ಇ. ಶ್ರೀ ಹರಿಯ ಸ್ತುತಿ
ತಿರುಪತಿ ಶ್ರೀನಿವಾಸ ದೇವರು
ಎಡ್ಡಂ ತಿಡ್ಡಂ ಮಾತುಗಳಾಡುವಿದಡ್ಡನು ಶಾಣ್ಯಾನೋಗುಡ್ಡದಿ ಸೇರುತ ಬಡ್ಡಿ ಸಹಿತ ಪರದುಡ್ಡು ಸೆಳೆವರೇನೋ ಪ
ಕೊಟ್ಟಾದನ್ನುಣ್ಣುತ ದೇಹವ ಪುಷ್ಟಿಸಿ ಕಾದಿರುಶಕಟ್ಟಿದ ಹಣವನು ಕಷ್ಟದಿ ಕೊಡದಿರೆ ಕುಟ್ಟಿ ಸೆಳೆದು ತರುವಿ ಚಾಳಿ ಕೆಟ್ಟದು ಕಲಿತಿರುವಿ 1
ಶಿಷ್ಟರು ಗುಡಿಯೊಳು ಬಂದರೆ ಅವರನು ಅಟ್ಟಿಸಿ ಹೊರಡಿಸುವಿಮೊಟ್ಟೆಯಲಿ ಹಣ ಕಟ್ಟಿದವರು ಬರೆ ದೃಷ್ಟಿಸಿ ಮನ್ನಿಸುವಿಚಾಳಿ ಕೆಟ್ಟದು ಕಲಿತಿರುವಿ 2
ಕಾಳಗ ನಡೆಸಿರುವಿಶ್ರೀಲೋಲನೆ ಮುಖತೋರಿಸು ಎಂದರೆ ಆಲಯಕ್ಹೋಗೆನುವಿಚಾಳಿ ಕೆಟ್ಟದು ಕಲಿತಿರುವಿ 3
ಹುಚ್ಚುನ ತೆರದೆಲೆ ಮಾತುಗಳಾಡುವಿ ನಿಶ್ಚಯ ಒಂದಿಲ್ಲಾತುಚ್ಛಿಸಿ ಎಲ್ಲವ ನಿನ್ನಲಿ ಬಂದರೆ ಮತ್ಸರ ನಡೆಸಿರುವಿಚಾಳಿ ಕೆಟ್ಟದು ಕಲಿತಿರುವಿ 4
ಶುಭ ದಾಸನಾಗಿದ್ದಿಈ ಸಮಯದೀತನು ಪೋಷಿಸಲು ವಿಷಯಾಸೆಯನಾಗಿದ್ದಿಧನರಾಸಿಯೊಳಗೆ ಬುದ್ಧಿ ಇಂದಿರೇಶನೆ ಕಲಿಸಿದ್ದಿ 5