ಒಟ್ಟು 14318 ಕಡೆಗಳಲ್ಲಿ , 131 ದಾಸರು , 5549 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ವಶದಲಿ ಇದ್ದು ಇದ್ದು ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ಪ ಚಿತ್ರವಾದ ಕರಿಯ ಶೃಂಗರಿಸಿ ಮೇಲೆ ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ 1 ಕಾಲಕಾಲಕೆ ಸುಧಿಯ ಸವಿದು ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ ತಾಳವೃಕ್ಷವನೇರಿ ತಲೆಕೆಳಗಾಗಿ ತಾ ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ 2 ವೇಣಿ ಮಾಧವರಾಯಾ ನಿನ್ನ ಚರಣಾಂಬುಜ ಕಾಣುವ ಪ್ರಕಾಶ ಉದಾಸಸಿ ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ ಹೀನನಂತೆಯಾದೆ ವಿಜಯವಿಠ್ಠಲರೇಯಾ 3
--------------
ವಿಜಯದಾಸ
ನಿನ್ನ ಸಂಕಲ್ಪಾನುಸಾರ ಮಾಡೋ ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡೋ ಪ ಪಾತ್ರನೆಂದೆನಿಸೋ ಬಹು ಪಾಪಾತ್ಮನೆಂದೆನಿಸೋ ಶ್ರೋತ್ರೀಯನೆಂದೆನಿಸೋ ಶುಂಠನೆನಿಸೋ ಪುತ್ರಮಿತ್ರಾದ್ಯರಿಂ ಬಯಸಿ ಪೂಜೆಯಗೈಸೋ ಕರ್ತೃ ನೀ ಜಗಕೆ ಸರ್ವತ್ರ ವ್ಯಾಪಕನೆ 1 ಜನರೊಳಗೆ ನೀನಿದ್ದು ಜನ್ಮಗಳಲ್ಲಿ ಗುಣಕಾಲಕರ್ಮ ಸ್ವಭಾವಂಗಳಾ ಅನುಸರಿಸಿ ಪುಣ್ಯ ಪಾಪಗಳ ಮಾಡಿಸಿ ಫಲಗ ಳುಣಿಸಿ ಮುಕ್ತರ ಮಾಡಿ ಪೊರೆವೆ ಕರುಣಾಳು 2 ಯಾತಕೆನ್ನನು ಇನಿತು ದೂಷಕನ ಮಾಡುವಿ ಧ ರಾತಲದೊಳನುದಿನದಿ ಮಾಯಾಪತೇ ಭೀತಿಗೊಂಬುವನಲ್ಲ ಭಯನಿವಾರಣ ಜಗ ನ್ನಾಥ ವಿಠ್ಠಲ ಜಯಪ್ರದನೆ ಜಗದೀಶಾ3
--------------
ಜಗನ್ನಾಥದಾಸರು
ನಿನ್ನ ಸಂಭ್ರಮದೊಳಗೆ ನೀನೆ ಇರುತಿರುವಿ ಎನ್ನಯ್ಯ ಮರೆದೇನು ಮುನ್ನಾದ ಬವಣೆ ಪ ಅನ್ನವನು ಕಾಣದೆ ಅನ್ನದಿಕ್ಕಿಲ್ಲದೆ ಉನ್ನತೋನ್ನತವಾದ ಚಿನ್ನದರಮನೆಯಲ್ಲಿ ಬಿನ್ನವಿಲ್ಲದೆ ಸಿರಿಯರನ್ನಬಡಿಪ ಮದವೋ 1 ಮಡದಿಯನು ಕಳಕೊಂಡು ಎಡೆಬಿಡದೆ ಅಡವ್ಯಡವಿ ಹುಡುಹುಡುಕಿ ಬೇಸತ್ತು ಕಡುಬಾಯ ಬಿಡುವಗೆ ಮೃಡಮಹಾದೇವತೇರು ಸಡಗರದಿ ನಿನ್ನಡಿಯ ದೃಢದಿ ಪೂಜಿಪರೆಂಬ ಕಡುಗರವದಿರವೇ 2 ನೀರೊಳ್ಜೀವಿಸಿ ಬಲು ನಾರುತಲಿರುವವಗೆ ಹಾರ ಹೀರಾವಳಿ ಗಂಧ ಕಸ್ತುರಿಯ ಮದವೋ ಸಾರಿ ಮನು ಮುನಿಗಳು ಸೇರಿ ನಿಮ್ಮಯ ಚರಣ ವಾರಿಜ ಭಜಿಪ ಮದ ಮೀರಿಹ್ಯದೋ ನಿನಗೆ 3 ತಿರುಕನು ತಾನಾಗಿ ಧರೆಯ ದಾನವ ಬೇಡಿ ಧರೆವರನ ಬಾಗಿಲವ ನಿರುತ ಕಾಯ್ದವಗೆ ಸುರರು ಗಂಧರ್ವ ತುಂಬುರರು ಸಂಗೀತದಿಂ ಹರುಷಗೊಳಿಪುದಕೆ ನೀ ನೇತ್ರ ಮುಚ್ಚಿರುವ್ಯೋ 4 ಭಾರಬೆನ್ನಲಿ ಪೊತ್ತು ಘೋರ ಬಡುತಿರುವವಗೆ ಈರೇಳುಲೋಕದ ದೊರೆಯೆಂಬಹಂಕಾರವೋ ಮಾರಪಿತ ಗತಿಯೆಂದು ಸೇರಿ ಭಜಿಸುವ ದಾಸರರಿಕೆ ಪೂರೈಸದಿದು ತರವೆ ಶ್ರೀರಾಮ 5
--------------
ರಾಮದಾಸರು
ನಿನ್ನ ಸೇರಿದೆ ಮಹಾಲಿಂಗ ಎನ- ಗಿನ್ಯಾರು ಗತಿ ಕಾಣೆ ಕರುಣಾಂತರಂಗ ಪಾರ್ವತಿ ಮೋಹನಾಂಗ ಪ. ನಿನ್ನಂತೆ ಕೊಡುವ ಉದಾರ ತ್ರಿಭು- ವನ್ನದೊಳಿಲ್ಲದಕ್ಯಾವ ವಿಚಾರ ಮುನ್ನ ಮಾರ್ಕಾಂಡೇಯ ಮುನಿಯ ಭಯ ವನ್ನು ಪರಿಹರಿಸಿದೆಯೊ ಸದುಪಾಯ ನಮೋ ಶಿವರಾಯ 1 ಸರ್ವಾಪರಾಧವ ಕ್ಷಮಿಸು ಮಹಾ- ಗರ್ವಿತರಾಶ್ರಯಕ್ಕೊಲ್ಲದು ಮನಸು ಶರ್ವರೀಶಭೂಷ ನಿನ್ನ ಹೊರ- ತೋರ್ವರಿಲ್ಲ ರಣಮಲ್ಲ ಮುಕ್ಕಣ್ಣ ಕಾಯೊ ಸುಪ್ರಸನ್ನ 2 ಅಂತರಂಗದ ದಯದಿಂದ ಯುದ್ಧ- ಮಂ ತೊಡಗಿದೆ ಪಾರ್ಥನೊಳತಿಚಂದ ಪಂಥದ ನೆಲೆಯನ್ನು ತಿಳಿದು ಸರ್ವ- ದೊಡ್ಡದು ನಿನ್ನ ಬಿರುದು 3 ಸಿದ್ಧಿಸು ಸರ್ವಸಂಕಲ್ಪ ಅಡ್ಡ- ಬಿದ್ದು ಬೇಡುವೆ ನಿನಗ್ಯಾವದನಲ್ಪ ಹೊದ್ದಿದವರಿಗಿಲ್ಲೆಂದಿಗು ಕೇಡು ದುಷ್ಟರದ್ಯಾವ ಪಾಡು4 ಅಂಜಿಕೆ ಬಿಡಿಸಯ್ಯ ಹರನೆ ಪಾ- ವಂಜಾಖ್ಯವರಸುಕ್ಷೇತ್ರಮಂದಿರನೆ ಸಂಜೀವನ ತ್ರಿಯಂಬಕನೆ ನವ- ಸಲಹೊ ಪಂಚಮುಖನೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಿನ್ನ ಸೇವೆಯನೊಂದನಿತ್ತು ಸಲಹೋಎನ್ನ ಮನ ನಿನ್ನಲ್ಲಿ ನಿಲುವಂತೆ ಮಾಡಿ ಪ ಅನ್ನವನು ಬೇಡಿಕೊಂಬುವದೆಂತು ವಿಪುಳ ವಿಷವನ್ನು ಕುಡಿದಿಹ ನೀಲಕಂಠನೊಡನೆಸನ್ನುತಾಂಬರವ ಬೇಡುವುದೆಂತು ಕರಿಚರ್ಮ-ವನ್ನು ಪೊದೆದಿಹ ದಿಗಂಬರನೊಡನೆ ಶಂಭೋ 1 ಮಿರುಗುವಾಭರಣಗಳ ಬೇಡಿಕೊಂಬುದೆಂತುಉರಗಕುಂಡಲಹಾರ ವಲಯನೊಡನೆಪರಮ ಭಾಗ್ಯವ ಬೇಡಿಕೊಂಡೆ ನಾನೆಂತು ವಿಧಿಶಿರದಿ ಭಿಕ್ಷವ ಬೇಡಿ ತಿರಿದುಂಡನೊಡನೆ 2 ಕರಿತುರಗ ಮುಖ್ಯವಾಹನವ ಬೇಡುವುದೆಂತುನಿರುತ ಬಸವನ ಮೇಲೆ ಚರಿಪನೊಡನೆಕರುಣದಿಂದೆನಗೆ ಕೊಡಲೇನುಂಟೊ ಕೆಳದಿಪುರ-ದೆರೆಯ ರಾಮೇಶ ಶ್ರೀಕರ ಪಾರ್ವತೀಶ 3
--------------
ಕೆಳದಿ ವೆಂಕಣ್ಣ ಕವಿ
ನಿನ್ನ ಸೊಬಗಿದೇನೊ ಶ್ರೀಹರಿ ವಿಭವ ಚನ್ನಕೇಶವಾ ಪ ಸತಿ ಸಿರಿದೇವಿಯು ಅತಿ ಚಂಚಲೆಯು ಸುತಮದನ ತಾನನಂಗನೂ ಸುತೆ ಬಾಗೀರಥಿ ವಕ್ರಮಾರ್ಗಳೋ ಅತಿಶಯ ಮೈದುನ ಕ್ಷಯರೋಗಿ 1 ಇರುವ ಮಂದಿರವು ಸಾಗರ ಮಧ್ಯವು ಉರಗನ ಮೇಲೆ ಪವಡಿಸಿಹೆ ಗರುಡನೇರಿ ಗಗನದಿ ತಿರುಗಾಡುವೆ ನೆರೆ ತುಲಸಿಯ ಮಾಲೆಯ ಹಾಕಿರುವೆ 2 ದಾನಕೊಟ್ಟವನ ಭೂಮಿಗೆ ತುಳಿದೆ ಧ್ಯಾನ ಗೈದವನ ಶಿರವರಿದೆ ಮಾನಿನಿ ಕೊಟ್ಟ ಸವಿಫಲಭಂಜಿಸಿ ಕೂರ್ಮ ವರಹನು ನೀನಾದೆ 3 ಹೀಗಿದ್ದರೂ ಸತ್ಸತಿಸುತ ಬಾಂಧವ ಭೋಗ ಭವನ ಭಾಗ್ಯಗಳಿತ್ತು ರಾಗದಿ ರಕ್ಷಿಪೆ ಶರಣರ ನಿರುತವು ಭಾಗವತಪ್ರಿಯ ಜಾಜಿಕೇಶವಾ 4
--------------
ಶಾಮಶರ್ಮರು
ನಿನ್ನ ಸ್ವರೂಪ ಚೈತನ್ಯರೂಪ ಆನಂದರೂಪ ನೀ ನಿರ್ವಿಕಲ್ಪ ಪ ಬುದ್ಧಿ ಮನಸುಗಳುಹೊದ್ದದ ತಾಣ ನಿದ್ರಾದ್ಯವಸ್ಥಾ ಮೀರಿರ್ದ ಸ್ಥಿತಿಯೇ ನಿನ್ನ ಸ್ವರೂಪ 1 ನಾನಾತ್ವವೆಲ್ಲವಪುಸಿ ಎಂದು ಪೇಳ್ದ ನೀನೇ ಪರಮ ಶ್ರೀ ಶಂಕರರೂಪ 2
--------------
ಶಂಕರಭಟ್ಟ ಅಗ್ನಿಹೋತ್ರಿ
