ಒಟ್ಟು 448 ಕಡೆಗಳಲ್ಲಿ , 63 ದಾಸರು , 374 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆ ಶ್ರೀಗುರು ಪಾದವ ನಂಬು ನಿನಗಲ್ಯಾಹುದು ಘನ ಸುಖದಿಂಬು 1 ಅನುದಿನ ನೋಡಾ ನಂಬದೆ ನಿಜವನು ನೀ ಕೆಡಬ್ಯಾಡ 2 ಬ್ಯಾಡೆಂಬುದು ಈ ಮಾತನೆ ಕೇಳು ಬೇಡದೆ ಬಯಸದೆ ನಿಜದಲಿ ಬಾಳು 3 ಬಾಳುವದೀಪರಿ ಜನದಲಿ ಲೇಸು ತಿಳಿಯದೆ ಬಯಸುವದ್ಯಾತಕೆ ಸೋಸು 4 ಸೋಸ್ಹಿಡಿದರ ಬೇಕಾಹುದು ಜನ್ಮ ಕರ್ಮ 5 ಭವ ಬಂಧ ಮರ್ಮವ ತಿಳಿಯದವನೆ ತಾ ಅಂಧ 6 ಅಂಧಗ ತಿಳಿಯದು ಆತ್ಮದ ಗೂಢ ಸಂಧಿಸಿ ಬೀಳಲು ವಿಷದಲಿ ಮೂಢ 7 ಮೂಢಗೆಲ್ಲಿಹ್ಯ ಆತ್ಮದ ವಿಚಾರ ನೋಡುವ ನೋಟವು ಇದು ಬಲುದೂರ 8 ದೂರಕೇ ನೀ ದೂರಾಗಿಬ್ಯಾಡ ಅರಿಯಲು ತನ್ನೊಳು ಸಾರವೆ ನೋಡಾ 9 ನೋಡುವುದಿದು ಗುರುಙÁ್ಞನದ ಗುಟ್ಟು ಆಡಿದ ಅನುಭವ ಮಾತಿಗೆ ಮುಟ್ಟು 10 ಮುಟ್ಟಿದ ಖೂನವು ಮಿಸುಕಲಿ ಬ್ಯಾಡ ಘಟ್ಯಾಗಿ ನಿಜಘನ ಬೆರೆ ಗಾಢಾ 11 ಗಾಢಾಗಿಹುದು ನಿಜಗುರು ಙÁ್ಞನ ಮಾಡುವ ಧ್ಯಾನಕೆ ಅನುಸಂಧಾನ 12 ಉನ್ಮನದಲಿ ತಿಳಿವುದು ಗುರುಮುಖ 13 ಗುರು ಮುಖದಲಿ ಬೆಳಗಾಹುದು ಪೂರ್ಣ ಬೀರುವ ಪ್ರಭೆ ಸದ್ಗುರು ಕರುಣ 14 ಕರುಣದ ಸಾಗರ ಗುರುವರ ಮೂರ್ತಿ ಇರುಳ್ಹಗಲೆ ಕೊಂಡಾಡುವೆ ಕೀರ್ತಿ 15 ಕೀರ್ತಿಯ ಕೊಂಡಾಡುವನೀ ಮಹಿಪತಿ ಸಾರ್ಥಕವಿದು ಅನುಭವ ಮನೆಮೂರ್ತಿ 16
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನವೇ ಬರಿದೇ ಚಿಂತಿಸಲಿ ಬ್ಯಾಡಾ | ಹರಿಚರಣ ಸ್ಮರಿಸಿ ಸುಖಿಯಾಗು ಕಂಡ್ಯಾ ಪ ಕರ್ಮ ಜನಿತ ಲಾಭಾ ಲಾಭ | ವಿಧಿ ವರೆದ ಪರಿಯಾ | ತನ್ನಿಂದ ತಾನೇ ಬಹದೆಂದು ಖರಿಯಾ | ಇನ್ನು ತಾ ಬಯಸಿದರೆ ಬಾರದರಿಯಾ | ನಿನ್ನೊಳು ನೀ ತಿಳಿದು ನಂಬು ಹರಿಯಾ 1 ಬಸಿರೊಳಗ ಬೆಳೆಸಿ ಶಿಶುತನದಿಂದ ಯೌವನದ | ದೆಸೆಗೊಟ್ಟು ಸಲುಹಿದ ನಲ್ಲವೇನೋ | ಬಿಸಜಾಕ್ಷ ಅಸಮರ್ಥನಾದನೇನೋ | ಕುಶಲ ನಾನೆಂದ-ಹಂಕರಿಸಿದೇನೋ 2 ಬೊಂಬಿಯಾನು ಆಡಿಸುವ ಸೂತ್ರಧಾರಕನಂತೆ | ಇಂಬಾಗಿ ಕುಣಿಸುವನು ಪ್ರಾಣಿಗಳನು | ಡಿಂಬಿನೊಳು ನಿಂತು ತಾ ಚೇತಿಸುವನು | ಕುಂಭಿನಲಿ ಸ್ವತಂತ್ರನಲ್ಲ ನೀನು | ಅಂಬುಜನಾಭನ ಲೀಲೆಯೆಂದು ಕಾಣು 3 ಬದಿಲಿದ್ದ ಪಾತ್ರೆಯನು ಬಾವಿಯೊಳಗದ್ದಿದ್ದರೆ | ಉದಕ ತುಸು ಬಹದೆಂದು ನುಡಿದು ಸೊಲ್ಲಾ | ನದಿಯೊಳೆದ್ದಲು ನೀರು ಹೆಚ್ಚದಲ್ಲಾ | ಇದನರಿಯದೆವೆ ಭ್ರಾಂತಿಯೊಳಗ ಖುಳ್ಳಾ | ಕುದಿದು ಸಂಸಾರದಲಿ ಸೊರಗಿದನೆಲ್ಲಾ 4 ಗುರು ಮಹಿಪತಿಸ್ವಾಮಿ ಬೋಧಾಮೃತವ ಸವಿದು | ಹರಿಚರಣದಲಿ ಭಾರವಪ್ಪಿಸಿಟ್ಟು | ದೊರಕಿದದರಿಂದ ಸಂತುಷ್ಟಬಟ್ಟು | ಸ್ಥಿರಚಿತ್ತನಾಗಿ ಕಳವಳಿಕೆ ಬಿಟ್ಟು | ತರುಣೋಪಾಯದ ತಿಳಿಯೋ ಜ್ಞಾನಗುಟ್ಟು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರತರ ತಾ ಮರವಲ್ಲದು ನೋಡಲು | ಅರತರತಾ ಅರವಲ್ಲದು ನಿಜದೊಳು | ಘನದರುವೇ ತಾನಾಗಿ | ಕುರುವಿನೊಳಿರುವಾಗಿಹ ಸ್ವಾನಂದದಿ | ತೆರವಿಲ್ಲದೆ ಸಲೆ ತುಂಬಿತುಳುಕುತಿಹ | ಜಯ ಜಯತು 1 ತೋರುವ ದೃಶ್ಯವ ಕಾಂಬುವ ನಯನಕ | ಸಾರಿಯಮನವನು ನೋಡುವ ಬುದ್ಧಿಗೆ | ನಿತ್ಯ ನಿರಂಜನ ವಿಶ್ವ ಭರಿತನೆಂದು || ಸಾರುವ ಶೃತಿಯಿಂದಾತ್ಮ ಪ್ರಚೀತಿಯ | ಭವ | ವಾರಿಸಿ ಚಿತ್ಸುಖಲಿರಿಸಿದ ಮಹಿಪತಿ | ಸದ್ಗುರು ಜಯ ಜಯತು 2 ಮೊದಲಿಗೆ ಜಯದಾರ್ಜ ಲಕ್ಷಣವನು | ಹೃದಯದಿ ನೆಲೆಗೊಳಿಸಿ | ಇದರದರಿಸಿ ಭವದ್ಹೆದರಿಕೆÉ ಹಾರಿಸಿ | ಸದಮಲ ಬ್ರಹ್ಮನ ಕಳೆಯನು ತೋರಿಸಿ | ಗುರುಮೂರ್ತಿಗೆ ಶರಣು 3 ಆಡುವ ರೇಚಕ ಪೂರ್ವಕ ನಂದಿಯ | ಜೋಡಿಸಿ ಯರಡನೆ ಮೆರೆವಸುಷಮ್ನಿಯ | ನಿಜವiನ ಸಾರಥಿಯಾ | ಕೂಡಿಸಿ ಹರುಷದ ತೇರಿ ನಡಸುತ ಸ | ಫಾಡಿರೆಯಿಂದಲಿ ಮೇಲ್ಗಿರಿಯಾತ್ರೆಯ | ಗುರುಮೂರ್ತಿಗೆ ಶರಣ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮರೀಬೇಡ ಮಾಧವನ ಅರಿವಿಟ್ಟು ಭಜಿಸೋ ಸ್ಥಿರವಲ್ಲ ಧರೆಭೋಗ ಮೆಚ್ಚಿ ಕೇಡಬೇಡ ಪ ಕೂಡು ನಿಸ್ಸಂಗದೊಳು ಆಡು ಸುಸಂಗದೊಳು ಮಾಡು ನಿಜವರ್ತನಗಳು ಬೇಡು ಬಡತನದೊಳು ದೂಡು ದುವ್ರ್ಯಸನಗಳು ತೋಡು ದುರ್ಗುಣಗಳು ನೋಡು ನಿಜಭಕ್ತರೊಳು ನೀಡು ಮನ ಹರಿಯೊಳು 1 ಹೀರು ಮಹಗರುವವ ತೂರು ಮದ ಮತ್ಸರವ ತೂರು ದುಷ್ಕøತ್ಯವ ಕಾರು ಬಲುವಿಕಾರವ ಮೀರು ಧರೆಭೋಗವ ತೋರು ನಿಜಧ್ಯಾನವ ಏರು ಸನ್ಮಾರ್ಗವ ಸೇರು ಹರಿಪದವ 2 ಕುಂದುಗಳನೊರೆಯದಿರು ನಿಂದೆಗಳನಾಡದಿರು ಬಂಧನಕ್ಕೆ ಬೀಳದಿರು ಮಂದತ್ವದೂರು ತಂದೆ ಶ್ರೀರಾಮನಡಿಗೊಂದಿ ವೈಕುಂಠಪದ ಚಂದದಿಂ ಪಡಕೊಂಡಾನಂದದಲಿ ಸೇರು 3
--------------
ರಾಮದಾಸರು
