುಕ್ತ ಕರ್ಮಾಚರಣೆಗೈಯುತ ಸಮರ್ಪಿಸುತ್ತೀಶ್ವರಗೆ ತತ್ಫಲವ ಬಯಸದೆತೆಪ್ಪಗಿರುವಧಿಕಾರಿಯಪ್ಪ ಸತ್ಪಥಕೆ3ಶೃತಿಯುಕ್ತಿ ಸ್ವಾನುಭವಗಳ ಬಲದಿ ಮನನಗೈಯುತಲಿ ನಿತ್ಯಾನಿತ್ಯ ವಸ್ತುಗಳ ತಿಳಿದನರ್ಥತೆಯರ್ಥಗಳೊಳು ವೈರಾಗ್ಯ ಭಾಗ್ಯವನೀವಮತಿ ಬಂದು ಭಕತಿ ಜ್ಞಾನಗಳಳವಡುವರೆ 4ಬಂದ ವೈರಾಗ್ಯ ನೆಲೆಗೊಂಡು ಬಳಸಿದ ಕ್ರಿಯಾದಂದುಗವು ಸಡಿಲಿ ಬ'ರಂಗ ವ್ಯಾಪಿಸಿ ಕನಸೆಂದು ಕಾಣುತಲೂಡಲುಣುತಲುಡಿಸಿದರುಡುತತಿಂದು ತೇಗುವ ಕರ್ಮ ಬೆಂದು ಸುಖಿಯಹರೆ 5ಹೊರಗೊಳಗುಗಾಣದಾಗಸದಂತೆ ಬಯಲಾಗಿಕರಣಗಳ ಕಾಲಾಟವುಡುಗಿ ಸ್ವ ವ್ಯತಿರಿಕ್ತವರಸಿದರು ಸಂತೃಪ್ತಿ ತೋರದೆ ಸ್ವಾನುಭವಬರಿಯರಿವೆ ನೆಲೆಯಾಗಿ ತಾನೆ ತಾನಹರೆ 6ನಿಂತವೇದಾಂತ ಪದ್ಧತಿಯ ನಿಲಿಸುವರೆ ಮೊದಲಂತೆ ಕೃಷ್ಣಾವತಾರದಿ ಪಾರ್ಥಗೊರೆದ ಕೃಪೆವಂತ ನೀ ಮರಳಿ ಚಿಕನಾಗಪುರದಲಿ ಹೊಳೆದನಂತಮ'ಮನಾಗಿರುವೆ ವಾಸುದೇವಾರ್ಯ 7
--------------
ತಿಮ್ಮಪ್ಪದಾಸರು
ನೀರಜದಳನಯನಾ ಅನ್ಯನಲ್ಲ ನಾ ನಿನ್ನ ದಾಸನುಯಂದು ಚಿನ್ಮಯ ಮೂರುತಿ ಶ್ರೀನಿವಾಸಹರೆ ಪ ಪಂಕಜೋದ್ಭವನಾ ಪಡೆದಂಥಾ ವೆಂಕಟಗಿರಿನಿಲಯ ವೇಣುನಾದಪ್ರೀಯಾ ಬಿಂಕಾದಿ ಶರಣರ ಪೊರೆದಂಥಾ ಚಕ್ರಧರ ಶೌರಿ ಮಹಾನುಭಾವ ಬಿಂಕದಾನವರಳಿದ ಬಲವಂತಾ ಶಂಕೆಯಿಲ್ಲದೆ ನಿಮ್ಮ ಸ್ಮರಿಸುವ ದಾಸರ ಕಿಂಕರ ಕಿಂಕರ ಕಿಂಕರನೆಂದು ಇನ್ನು 1 ವಾಸುಕಿಶಯನ ಶ್ರೀ ವಸುದೇವನಂದನ ಭೂಸರವಂದ್ಯ ಪುರಾಣ ಪುರುಷ ಈಶ ಜಗತ್ರಯ -----ರಾಜವರದಾ ಭೂಸುತೋನಾಯಕ ಭೂರಮಣಾ ಸಾಸಿರನಾಮದ ಸರ್ವೇಶನೆ ಕೃಷ್ಣಾ ಭೂಸೂರ ಕೀರ್ತಿ ಪ್ರಕಾಶನಾದ ಕೇಶವ ಗೋವಿಂದ ಕರುಣಿಸಿ ಕಾಯೋ ಎನ್ನ ಪಾದ ವೈಕುಂಠಾಧೀಶ 2 ಅಂಡಜಗಮನ ಭೂಮಂಡಲ ನಾಯಕ ಪುಂಡರೀಕಾ ವರದ ಪರಮಾತ್ಮನೆ ಚಂಡ ಪ್ರಚಂಡ ವೇದಾಂತ ರಹಸ್ಯನಾದ ಉದ್ದಂಡ ದೇವಾ ಕೊಂಡಾಡುವರ ನಿಮ್ಮ ಕರುಣಿಸಿ ಕೈಹಿಡಿದು ಕಾಯ್ವ ಭಾರವುಳ್ಳ ಘನನು ನೀನೂ ಪತಿ ` ಹೆನ್ನ ವಿಠ್ಠಲ' ನಿನ್ನಂದು ಸೇರಿದ ಅವರ ಹರುಷದಿ ಸಲಹೋ ಇನ್ನೂ 3
--------------
ಹೆನ್ನೆರಂಗದಾಸರು
ನೀರೇ ದÉೂೀರೆ ದೋರೆ ರಂಗನಾ| ಕರೆ ತಾರೇ ಮುನಿಜನ ಸಂಗನಾ ಪ ಶರಣ ರಕ್ಷಕ ನೆಂಬೋ ಬಿರುದವ ಸಾರಲು | ಮೊರೆಯಾ ಹೊಕ್ಕೆನು ಕೇಳಿ ಬಂದುನಾ1 ಜ್ಞಾನ ಭಕುತಿಗಳ ಏನೇನರಿಯದ | ಮಾನಿನಿ ನೋಡುವರೇ ಅವಗುಣಾ 2 ಗುರುಮಹಿಪತಿ ಸುತ ಪ್ರಭು ಕರುಣಾಕರ | ನೆನದನು ಮೊರೆಕೇಳಿ ಇಂದಿನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇ ನೀಕರೆ ತಾರೇ ಪ್ರಾಣದೊಲ್ಲಭನಾ|ಜಾಣ ಸುಜ್ಷಾನೇ ಪ ಹೃದಯ ಮಂದಿರದೊಳು ಅರುಹುದೀಪವಹಚ್ಚಿ| ಹಾಡಿ ನೋಡಲಿಹೆ ಮೈದೋರನ್ಯಾಕ|ಮೈದೋರ ನ್ಯಾಕ 1 ಧ್ಯಾಸಮಂಚದಿ ಭಕುತಿ ಹಾಸಿಕೆಯು ಸು| ವಾಸನೆಪುಣ್ಯಕ ವಲಿದು ಬಾರನೇ|ವಲಿದು ಬಾರನೇ 2 ಸಕಲ ನುಕೂಲಿರಲು ಕ್ರೀಡೆಗೆ ಇನಿಯನು ಪುಕಟ ದೊಲಿಯಭಾಗ್ಯ ಮಂದಳು ಕಾಣೇ|ಮಂದಳು ಕಾಣೇ 3 ಅರಿದವಳು ಎಂದು ಅರಿತು ಕೈಯ್ಯವಿಡಿದು| ಮರಳೆನ್ನ ಅಂತ ನೊಡುವರೇನೇ ನೋಡುವರೇನೇ 4 ಧರೆಯೊಳು ಭೋಗಪದಾರ್ಥಿವು ಸರ್ಪದ| ಸರಸದ ಓಲಾಯಿತು ಅಗಲಿರಲಾರೇ|ಅಗಲಿರಲಾರೇ 5 ಬಂದರೊಂದಿನ ನಿಶೆದಲಿ ಕಳೆಗೂಡದೇ| ಒಂದು ಜಾವ ವ್ಯರ್ಥಿಹೋಯಿತಲ್ಲಮ್ಮಾ|ಹೋಯಿತಲ್ಲಮ್ಮಾ 6 ಗುರುವರ ಮಹಿಪತಿ ನಂದನ ಪ್ರಭುವಿನ| ಚರಣವಗಾಣದೇ ಜೀವಿಸಲಾರೆ|ಜೀವಿಸಲಾರೆ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನುಡಿ ಜ್ಞಾನದ ಮಾತು ಒಡನೆ ನಂಬುದ್ಹೇತು ನಡಿ ಜ್ಞಾನದ ಮಾತು ಕಡೆಗಾಣಿಸಿತು ಧ್ರುವ ನುಡಿಯ ಒಡಲೊಳಗಿಟ್ಟು ನಡಿಯೊಳಗ ನುಡಿದೋರಿ ಕೊಡುವರಿಗ್ಯದೆ ಘನಮಹಿಮೆ ನೋಡಿ ನುಡಿದಂತೆ ನಡೆದರೆ ನಡೆನುಡಿ ಆಗುವದು ನುಡಿ ಅಡಿ ತೋರುವರಿಗೆಲ್ಲಿ ನಡೆನುಡಿ 1 ನಡೆಯೊಳಗ ನುಡಿಯದೆ ಪಡೆದುಕೊಂಬವ ಬಲ್ಲ ಒಡನೆ ಸದ್ಗುರು ದಯದೊಲವಿಲಿದ್ದು ನಡೆನುಡಿ ನಿಜವಾಗಲರಿಯದೆ ನಾಡೊಳಗೆ ಅಡಿಗಡಿಗೆ ಹೇಳ್ಯಾಡು ಮಾತೆ ಬರದು2 ನುಡಿವುದೆ ವೇದಾಂತ ನಡೆವುದೆ ಸಿದ್ಧಾಂತ ನಡೆನುಡಿಗೆ ಸಾಕ್ಷ ಶ್ರೀದೇವದತ್ತ ನುಡಿಗೆ ನಿಜ ನೆಲೆದೋರಿ ನಡಿಗೆ ನಿಲುಕಡೆ ಮಾಡಿ ಕೊಡುವನೊಬ್ಬನೆ ಮಹಿಪತಿ ಗುರು ಸಮರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು