ಒಟ್ಟು 13948 ಕಡೆಗಳಲ್ಲಿ , 132 ದಾಸರು , 6945 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿನವೇ ಸುದಿನವು ಧ್ಯಾನ ಮಾಳ್ಪ ಜನವೇ ಸುಜನವು ಪ ಮಹಿಮೆಯ ಪಾಡುವ ಅ.ಪ. ಯುಕ್ತದಿ ಕೂಡಿ ಆಯುಕ್ತವಿರಕ್ತಿಯ ಮಾಡಿ ಭಕ್ತಿಗಾಗಲಿ ಭವಮುಕ್ತಿಗಾಗಲಿ ಹರಿಭಕ್ತರನೊಡಗೂಡಿ ರಕ್ತಿಲಿ ಪಾಡುವ ದಿನವೇ 1 ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿ-ಶ್ರುತಿಯ ಕಥೆಪೇಳವ ಕೇಳುವ 2 ಅರ್ಥಾಪೇಕ್ಷೆಯಲಿ ಕಾಲಗಳನ್ನು ವ್ಯರ್ಥಮಾಡದಲೆ ಪ್ರಾರ್ಥನೆ ಮಾಡುವ 3 ಕಾಮಕ್ರೋಧಗಳ ಕಳೆವ ರಘುರಾಮ ನಾಮಗಳ ಭವ ತಾಮಸ ಕಳೆಯುವ 4 ಹರಿವಾಸರವನು ಸಾಧಿಸಿ ಮುರುಹರ ನಾಮಗಳನು ಹರಿದಾಸರೊಡಗೂಡಿ ಹರುಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ ದಿನವೇ 5
--------------
ಸರಗೂರು ವೆಂಕಟವರದಾರ್ಯರು
ದಿನವೇ ಸುದಿನವು ಧ್ಯಾನಮಾಳ್ಪ ಜನವೇ ಸುಜನವು ಪ ಘನತರ ಹರಷದಿ ಮನದಣವಂದದಿ ಮನಸಿಜನಯ್ಯನ ಮಹಿಮೆಯ ಪಾಡುತ ಅ.ಪ ಯುಕ್ತದಿ ಕೂಡಿ ಅಯುಕ್ತ ವಿರಕ್ತಿಯ ಮಾಡಿ ಭುಕ್ತಿಗಾಗಲಿ ಭವಮುಕ್ತಿಗಾಲಿ ಹರಿ ಭಕ್ತರ ನೋಡಗೂಡಿ ರಕ್ತಿಲಿ ಪಾಡುವ 1 ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿಶ್ರುತಿಯ ಶ್ರೀಲಾಲಮನ ಕಥೆ ಪೇಳುವ ಕೇಳುವ 2 ಅರ್ಥಾಪೇಕ್ಷೆಯಲಿ ಕಾಲಗಳನು ವ್ಯರ್ಥಮಾಡದಲೆ ಪಾರ್ಥಸಾರಥಿಯನ್ನು ಪ್ರಾರ್ಥನೆ ಮಾಡುವ 3 ಕಾಮಕ್ರೋಧಗಳ ಕಳೆವ ರಘು ರಾಮ ನಾಮಗಳ ಪ್ರೇಮದಿಂ ಪಾಡುತ್ತ ರೋಮಾಂಚದೊಡಗೂಡಿ ಭವ ತಾಮಸ ಕಳೆಯುವ 4 ಹರಿವಾಸರವನು ಸಾಧಿಸಿ ಮುರಹರ ನಾಮಗಳು ಹರಿದಾಸರೊಡಗೂಡಿ ಹರಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ 5
--------------
ವೆಂಕಟವರದಾರ್ಯರು
ದಿಮ್ಮಿ ಸಾಲೆ ರಂಗ ದಿಮ್ಮಿ ಸಾಲೆ ಪ. ದಿಮ್ಮಿ ಸಾಲೆನ್ನಿರೊ ಗೋಮಕ್ಕಳೆಲ್ಲ ನೆರೆದುಗೋಪಾಂಗನೇರÀ ಮೇ¯ ಒಪ್ಪಿ ಭಸ್ಮ ಸೂಸುತಅ.ಪ. ಶಂಖನಾದ ಕೊಳಲ ಭೇರಿ ಪೊಂಕದಿ ಪಂಚಮಹಾವಾದ್ಯದಿಅಂಕವತ್ಸಲನ ನಿರಾತಂಕದಿಂದ ಹಿಡಿವ ಬನ್ನಿ1 ಗಂಧ ಕಸ್ತೂರಿ ಪುನುಗು ಚೆಂದದಿಂದ ಲೇಪಮಾಡಿನಂದಗೋಪಸುತನ ಮೇಲೆ ತಂದು ಸೂಸಿ ಭಸ್ಮವ 2 ಎರಳೆಗಣ್ಣಿನ ಬಾಲೇರು ಹರುಷದಿಂದ ಬಂದು ನಿಂತುವರದ ಕೆÉೀಶವನ ಮೇಲೆ ಪರಿದು ಸೂಸಿ ಭಸ್ಮವ 3 ಮತ್ತೆ ಕುಶಲದ ಬಾಲೆಯರುಗಳಿತ್ತೆರದಲಿ ಬಂದು ನಿಂತುಚಿತ್ತಜನಯ್ಯನ ಮೇಲೆತ್ತಿ ಸೂಸಿ ಭಸ್ಮವ 4 ವಾದಿರಾಜಗೊಲಿದು ಬಂದು ಸೋದೆಪುರದಲ್ಲಿ ನಿಂದಮೋದಿ ಹಯವದನನ ಮೇಲೆ ಪರಿದು ಸೂಸಿ ಭಸ್ಮವ5
--------------
ವಾದಿರಾಜ
ದಿವನಿಶಿ ತವಪಾದ ದಿವ್ಯಧ್ಯಾನವನಿತ್ತು ಪ ವಿಷಯಲಂಟಪನಾಗಿ ವ್ಯಸನ ಕೂಪದಿ ಬಿದ್ದು ಮಸಣ ಬುದ್ಧಿಯಿಂ ಕೆಡುವ ಶಿಶುವನುಲಕ್ಷಿಸಿ 1 ಪುಸಿಯ ಸಂಸಾರವ ವಿಷಮವೆಂದರಿಯದೆ ದೆಸೆಗೆಟ್ಟು ಬಳಲುವ ದಾಸನೋಳ್ದಯವಿಟ್ಟು2 ಸುಜನರೊಲುಮೆಯಿತ್ತು ಗಜಿಬಿಜಿ ತೊಲಗಿಸಿ ನಿಜಜ್ಞಾನ ದಯಮಾಡು ಸುಜನಾರ್ಯ ಶ್ರೀರಾಮ3
--------------
ರಾಮದಾಸರು
ದೀನ ಜನ ಅಭಿಮಾನವನು ನೀನು ಅನುದಿನದಲಿ | ರಕ್ಷಿಸುವೆ ಸಾನುಕೂಲದಿ | ಶ್ರೀ ನಿಧಿಯೆ ಧೀರ ಎಂದು | ವೀರ ಹರಿಮಾರ ಸಂಹಾರಸಖ ಕ್ರೂರ ಫಣಿದರ್ಪಹರನೇ | ಮುಕುಂದ ಮುಚಕುಂದ | ಪ್ರೀಯ ವರದನಾ ಮಾನಸದಿ ಅರಿತು ತವ ಕುರಿತು | ಭಕ್ತಿರತನಾಗಿಹ ಅನವರತ ಸುಖದಲಿಡುತಿಹ | ಕೃಷ್ಣಾ ಸಲಹು ಒಲವಿಂದ 1 ಅಂಕಿತ-ಕೃಷ್ಣ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೀನ ದಯಾಳು ನೀನೆವೆ ನಮ್ಮ ಅನಾಥನಾಥಾ ನಂದೊ ಬ್ರಹ್ಮನಂತುಗಾಣನುಪಮ ಧ್ರುವ ಪರಮಾನಂದ ಪರಮ ಪಾವನ ಶರಣ ಜನರಾಭರಣಾಗಿ ಹ್ಯ ಕರುಣ ಸಾಗರ ಪೂರ್ಣನೆ 1 ಅವ್ಯಕ್ತನಹುದೊ ವಿರಕ್ತ ಶಕ್ತನಹುದೊ ಭಕ್ತವತ್ಸಲ ಭೋಕ್ತರ ಮುಕ್ತಿದಾಯಕ 2 ಭೇದಾತೀತ ಸದೋದಿತ ಪೂರ್ಣ ಸಾಧುಹೃದಯನಿವೇದ ಪೂಜಿತ ಅದಿದೇವ ಸದಾತ್ಮನೆ 3 ವರ ಮುನಿಗಳ ಹರುಷವುದಯ ತರಳ ಮಹಿಪತಿಯ ಹೊರೆವ ಅನುದಿನ ಹರಿಯು ಪರಮ ದಯಾನಿಧೆ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೀನ ದಯಾಳು ಹರೀ ಕೃಪಾನಿಧಿ ಪ ಜಲಚರ ಬಾಧೆಗೆ ನೆನೆಯಲು ನಾಮಾ| ಸಲಹಿದೆ ರಾಜ ಕರಿ|ಕೃಪಾನಿಧಿ 1 ನೊಂದು ಸಂಸಾರದಿ ಬರಲು ಸುದಾಮಾ ಸಿರಿ ಕೃಪಾನಿಧಿ2 ಮಹಿಪತಿ ಪ್ರಭು ಕೈರವ ಶಾಮಾ| ಇಹಪರನೀವ ದೊರೆ ಕೃಪಾನಿಧಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೀನ ಪರಿವಾರ ಪಾಹಿ ದಾತಾರ ಮಾಂ ದೇಹಿಮೇ ಚರಣಸೇವಾಂ ಪ ಬೃಂದಾವನಶೈಲವಾಸ ಪರಮಕೃಪಾಕರ ಪಾಪನಾಶ ಸುಧೀಂದ್ರ ವಿಭೂಷ ಹೃದಯೋಲ್ಲಾಸ ಅ.ಪ ಸರ್ವೇಶ ವೆಂಕಟೇಶ ಗುರುವರ ಸುಖಧಾಮ ಸುರರಂಜನ ಅಖಿಲ ಬೃಂದಾಳಿಭೀಮ ಶ್ರೀರಾಮ ಪರಿಭಾಷಾ ಮನಿವೇಶ ಜಿತಸೋಮ 1 ಪ್ರಾಣೇಶಸುತ ಭಜನ ಸತತ ವಿರಾಜ ಪರಿ ಪೂರ್ಣದರ್ಶನ ನಿರಂತರದಾಯಕ ಮುನಿಪುಂಗವ ಹರಿಣ ಸಾರಾಂಗ 2 ಮಂಗಳ ಚರಣ ತುರಂಗ ಗಂಗಾಮೃತ ಪೂರ್ಣತೀರ್ಥ [ತುಂಗಾತೀರ ನಿವಾಸಿನೀಂ] ಮಾಂಗಿರಿರಂಗ ಸಂಪ್ರೀತ ಮಾಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೀನದಯಾಪರ ಜಾನಕೀನಾಥ ನೀನೆ ದಯಾರ್ಣವಅನಾಥಜನಾಪ್ತ ಪ ಘನತರ ಭವತಾಪವನು ಪರಿಹರಿಸೊ ಕನಿಕರಯುತ ನೀನೆ ಮನುಮುನಿವಿನುತ 1 ಲಾಖಚೌರೈಂಸಿಜನ್ಮ ಸಾಕಾದೆ ತಿರುತಿರುಗಿ ಕಾಕುಬವಣೆ ಸಾಕೋ ಲೋಕೇಶ ಕೃಪಾ ದೇ 2 ಭಕುತಾಭಿಮಾನಿ ನೀ ನಿಖಿಲಜಗಸೂತ್ರ ಭಕುತನ ಮೊರೆ ಕಾಯೊ ಭಕುತಾಭಿರಾಮ 3
--------------
ರಾಮದಾಸರು
ದೀಪ ಬೆಳಗುವಾಗಾ ಉಣ್ಣುವರುಣ್ಣಿರೋ ಬೇಗ ಬೇಗಾ ದೀಪ ಲೋಪವಾದಮೇಲೆ ಬರಿದಪ್ಪುದು ಭೋಜನಶಾಲೆ ಪ ಚಿತ್ತಶುದ್ಧಿಎಂಬ ಎಳೆಬಾಳೆಎಲೆ ಎಡೆಮಾಡಿ ನಿತ್ಯನಿರ್ಮಲವೆಂಬ ರಾಜಾನ್ಹವ ನೀಡಿ ಸತ್ಯಸಾಧುಸಂಗವೆಂಬ ಘೃತಸಾರಾನ್ಹವ ನೀಡಿ ಪ್ರತ್ಯುಗಾತಮ ಆತ್ಮನ ನಿರಂತರ ತೃಪ್ತಿಬಡಿಸಿ ನೋಡಿ ದೀಪ 1 ಗುರುಕೃಪೆಯೆಂದೆಂಬ ಪರಡಿಯ ಪಾಯಸದಾಹಾರಾ ನಿರುತಾನ್ಹ ಉದಾನಮಾಡಲು ಷಡುರಸದುಪಚಾರಾ ಹರಿಹರ ಭೇದಗಳಡಗಿದನು ಭವಾಮೃತ ಸಾರಾ ಪೊಸದುಪ್ಪದಭಾರಾ ದೀಪ 2 ಕೆಂದ ಆಕಳÀ ಕರೆದು ಕಾಸಿದ ಕ್ಷೀರವ ಕೈಕೊಂಡು ತಂದೆ ತಾಯ್ಗಳ ಭಕುತಿ ಮಾಡಿದ ಮಸುರೋಗರ ಉಂಡು ವಂದಿಸಿ ಶ್ರೀ ಗುರು ವಿಮಲಾನಂದನ ಸೈಂದವನೊಳಗೊಂಡು ತೇಗುತ ಮೆರದುಂಡು 3
--------------
ಭಟಕಳ ಅಪ್ಪಯ್ಯ
ದೀಪವಿದ ಬೆಳಗುವೆನು ದೇವ ನೀ ನೋಡುವ್ಯಾಪಿಸಿದ ತಿಮಿರವನು ಪರಿಹರಿಸಿ ರಂಜಿಸುವ ಪಸಕಲ ದೇವಾತ್ಮಕದ ತಿಲ ತೈಲವಾಗಿರಲುಅಕಲುತ ವರ್ತಿುಂ ಮಿಳಿತವಾಗಿ ಪ್ರಕಟವಾಗಿರುವಗ್ನಿ ಪ್ರಭೆಯೊಡನೆ ಸ್ಫುಟವಾಗಿಮುಖ ಸಮೀಪದಿ ಮೂರು ಲೋಕಗಳ ಬೆಳಗುತಿಹ 1ಜ್ಞಾನವೇ ಗೋಘೃತವು ಮೂರ್ತಿಗಳೆ ವರ್ತಿಗಳುನೀನಿದಕೆ ಮೂಲ ಕಾರಣವಸ್ತುವೂಸಾನುಕೂಲದಿ ಗುಣಗಳೊಂದಾಗಿ ಚಿತ್ತಿನೊಳುಲೀನವಾಗಿರೆ ನಿರ್ಮಲಾಕೃತಿಯ ತಾಳಿರುವ 2ಎನ್ನ ಜೀವವೆ ದೀಪ ನಿನ್ನ ಪಾದವೆ ಬ್ರಹ್ಮಭಿನ್ನ ಭಾವವನುಳಿದು ಪೂರ್ಣರೂಪದಲಿನಿನ್ನೊಳಗೆ ನಿಲಿಸೆನ್ನ ಪುಣ್ಯತಮವೆಂದೆನಿಪಸ್ವರ್ಣಮಯ ತಿರುಪತಿಯ ವಾಸ ವೆಂಕಟರಮಣ 3 ಓಂ ಸಚ್ಚಿದಾನಂದವಿಗ್ರಹಾಯ ನಮಃ
--------------
ತಿಮ್ಮಪ್ಪದಾಸರು
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು1 ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2 ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು3 ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4 ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5
--------------
ಚಿದಾನಂದ ಅವಧೂತರು
ದುಃಖವಿಲ್ಲವೋ ಪರಮಾತ್ಮನಿಗೆ ಲಿಂಗದ ದೇಹದದುಃಖವಿಲ್ಲವೋ ಪರಮಾತ್ಮನಿಗೆ ಪ್ರತ್ಯಗಾತ್ಮನಿಗೆದುಃಖವುಂಟೆ ನಿಜ ನಿರ್ಲಿಪ್ತಗೆಮಿಕ್ಕ ಥಳಥಳ ಸಾಕ್ಷಿಬ್ರಹ್ಮಂಗೆಪ ಜಲದೊಳು ಹೊಳೆವ ಇಂದುವಿಂಗೆಜಲದ ಕಂಪವು ಹೊಳೆವುದೇ ಪೂರ್ಣಚಂದ್ರಗೆಆ ಪರಬ್ರಹ್ಮಂಗೆ ಹೊಳೆಯಲು ಲಿಂಗದಿಲಿಂಗದ ಗುಣಗಳು ಕೆಲವನು ತಿಳಿಯಲು ಪುಣ್ಯಾತ್ಮನಹೆ 1 ಪರಿ ಆತ್ಮಂಗೆ ಲಿಂ-ಗಾದಿ ಜನ್ಮವೊಂದುಗುಡೆ ಕಷ್ಟಪಡುವಿಕೆಲಿಂಗವೆ ಅಳಿಯಲು ನಿತ್ಯಾತ್ಮನುತಭಂಗವ ಕಳದೇ ಚಿದಾನಂದ ಬ್ರಹ್ಮನಹನು 2
--------------
ಚಿದಾನಂದ ಅವಧೂತರು
ದುಂಡು ಮುಖವುಳ್ಳ ಹುಡುಗನ ಕಂಡಿರಾಚಂಡನಾಡುತ ಬಂದ ಚದುರೆಯರ ಓಣಿಯಲಿ ಪ ಕರದೊಳಗೆ ಕೊಳಲಿಹುದು ಚರಣದೊಳು ರುಳಿಗೆಜ್ಜೆಕೊರಳೊಳಗೆ ಸರಪದಕ ಗುರುಳು ಮುಖದಿಜರದೊಲ್ಲಿ ಹೊದ್ದಿಹನು ಸ್ಮರನ ಮೋಹಿಪ ರೂಪಸಿರಿಯ ಕಂಡರೆ ಅವನ ಪರರು ಬಿಡರಮ್ಮ 1 ವಾರಿಜಾಕ್ಷೆರೆ ಬಹಳ ಜಾರಚೋರೆನ್ನ ಮಗವಾರೆನೋಟದಿ ಮನಸು ಹಾರಿಸುವನುಸಾರಿದರೆ ಮನೆಗಳಿಗೆ ದ್ವಾರಯಿಕ್ಕುತೆ ಬನ್ನಿದೂರು ಪೇಳಲು ಕೇಳಿ ಸಾರಿದೆನು ಮೊದಲೆ 2 ಕಂದನಾಗುವ ಕ್ಷಣದಿ ಒಂದೆ ಪ್ರಾಯದ ಪುರುಷಸುಂದರಾಂಗಿಯಳಾಗಿ ಬರುವನಂದಬಾಲನ ಮಹಿಮೆ ಬಂದು ನಂಬಲಿ ಬೇಡಿಇಂದಿರೇಶನು ಬಹಳ ಮಂದಿ ಮೋಹಿಸುವ 3
--------------
ಇಂದಿರೇಶರು
ದುಮು ದುಮು ಬಸವಂತನ ಹಬ್ಬಾ ಪ ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ ಸುರಜ ಸಹಕಾರಿ | ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ ಕಾಯೋ ಚರಣವ ದೋರಿ 1 ಬನ್ನ ಬಡುತಲಿ ಬಲು ಭವದಲಿ ಬಂದೆ | ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು ನಮೋ ನಮೋ ಎಂದೆ 2 ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ ನವವಿಧದಲ್ಲಿ ಕೂಡಿ | ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು ಸ್ವ ಸುಖ ಎಲೊ ಹುಚ್ಚು ಖೋಡಿ 3 ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ | ವೈರಿ ನೀನಾದೆ ಗೈಯ್ಯಾಳಿ 4 ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ ಶಾಶ್ವತವೆಂದು ನಿನ್ನಿಂದಾ | ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ ದೊಳಗಾದೆಲೋ ನೀ ಮತಿ ಮಂದಾ 5 ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ ಬಿದ್ದಿದೆ ಕಾಲಿಗೆ ಕೋಳಾ | ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ 6 ಸುಖವಿಲ್ಲ ಇದರೊಳಗಿಂದು | ಪಾದ ಹೊಂದು 7 ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು | ತರಳನಾಗಿ ಹೋಗದಿರೆಲೋ ಕೆಟ್ಟು 8 ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ | ಕುಣಿಸ್ಯಾಡುತಿ ಹನು ಅಚ್ಯುತಾನಂತಾ 9 ಒಬ್ಬರು ಶಾಸ್ತ್ರದ ಮದದಲಿ ಬಿಗಿದು ಉಬ್ಬುಬ್ಬಿ ಕುಣಿದರು ಹೇಳಲೇನಿಂದು 10 ಅಷ್ಟಮದದಿಂದ ಕಣ್ಣು ಮುಚ್ಚಿ | ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ 11 ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ | ಭ್ರಾಂತನೆ ನಾಳೆ ಮುರಿವನು ಹಲ್ಲಾ 12 ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ | ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ 13 ಕಂದನು ಸಾರಿದಾ ಹೋಳಿಯಾ ವಂದಾ | ಭವ ಬಂದಾ 14
--------------
ಕಾಖಂಡಕಿ ಶ್ರೀ ಕೃಷ್ಣದಾಸರು