ಮರೆಯದಿರುವರೋ ನಿನ್ನ ಸ್ಮರಣೆಯಾ ನೀನು ಪ ಗರಿಯಾ ಚರಿಯಾ ಮರಿಯಾ ನೆರಿಯಾ | ಸೇರಿ ಕ್ರೂರ ಮಾರಿದಾರಿ ಜಾರಿ ದೂರಸಾರದೇ ಅ.ಪ ಕಡಲಶಯನೆಚ್ಚರಾ ಕಳೆದು ಹೊರಿಯಲುದರಾ | ಬಿಡದೋಲೈಸಿ ಘನಮದರಾ | ಕಡಿಯಾ ಕಿಡಿಯಾ ನುಡಿಯಾ ಪಡಿಯಾ | ಬೇಡಿ ಕಾಡಿ ಓಡಿ ಆಡ ಬ್ಯಾಡ ಗಾಢ ಮೂಢನೇ 1 ತರಳ ಪ್ರಾಯ ಮುಪ್ಪಿಂದೆ ತೀರಲಾಯುಷ್ಯ ಬರುದೇ | ಯರಗುವಾಯಮ ತಾ ನಿಲದೇ | ತ್ವರಿಯಾ ಧರಿಯಾ ಕುರಯಾ ಮರಿಯಾ | ವೈರಿ ಮೀರಿ ಹಾರಿ ತೂರಿ ಹೊರುವಂದದಿ 2 ಮಿನಗು ಬೆಳಗ ಘನ ಮಹಿಪತಿ ಸುತ ಪ್ರಿಯನಾ | ಅನುಭದಿಸದಿಹುದೇನಾ | ಅನುವೇ ಮನವೇ ಗುಣವೇ ದನವೇ | ಜ್ಞಾನ ಹೀನ ಮಾನ ದೀನ ಆನನದಲೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರ್ಮವ ತಿಳಿದವಗೆ ಈ ಕಾಯದ ಕರ್ಮದ ಗೊಡವೆಯುಂಟೇ ನಿರ್ಮಲಾತ್ಮಕಗೆ ಸಮರ್ಪಣೆಯೆಂಬ ಸ್ವ ಧರ್ಮ ಮೂಲ ಮಂತ್ರ ಸೋಹಂವೆಂದೆಂಬ ಪ ಜ್ಯೋತಿ ಹಸ್ತದೊಳಿರಲು ಕತ್ತಲೆಗೆ ಬ ದ್ಯೋತವ ಬಯಸುವರೇ ಪಾತಕ ಪುಣ್ಯ ಶುಭಾಶುಭವೆಂಬ ವಿ ಘಾತಿಯಾಗುವ ಅವಧೂತ ಮಂತ್ರವೆಂಬ 1 ಶರೀರಾತ್ಮಗ್ರಹವು ಪೂಜೆಗೆ ಸಹಜ ಪರಿಪರಿ ವಿಷಯ ಭೋಗಾ ನಿದ್ರೆ ಸಮಾಧಿ ಸಂಚಾರ ಪ್ರದಕ್ಷÀಣೆ ನಿರುತ ಆಡುವ ವಾಣಿ ಸ್ತೋತ್ರಗಳೆಂದೆಂಬ 2 ಬರಿದೆ ಕಾಯದ ಸುಖವು ಕರ್ಮಾ ಕರ್ಮ ಪರಿಪೂರ್ಣಾತ್ಮಕಗರ್ಪಿಸಿ ಗುರು ವಿಮಲಾನಂದಭರಿತನಾಗಿಹ ಮಂತ್ರೋ ಚ್ಚರಣೆಯೊಳಿರುವುದು ದೊರಕೊಂಡನೆಂದೆಂಬ 3
--------------
ಭಟಕಳ ಅಪ್ಪಯ್ಯ
ಮಾಡಿರೆÉ ಆರತಿಯಾ ಹರಿಗೋವಿಂದನಿಗೇ ಪ ಭಾರ ಕೋರೆ ದಾಡಿಯ ತೋರಿ ಕಂದನ ಕಾಯ್ದಗೆ 1 ನೆಲನ ಮೂರಡಿ ಆಡಿ ಛಲದಿ ಕೊಡಲಿ ಪಿಡಿದು ಶಿಲೆಯ ರಕ್ಷಿಸಿದ ಶ್ರೀ ರಾಮ ಚಂದ್ರಗೇ 2 ಹಾಲು ಮೊಸರು ಬೆಣ್ಣೆ ಕದ್ದು ಮೆದ್ದವನಿಗೆ ಬುದ್ಧ ಮೂರುತಿಗೇ 3 ವರ ತುರಗವನ್ನೇರಿ ಜಗವನೆಲ್ಲವ ತಿರುಗೀ ಜಗವರಕ್ಷಿಸುವ ವೆಂಕಟ ವಿಠಲಗೇ 4
--------------
ರಾಧಾಬಾಯಿ
ಮಾತಿನಂತಲ್ಲನುಭವ ಜ್ಞಾನ ಮರುಳಜನ ಬಲ್ಲವೇನ ಯತಿಮುನಿಗಳು ಸಾಧಿಸುವ ಖೂನ ಮನೋನ್ಮನದ ಸಾಧನ ಧ್ರುವ ನುಡಿಜ್ಞಾನಾಡಿ ತೋರಬಹುದು ನಾಡ ಲೋಕದೊಳೆಲ್ಲ ನಡಿಜ್ಞಾನದೆ ದುರ್ಲಭವದು ಆಡಿ ದೋರಲಿಕ್ಕಿಲ್ಲ ಗುಹ್ಯ ನಿಜಬೋಧಿದು ಒಡೆದ್ಹೇಳುವದಲ್ಲ ಒಡನೆ ಸದ್ಗುರು ಘನ ದಯದಲಿದು ಪಡೆದವನೆ ತಾಂ ಬಲ್ಲ 1 ಕಲಿತಾಡುವ ಮಾತಿಗೆ ಸಿಲುಕದ ಮೂಲವಸ್ತುದ ಖೂನ ನೆಲೆನಿಭವೆ ತಾ ಅಗಮ್ಯಿದು ಬಲು ಸೂಕ್ಷ್ಮಸ್ಥಾನ ಬಲಿಯದೆ ರೇಚಕ ಪೂರ್ವಿದು ನೆಲೆಗೊಳ್ಳುದು ಸಾಧನ ನಿಲಕಡ್ಯಾಗದೆ ಕುಂಭಕಲಿದು ಬಲಿಯದು ಗುರುಙÁ್ಞನ 2 ಸ್ವಾನುಭವ ಸುಖ ಸಾಧಿಸಿ ಅನುದಿನದಿ ನೋಡಿ ಮನಗೆದ್ದು ಜನಕೆ ಮೋಹಿಸುವ ಅನುಭವ ಹೇಳಬ್ಯಾಡಿ ಭಾನುಕೋಟಿತೇಜನೊಲಿದು ತಾ ಖೂನಾಗುವ್ಹಾಂಗ ಮಾಡಿ ದೀನ ಮಹಿಪತಿ ಸ್ವಾಮಿ ಮನಗಂಡು ಮನೋಹರ ಕೊಂಡಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾತು ಆಡುವೆ ಯಾತಕೆ ಮನವೆ ನೀ ಸೋತು ಸುಮ್ಮನಿರು ಜೋಕೆ ಪ ಮಾತು ಆಡುವೆ ಯಾಕೆ ಮಮತಾ ಅಹಂಕಾರದಿ ಶ್ರೀತರುಣಿವರನ ಸಿರಿನಾಮವಿಲ್ಲದೆ ಅ.ಪ ಕಾಯ ಅಸ್ಥಿರವೆನ್ನದೆ | ಇಹ ಪರಕೆ ಸ- ಮಾಯವಾದಗಳಾಡೆ ಬಾಯಿ ನೋವಲ್ಲದೆ 1 ವೇದ ಪುರಾಣವಿಲ್ಲ | ಶಾಸ್ತ್ರವೆ ಬ್ರಹ್ಮ- ವಾದವೇ ಮೊದಲೇಯಿಲ್ಲಾ ಸಾಧನೆಯೆಂಬುವದು ಲೇಶಯಿದರೊಳಿಲ್ಲಾ ಹಾದಿಹೋಕರ ಕೂಡಿ ಪ್ರೌಢನು ನಾನೆಂದು 2 ಹರಟೆ ಹರಟೆ ಮೋದಿಸಿ ಪರಗತಿ ಚಿಂತೆ ಬಿಂದು ಮಾತ್ರವು ಕಾಣೆ ಹರಿವ ನೀರೊಳು ಬೂದಿಹಾಕುವಂದದಿ ವ್ಯರ್ಥ 3 ಒಂದಕ್ಕೊಂದ್ಹೆಚ್ಚಿಸುತ | ಶುಷ್ಕವಾದ- ದಿಂದ ಕಾಲವ ಕಳೆಯುತ ನಿಂದಿಸಿ ಪರರ ಸ್ವಯೋಗ್ಯತೆ ತಿಳಿಯದೆ 4 ಬಲ್ಲೆನಾ ಬಿಡು ಎಂಬುವೆ | ಸದಾ ಒಬ್ಬ- ಪುಲ್ಲಲೋಚನ ಗುರುರಾಮವಿಠಲನ ಕಾಣ- ಲಿಲ್ಲ ಶೋಧಿಸಿ ತಿಳಿಯಲಿಲ್ಲ ಬರಿದೆ ಬಾಯಿ 5
--------------
ಗುರುರಾಮವಿಠಲ
ಮಾಧವ ಸ್ವಾಮಿ ಪ. ಬಿಕ್ಕಿ ಬಿಕ್ಕಿಯಳುತ ಬಂದ ಗೋಪಿಯ ಕಂದಉಕ್ಕಿಹರಿವ ಕಣ್ಣನೀರ ತೊಡೆದಳೆಶೋದೆಅಕ್ಕರದಿಂದಲಿ ಮಗನ ಅತಿಮುದ್ದನಾಡಿಮಕ್ಕಳ ಮಾಣಿಕ್ಯವೆ ನೀ ಮನೆಯೊಳಗಾಡೈ 1 ಹಳ್ಳಿಯ ಮಕ್ಕಳು ಎನ್ನ ಬೈದರಮ್ಮಕಳ್ಳನೆಂದು ಎನ್ನಕೂಡೆ ಆಡಲೊಲ್ಲರುಮೆಲ್ಲನೆ ಬೈಯುತ್ತ ಬರಲು ಕಲ್ಲಲಿಟ್ಟರಮಯ್ಯಅಲ್ಲಿಂದಂಜಿ ಅಳುತ ನಾನು ಓಡುತ ಬಂದೆ 2 ಬಾಗಿಲ ಗೊಲ್ಲರು ಗೋಪಗೋಪಿಯರೆಲ್ಲಹಗಲುಗಳ್ಳ ಹಾಲು ಬೆಣ್ಣೆ ಚೋರನೆಂದರುಮಗುವೆಂದೆನಿಸಿಕೊಂಡು ಮನೆಯೊಳಗಾಡೈಹೋಗುನ್ನಂತ ಉಡುಪಿಯಲ್ಲಿ ಮುದ್ದು ಹಯವದನರಾಯ 3
--------------
ವಾದಿರಾಜ
ಮಾನಿನಿ ಭೃಂಗ ಪಾಡಿ ಪಾವನವಾದ ಬಗಿಯ ಪ. ಹಿಂಡು 1 ಏಳು ಸುತ್ತಿನ ಕೋಟೆಬಾಳೆ ನಿಂಬೆÉ ದಾಳಿಂಬ ವನ ಎಲೆತೋಟದಾಳಿಂಬವನ ಎಲೆ ತೋಟದೊಳಗಿನ್ನುಸೀಳಿ ಕುಣಿಯೋ ಕಪಿಹಿಂಡು2 ಕಾಣಿ ಧರೆಮೇಲೆ3 ಆಲ ಅಶ್ವತ್ಥ ಪಲಾಶ ಬಾರಿಯ ವೃಕ್ಷಸಾಲು ಮಂಟಪವು ಸೊಬಗಿಲೆಸಾಲು ಮಂಟಪವು ಸೊಬಗಿಲೆ ರಂಗಯ್ಯವಾಲಗೈವ ವನವಿದು4 ನೀಲ ಮೇಘಶಾಮ ಬಾಲಿಕೆರಿಂದಲಿಲೀಲೆ ಮಾಡುವ ಸರೋವರಲೀಲೆ ಮಾಡುವ ಸರೋವರರಮಿಯರಸು ಲಾಲಿ ಆಡುವ ಮಣಿಗಳು5
--------------
ಗಲಗಲಿಅವ್ವನವರು
ಮಾಯಾ ಜೀವಾ ಪ ಕಳವಳಿಸುತ ನಿನ ಕುಲಹಂಕಾರವ ನಳಿದಿರೆ ಯಾಗುವುದಲ್ಲದೆಯಹುದೇ ಅ.ಪ ಮಾನಾ ಅವಮಾನ ಶವಸಮಾನಾ ಈ ನರಕುರಿಗಳು ನಿನಗೇನು ಹೊರಿಕಾರ ಪರಬೊಮ್ಮ ಜ್ಞಾನದೊಳಗೆ ತಾನಿಲ್ಲದೆ ಘನವಾ 1 ನೋಡಿ ಹೋದೆಲ್ಲೋ ಮರೆತಂತಾಡಿ ಓ ಮಾಯ ಜೀವಾ ಮೂಢ ಬುದ್ಧಿಗಳೇ ನೀ ಸಮನಾಡೀ ಆಡಬಾರದಂತಾಟಗಳಾಡುವೆ ಈಡಾಗಿಹುದಿದು ಮುಂದಿನ ಜನ್ಮಕೆ2 ಮಾಯಾ ಜೀವ ನೂಕೋ ಎಂಟಾರರೊಳಗೆ ನೀ ಜೋಕೆ ಠಾಕೂರನು ಶ್ರೀ ತುಲಸಿರಾಮನು ಏಕಾನಂದನಕಂದನೊಳಿಹಪರ 3
--------------
ಚನ್ನಪಟ್ಟಣದ ಅಹೋಬಲದಾಸರು
ಮುದದಿ ನಂಬಿದೆನೊ ಹಯವದನನೆ ಪ. ಭಕ್ತರನ್ನು ಭವಸಮುದ್ರದಿಂದ ನೂಕೊಇತ್ತ ಒಂದು ತಿಳಿಯಧ್ಹಾಗೆ ಹೀಗೆ ಇರುವರೊ 1 ಮಾಯಪಾಶದೊಶಕೆ ಕೊಟ್ಟ ಮಾಯಕಾರನ ತೋಯಜಾಕ್ಷ ನಾನಿದಕುಪಾಯ ಕಾಣೆನೊ2 ಸತ್ಯಸಂಧÀನೆಂಬೊ ಬಿರುದು ಎತ್ತಹೋಯಿತೊ ಹಸ್ತಿವರದನೆಂಬೋ ಕೀರ್ತಿ ಸುತ್ತಮೆರೆಸಿತೊ 3 ಗೂಢತನದಿ ಗುಡಿಯ ಮಾಡದಲ್ಲಿ ಇರುವರೆನಾಡಜನರು ನಿನ್ನ ಆಡಿಕೊಳದೆ ಬಿಡುವರೆ4 ಸಿರಿಹಯವದನ ಶೈನ (ಎನ್ನ?) ಗುರು ಶಿರೋಮಣಿಧರೆಯೊಳರಸಿದೆನೊ ನಿನಗೆ ಸರಿಯು ನಾ ಕಾಣೆ 5
--------------
ವಾದಿರಾಜ
ಮುದ್ದು ತಾರೋ ರಂಗಾ ಮುದ್ದು ತಾರೋ ಕೃಷ್ಣಾ ಸಿದ್ಧ ವೇದಾ ಗಮಾ ಭೇದ್ಯ ಮೋಹನ್ನಾ ಪ ಕಾಣಲಿಕ್ಕೆ ಹಸಿವೆ ತೃಷೆಗಳೇ ಮರೆವದು ಏಣಾಂಕ ಬಿಂಬ ಮೊದಾ ಬಾಯಿಂದಾ 1 ಕರ್ಪುರವಾ ಕರಡಿಗಿಯಂತೆ ಹೊಳೆವುತಾ ವಪ್ಪುತಿಹ ಚಲ್ವ ಪುಟ್ಟ ಬಾಯಿಂದಾ2 ಅಮ್ಮ ತಾರಮ್ಮ ನಾನುಂಡೆನೆಂದು ಕೈಯ ಬೀಸಿ ಝಮ್ಮನೇ ತೊಡಲು ನುಡಿ ಬಾಯಿಂದಾ 3 ತಪ್ಪ ಹೆಜ್ಜೆಯನಿಟ್ಟು ಘಲಘಲನೆ ನಡೆವುತ ಧಪ್ಪನೆ ಬೀಳುತ್ತಾ ಬಿರಿವ ಬಾಯಿಂದಾ4 ಹಣೆಯ ಅರಳೆಲೆ ಮಾಗಾಯಿಗಳಲ್ಲಾ ಆಡಿಸುತಾ ಕುಣಿದು ಬೆಣ್ಣೆಯ ಬೇಡುವ ಬಾಯಿಂದಾ5 ಕೋರಳಿಗೆ ಅಂಟಹಾಕಿ ಕೈಗಳಿಂದಾ ಬಿಗಿದಪ್ಪಿ ಗುರು ಮಹಿಪತಿ ನಂದನ ಜೀವನ್ನಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುದ್ದು ಮೋಹನ ದಾಸರೇ ನಿಮ್ಮ | ಶುದ್ಧ ಪಾದವ ನಂಬಿದೇತಿದ್ದಿಯೆನ್ನಯನಾದ್ಯ ವಿದ್ಯೆಯ | ಬುದ್ಧಿ ನಿಲಿಸಿರಿ ಹರಿಯಲೀ ಪ ನಡುಮನೆ ದ್ವಿಜನೆಂಬನಾ | ವಡ್ಡಲೊಳು ಉದಿಸೀದನಾ |ಆಡ್ಯಮತವನುಕರಿಸಿದಾ | ದೊಡ್ಡ ಬಳ್ಳಾಪುರದಲೀ1 ವಿಕೃತಿ ಸಂವತ್ಸರದಲೀ | ಪ್ರಕೃತ ಜನ್ಮವ ಪಡೆದನಾಸುಕೃತ ಪೊಗಳುವ ಜನರ ದು | ಷ್ಕøತವ ನೀ ಪರಿಹರಿಸುವೀ 2 ಚಿಪ್ಪಗಿರಿ ಸುಕ್ಷೇತ್ರದೀ | ಗೊಪ್ಪ ಶ್ರೀ ಅಂಕಿತವನೂ ಅಪ್ಪ ಶ್ರೀ ವರರಿಂದಲೀ | ವಪ್ಪಿ ನೀ ಕೈಗೊಂಡೆಯೋ 3 ಮೂರೊಂದು ಸಲ ಶ್ರೀಕಾಶಿಗೇ | ಭೂರಿಸಲ ಶ್ರೀ ಉಡುಪಿಗೇಸಾರಿ ವೆಂಕಟ ಪತಿಯನೂ | ಬಾರಿ ಬಾರಿಗೆ ನೋಡಿದೇ4 ದಾಸ ಪೀಳಿಗೆ ಬೆಳೆಸಲೂ | ಶೇಷನಾಮಕ ದಿವಿಜಗೇಭಾಸಿಸುವ ಅಂಕಿತವನಿತ್ತೂ | ಪೋಷಿಸಿದೆ ಸದ್ವೈಷ್ಣವತತ್ವ 5 ಸುಜನ ಜನ ಸಂಸೇವಿಸೆ | ವಿಜಯ ವಿಠಲನ ಸ್ಥಾಪಿಸೇಭಜನೆ ಗೈಯುತ ಮೆರೆದೆಯೊ | ನಿಜಪುರದಿ ನೀ ನಿಲ್ಲುತಾ 6 ಸಿರಿಯಧರಿಸಿ ಮೆರೆಯುವ ಗುರು | ಗೋವಿಂದ ವಿಠಲನ ಭಜಿಸುವಾಪರಮ ಗುರುಗಳೆ ನಿಮ್ಮ ಚರಣವ | ಪರಿಪರೀಯಲಿ ಪೂಜಿಪೆ 7
--------------
ಗುರುಗೋವಿಂದವಿಠಲರು