ನಿನ್ನ ಸ್ವಹಿತ ಮಾಡೋ ಪ್ರಾಣಿ | ನಿನ್ನ ಸ್ವಹಿತ ಮಾಡೋ ಪ ಶರಣರ ಕೂಡಿ ಸ್ಥಿರ ಮನಮಾಡಿ | ಹರಿಯ ಕೊಂಡಾಡಿ ಪರಗತಿ ಬೇಡಿ | ಮರೆದು ಈಡ್ಯಾಡೀ 1 ಹಳೆಯ ದುಃಸಂಗಾ ಕಳೆದಂತರಂಗಾ | ದೊಳು ಧ್ಯಾನದಂಗಾ ಬಲಿಯಲು ರಂಗಾ | ಹೊಳೆವ ಕೃಪಾಂಗಾ 2 ಸಂದೇಹಲಿಂದು ಧರೆಯೊಳು ಬಂದು | ಮರೆವದು ಕಂಡು ಗುರುಮಹಿಪತೆಂದು ಗುರುತಕ ಹೊಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಹಿತವಾ ಪಡಿಯೋ ಹರಿಯ ಭಜಿಸಿ ಪ ಸನಕ ಸನಂದನ ಮುನಿಜನರಾಡುವ | ಘನ ಸುಖ ಮಾರ್ಗದಿನಡಿಯೋ ಹರಿಯ ಭಜಿಸಿ1 ಕುಂಟಿಣಿ ಗಣಿಕಾ ಜ ಮೇಳ ರುದ್ಧರಿಸಿದಾ | ಕಂಠದಿ ನಾಮವ ಜಡಿಯೋ ಹರಿಯ ಭಜಿಸಿ2 ಗುರುವರ ಮಹಿಪತಿ ನಂದನು ಸಾರಿದಾ | ಶರಣರ ಸಂಗವ ವಿಡಿಯೋ ಹರಿಯ ಭಜಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಹೊರತು ಅನ್ಯರನರಿಯೆನೂ ಶ್ರೀ ವಾಸುದೇವಾ ನಿನ್ನ ಹೊರತು ಅನ್ಯನರಿಯೆನೂ ನಿನ್ನ ಹೊರತು ಅನ್ಯರರಿಯೆ ಪನ್ನಗೇಂದ್ರವಾಸ ಹರಿಯೆ ಸನ್ನುತಾತ್ಮ ನಿಜವನಿತ್ತು ಪ್ರಸನ್ನ ಗುರುವರೇಂದ್ರ ದೇವಾ ಪ ಉರಗನ್ಹೆಡೆಯ ನೆರಳ ಸ್ಥಿರವೆಂದು ಕಪ್ಪೆಯು ನಿಂತ ತೆರದಿ ವಿಷಯದೊಳಗೆ ಬೆರದು ಬೆಂದೆನು ನಾ ದುರಿತ ದುಷ್ಟಗಣದಿ ಹರಿದೂ ಮೃತ್ಯುವನೆ ಮರೆದು ಅರಿವು ಮಾಯವಾಗಿರುವ ಎನ್ನಾ ಸ್ತರದ ಆತ್ಮಪ್ರಭೆಯ ಮರೆತು ಇರುವ ಎನ್ನ ಮೇಲೆ ನಿನ್ನ ಕರುಣವಿಟ್ಟು ಕಾಯ್ದ ದೇವಾ 1 ತತ್ವವಿಂಶತಿ ನಾಲ್ಕು ಕೂಡಿದಾ ಈ ದೇಹದಲಿ ಏ ಕತ್ವವಾಗಿ ಇದನೆ ನಂಬುತಾ ಮುನ್ನರಿಯದಲೆ ವಿ ಚಿತ್ರವಾಸ್ತುವನ್ನು ಮರೆತು ಸತ್ತು ಹುಟ್ಟಿತೊಳಲಿ ಬಳಲಿ ನಿತ್ಯ ನಿಜದೊಳಿಟ್ಟ ದೇವಾ 2 ಆದಿ ಮಧ್ಯ ಅಂತರಾಂತದಿ ತುಂಬಿರುವ ವಸ್ತು ನಾದ ಬಿಂದು ಸ್ವಪ್ರಕಾಶದಿ ಹೃದಯದಲಿ ತೋರ್ಪ ಭೇದಾತೀತ ನಿರ್ವಿಕಾರದಿ ಸುಬೋಧದಿ ಆದರದಿ ಶಾಂತಿ ನಿಜದಾದಿ ಸುಖವನಿತ್ತ ಗುರು ಪಾದಪದ್ಮ ನೆನೆದು ಪೂರ್ಣನಾದ ನಾರಾಯಣ ಪ್ರಭು 3
--------------
ಶಾಂತಿಬಾಯಿ
ನಿನ್ನಚರಣಾರವಿಂದವ ಪ ಪರಮ ಪುರುಷನಿನ್ನ ಚರಣ ಪಂಕಜವನ್ನು ನಿರುತ ನಂಬಿದೆ ಎನ್ನದುರಿತ ಪರ್ವತವನ್ನು ಸುರಪ ವಜ್ರದಿ ಗಿರಿಗಳನು ಖಂಡಿಸಿದವೋಲ್ ತರಿದು ರಕ್ಷಿಸೋ ಮುರಹರನೆ ಸ್ಮರಣೆಯಿತ್ತು 1 ಮಕ್ಕಳಾಟಿಕೆಯಿಂದ ಕೆಲವು ದಿವಸಸಂದು ಕಾಲ ಬರಲುಸ್ತ್ರೀಯರಿಗೆ ಕ ಣ್ಣಿಕ್ಕಿ ಮುದದಿ ದಿನಗಳೆದು ಮರೆತೆನೀಗಳು ಸೀತಾ ರಮಣ ಸ್ಮರಣೆಯಿತ್ತು 2 ವಿಧಿ ಬರೆದ ಲಿಖಿತವೆಲ್ಲ ಸಂತು ದರ್ಜನರೊಡನಾಟದೊಳಗೆ ಕಾಲ ವಿಂತು ಸವೆದು ಜರೆ ಮುಸುಕಿತೆನೆಗೆ ಲಕ್ಷ್ಮೀ ಕಾಂತ ನಿನ್ನಯ ನಾಮ ಸ್ಮರಣೆಯಂತ್ಯದೊಳಗಿತ್ತು 3
--------------
ಕವಿ ಪರಮದೇವದಾಸರು
ನಿನ್ನದೇ ಸಕಲ ಸೌಭಾಗ್ಯ ಸಾಧನವು ಹರಿಯೆ ಪ ನಿನ್ನದೆಂಬಭಿಮಾನ ಲವಲೇಶ ಸಲ್ಲದಯ್ಯಾ ಅ.ಪ. ನಿನ್ನ ಪ್ರೇರಣೆ ಹೊರತು ತೃಣವೊಂದು ಚಲಿಸದು ನಿನ್ನಿಚ್ಛೆಗನುಸಾರ ಸಕಲ ಜಗವು ನಿನ್ನ ಚಿತ್ತಕೆ ಬಾರದಿಹುದೇನು ನಡೆಯುವುದೋ ನಿನ್ನ ನಂಬಿದವರನು ನೀನಾಗೆ ಸಲಹುವೆಯೊ 1 ಸರ್ವತಂತ್ರ ಸ್ವತಂತ್ರ ಸರ್ವಾಂತರಾತ್ಮಕನೆ ಸರ್ವಜಗದಾಧಾರ ಸರ್ವೇಶನೆ ಅಘ ದೂರ ಸರ್ವಕಾಲದಲೆನ್ನ ಗರ್ವರಹಿತನ ಮಾಡೊ 2 ಸತ್ಯಚಿತ್ತನೆ ನಿನ್ನ ಚಿತ್ತವೆನ್ನಯ ಭಾಗ್ಯ ಕರ್ತೃತ್ವದಭಿಮಾನ ಕಳೆದು ಕಾಯೊ ಮತ್ತೇನು ಬೇಡುವೆನು ಪರತಂತ್ರ ನಾನಯ್ಯ ಮುಕ್ತಿದಾಯಕ ಶ್ರೀಶ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ ನಿನ್ನ ಸೇರಿ ಸುಖಿಸ ಬಂದೆವೊ ಪ ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೊ ಕೃಷ್ಣ ಅ ಐದುವದಕೆ ಶಕ್ಯವಲ್ಲದ ಅಪ್ರಮೇಯ ಆದಿಪುರುಷ ಅಮರಸನ್ನುತ ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರವ- ರಾದರೇನು ನಿನ್ನ ಶರಣರಾದ ಮೇಲೆ ಬಿಡುವುದುಂಟೆ1 ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ ನಿಂದ್ಯವೆಂದು ಶಾಸ್ತ್ರ ಪೇಳ್ವುದು ಎಂದೆಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ ಇಂದು ಹೋಗಿರೆಂಬೆ ನೀನು2 ಶಮದಮಾದಿ ಗುಣಗಳಿಂದಲಿ ಸಜ್ಜನರು ಮೂರ್ತಿ ಮನದಲಿ ಮಮತೆಯಿಂದ ಪೂಜಿಸುತ್ತ ಗಮಿಸುವರೊ ನಿನ್ನ ಪುರಕೆ ನಮಗೆ ಮಾತ್ರ ಪತಿಸುತಾದ್ಯರಮಿತ ಸುಖವ ಕೊಡುವರೇನೊ 3 ಮೋಕ್ಷ ಇಚ್ಛೆಯಿಂದ ನಿನ್ನನು ಭಜಿಪ ಜನರಾ ಪಕ್ಷ ವಹಿಸಿದಂತೆ ನಮ್ಮನು ರಕ್ಷಿಸದೆ ಬಿಡುವರೇ ಕಟಾಕ್ಷದಿಂದ ಈಕ್ಷಿಸದೆ ಲಕ್ಷ್ಮೀದೇವಿ ನಿಮಗೆ ಬಹಳಾಪೇಕ್ಷೆಯಿಂದ ಮೋಹಿಸಿದಳೆ 4 ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ ತನುವು ಮನವು ನಿನಗೆ ಅರ್ಪಿಸಿ ಜನನ ಮರಣದಿಂದ ಜನರು ದಣಿವರೇನೂ ಕಾಂತ ನಮ್ಮ ಮನಸಿನಂತೆ ಒಲಿದು ಸಲಹೊ ವನಜನಾಭ ವಿಜಯವಿಠ್ಠಲ 5
--------------
ವಿಜಯದಾಸ
ನಿನ್ನನಲ್ಲದೆ ಯಾರ ಸನ್ನುತಿಸಿ ಫಲವೇನೋ ಪನ್ನಗಾದ್ರಿನಿವಾಸ ಶ್ರೀವೆಂಕಟೇಶ ಪ ಮನ್ನಣೆಯು ಬೇಡಯ್ಯ ಎನ್ನ ತಪ್ಪುಗಳನ್ನು ಮನ್ನಿಸೆಂದೊರಲುವೆನು ಶ್ರೀವೆಂಕಟೇಶ ಅ.ಪ ತಪ್ಪುಹಾದಿಯ ಹಿಡಿದು ಬೆಪ್ಪನಾಗಿರುವೆನ್ನ ಒಪ್ಪಿ ಪರಿಪಾಲಿಸುವ ಅಪ್ಪ ನೀನೋ ತಪ್ಪೊಪ್ಪುಗಳನೆಲ್ಲಾ ಒಪ್ಪಿಸಿದೆ ನಿನಗೆ ತಿಮ್ಮಪ್ಪ ಮಾಂಗಿರಿವಾಸ ಕೈಹಿಡಿದು ಕಾಯೋ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನನೀ ತಿಳಿದು ನೋಡು | ಯನ್ನ ಮನವೇ ಪ ನಿನ್ನ ನೀ ತಿಳಿದು ನೋಡು | ಎನ್ನ ಹಿತವು ದಾವುದೆಂದು | ಮುನ್ನಿನವ ಗುಣ ಜರಿದು | ಇನ್ನಾರೆ ನೀ ಮನವೇ 1 ಒಳ್ಳೆವರಾ ಕಂಡು ಬಾಗಿ | ಬಡಿವಾರ ನೀಗಿ | ಸೊಲ್ಲವ ನಾಲಿಸು ಅವರಾ | ನಿಲ್ಲದೇ ನೀ ಮನವೇ 2 ತಂದೆ ಮಹಿಪತಿ ದಯಾ | ದಿಂದ ಪಡೆಯೋ ವಿಜಯಾ | ಮಂದ ನಾಗದಿರು ಬಂದಾ | ಛಂದ ವಿಂದು ಮನವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು